Sunday, August 2, 2026
Homeಸೂರ್ಯಗಗನI ಪತ್ರಕರ್ತ ಅನಿಲ್ ಕುಮಾರ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವು ನೀಡುವಂತೆ I ಕರವೇ...

I ಪತ್ರಕರ್ತ ಅನಿಲ್ ಕುಮಾರ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವು ನೀಡುವಂತೆ I ಕರವೇ ಸ್ವಾಭಿಮಾನಿ ಬಣದಿಂದ ಆಗ್ರಹ ಮನವಿ ಸಲ್ಲಿಕೆ I

I ಪತ್ರಕರ್ತ ಅನಿಲ್ ಕುಮಾರ್ ನಾಯ್ಕ ಕುಟುಂಬಕ್ಕೆ I ಆರ್ಥಿಕ ನೆರವು ನೀಡುವಂತೆ I ಕರವೇ ಸ್ವಾಭಿಮಾನಿ ಬಣದಿಂದ ಆಗ್ರಹ ಮನವಿ ಸಲ್ಲಿಕೆ I

ಶಿವಮೊಗ್ಗ : ವಾಹನ ಅಪಘಾತದಲ್ಲಿ ಮೃತ ಹೊಂದಿದ ಶಿವಮೊಗ್ಗದ ದೃಶ್ಯ ಮಾಧ್ಯಮದ ವರದಿಗಾರರಾದ ಎಸ್.ಅನಿಲ್ ಕುಮಾರ್ ನಾಯ್ಕ ಕುಟುಂಬಕ್ಕೆ ಕ್ಷೇಮನಿಧಿ ಹಾಗೂ ವಿಶೇಷ ಅನುದಾನಗಳ ಅಡಿಯಲ್ಲಿ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಹಾಗೂ ಮಹಾನಗರ ಪಾಲಿಕೆಗೆ, ಉಸ್ತುವಾರಿ ಸಚಿವರು, ಸಂಸದರು ಹಾಗೂ ಶಾಸಕರಿಗೆ ಕರವೇ ಸ್ವಾಭಿಮಾನಿ ಬಣ ಮನವಿ ನೀಡಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಬಣದ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್ ಮಾತನಾಡಿ ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್ ಹಿಂಬದಿಯಿಂದ ಬೆಂಕಿ ನಗರಕ್ಕೆ ಹೋಗುವ ಮಾರ್ಗ ಮಧ್ಯೆ ಮಾ. ೮ ರಂದು ಎರಡು ಧ್ವಿ ಚಕ್ರ ವಾಹನದ ನಡುವೆ ಮುಖಾಮುಖಿ ಅಪಘಾತಕ್ಕೀಡಾಗಿ ಮಾ.೯ರಂದು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಮೃತನಾದ ಬಿ.ಟಿವಿ ವರದಿಗಾರರಾದ ಎಸ್. ಅನಿಲ್ ಕುಮಾರ್ ನಾಯ್ಕರವರಿಗೆ ಮಾನವೀಯ ಶ್ರದ್ದಾಂಜಲಿ ಅರ್ಪಿಸಿ ಈ ಮೂಲಕ ಕರವೇ ಸ್ವಾಭಿಮಾನಿ ಬಣ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿದ್ದಾರೆ,

ಪತ್ರಕರ್ತ ಮೃತ ಅನಿಲ್ ನಾಯ್ಕರವರ ಕುಟುಂಬ ದಯನೀಯ ಸ್ಥಿತಿಯಲ್ಲಿ.. 

ಪತ್ರಕರ್ತರಾಗಿ ಸಮಾಜದಲ್ಲಿ ಶ್ರಮಿಸುತ್ತಿರುವ ಕುಟುಂಬಗಳಿಗೆ ನಿಜಕ್ಕೂ ಯಾವುದೇ ಜೀವ ಭದ್ರತೆಗಳಾಗಲಿ, ಕುಟುಂಬಕ್ಕೆ ಆರ್ಥಿಕ ಭದ್ರತೆಗಳಾಗಲಿ ಬಹುತೇಕ ಇಲ್ಲವಾಗಿದ್ದು, ದೃಶ್ಯ ಮಾಧ್ಯಮದ ಪತ್ರಕರ್ತ ಮೃತ ಅನಿಲ್ ನಾಯ್ಕರವರ ಕುಟುಂಬ ಇಂತಹದೊಂದು ದಯನೀಯ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ,

ಮಕ್ಕಳ ವ್ಯಾಸಾಂಗಕ್ಕೆ ಅನುಕೂಲವಾಗುವಂತೆ ಆರ್ಥಿಕ ನೆರವು…

ಪತ್ರಕರ್ತ ಎಸ್ ಅನಿಲ್ ಕುಮಾರ್‌ರವರು ಇಲ್ಲದ ಈ ಕುಟುಂಬ ಆರ್ಥಿಕ ಆವಸಾನಕ್ಕೆ ತಲುಪಿದ್ದು ಇಂದು ಅನಾಥವಾಗಿದೆ, ಈ ಸಂದರ್ಭದಲ್ಲಿ ಸಂತಾಪ ಸೂಚನೆಗಿಂತಲೂ ಈ ಕುಟುಂಬದ ಮೂರುವರೆ ವರ್ಷದ ಗಂಡು ಮಗು ಹಾಗೂ ಓರ್ವ ಮಗಳು, ಪತ್ನಿ ಅವರುಗಳು ಜೀವನ ನಿರ್ವಹಣೆ ಹಾಗೂ ಮಕ್ಕಳ ವ್ಯಾಸಾಂಗಕ್ಕೆ ಅನುಕೂಲವಾಗುವಂತೆ ಆರ್ಥಿಕ ನೆರವು ಆಗತ್ಯವಾಗಿ ಬೇಕಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ಈ ಮೂಲಕ ತಿಳಿಸಿದೆ,

ಆರ್ಥಿಕ ನೆರವು ಬಿಡುಗಡೆಯಾಗಲಿ ಕರವೇ ಸ್ವಾಭಿಮಾನಿ ಬಣ…

ಎಸ್.ಎನ್ ಚೆನ್ನಬಸಪ್ಪನವರ ಶಾಸಕ ನಿಧಿ, ಬಿ.ವೈ ರಾಘವೇಂದ್ರರವರ ಸಂಸದ ನಿಧಿ, ಹಾಗೂ
ಉಸ್ತುವಾರಿ ಮಂತ್ರಿಗಳಾದ ಮಧು ಬಂಗಾರಪ್ಪನವರ ವಿವೇಚನಾ ನಿಧಿ ಹಾಗೂ ಕಳೆದ ಶಿವಮೊಗ್ಗ ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಮೀಸಲಿರಿಸಿರುವ ಪತ್ರಕರ್ತರ ಕ್ಷೇಮನಿಧಿಯಿಂದ ಈ ಕೂಡಲೇ ಮೃತ ಪತ್ರಕರ್ತನ ಕುಟುಂಬಕ್ಕೆ ಆರ್ಥಿಕ ನೆರವು ಬಿಡುಗಡೆಯಾಗಲಿ ಎಂದು ಕರವೇ ಸ್ವಾಭಿಮಾನಿ ಬಣದಿಂದ ತಿಳಿಸುತ್ತೇವೆ ಎಂದು ಹೇಳಿದ್ದಾರೆ,

ಸಾಮಾಜಿಕ ನ್ಯಾಯದ ದಿಸೆಯಲ್ಲಿ ಆರ್ಥಿಕ ನೆರವು ಅಗತ್ಯ…

ಕಳೆದ ಇಪ್ಪತ್ತು ವರುಷದಿಂದ ಶಿವಮೊಗ್ಗದ ‘ವಾಯ್ಸ್ ಆಫ್ ಶಿವಮೊಗ್ಗ’ ದಿನಪತ್ರಿಕೆಯ ಮೂಲಕ ವೃತ್ತಿಜೀವನ ಆರಂಭಿಸಿದ್ದ ಅನಿಲ್ ನಾಯ್ಕ ಟಿವಿ.9 ಚಿಕ್ಕಮಗಳೂರು ಜಿಲ್ಲಾ ಕ್ಯಾಮೆರಾಮನ್ ಆಗಿ ಸೇವೆ ಸಲ್ಲಿಸಿ ನಂತರ ಬಿಟಿವಿ ಶಿವಮೊಗ್ಗದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು ಆದರೆ ದುರಂತದ ಅಪಘಾತದಲ್ಲಿ ಮೃತರಾಗಿರುವ ಇವರ ಕುಟುಂಬದಲ್ಲಿ ಇದೀಗ ಯಾವ ಜೀವನ ಭದ್ರತೆಯು ಇಲ್ಲವಾಗಿದೆ ಹೀಗಾಗಿ ಬಿ.ಟಿವಿ ವರದಿಗಾರ ಅನಿಲ್ ಕುಟುಂಬಕ್ಕೆ ಸಾಮಾಜಿಕ ನ್ಯಾಯದ ದಿಸೆಯಲ್ಲಿ ಆರ್ಥಿಕ ನೆರವು ಅಗತ್ಯವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ಈ ಮೂಲಕ ಮನವಿ ಮಾಡಿದೆ, ಮನವಿ ಸಂದರ್ಭದಲ್ಲಿ ಕರವೇ ಸ್ವಾಭಿಮನಿ ಬಣದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I