ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಶಿವಮೊಗ್ಗ ಲ್ಯಾಂಡ್ ಮಾಫಿಯಾ I ಪುಸ್ತಕ I ಬಿಡುಗಡೆಗೆ ಸಿದ್ದತೆ I
ಶಿವಮೊಗ್ಗದಲ್ಲಿ ಹೀಗೊಂದು ಲ್ಯಾಂಡ್ ಲಿಟಿಗೇಶನ್ ಎನ್ನುವ ಅನಾಹುತಕಾರಿ ಪೀಡನೆಗಳು ವ್ಯಾಪಿಸುವೆ, ಅಸಲಿ ದಾಖಲೆಗಳನ್ನು ತಿರುಚುವ ನಕಲಿ ದಾಖಲೆಗಳು ದಾಂಗುಡಿಯಿಕ್ಕುತ್ತಿದೆ, ತಾಲ್ಲೂಕು ಕಛೇರಿಯ ಅಧಿಕಾರಿಗಳು, ಮಹಾನಗರ ಪಾಲಿಕೆಯ ಕೆಲ ರೆವಿನ್ಯೂ ಅಧಿಕಾರಿಗಳು, ಸಬ್‌ರಿಜಿಸ್ಟ್ರಾರ್ ಕಛೇರಿಯಲ್ಲಿನ ಮಿಸ್ ಮೊಹರುಗಳು ಅನೇಕತೆಯನ್ನು ಸೃಷ್ಠಿಸಿದೆ, ಸೃಷ್ಠಿಸಿಲಾದ ಕೈ ಪಹಣಿಗಳು, ಓರಲ್ ಭೂ ನಕ್ಷೆಗಳು, ಹಳೆಯ ಕಡತಗಳಲ್ಲಿನ ಎಂಟ್ರಿಗಳು, ಅನಾಯಾಸವಾಗಿ ದಾಖಲೆಗಳಾಗಿ ಸಕ್ಷಮ ಪ್ರಾಧಿಕಾರದಲ್ಲಿ ತಕರಾರು ಎತ್ತಿದೆ, ದುರ್ಬಲರನ್ನು ಒಕ್ಕಲೆಬ್ಬಿಸಲಾಗುತ್ತಿದೆ, ಈ ರೀತಿ ಒಕ್ಕಲೆಬ್ಬಿಸುವಿಕೆಯ ಕೂಪಕ್ಕೆ ಒಳಗಾಗಿರುವ ಸಂಖ್ಯೆ ನೂರಕ್ಕೆ ಹೆಚ್ಚಿದೆ ಎನ್ನುವ ಸರಾಸರಿ ಶೇಕಡವಾರು ಲೆಕ್ಕಚಾರಗಳು ಪ್ರಸ್ತುತ ಜಿಲ್ಲಾಧಿಕಾರಿಗಳಾದ ಗುರುದತ್ ಹೆಗಡೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್‌ರವರುಗಳಿಗೆ ತಿಳಿದಿದ್ದರು ಸಹ ಮೌನವಾಗಿರುವ ಹಿಂದೆ ಶಾಮೀಲು ಆಗಿದ್ದಾರೆಯೇ..?! ಎನ್ನುವ ತುಲನೆಗಳು ಈ ವರದಿಯ ಮುಂದಡಿಯಿದೆ,
ಶಿವಮೊಗ್ಗ ತಹಶಿಲ್ದಾರ್ ಮೌನ, ರಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ರೆವಿನ್ಯೂ ಅಧಿಕಾರಿಗಳು, ಸೇರಿದಂತೆ ಸರ್ವೇ ಅಧಿಕಾರಿಗಳು, ಡಿಡಿಎಲ್‌ಆರ್,ಎಡಿಎಲ್‌ಆರ್ ರವರುಗಳು ಮಾಡಿರುವ ಸರ್ಕಾರಿ ದಾಖಲಾತಿಗಳ ತಿದ್ದುಪಡಿಯಿಂದ ಈ ಹೊತ್ತಿನ ನೂರಾರು ಎಕರೆ ಮೀಸಲು ಭೂಮಿಗಳು ಭೂ ಕಬಳಿಕೆದಾರರ ಪಾಲಾಗುತ್ತಿದೆ, ಇಂತಹ ಅಸಲಿ ಸಂಗತಿಗಳನ್ನು ಅನಾವರಣಗೊಳಿಸುತ್ತಿರುವ ಇತ್ಯಾದಿ ಪತ್ರಿಕೆಯ ವರದಿಗಳನ್ನಾಧರಿಸಿ ಬರೆಯುತ್ತಾರೆ ಗಾರಾ.ಶ್ರೀನಿವಾಸ್ ಎನ್ನುವ ತಲೆಬರಹದಡಿ ಪುಸ್ತಕವನ್ನು ಹೊರತರಬೇಕು ಈ ಮೂಲಕವೇ ರಾಜ್ಯಪಾಲರಿಗೆ, ಪ್ರಧಾನಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಇನ್ನುಳಿದ ಇಲಾಖೆಗಳಿಗೆ ದೂರು ನೀಡುವ ಅಕ್ಷರಮುಖಿ ಹೋರಾಟ ಇದಾಗಿದೆ, ಈ ಮೊದಲ ಹೆಜ್ಜೆಯಂತೆ ಪುಸ್ತಕ ಹೆಸರು ಕೂಡ ನಾಮಾಂಕಿತಗೊಳಿಸಲಾಗಿದ್ದು, ಶಿವಮೊಗ್ಗ ಲ್ಯಾಂಡ್ ಮಾಫಿಯಾ ಎಂದು ಅದರ ಮುಖಪುಟ ವಿನ್ಯಾಸಗೊಳಿಸಲಾಗಿದೆ, ಈ ಪುಸ್ತಕ ಬಿಡುಗಡೆಯಾದ ಕ್ಷಣದಿಂದಲೇ ಓರ್ವ ಅಸೆಂಬ್ಲಿ ಅಭ್ಯರ್ಥಿ ಅಕಾಂಕ್ಷಿಯಾಗಿರುವ ಪಕ್ಕಾ ವೈಟ್ ಕಾಲರ್ ಅಸಲಿ ಮುಖವು ಬೆತ್ತಲಾಗಲಿರುವುದಂತು ನಿಶ್ಚಿತ,
ಇನ್ನೂ ಕೃತಿಯ ಮೂಲಕ ವಿವಿಧ ಇಲಾಖೆಗಳಿಗೆ, ಉನ್ನತ ವಲಯಕ್ಕೆ ನೀಡುತ್ತಿರುವ ದೂರು ಇದು ದೇಶದಲ್ಲಿಯೇ ಪ್ರಥಮ ಎನ್ನಬಹುದಾಗಿದ್ದು ಇದರಲ್ಲಿ ಮೊದಲಿಗೆ ಈಗಾಗಲೇ ಇತ್ಯಾದಿ ಪತ್ರಿಕೆಯಲ್ಲಿ ಪ್ರುಚರಪಡಿಸಿದಂತೆ ಶಿವಮೊಗ್ಗದ ಹಾಯ್‌ಹೊಳೆ ಯಾನೆ ಐಹೊಳೆ, ಶೆಟ್ಟಿಹಳ್ಳಿ, ಪುರದಾಳ್ ಪ್ರದೇಶ ವ್ಯಾಪಿ ಭೂಗಳ್ಳರ ಹಾವಳಿ ಹೆಚ್ಚಾಗಿದೆ, ಶರಾವತಿ ಕಣಿವೆ ಜಲವಿದ್ಯುತ್ ಯೋಜನೆಯ ಭಾಗವಾದ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣದಿಂದ ಮನೆ, ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಹಾಗೂ ಚಕ್ರ ಸಾವೆಹಕ್ಲು , ಮಾಣಿ, ನೀರಾವರಿ ಯೋಜನೆಗಳಿಂದ ಹೊರಬಿದ್ದ ಜನವಾಸಿ ಸಂತ್ರಸ್ಥರ ಭೂಮಿ ಒಟ್ಟು ೨೦೩೩ ಎಕರೆ ಭೂ ಪ್ರದೇಶವಾಗಿದ್ದು ಸಂತ್ರಸ್ಥರನ್ನೇ ಒಕ್ಕಲೆಬ್ಬಿಸಿ, ಬೆದರಿಸಿ, ಪೋರ್ಜರಿ ದಾಖಲೆಗಳ ಮೂಲಕ ಭೂ ಮಾಫಿಯಾ ತನ್ನ ಕರಾಳತೆಯನ್ನು ವಿಸ್ತೃತಗೊಳಿಸಿದೆ, ಸಂತ್ರಸ್ಥರ ಪಟ್ಟಿಯಲ್ಲಿದ್ದವರು ಬಹುತೇಕರಿಗೆ ಇನ್ನೂ ಭೂಮಿ ಒದಗಿಸಲಾಗದೆ ಆಡಳಿತಷಾಹಿ ಮುಖವಾಣಿಗಳು ತಮ್ಮ ಹೀನಾಯತೆಯನ್ನು ಬಿಂಬಿಸಿಕೊಂಡು ತಮ್ಮಗಳ ರಾಜಕೀಯ ಲಾಭದಾಯಕ್ಕಾಗಿ ಕಾಲ್ನಿಡಿಗೆ ಪ್ರತಿಭಟನೆ, ಧರಣಿ ಮುಂತಾದವುಗಳಲ್ಲಿ ತೊಡಗಿಸಿಕೊಂಡು ಸಂತ್ರಸ್ಥರ ಪುನರ್‌ವಸತಿ ಭೂಮಿಗಳನ್ನು ಬಿಟ್ಟುಕೊಡಿಸಲು ಪ್ರಸ್ತುತ ದಿನಮಾನಕ್ಕೂ ಹೆಣಗಾಡುತ್ತಿರುವ ಅಸಲಿ ವರಾತಗಳಿದೆ, ಶಿವಮೊಗ್ಗದ ಮಹಾನಗರ ವ್ಯಾಪ್ತಿಗಳಾದ ರಾಗಿಗುಡ್ಡ, ಚೆನ್ನಾಂಬಾಪುರ, ವಿನೋಬಾನಗರ, ಕಲ್ಲಳ್ಳಿ, ಜೆಪಿ ನಗರ, ಗೋಪಾಳ, ತುಂಗಾನಗರ, ಗಾಡಿಕೊಪ್ಪ, ಶ್ರೀರಾಮಪುರ, ಶಂಕರಾಚಾರ್ಯರ ಲೇ ಔಟ್, ಗಂಧರ್ವ ನಗರ, ಸಾಗರ ರಸ್ತೆಯಲ್ಲಿರುವ ಆಜು-ಬಾಜು ನಿವೇಶನಗಳು, ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆ, ಡಿವಿಜಿ ವೃತ್ತದ ಬಳಿಯ ಮುಖ್ಯರಸ್ತೆಗಳಲ್ಲಿದ್ದ ಸರ್ಕಾರಿ ಸ್ವಾಮ್ಯದ ಭೂಮಿಗಳು, ರಂಗನಾಥ ಬಡಾವಣೆ, ಗೋಪಾಲಗೌಡ ಬಡಾವಣೆ, ಹಾಗೂ ಹರಕೆರೆಯ ಒಳಗೆ ಕೆರೆಯ ಭೂ ಪ್ರದೇಶವನ್ನು ಕಬಳಿಕೆಯಾಗಿರುವ ಜಾಯಿಂಟ್ ವೆಂಚರ್ (ಜೆವಿ) ಲೇಔಟ್, ಮುಂತಾದ ಪ್ರದೆಶಗಳಲ್ಲಿರುವ ರೆವಿನ್ಯೂ ಸ್ಟೇಟಸ್‌ಗಳೇ ಲ್ಯಾಂಡ್ ಲಿಟಿಗೇಶನ್ ಮಾಫಿಯಾಗಳಿಗೆ ಮುಖ್ಯ ಬಂಡಾವಳಗಳಾಗಿದೆ, ಹಾಗೂ ಶಂಕರಾಚಾರ್ಯರ ಲೇ ಔಟ್‌ನಲ್ಲಿ ಹೀಗೊಂದು ಅಕ್ರಮವಾಗಿ ಬೇಲಿ ಸುತ್ತಿರುವ ಪ್ರಕರಣಗಳಿದೆ,
ವಿನೋಬಾನಗರ -ಕಲ್ಲಳ್ಳಿ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಜನರಿಗೆ ಅಂದು ನೀಡಲಾಗಿದ್ದ ನಗರಸಭೆಯ ಸುಪುರ್ದು ಪತ್ರದ ವಿವಾದಗಳು : ಕರ್ನಾಟಕ, ಪೌರಸಭೆಗಳ ಅಧಿನಿಯಮ ೧೯೬೪ರ ಕಲಂ, ೭೨(೨) ಪ್ರಕಾರ ಹಾಗೂ ಪೌರನಿಗಮಗಳ ಅಧಿನಿಯಮ ೧೯೭೬ರ ಕಲಂ ೧೭೬ ಪ್ರಕಾರ ಸರ್ಕಾರದ ಪೂರ್ವಾನುಮತಿ ಇಲ್ಲದೆ ಯಾವುದೇ ಸುಪುರ್ದು ಪತ್ರಗಳನ್ನು ನೀಡುವ ಆಗಿಲ್ಲ, ಆದರೆ ಶಿವಮೊಗ್ಗದ ಮುನಿಸಿಪಾಲಿಟಿಯ ವ್ಯಾಪ್ತಿಯಲ್ಲಿದ್ದ ಸರ್ವೆ ನಂಬರ್ ೩೧ರಲ್ಲಿ ೧೯೯೬-೯೭ರ ಸಾಲಿನ ಅವಧಿಗೆ ಸಂಬಂಧಿಸಿದ ಇಲಾಖಾಧಿಕಾರಿಗಳು, ಹಾಗೂ ಆಡಳಿತ ವ್ಯವಸ್ಥೆಗಳಲ್ಲಿ ನೂರಾರು ಜನರಿಗೆ ಸುಪುರ್ದು ಪತ್ರವನ್ನು ನೀಡಲಾಗಿತ್ತು ಈ ತರುವಾಯ ಇದನ್ನು ಹಿಂಪಡೆಯಲಾಗಿತ್ತು, ಇದೀಗ ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಈ ಭಾಗದಲ್ಲಿ ಖಾಲಿ ಇದ್ದ ಮಹನಾಗರ ಪಾಲಿಕೆಗೆ ಸೇರಬೇಕಾಗಿದ್ದ ಸುಮಾರು ೨೦೦ಕ್ಕೂ ಹೆಚ್ಚು ನಿವೇಶನಗಳು ನಕಲಿ ಸುಪುರ್ದು ಪತ್ರ, ಜಿಪಿಎಗಳ ಮೂಲಕ ಕಬ್ಜಾ ಆಗುತ್ತಿರುವುದು ಮಹಾನಗರ ಪಾಲಿಕೆಗೆ ಒಂದು ಅಂದಾಜಿನಂತೆ ಈ ಹೊತ್ತಿನ ಮಾರುಕಟ್ಟೆಯ ದರದಂತೆ ನೂರು ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳು ಇಂತಹ ಬೇನಾಮಿ ಕಬಳಿಕಗೆ ಒಳಗಾಗಿ ಮಹನಾಗರ ಪಾಲಿಕೆಗೆ ನಷ್ಟವಾಗಿರುವುದನ್ನು ಇಲ್ಲಿ ನಿಖರವಾಗಿ ಉಲ್ಲೇಖಿಸಲಾಗಿದೆ,
ನಗರ ವ್ಯಾಪ್ತಿಯಲ್ಲಿರುವ ಗೋಪಾಳದ ಮೂಲ ಗ್ರಾಮ ನಕ್ಷೆನಲ್ಲಿ ನಮೂದಿಸಿರುವಂತೆ ಯಥಾಸ್ಥಿತಿ ಇರುವ ಸೆಟ್ಲೆಮೆಂಟ್ ಅಂದಾಜು ೨ಎಕರೆ ಭೂ ಪ್ರದೇಶ ಭೂ ಕಬಳಿಕೆಯಾಗಿ ಖಾಸಗಿ ಲೇ ಔಟ್ ನಿರ್ಮಾಣಗೊಂಡಿದೆ, ಇದಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ ೧ರಲ್ಲಿನ ೩೮.೦೦ ಗುಂಟೆ ಭೂ ಪ್ರದೇಶಕ್ಕೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಬೇಲಿ ಸುತ್ತಿಕೊಂಡಿರುವುದು ಅಲ್ಲದೆ ಪಕ್ಕದ ಖಾಲಿ ಬಿದ್ದ ಇದೇ ಸ್ವಾಮ್ಯದ ಖಾಲಿ ನಿವೇಶನಕ್ಕೆ ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ಭೂ ಕಬಳಿಕೆದಾರರು ಕಲ್ಲು ಕೂಡ ಇಟ್ಟು ಹೋಗಿದ್ದಾರೆ, ಇನ್ನೂ ಅನುಪಿನಕಟ್ಟೆಯ ಹುಲ್ಲುಬನಿ, ದನಗಳ ಮುಪತ್ತು ಸರ್ವೇ ನಂಬರ್ ೨೭,೨೮ ಗೋಪಿಶೆಟ್ಟಿಕೊಪ್ಪದ ಸರ್ವೇ ನಂಬರ್ ೩೬, ಇದರಲ್ಲಿ ಖಾಸಗಿ ಭೂಮಾಪಿಯಾ ನಡೆಸುತ್ತಿದ್ದ ಮಾರ್ಕೆಟ್ ಗಿರಿ ಕಬ್ಜಾ ಮಾಡಿಕೊಂಡು ಒಟ್ಟು ಖರಿದಿ ಜಮೀನು ಸೇರಿದಂತೆ ೬೦೦ಕ್ಕೂ ಹೆಚ್ಚು ನಿವೇಶನ ನಿರ್ಮಾಣ ಹಾಗೂ ಈ ತಗಾದೆಗಳೇ ಆತನ ಮರ್ಡರ್‌ಗೂ ಕಾರಣವಾಗಿರುವ ಅಸಲಿ ಸತ್ಯಗಳು, ಇದಲ್ಲದೆ ಆಯನೂರಿನ ಡಗಳಿಮನೆಯ ಸರ್ವೇ ನಂಬರ್ ೧೦ರಲ್ಲಿದ್ದ ೨೭ ಎಕರೆ ೩೨ ಗುಂಟೆ ಜಮೀನಿನಲ್ಲಿ ಐದು ಎಕರೆ ಕಬಳಿಸಿರುವ ಇದೇ ಭೂಮಾಪಿಯಾದ ಮಾರ್ಕೆಟ್ ಗಿರಿ ಅಂದು ಸೀತಾರಾಮ್ ಎನ್ನುವವರ ಹೆಸರಿಗೆ ಲಗಾಯ್ತು ನಕಲಿ ದಾಖಲೆಗಳೇರಿಸಿ ಕೆಲವೇ ದಿನಗಳಲ್ಲಿ ಮೂರು ಜನ ಪಾಲುದಾರಿಕೆ ಹೊಂದಿರುವ ರೆಸಾರ್ಟ್ ಮಾಲೀಕರಿಗೆ ಮಾರಾಟ ಮಾಡಿದ್ದು ಈ ಜಮೀನು ಸಂಪೂರ್ಣವಾಗಿ ಒತ್ತುವರಿ ಆಗಿದೆ ಎನ್ನುವ ದಾಖಲೆಗಳು, ಇದೀಗ ಹಲವು ತನಿಖಾ ಸಂಸ್ಥೆಗಳಿಗೆ ದಾಖಲೆಗಳ ಸಹಿತ ದೂರಿನ ಹೆಜ್ಜೆಗಳು ಸನ್ನಿಹಿತವಾಗಿರುವ ಸ್ಟೋರಿಗಳು ಇಂತಿವ ಪುಸ್ತಕದ ಪುಟಗಳಲ್ಲಿದೆ, ಮುಂದುವರೆದಂತೆ ನಗರದ ಹೊರವಲಯದ ಚೆನ್ನಾಮುಂಬಾಪುರವು ಹೊಳಲೂರು ಹೋಬಳಿಯಲ್ಲಿದ್ದು ಇದರ ಸರ್ವೇ ನಂಬರ್ ೧೧ರಲ್ಲಿ ೧೦.೨೩ ಸರ್ಕಾರಿ ಕೆರೆ ಎಂದಾಗಿದ್ದು ಇದನ್ನು ಒತ್ತುವರಿಗೊಳಿಸಲಾಗಿದೆ,
ಅಚ್ಚರಿ ಎಂದರೆ ಇದಕ್ಕೆ ಹೊಂದಿಕೊಂಡಂತಿರುವ ನಗರ ವ್ಯಾಪ್ತಿಯ ಸರ್ವೇ ನಂಬರ್ ೫ರಲ್ಲಿನ ೯ಎಕರೆ೨೪ ಗುಂಟೆ ಜಮೀನು ಭೂ ಪ್ರದೇಶವು ಜಾನುವಾರು ಮುಪತ್ತು ಹಾಗೂ ಹಿಂದೂ ಜನಾಂಗದ ಸ್ಮಶಾನವಾಗಿದ್ದು ಇದನ್ನು ಸಂಪೂರ್ಣವಾಗಿ ಡಿ-ನೋಟಿಪಿಕೆಶನ್‌ಗೊಳಿಸಿದ ಖಾಸಗಿ ಕೈಗಳು ಲೆಔಟ್ ನಿರ್ಮಿಸಿ ಕೋಟಿ ಕಂತೆಗಳ ಸಂಪಾದಿಸಿದ್ದಾರೆ, ಇದಕ್ಕೆ ಪೋರ್ಜರಿ ದಾಖಲೆಗಳು ಸೃಷ್ಠಿಯಾಗಿದ್ದು, ಅಲ್ಲದೆ ಇದೇ ಭೂ ಮಾಪನ ಇಲಾಖೆಯವರು ಭೂ ಮಾಪನ ಕಾಯ್ದೆಯನ್ನು ಉಲ್ಲಂಘಿಸಿ ಓರಲ್ ಭೂ ಸರ್ವೇ ನಕ್ಷೆ ನೀಡಿರುವುದನ್ನು ಯಥಾವತ್ತಾಗಿ ತೋರಿಸಲಾಗಿದೆ, ಆಯನೂರಿನ ಕೊಹಳ್ಳಿ ಗ್ರಾಮ ಪಂಚಾಯಿತಿಯ ಡಗಳಿಮನೆಯ ವ್ಯಾಪ್ತಿಯಲ್ಲಿ ಸುಮಾರು ಮೀಸಲು ಭೂ ಪ್ರದೇಶವನ್ನು ಕಬ್ಜಾ ಮಾಡಿಕೊಂಡು ಪೋರ್ಜರಿ ದಾಖಲೆಗಳನ್ನು ಸೃಷ್ಠಿಸಿಕೊಂಡಿರುವ ಪ್ರಕರಣಗಳನ್ನು ಪ್ರತಿಬಿಂಬಿಸಲಾಗಿದೆ,
ಇಂತಹ ಅನೇಕತೆಗಳ ಮಾಹಿತಿ ಕೆಲ ಹಾಕಿದ್ದಲ್ಲದೆ, ಇತ್ಯಾದಿ ಬರೆದಿರುವ ವರದಿಗಳ ಅನುಸಾರವೇ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುವ ಇರಾದೆ ಇದಾಗಿದೆ, ಇನ್ನೂ ನಟೋರಿಯಸ್ ಕ್ರಿಮಿನಲ್‌ಗಳು, ಭೂಗತ ಮಾಫಿಯಾಗಳು ಹಾಡುಹಗಲೇ ಲ್ಯಾಂಡ್ ಲಿಟಿಗೇಶನ್ ಎನ್ನುವ ಅನಾಹುತಕಾರಿಗಳನ್ನು ಮತ್ತೊಂದು ಆತಂಕಕಾರಿಗೆ ತಳ್ಳಿರುವುದು ನೋಡಿದರೆ ಇದನ್ನು ಸಹಿಸಿಕೊಳ್ಳುವ ಜಿಲ್ಲಾಧಿಕಾರಿಗಳು, ಜಿಲ್ಲಾರಕ್ಷಣಾಧಿಕಾರಿಗಳು ತಮ್ಮ ಮನೋ ದೌರ್ಬಲ್ಯಕ್ಕೆ ಇಡಾಗಿರುವುದು ದರ್ಶಿಸುತ್ತದೆ, ಒಟ್ಟಾರೆ ಈ ಕೃತಿಯ ಕೈಂಕರ್ಯದಲ್ಲಿ ಸಾಮಾಜಿಕ ಉದ್ದೇಶ, ಹಾಗೂ ನ್ಯಾಯದ ಬೇಡಿಕೆಯನ್ನು ಉನ್ನತ ಮಟ್ಟದ ವಲಯಕ್ಕೆ ಕೊಂಡೊಯ್ಯುವುದಾಗಿದೆ.

