September 22, 2026

I ಸೋಷಿಯಲ್‌ ಮೀಡಿಯಾ ಮುಖೇನ I ಯುವ ವಕೀಲರಾದ ನಾರಾಯಣ ಸ್ವಾಮಿ .ಜಿ ಅವರ ಮನವಿ I

0
FB_IMG_1773102776650 (1)

I ಸೋಷಿಯಲ್‌ ಮೀಡಿಯಾ ಮುಖೇನ I ಯುವ ವಕೀಲರಾದ ನಾರಾಯಣ ಸ್ವಾಮಿ .ಜಿ ಅವರ ಮನವಿ I

 ಬೆಂಗಳೂರು : ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಚುನಾವಣೆ ಬಿರುಸಿನ ವಾತಾವರಣ ಹಾಗೂ ಸ್ಪರ್ಧಾತ್ಮಕ ಸವಾಲುಗಳನ್ನು ಸೃಷ್ಟಿಸಿದೆ, ಈ ನಿಟ್ಟಿನಲ್ಲಿ ನಾರಾಯಣ ಸ್ವಾಮಿ ಜಿ. ಅವರ ಸ್ಪರ್ಧೆ ರಾಜ್ಯದ ಜನತೆಗೆ ಕುತೂಹಲವಿಟ್ಟಿದೆ,

ಪ್ರತಿ ಭಾರಿಯು ಅವರ ಸ್ಪಂದನೆ, ಮಾತು, ವಕೀಲರ ಪರವಾದ ನಿಲುವುಗಳು, ಹೊಸತನಗಳ ಹುಟ್ಟು ಹಾಕಿದೆ, ಹೀಗಾಗಿಯೇ ರಾಜ್ಯದಲ್ಲಿ ಅನೇಕ ವಕೀಲರು ಬೇಷರತ್ ಬೆಂಬಲಕ್ಕೆ ಮುಂದಾಗಿರುವ ವಿದ್ಯಮಾನಗಳು ಕಂಡು ಬಂದಿದೆ, ಚುನಾವಣೆ ಹಾಗೂ ಫಲಿತಾಂಶ ಯುವ ವಕೀಲರಾದ ನಾರಾಯಣ ಸ್ವಾಮಿ.ಜಿ ಅವರ ಪರವಾಗಿರಲಿ ಎನ್ನುವುದು ಇದೀಗ ಮಾತು ಕೇಳಿ ಬಂದಿದೆ, ಈ ಹಿನ್ನಲೆಯಲ್ಲಿ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ, ರಾಜ್ಯವ್ಯಾಪಿ ಮತ್ತೊಮ್ಮೆ, ಮಗದೊಮ್ಮೆ ಓಡಾಟಗಳು ಸಾಧ್ಯವಾಗದೆ ಇರುವುದರಿಂದ ಅವರು ಸೋಷಿಯಲ್ ಮೀಡಿಯಾ ವೇದಿಕೆ ಮೂಲಕವೂ ಲೈವ್ ಬಂದು ತಮ್ಮ ವಕೀಲ ವಲಯಕ್ಕೆ ವಿನಂತಿಸಿದ್ದಾರೆ,

  ಭಾರತದ ಸಂವಿಧಾನದ ವಿಧಿ 79 (Article 79) ಈ ಸಂಸತ್ತಿನ ಉಗಮಕ್ಕೆ ಹೇಗೆ ಅಡಿಪಾಯವಾಗಿದೆಯೋ, ಅದೇ ರೀತಿ ನಮ್ಮ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ (KSBC) ಬುನಾದಿಯನ್ನು ಭದ್ರಪಡಿಸೋಣ ಎನ್ನುವ ನಾರಾಯಣ ಸ್ವಾಮಿ.ಜಿ ಅವರ ಮಾತುಗಳು, ನಡೆಗಳು ವಕೀಲರ ಸಮೂಹದಲ್ಲಿ ಹೊಸತನದ ಭರವಸೆಗಳು ಮೂಡಿಸಿದೆ,

Leave a Reply

Your email address will not be published. Required fields are marked *

error: Content is protected !!