ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಯುವ ಗುತ್ತಿಗೆದಾರ I ಭರತ್‌ಗುತ್ತಿಯ I ಸಕ್ಸಸ್‌ಪುಲ್ ಜರ್ನಿ I
ಉದ್ಯಮಶೀಲತಾ ಅಭಿವೃದ್ದಿಗಳು ವೃದ್ದಿಯಾಗಬೇಕು ಎನ್ನುವ ಕಟಿಬದ್ದ ದನಿಗಳ ನಡುವೆ ಆಯಾ ಸರಕಾರಗಳು ತಮ್ಮ ಅಧಿಕಾರಕ್ಕೆ ಬರುವ ಮುನ್ನದಿ ಪ್ರಚುರ ಪಡಿಸುವ ಪ್ರಣಾಳಿಕೆಗಳ ಭರವಸೆಗಳಂತೆಯೇ ಉದ್ಯಮಶೀಲತೆಗಳ ಕುರಿತಾಗಿ ಜವಾಬ್ದಾರಿಯುತ ಚರ್ಚೆ ಹಾಗೂ ಕಾರ್ಯಗತಗೊಳಿಸಿದ್ದರೆ, ರಾಜ್ಯದಲ್ಲಿಯು ಸೇವಾ ಉದ್ಯಮ ಹಾಗೂ ತಯಾರಿಕಾ ಘಟಕಗಳು ಅತಿ ಹೆಚ್ಚು ಪ್ರಮಾಣದಲ್ಲಿ ಪ್ರಗತಿಗಳು ಆಗುತ್ತಿದ್ದವು, ಸಧ್ಯಕ್ಕೆ ಬಹುತೇಕ ಭರವಸೆಗಳು ಪ್ರಣಾಳಿಕೆಯಲ್ಲಿಯೇ ಕೊನೆಯಾಗುತ್ತಿರುವುದರಿಂದ ಯಾವುದೇ ಸ್ತರದ ಉದ್ಯಮಗಳಾಗಲಿ ಅವರವರ ಅರ್ಹತೆ, ಆಸಕ್ತಿಗಳ ಮೇಲೆಯೇ ಅದರ ಏರಿಳಿತಗಳ ಶೇಕಡವಾರುಗಳನ್ನು ನಾವು ನೋಡಬಹುದಾಗಿದೆ.
ಇಂತಹದೊಂದು ಟಿಪ್ಪಣಿಯೊಂದಿಗೆ ಸೂರ್ಯಗಗನ ಹಾಗೂ ಇತ್ಯಾದಿ ಪತ್ರಿಕೆಗಳ ಆಶ್ರಯದಲ್ಲಿ ನಾನು ಉದ್ದಿಮೆ ಹಾಗೂ ಉದ್ಯಮಗಳನ್ನು ಬೆಂಬಲಿಸುತ್ತೇನೆ ಎನ್ನುವ ಶಿರ್ಷಿಕೆಯೊಂದಿಗೆ ಸಾರ್ವಜನಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅನೇಕ ವಹಿವಾಟು ನಡೆಸುವ ಮನಸುಗಳಿಗೆ ಪ್ರೋತ್ಸಾಹಿಸಲಾಗಿದೆ, ಇದೀಗ ಯುವ ಮುಂದಾಳುವಿನ ಕ್ರಿಯೇಟಿವ್ ಹೆಜ್ಜೆಗಳನ್ನು ಇಲ್ಲಿ ಉಲ್ಲೇಖಿಸಿ ದಾಖಲಿಸುತ್ತಿದ್ದೇನೆ,
ಶಿವಮೊಗ್ಗದಲ್ಲಿ ಶುರುವಾದ ಉತ್ತಮ ಗುಣಮಟ್ಟದ ಗುತ್ತಿಗೆದಾರಿಕೆ ಹಾಗೂ ನೆಲದ ಮೂಲ ಪರಂಪರೆ ವಾಸ್ತುಗಳಿಗನುಗುಣವಾಗಿ ರಚಿತಗೊಳ್ಳುವ ನಾವಿನ್ಯಮಯ ಕಟ್ಟಡ ವಿನ್ಯಾಸಗಳಿಂದ ಇಂತಿವರು ಅನೇಕರ ಚಿತ್ತ ಸೆಳೆದಿರುವುದರಿಂದ ಶಿವಮೊಗ್ಗ ನಗರ ಸೇರಿದಂತೆ ಶಿಕಾರಿಪುರ, ಚೆನ್ನಗಿರಿ, ಹೊಸದುರ್ಗ, ಹೀಗೆ ಎಲ್ಲೆಡೆ ತಮ್ಮ ರೆಸಿಡೆನ್ಷಿಯಲ್ ಅಂಡ್ ಕಮಿರ್ಷಿಯಲ್ ಬಿಲ್ಡಿಂಗ್ ಕಂಟ್ರ್ಯಾಕ್ಟರ್ ಫೀಲ್ಡ್‌ನಲ್ಲಿ ತಮ್ಮದೇ ಆದ ಮೊಹರೊತ್ತಿದ್ದಾರೆ,
ನಗರದ ಬಸವನಗುಡಿಯ ಮೊದಲನೆ ತಿರುವಿನಲ್ಲಿ ಇವರೊಂದು ಕಛೇರಿ ಇದ್ದು, ಹೊನ್ಮನೆ ಕನ್ಸ್‌ಟ್ರಕ್ಷನ್ ಎನ್ನುವ ನಾಮಾಂಕಿತದಲ್ಲಿ ವಿಶೇಷವಾಗಿ ಸಿವಿಲ್ ಕಂಟ್ರ್ಯಾಕ್ಟರ್ ಎಂದೇ ಬಿಂಬಿತವಾಗಿರುವ ಯುವ ಮುಂದಾಳುವೇ ಭರತ್ ಗುತ್ತಿ ಆಗಿದ್ದಾರೆ, ಮಲೆನಾಡು ಹೀಗೆ ತನ್ನ ಆಗೋಚರತೆಗಳನ್ನು ಕಟ್ಟಿಕೊಂಡಿದೆ ಈ ಮಣ್ಣಿನ ಗುಣವೇ ಅಂತಹದ್ದಾಗಿದೆ, ಏನು ಅಲ್ಲದವರು ಒಂದೊಮ್ಮೆ ಅಗಾಧವಾಗಿ ಬೆಳೆದು ನಿಲ್ಲಲು ಅವರಲ್ಲಿರುವ ಶ್ರದ್ಧತೆಯ ಆಸಕ್ತಿಯನ್ನು ಆಸ್ವಾದಿಸಿಕೊಳ್ಳುತ್ತದೆ, ಈ ಅರ್ಹತೆ ಯಾವುದೇ ಕ್ರಿಯೇಟರ್‍ಸ್ ಜತೆಯಲ್ಲಿದ್ದರೆ ಸಾಕು ಮಲೆನಾಡು ವೇದಿಕೆ ಕಲ್ಪಿಸಿಕೊಡುತ್ತದೆ ಎನ್ನುವುದಕ್ಕೆ ಸಿವಿಲ್ ಕಾಂಟ್ರ್ಯಾಕ್ಟರ್ ಅಂಡ್ ಆಟೋ ಕ್ಯಾಡ್ ಸ್ಷಷಲಿಸ್ಟ್ ಭರತ್ ಗುತ್ತಿ ಕಾರಣರಾಗಿ ನಿಲ್ಲುತ್ತಾರೆ, ೨೦೧೯ ರಿಂದ ಶುರುವಾದ ಈ ಫಿಲ್ಡ್‌ನಲ್ಲಿ ೨೦೨೪ ಹಾಗೂ ೨೦೨೫ರ ಈ ಹೊತ್ತು ಅವರಿಗೊಂದು ಮೈಲಿಗಲ್ಲೇ ತಂದು ಕೊಟ್ಟಿದೆ, ಯಾವುದೇ ಹಂತದ ಗ್ರಾಹಕರಿಗೆ ಅವರ ಮನಸುಗಳು ಒಪ್ಪುವಂತೆ ಹಾಗೂ ಅವರ ಕನಸಿನ ಮನೆ ನಿರ್ಮಾಣಕ್ಕೆ ಮುಂದಾಗುವ ಇವರ ಸ್ಪಾರ್ಧಾತ್ಮಕ ಸ್ಪಂದನೆಗಳು ಹಾಗೂ ವಿವಿಧ ಕಟ್ಟಡ ಸಾಮಾಗ್ರಿಗಳು, ಸಂಪರ್ಕಗಳು, ಮೆಟಿರಿಯಲ್ಸ್‌ಗಳು ಗುಣಮಟ್ಟ, ಧರಗಳು ಗ್ರಾಹಕರಿಗೆ ಹೊರೆಯಾಗದೆ ಇರುವುದು ಸಿವಿಲ್ ಕಾಂಟ್ರ್ಯಾಕ್ಟರ್ ಅಂಡ್ ಆಟೋ ಕ್ಯಾಡ್ ಭರತ್ ಗುತ್ತಿಯ ಗುಡ್‌ವಿಲ್ ಆಗಿದೆ,
ದಿನದಿಂದ ದಿನಕೆ ಬದಲುಗೊಳ್ಳುತ್ತಿರುವ ಆಧುನಿಕ ತಂತ್ರಜ್ಞಾನದ ಕಟ್ಟಡ ಸಾಮಾಗ್ರಿಗಳು, ನೆಲದ ಮೂಲ ಪರಂಪರೆ ಹಾಗೂ ಪಾಶ್ಚಾತ್ಯ ಭರಾಟೆಗಳ ಅನುಗುಣವಾಗಿ, ಮೆಟೀರಿಯಲ್ ದಾಸ್ತಾನುಗಳು ಏರಿಕೆ ಬೆಲೆಗಳಲ್ಲಿ ಸಾಮಾನ್ಯ ಸಮುದಾಯಗಳು ಮನೆ ಕಟ್ಟುವ ಅತಂತ್ರೆಯಲ್ಲಿ ಮುಳುಗಿ ಬಿಡುವ ಸಾಂದರ್ಭಿಕತೆಗಳಲ್ಲಿ ಸಿವಿಲ್ ಕಾಂಟ್ರ್ಯಾಕ್ಟರ್ ಅಂಡ್ ಆಟೋ ಕ್ಯಾಡ್ ಭರತ್ ಗುತ್ತಿಯವರ ಮಾಹಿತಿಗಳು, ಕಡಿಮೆ ಬಜೆಟ್‌ನಲ್ಲಿ ಉತ್ತಮ ಮನೆ ನಿರ್ಮಿಸುವ ಗ್ರಾಹಕರ ಕನಸನ್ನು ಸಾಕಾರಗೊಳಿಸಬಹುದಾದ ನಿಟ್ಟಿನಲ್ಲಿ ಸಾಗಿಸುತ್ತದೆ,
ಬೇಸಿಕ್ ಫ್ಯಾಕೇಜ್, ಸ್ಟ್ಯಾಂಡರ್ಡ್ ಫ್ಯಾಕೇಜ್, ಲಕ್ಸೂರಿ ಫ್ಯಾಕೇಜ್, ಗಳ ಹಂತಗಳನ್ನು ಇಂತಿವರೇ ಸಿದ್ದಪಡಿಸಿಕೊಂಡಿದ್ದು ಗ್ರಾಹಕರಿಗೆ ಸ್ಪಾರ್ಧಾತ್ಮಕತೆಯ ಈ ಹೊತ್ತಿನಲ್ಲಿ ಸರಿದೂಗಿಸುವ ಅವರ ಅನುಭವ ಹಿರಿಯ ವಯಸ್ಸನ್ನು ಮೀರಿಸಿದೆ, ಇನ್ನೂ ಹೊನ್ಮನೆ ಕನ್ಸ್‌ಟ್ರಕ್ಷನ್ ನಲ್ಲಿರುವ ಉದ್ಯಮ ಸೇವೆಗಳಲ್ಲಿ ಬಿಲ್ಡಿಂಗ್ ಲೈಸನ್ಸ್, ಬಿಲ್ಟಿಂಗ್ ಸೂಪರ್‌ವೈಸಿಂಗ್, ಇಂಟೀರಿಯಸ್ ಡಿಸೈನಿಂಗ್ ಅಂಡ್ ಎಕ್ಸಿಕ್ಯೂಷನ್, ರೆಸಿಡೆನ್ಷಿಯಲ್ ಅಂಡ್ ಕಮಿರ್ಷಿಯಲ್ ಬಿಲ್ಡಿಂಗ್ ಕನ್ಸ್‌ಟ್ರ್ರಕ್ಟನ್, ವಾಸ್ತು ಪ್ಲಾನ್ ಅಂಡ್ ಎಸ್ಟಿಮೇಷನ್, ರಿನೋವೇಷನ್, ಎಲೆಕ್ಟ್ರೀಕಲ್, ಪ್ಲಂಬಿಂಗ್, ಸಿಸಿ ಕ್ಯಾಮೆರಾ, ಪೆಯಿಂಟ್ಸ್, ರಿಯಲ್ ಎಸ್ಟೇಟ್, ಇಂತಿಷ್ಟಿವೆ,
ಯಾವ ಸಾಮಾನ್ಯ ಅರ್ಥಿಕ ವ್ಯಕ್ತಿ ಅಥವಾ ಗರಿಷ್ಠ ಆರ್ಥಿಕ ಸಬಲತೆ ಹೊಂದಿರುವ ಗ್ರಾಹಕರಿಗೆ ಸರಿಹೊಂದುವಂತೆ ಪ್ಲಾನ್ ಆಪ್ ಬಜೆಟ್ ನೀಡುವ ಕಾರಣ ಮಾತ್ರದಿಂದಲಿ ಯಾವುದೇ ನಿರ್ವಂಚನೆಯಿಲ್ಲದೆ ಗ್ರಾಹಕರು ಇವರೊಂದಿಗೆ ಒಂದಾಣಿಕೆಯ ಸಾಂಗತ್ಯ ಬಯಸುತ್ತಿರುವುದರಿಂದಲೇ ಮಲೆನಾಡಿನಲ್ಲಿ ಹೊನ್ಮನೆ ಕನ್ಸ್‌ಟ್ರಕ್ಷನ್ ಎನ್ನುವ ಸಿವಿಲ್ ಕಂಟ್ರಕ್ಷನ್ ಉದ್ದಿಮೆಯನ್ನು ಶಿವಮೊಗ್ಗವಲ್ಲದೆ ಹೊರ ಊರುಗಳಲ್ಲಿಯು ವಿಸ್ತರಿಸಿಕೊಂಡಿರುವ ಸಿವಿಲ್ ಕಂಟ್ರ್ಯಾಕ್ಟರ್ ಭರತ್ ಗುತ್ತಿಯವರ ಹೆಸರು ಇದೀಗ ಈ ಫೀಲ್ಡ್‌ನಲ್ಲಿ ಪ್ರಚುರತೆ ಪಡೆದಿದೆ ಅಲ್ಲದೆ ಗರಿಷ್ಠತೆಯನ್ನು ಅಲ್ಪ ಅವಧಿಯಲ್ಲಿ ಅವರು ಸಾಧಿಸಿರುವುದು ಶ್ಲಾಘಿಸುವಂತಹದ್ದಾಗಿದೆ,
ಒಟ್ಟಿನಲ್ಲಿ ಸಾರ್ವತ್ರಿಕ ವಿನ್ಯಾಸಗಳ ವಿಧಾನಗಳಿಂದ ಯಾವುದೇ ಹಂತದ ಗ್ರಾಹಕರಿಗೆ ಮನಮುಟ್ಟುವಂತೆ ನೀಡುವ ಕಟ್ಟಡ ಪ್ರಕಾರಗಳು ವಸ್ತುನಿಷ್ಟತೆಯನ್ನು ಲಭ್ಯತೆಗೊಳಿಸುವ ಸಿವಿಲ್ ಕಂಟ್ರ್ಯಾಕ್ಟರ್ ಭರತ್ ಗುತ್ತಿಯವರು, ಇದರೊಂದಿಗೆ ಜೆಸಿಐ ಎನ್ನುವ ಇಂಟರ್‌ನ್ಯಾಷನಲ್ ಸಂಸ್ಥೆಯ ಜೆಸಿ ಸದಸ್ಯರಾಗಿ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದಾರೆ.

