Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I
ಸೂರ್ಯಗಗನ

I ಗ್ಯಾಸ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ I ಕಟ್ಟಿಗೆ ಒಲೆಯಲ್ಲಿ ಚಹಾ ಮಾಡಿ ಸಾರ್ವಜನಿಕರಿಗೆ ವಿತರಣೆ I

I ಗ್ಯಾಸ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ I ಕಟ್ಟಿಗೆ ಒಲೆಯಲ್ಲಿ ಚಹಾ ಮಾಡಿ ಸಾರ್ವಜನಿಕರಿಗೆ ವಿತರಣೆ I ತೀರ್ಥಹಳ್ಳಿ: ಟ್ರಂಪ್ ರವರ ತಮ್ಮನೆ ಮೋದಿ, ಮೋದಿ ಇಲ್ಲಿ ಮಾಡುತ್ತಿರುವುದನ್ನೇ ಟ್ರಂಪ್ ಅಲ್ಲಿ ಮಾಡುತ್ತಿರುವುದು ಕಪ್ಪು ಇರುವವರನ್ನು ಹೊರಗೆ ಹಾಕುವ…

I ಗ್ಯಾಸ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ I ಕಟ್ಟಿಗೆ ಒಲೆಯಲ್ಲಿ ಚಹಾ ಮಾಡಿ ಸಾರ್ವಜನಿಕರಿಗೆ ವಿತರಣೆ I

ತೀರ್ಥಹಳ್ಳಿ: ಟ್ರಂಪ್ ರವರ ತಮ್ಮನೆ ಮೋದಿ, ಮೋದಿ ಇಲ್ಲಿ ಮಾಡುತ್ತಿರುವುದನ್ನೇ ಟ್ರಂಪ್ ಅಲ್ಲಿ ಮಾಡುತ್ತಿರುವುದು ಕಪ್ಪು ಇರುವವರನ್ನು ಹೊರಗೆ ಹಾಕುವ ಕೆಲಸ ಅಲ್ಲಿ ಮಾಡುತ್ತಿದ್ದಾರೆ. ಇಲ್ಲಿ ಮೋದಿ ಮಾಡುತ್ತಿರುವುದು ಸಹ ಅದನ್ನೇ. ಇಸ್ರೇಲ್ ನಲ್ಲಿ ಇರುವ ಜನಸಂಖ್ಯೆ ಕೇವಲ ಒಂದು ಕೋಟಿ, ಆದರೆ ಅವರು ಇಡೀ ಪ್ರಪಂಚಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಆದರೆ ಯುದ್ಧ ಪ್ರಾರಂಭಿಸಿದ್ದು ಅಮೆರಿಕದವರು ಇದನ್ನು ಅವರೇ ನಿಲ್ಲಿಸಬೇಕು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು,

ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಟ್ಟಿಗೆ ಒಲೆಯಲ್ಲಿ ಚಹಾ ಮಾಡಿ ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು. ನಂತರ ಪ್ರತಿಭಟನೆಯಲ್ಲಿ ಮಾತನಾಡಿದರು.

ನಮ್ಮಲ್ಲಿದ್ದ ಗ್ಯಾಸ್ ಸ್ಟಾಕ್ ಗೆ ರೇಟ್ ಜಾಸ್ತಿ ಮಾಡಿದ್ದಾರೆ ಈ ದೇಶದಲ್ಲಿ ೫ ಲಕ್ಷ ಹೋಟೆಲ್ ಗಳು ಬಂದ್ ಆಗಿವೆ. ಇದನ್ನು ಮಾಡಿದ್ದು ಕಾಂಗ್ರೆಸ್ ಪಕ್ಷದವರಾ..? ಅಥವಾ ಹೋಟೆಲ್ ಬಂದ್ ಮಾಡಿದವರೆಲ್ಲ ಕಾಂಗ್ರೆಸ್ ನವರಾ? ಇವರು ಮಾಡಿದ ಅನಾಚಾರಕ್ಕೆ ಇನ್ನೂ ನಾಲ್ಕು ತಿಂಗಳಲ್ಲಿ ಎಲ್ಲಾ ಹೋಟೆಲ್ಗಳನ್ನು ಬಂದು ಮಾಡಬೇಕಾಗುತ್ತದೆ .ನನ್ನ ಪ್ರಕಾರ ಪ್ರೈ ಮಿನಿಸ್ಟರ್ ಆಫೀಸ್ ಅನ್ನು ಬಂದ್ ಮಾಡುವುದು ಉತ್ತಮ. ನನಗೆ ಆಡಳಿತ ಮಾಡಲು ಆಗುವುದಿಲ್ಲ ಎಂದು ಮೋದಿ ಹಿಂದಕ್ಕೆ ಸರಿಯಬೇಕು ಎಂದರು,

ಆದಿಪುರಾಣದಲ್ಲಿ ಪಂಪ ಈ ದೇಶವನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕು ಎಂದು ಬರೆಯುತ್ತಾರೆ.
ಈ ಮುಟ್ಟಾಳರು ವೋಟು ಬರುತ್ತದೆ ಎಂದು ಸಾಬ್ರಿಗೆ, ಕ್ರಿಶ್ಚಿಯನರಿಗೆ ಬೈಯುತ್ತಾರೆ. ಈ ದೇಶ ಗಟ್ಟಿಯಾಗಿರುವುದು ಆರ್ ಎಸ್ ಎಸ್ ಬಿಜೆಪಿ ಬಜರಂಗದಳದಿಂದ ಅಲ್ಲ. ಎಲ್ಲರನ್ನು ಒಂದು ಮಾಡಲು ಗಾಂಧಿ, ಪಂಪ, ಬಸವಣ್ಣ ಹೋರಾಟ ಮಾಡಿದ್ದಾರೆ. ಇವರೇನು ಮಾಡಿದ್ದಾರೆ? ಎಲ್ಲ ಜಾತಿ ಧರ್ಮಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಇವರು ಮಾಡುತ್ತಿದ್ದಾರೆಯೇ? ಪಾರ್ಲಿಮೆಂಟ್ ಇರುವುದು ಆಡಳಿತ ಪಕ್ಷದ ಪರವಾಗಿ ಮಾತನಾಡಲು ಇರುವುದಲ್ಲ ಎಂದು ಹೇಳಿದರು..

ನಮ್ಮ ಶಾಸಕರು ಸದನದಲ್ಲಿ ಮಾತನಾಡುವುದನ್ನು ನೋಡಿದರೆ ಈ ರೀತಿ ಶಾಸಕರು ಏನು ಒಳ್ಳೆಯವರಪ್ಪಾ ಎಂದುಕೊಳ್ಳಬೇಕು. ಜ್ಞಾನೇಂದ್ರರವರು ಮಾತನಾಡುವುದು ನೋಡಿದರೆ ಈ ಪ್ರಪಂಚದಲ್ಲಿ ಅವರಷ್ಟು ಧರ್ಮರಾಯರು ಯಾರು ಇಲ್ಲ ಎಂದು ಅಂದುಕೊಳ್ಳಬೇಕು. ಈಗ ಜ್ಞಾನೇಂದ್ರ ಏನು ಮಾಡುತ್ತಿದ್ದಾರೆ ಗೊತ್ತಿದೆಯೇ? ಅವರ ಮಗನ ಹೆಸರಿನಲ್ಲಿ ತೋಟ ಮಾಡಿದ್ದಾರೆ ಇದರ ಹಣ ಕಟ್ಟಿದ್ದು ಎಸಿಸಿ ಕೃಷ್ಣಮೂರ್ತಿ ರವರು. ಈಗ ಎನ್ ಎಚ್ ಅನ್ನು ಅವರ ತೋಟದ ಬಳಿ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದಾರೆ. ಇದು ಜ್ಞಾನೇಂದ್ರ ಅಂದರೆ ಈ ರೀತಿ ನಾನೇನಾದರೂ ಮಾಡಿದ್ದೇನೆಯೇ? ಜ್ಞಾನೇಂದ್ರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇವರು ಮರ್ಯಾದೆಯಿಂದ ಹೋಗಿ ಯುದ್ಧ ನಿಲ್ಲಿಸದಿದ್ದರೆ ಇನ್ನು ಎರಡು ತಿಂಗಳಲ್ಲಿ ಈ ದೇಶದಲ್ಲಿ ಕ್ರಾಂತಿಯಾಗುತ್ತದೆ , ಇದರಿಂದ ಎಷ್ಟು ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಇಳಿಯುತ್ತಾರೆ. ಎಷ್ಟೇ ಬೆಲೆ ಏರಿಕೆ ಆದರೂ ನಾವು ಮೋದಿಗೆ ವೋಟು ನೀಡುತ್ತೇವೆ ಎಂದವರು ಈಗ ಕೊಡಿ ನೋಡೋಣ… ಅವರ ಒಂದು ದಿನದ ಡ್ರೆಸ್ ಖರ್ಚು ೧೦ ಲಕ್ಷ ಅವರು ಫೇಶಿಯಲ್ ಮಾಡದೆ ಹೊರಗಡೆ ಬರುವುದಿಲ್ಲ
ರಾಷ್ಟ್ರಪತಿ ಬಂದಾಗ ಎದ್ದು ನಿಲ್ಲಬೇಕು ಎಂಬ ಗುಣ ಅವರಿಗೆ ಇಲ್ಲ. ಇದು ಅವರ ಸೊಕ್ಕು ತೋರಿಸುತ್ತದೆ. ನಮ್ಮ ಆಡಳಿತಕ್ಕೂ ಮೋದಿ ಅವರಿಗೂ ಎಷ್ಟು ಡಿಫರೆನ್ಸ್ ಇದೆ
ಎನ್ ಆರ್ ಇ ಜಿ ಯಲ್ಲಿ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆಯುವಂತದ್ದು ಏನಿತ್ತು? ಇವತ್ತು ಸಿದ್ದರಾಮಯ್ಯ ಆಗಿರುವುದಕ್ಕೆ ನಾವು ಈ ಕರ್ನಾಟಕದಲ್ಲಿ ಇದ್ದೇವೆ ಎಂದರು..

ಆರ್ ಎಂ ಮಂಜುನಾಥ್ ಗೌಡ ಮಾತನಾಡಿ ಬೆಲೆ ಏರಿಕೆ ಜೊತೆಗೆ ಗ್ಯಾಸ್ ಕೂಡ ಏರಿಕೆಯಾಗಿದೆ. ಈಗಾಗಲೇ ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆಯುತ್ತಲೇ ಇದ್ದಾರೆ ಆದರೂ ಕರ್ನಾಟಕದ ಮನವಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ. ಈ ಪರಿಸ್ಥಿತಿ ಕರ್ನಾಟಕಕ್ಕೆ ಮಾತ್ರ ಗುಜರಾತ್ ಅಥವಾ ಬೇರೆ ರಾಜ್ಯಗಳಿಗೆ ಇಲ್ಲ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೆ ಪೂರೈಕೆ ಆಗುತ್ತಿದೆ ಬಿಜೆಪಿಯ ಸರ್ಕಾರ ಇಂತಹ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದರು,

ಎನ್‌ಡಿಎ ಸರ್ಕಾರದಲ್ಲಿ ಮೋದಿಯವರು ಯಾವಾಗ ಅಧಿಕಾರ ವಹಿಸಿಕೊಂಡರು ಅಂದಿನಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಅತ್ಯಂತ ಹೆಚ್ಚು ಸಂಸದರು ನಮ್ಮ ಕರ್ನಾಟಕದಿಂದ ಹೋಗಿದ್ದಾರೆ. ಜನರ ಪರವಾಗಿ ಇರದೇ ಅವರ ಪರವಾಗಿ ಇರುವುದು ಒಂದು ಬೇಸರದ ಸಂಗತಿಯಾಗಿದೆ. ಮೋದಿಯವರ ಈ ನೀತಿಯನ್ನು ಪ್ರಭಲವಾಗಿ ಸಾಂಕೇತಿಕವಾಗಿ ವಿರೋಧಿಸುತ್ತೇವೆ. ಈ ಬಗ್ಗೆ ಬಿಜೆಪಿಯ ಎಲ್ಲಾ ಸಂಸದರು ಮಾತನಾಡಬೇಕಾಗುತ್ತದೆ ಎಂದರು.

Gara Srinivas

Gara Srinivas

Leave a comment

error: Content is protected !!