I ನಿರೂಪಕಿ ಸುಗುಣಾ ಸತೀಶ್ ಅವರಿಗೆ I ‘ಅಪರ್ಣ ನಿರೂಪಣಾ ರತ್ನ’ ರಾಜ್ಯಮಟ್ಟದ ಪ್ರಶಸ್ತಿ I
ಶಿವಮೊಗ್ಗ:’ದೂರದರ್ಶನ ಚಂದನ ಮತ್ತು ಆಕಾಶವಾಣಿಯ ವಾರ್ತಾವಾಚಕರು ಹಾಗೂ ನಿರೂಪಕರಾದ ಸುಗುಣಾ ಸತೀಶ್ ಅವರು ‘ಅಪರ್ಣ ನಿರೂಪಣಾ ರತ್ನ’ ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸುಗುಣಾ ಸತೀಶ್ ಅವರು ನಿರೂಪಣಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಮತ್ತು ಅವರ ನಿರೂಪಣಾ ಕೌಶಲ್ಯವನ್ನು ಪರಿಗಣಿಸಿ, ಬೆಂಗಳೂರಿನ ಸ್ಪಾರ್ಕ್ ಅಕಾಡೆಮಿ ಮತ್ತು ಸೂರ್ಯ ಫೌಂಡೇಶನ್ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನ 2025 ರಲ್ಲಿ ಸೂರ್ಯ ಫೌಂಡೇಶನ್ ಮತ್ತು ಸ್ಪಾರ್ಕ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ಸೋಮೇಶ್ವರ ನವೋದಯ, ಚಲನಚಿತ್ರ ನಟರಾದ ಸಾಯಿಪ್ರಕಾಶ್, ನಿಶ್ಚಿತ ಫೌಂಡೇಶನ್ ನ ಅಧ್ಯಕ್ಷರು ಮತ್ತು ಭಾರತೀಯ ಜನತಾ ಪಕ್ಷದ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಿಶ್ಚಿತ, ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಅಧ್ಯಕ್ಷರಾದ ಪಿ. ಮಹೇಶ್ ಹಾಗೂ ಲೇಖಕರು, ಮನೋಪ್ರೇರಣಾ ತರಬೇತುದಾರರು ಮತ್ತು ಉತ್ಪಾದಕತೆ ತಜ್ಞರಾದ ಸಿ.ವಿ. ವೇಣು ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

