Saturday, August 1, 2026
Homeಸೂರ್ಯಗಗನI ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಿರುವ ಮಹಿಳೆಯರು I ಕೆ.ಎಸ್.ಈಶ್ವರಪ್ಪ I

I ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಿರುವ ಮಹಿಳೆಯರು I ಕೆ.ಎಸ್.ಈಶ್ವರಪ್ಪ I

I ಎಲ್ಲ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಿರುವ ಮಹಿಳೆಯರು I ಕೆ.ಎಸ್.ಈಶ್ವರಪ್ಪ I

ಶಿವಮೊಗ್ಗ: ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ಯಶಸ್ವಿಯಾಗಿ ಮುನ್ನಡೆಯುತ್ತ ಇತಿಹಾಸ ನಿರ್ಮಿಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು. ನವುಲೆಯ ರೋಟರಿ ರಿವರ್ ಸೈಡ್ ಸಭಾಂಗಣದಲ್ಲಿ ಮಲೆನಾಡು ಮಲ್ಲಿಗೆ ವೇದಿಕೆ ಶಿವಮೊಗ್ಗ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ, ನೌಕರರ ಸಂಘ ತಾಲೂಕು ಘಟಕ ಶಿಕಾರಿಪುರ ಮತ್ತು ಜಿಲ್ಲಾ ಘಟಕ ಶಿವಮೊಗ್ಗ, ರೋಟರಿ ಕ್ಲಬ್ ನವಲೆ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಹಿತ್ಯ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರ ಸಮರ್ಪಣೆ ಮತ್ತು ಕಠಿಣ ಪರಿಶ್ರಮ ಬಲಿಷ್ಠ ಮತ್ತು ಅದ್ಭುತ ಎಂದು ತಿಳಿಸಿದರು.

ಮಲೆನಾಡು ಮಲ್ಲಿಗೆ ವೇದಿಕೆ ಶಿವಮೊಗ್ಗ ಮುಖ್ಯಸ್ಥೆ ಆಶಾ ರಾಣಿ ಮಾತನಾಡಿ, ನಿಮ್ಮ ಶಕ್ತಿ, ಧೈರ್ಯ ಮತ್ತು ಬುದ್ಧಿವಂತಿಕೆಯು ನಿಮ್ಮ ಸುತ್ತಲಿನ ಎಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರಬೇಕು. ಮಹಿಳೆಯ ದೃಢಸಂಕಲ್ಪವು ಯಾವುದೇ ಸವಾಲನ್ನು ಜಯಿಸಬಹುದು. ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ ಆಕೆಯ ಸ್ವಂತ ದೃಢಸಂಕಲ್ಪವಿದೆ ಎಂದರು. ಇಸಿಒ ಶಶಿರೇಖಾ ಮಾತನಾಡಿ, ಬೇರೆ ಯಾರೂ ನಂಬದಿದ್ದಾಗ ನೀವು ನಿಮ್ಮ ಮೇಲೆ ನಂಬಿಕೆ ಇಡಬೇಕು. ಎಂದು ತಿಳಿಸಿದರು.

ಅಹಮದೀಯ ಮುಸ್ಲಿಂ ಮಹಿಳಾ ಸಂಘಟನೆ ರಿಜ್ವಾನ್ ಸಿದ್ದಿಕ್ಕಿ ಮಾತನಾಡಿ, ಮನೆಯಲ್ಲಿ ಶಾಂತಿ ಸಮೃದ್ಧಿಯನ್ನು ಸ್ಥಾಪಿಸುವುದು ಮಹಿಳೆಯರಿಂದ ಮಾತ್ರ ಸಾಧ್ಯ. ಭವಿಷ್ಯವು ಮಹಿಳೆಯದ್ದಾಗಿದೆ. ದೊಡ್ಡ ಕನಸು ಕಾಣಿರಿ ಎಂದರು. ಲೆಕ್ಕ ಪರಿಶೋಧಕ ಆರ್.ಮನೋಹರ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದ ಮಹಿಳೆಯರು ಇತರ ಮಹಿಳೆಯರಿಗೂ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಸಮಾಜ ಸೇವಕ ಕೆ.ಇ.ಕಾಂತೇಶ್ ಅವರು ಅಹಮದೀಯ ಮುಸ್ಲಿಂ ಮಹಿಳಾ ಸಂಘಟನೆ ಅವರು ಕೊಡುಗೆಯಾಗಿ ನೀಡಿದ ಪೋಡಿಯಂಅನ್ನು ಅಬ್ಬಲಗೆರೆ ಸರ್ಕಾರಿ ಶಾಲೆಗೇ ಹಸ್ತಾಂತರಿಸಿದರು. ಜಯಮ್ಮ, ಶಿವಮೂರ್ತಿ, ಶಿವಶಂಕರ,  ಗುಡ್ಡದಯ್ಯ, ಮಲೆನಾಡು ಮಲ್ಲಿಗೆ ವೇದಿಕೆಯ ತ್ರಿವೇಣಿ, ಪೂರ್ಣಿಮಾ, ನಾಗರತ್ನ, ಶೋಭಾ, ಹರೀಶ್ ಇತರರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I