Sunday, August 2, 2026
HomeಅಂಕಣI ಮಲೆನಾಡಿನ ಮಾದರಿ ಜೀವನದ I ಯುವ ಜೀವಾಳು ಮಾಲತೇಶ್ I

I ಮಲೆನಾಡಿನ ಮಾದರಿ ಜೀವನದ I ಯುವ ಜೀವಾಳು ಮಾಲತೇಶ್ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಮಲೆನಾಡಿನ ಮಾದರಿ ಜೀವನದ I ಯುವ ಜೀವಾಳು ಮಾಲತೇಶ್ I

ಕಾಯಕ ಯೋಗಿ, ಪತ್ರಿಕಾ ಹಂಚಿಕೆಯ ಅಗ್ರಸಾಲಿನ ಯುವ ಜೀವಾಳುವಾದ ಮಾಲತೇಶ್ ಅವರ ಹುಟ್ಟು ಹಬ್ಬದ ಅಂಗವಾಗಿ ಸೂರ್ಯಗಗನ ಹಾಗೂ ಇತ್ಯಾದಿ ಪತ್ರಿಕೆಯ ಬಳಗವು ಹೀಗೊಂದು ಅವರ ಕುರಿತಾಗಿ ಅಕ್ಷರ ಶುಭಾಶಯಗಳನ್ನು ತಿಳಿಸಲಿಚ್ಚಿಸುತ್ತದೆ.

ಬದುಕು ಹೀಗೆಯೇ ಇರಬೇಕು ಎನ್ನುವ ಗುರಿ ಅದರ ಅರಿವಿನೊಂದಿಗೆ ಜನ್ಮಿಸಿ ರೆಕ್ಕೆ-ಪುಕ್ಕಗಳ ಲಗತ್ತಿಸಿಕೊಂಡು ಗಗನ ಚುಕ್ಕಿಯ ಎತ್ತರೆತ್ತರಕ್ಕೆ ಹಾರಿ ಬಿಡುತ್ತದೆ, ಬಹುಷ್ಯಃ ಇಂತಹದೊಂದು ಅರಿವು ಬರುವುದು ಬದುಕು ಕಟ್ಟಿಕೊಳ್ಳಬೇಕು ಎಂದು ಎದೆಯಂಗಳದ ಬಾಗಿಲಿನಿಂದ ಹೊರಬಂದ ಮೇಲೆಯೇ ಅಲ್ಲವೇ.. ಅಲ್ಲಿಯವರೆಗೆ ಇನ್ನಾವ ಚಿಂತನೆ, ಗೊತ್ತು ಗುರಿಗಳಿಲ್ಲದೆ ಬಾಲ್ಯದ ಕಾಲಮಾನವನ್ನು ಕಳೆದುಕೊಂಡಿರುತ್ತವೆ ಹಾಗೂ ಹದಿಹರೆಯದ ಹೊತ್ತಿನಲ್ಲಿ ಆಸೆಗಳು ಚಿಗುರುವ ತನಕದಿ ನಿರ್ಧಿಷ್ಠ ಗುರಿ ಭಾವಗಳು ಸುಳಿದೇ ಇರುವುದಿಲ್ಲ ಇದು ಬಹುತೇಕರ ಜೀವನದಲ್ಲಿ ಘಟಿಸಿರುತ್ತದೆ. ಹೀಗೊಂದು ಟಿಪ್ಪಣಿಯೊಂದು ತಮ್ಮ ಮುಂದೆ ವಿಸ್ತ್ರತಗೊಳಿಸಿ

ಮುಸು ಮುಂಜಾನೆಯ ಚುಮು-ಚುಮು ಚಳಿಗಾಳಿ ಬೀಸುವಿಕೆಯತ್ತ ಎದೆಗೊಟ್ಟಿ ಸೈಕಲ್ ತುಳಿದು ಕನಿಷ್ಠ ಇಪ್ಪತ್ತು ಕೆಜಿ ತೂಕದ ಸುದ್ದಿ ಪತ್ರಿಕೆಗಳಿಡಿದು ನಗರ ಸುತ್ತುವ ಕಾಯಕ, ಹೇಳುವುದಕ್ಕೆ ಸರಳವಾದರೂ ಅದು ಕ್ಲಿಷ್ಟಕರವೇ ಆಗಿರುತ್ತದೆ, ಪ್ರಾಕೃತಿಕ ಬದಲಾವಣೆಗಳ ಎಲ್ಲಾ ಕಾಲಕ್ಕೂ ಶ್ರಮದಿ ಮೈ-ಮನಸುಗಳನ್ನು ಬಿತ್ತಿಯೇ ಕೃಷಿ ಮಾಡಬೇಕು,

ಒಂದೆಡೆ ಬಾಲ್ಯದ ಪಥ ಬದಲಾಗಿದೆ ಇನ್ನೊಂದೆಡೆ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ ಶ್ರಮಿಸಿ ಬೆವರಹನಿಗಳ ತೊಟ್ಟಿಕ್ಕಿಸುವ ಹಾದಿಯನ್ನು ಆಯ್ದುಕೊಂಡಾಗಿದೆ ಹೀಗೆ ದಿನವಹಿ ಕನಿಷ್ಠ ಸರಾಸರಿ ೨೫ ಕಿ.ಮೀ ಕ್ರಮಿಸುವಿಕೆಯ ಲೆಕ್ಕದಲ್ಲಿ ಮಾಹೇಯಾನ ೭೫೦ ಕಿ.ಮೀ ಆದರೆ ಅದು ವರ್ಷಕ್ಕೆ ೯೦೦೦ ಕಿ.ಮೀ ಆಗುತ್ತದೆ ಸತತ ೨೭ ವರ್ಷಗಳ ಬೆವರ ಬೊಕ್ಕಸಕ್ಕೆ ೨ಲಕ್ಷ ೪೩ ಸಾವಿರ ಕಿ.ಮೀ ದೂರ ದೂರವನ್ನು ಎಡೆಬಿಡದೆ ದಾಟಿ ಪ್ರಾಮಾಣಿಕ ಶ್ರಮಜೀವಿ ಎನ್ನುವ ಮೈಲಿಗಲ್ಲು ಸ್ಥಾಪಿಸಿಕೊಂಡ ಮಲೆನಾಡಿನ ಯುವ ಮಾದರಿ ಜೀವನದ ಜೀವಾಳುವೇ ಮಾಲತೇಶ್.ಎನ್ ರವರಾಗಿದ್ದಾರೆ.

ಹೌದು ಜೀವನ ಕಟ್ಟುವಿಕೆಯಲ್ಲಿ ಶ್ರಮಜೀವಿಗಳ ಯಾತನೆಗಳು ಕಲೆ ಹಾಕಿದರೆ ಅವರ ಜೀವನದ ಅನುಭವ, ರುಧಿರದನಿಗಳ ನೋವುಗಳ ಸಗಟಿನಲ್ಲಿ ಕೃತಿಯನ್ನೇ ರಚಿಸಬಹುದಾಗಿದೆ, ಮಾಲತೇಶ್‌ರವರದ್ದು ಕೂಡ ಇಂತಹದೊಂದು ಬದುಕು ಹತ್ತಿರದಿ ಸಾಂಗತ್ಯ ಹೊಂದಿರುವ ಜನತೆ ತಮ್ಮ ಅಭಿಪ್ರಾಯವನ್ನು ಪ್ರಸ್ತುತಪಡಿಸಬಲ್ಲರು. ಸುದ್ದಿ ಪತ್ರಿಕೆಗಳನ್ನು ಹಂಚಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾಲತೇಶ್‌ರವರೇ ಖುದ್ದು ಹೇಳುವಂತೆ ಈ ಕಾಯಕ ತನಗೆ ತೃಪ್ತಿ ತಂದಿದೆ, ಹೊತ್ತಲ್ಲದ ಹೊತ್ತು, ಉಲ್ಭಣಿಸಿದ ವಾತಾವರಣವನ್ನು ಲೆಕ್ಕಿಸದೇ ಬೀದಿಗಿಳಿದು ಕೆಲಸ ಮಾಡುವಾಗ ಉತ್ಸಾಹವೇ ತುಂಬಿರುತ್ತದೆ ಹೊರತು ಇದರಿಂದ ಎಂದಿಗೂ ನಾ ಬೇಸತ್ತಿಲ್ಲ, ಆಯಾಸವು ಅನಿಸಿಲ್ಲ, ಬೆಳ್ಳಂ ಬೆಳಿಗ್ಗೆಯ ಸೊಬಗು ಸವಿದು ಆರೋಗ್ಯವನ್ನು ವೃದ್ದಿಸಿಕೊಡುವ ಈ ಕಾಯಕ ನಮ್ಮನ್ನು ಎಂದಿಗೂ ಅನಾರೋಗ್ಯದ ಸಾಲಿನಲ್ಲಿ ನಿಲ್ಲಿಸಿದ್ದು ಇಲ್ಲವೇ ಇಲ್ಲ ಎನ್ನುತ್ತಾರೆ.

ಒಂದು ಆಚ್ಚರಿ ಎಂದರೆ ಮಾಲತೇಶ್ ಶ್ರಮಜೀವಿ ಪತ್ರಿಕೆಗಳ ಹಂಚಿಕೆಯಲ್ಲಿ ಆತ್ಮತೃಪ್ತಿ ತಂದುಕೊಂಡಿದ್ದಾರೆ ಅಲ್ಲದೆ ಅವರನ್ನು ಕುರಿತಾಗಿ ಅವಲೋಕಿಸಿದಾಗ ಜನಸಮೂಹಕ್ಕೆ ಮಾದರಿಯಾಗಿ ದರ್ಶಿಸಿಕೊಳ್ಳುತ್ತಾರೆ, ವೃತ್ತಿಯಲ್ಲಿ ಪತ್ರಿಕೆ ಹಂಚಿಕೆದಾರ ಎನಿಸಿಕೊಂಡು ಶತಮಾನಗಳೇ ತುಳಿದ ಈ ಹೊತ್ತಿನಲ್ಲಿ ಅದೇ ಪತ್ರಿಕೆ ಹಂಚಿಕೆದಾರರ ಗುಂಪಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು, ಅವರ ಭವಣೆಗಳಿಗೆ ಸ್ಪಂದಿಸಬೇಕು, ಮನರಂಜಿತವಾದ ವೇದಿಕೆಗಳನ್ನು ನಿರ್ಮಿಸಬೇಕು ಎನ್ನುವ ಮಹತ್ವಕಾಂಕ್ಷೆಯೊಂದಿಗೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಲೇ ತನ್ನೊಳಗಿನ ನಾಯಕತ್ವವನ್ನು ಸಾಬೀತುಪಡಿಸಿರುವುದು ಶ್ಲಾಘನೀಯವಾಗಿದೆ.

ಹೀಗೆ ಭಕ್ತಿ ಪ್ರಧಾನತೆಯಲ್ಲಿ ಅಗ್ರಮುಖಿಯಾಗಿರುವ ಮಾಲತೇಶ್‌ರವರು ಮೈಲಾರಸ್ವಾಮಿಯ ಅನುಯಾಯಿಗಳಾಗಿ ಪ್ರತಿ ಭಾನುವಾರ ಮೈಲಾರಲಿಂಗೇಶ್ವರ ದೇವಳದಲ್ಲಿ ಸೇವೆ ಸಲ್ಲಿಸುತ್ತಾರೆ ಅಲ್ಲಿಯು ಉತ್ಸುಕದಲ್ಲಿದ್ದವರನ್ನು ಒಟ್ಟುಗೂಡಿಸಿ ಅಳಿವಿನ ಅಂಚಿನಲ್ಲಿರುವ ಜನಪದ ಏಳುಕೋಟಿ ಗೊರವರ ಡಮರುಗ ಕುಣಿತ ವನ್ನು ಮಲೆನಾಡಿನಲ್ಲಿ ಮರುಜೀವ ನೀಡಿ, ಖುದ್ದು ಕೋರಿ ಅಂಗಿ ತೊಟ್ಟಿ, ಕಾಲಿಗೆ ಗೆಜ್ಜೆ ಕಟ್ಟಿ, ಕೈಯಲ್ಲಿ ಡಮರುಗ ಹಿಡಿದು ಗೊರವರ ಪದ ಹೇಳುವ ಮಾಲತೇಶ್ ಅಂತರಂಗವನ್ನು ಮತ್ತೊಮ್ಮೆ. ಮಗದೊಮ್ಮೆ ಪಯಣಿಸುವಷ್ಟು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಬದುಕು ನಿರ್ಮಿಸಿಕೊಂಡಿರುವುದರಿಂದಲೇ ಇವರ ಬದುಕು ಬಹುತ್ವ ಭಾವದಿಂದ ಕೂಡಿರುವುದು ಅರಿವಿಗೆ ಬರುತ್ತದೆ.

ಪತ್ರಿಕೆ ಹಂಚಿಕೆ. ಮುದ್ರಣ ವಿಭಾಗ, ಭಕ್ತಿ ಪ್ರಧಾನತೆ, ಜನಪದ ಗೊರವರ ಕುಣಿತ, ನಾಯಕತ್ವದಡಿ ದಣಿವರಿಯದೇ ನಿಂತ ಶ್ರಮಜೀವಿ ಮಾಲತೇಶ್ ಮಲೆನಾಡಿನಲ್ಲಿ ವಿಶೇಷವಾಗಿ ಕಾಣಿಸುತ್ತಾರೆ. ಇಂತಿವರ ಹುಟ್ಟಿದ್ದು ಇದೇ ಶಿವಮೊಗ್ಗದ ಬೈಲಗಂಬರಕೇರಿಯಲ್ಲಿ, ತಂದೆ ನಾಗರಾಜಪ್ಪ ತಾಯಿ ರತ್ನಮ್ಮ ಎನ್ನುವ ಕಡುಬಡತನದ ದಂಪತಿಗಳಿಗೆ ಐದು ಮಕ್ಕಳು ಇವರಲ್ಲಿ ಎರಡನೆಯವರೇ ಇವರು, ಓದಿದ್ದು ೭ನೇ ತರಗತಿ, ಸರಕಾರಿ ಶಾಲೆ ಹೊಸಮನೆಯಲ್ಲಿ, ಬಹುಷ್ಯಃ ಅಂದಿನ ಶಿಕ್ಷಕರು ಹೇಳಿಕೊಟ್ಟ ನೀತಿಪಾಠಗಳೇ ಸಾಕಷ್ಟು ಬದುಕುಗಳು ರೂಪಿಸಿಕೊಂಡಿವೆ ಅಲ್ಲದೆ ಅಂದಿನ ಶಾಲಾ ಶಿಕ್ಷಕರನ್ನು ಇಂದಿಗೂ ನೆನೆದು ಬಿಡುತ್ತೇವೆ, ಮಾಲತೇಶ್‌ರವರಿಗೂ ಅಂತಹದೊಂದು ಅನುಭವ ಅನುಭೂತಿಸಿದೆ, ಹೀಗಾಗಿಯೇ ಹತ್ತಾರು ದಿಕ್ಕುಗಳಲ್ಲಿ ಬದುಕನ್ನು ಹೆಣೆದುಕೊಂಡಿದ್ದಾರೆ.

       ಇನ್ನೂ ಸಾಂಕ್ರಮಿಕ ರೋಗಕ್ಕೆ ತುತ್ತಾಗಿ ಇಡೀ ಜಗತ್ತಿನ ತಲ್ಲಣಿಸಿದ ಸಂದರ್ಭದಲ್ಲೂ ಯಾವುದೇ ಕಾರಣಕ್ಕೂ ಕಿಂಚಿತ್ತು ಸೊಪ್ಪು ಹಾಕದೇ ಪತ್ರಿಕೆ ಹಂಚಿಕೆಯ ಕಾಯಕದಲ್ಲಿ ಮಗ್ನರಾಗಿ ಹೋಗಿದ್ದ ಮಾಲತೇಶ್‌ರವರಿಗೆ ಕಳೆದ ಕೊರೋನಾ ಎಂಬುವ ಬೀಕರತೆಯ ಸಣ್ಣದೊಂದು ಆತಂಕವನ್ನು ತಂದೊಡ್ಡಿರಲಿಲ್ಲ ಎಂದರೆ ತಿಳಿದವರು ಹೇಳುವಂತೆ ಬದುಕಿಗಿಂತಲೂ ಬೀಕರತೆ ಯಾವ ಸಾಂಕ್ರಮಿಕ ರೋಗಗಳು ತಂದೊಡ್ಡಲಾರದು ಎನ್ನುವ ಮಾತು ಅಕ್ಷರಶಃ ಶ್ರಮಯೋಗಿ ಮಾಲತೇಶ್ ನಿರೂಪಿಸಿದ್ದಾರೆ ಎಂದರೆ ತಪ್ಪಾಗಲಾರದು. ಇದನ್ನು ಮನನ ಮಾಡಿಕೊಂಡಿಯೇ ವಿವಿಧ ಸಂಘ-ಸಂಸ್ಥೆಗಳು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿ ಗೌರವಿಸಿರುವುದು ಅಂತಹ ವೇದಿಕೆಗಳಿಗೆ ಗೌರವ ಎಂದು ಈ ಲೇಖನದಲ್ಲಿ ಹೇಳ ಬಯಸುವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I