Sunday, August 2, 2026
HomeಅಂಕಣI ಹಳೆ ಗಾಜನೂರಿನ I ಸ್ತಬ್ಧ ನೆನೆವುಗಳೂ I

I ಹಳೆ ಗಾಜನೂರಿನ I ಸ್ತಬ್ಧ ನೆನೆವುಗಳೂ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಹಳೆ ಗಾಜನೂರಿನ I ಸ್ತಬ್ಧ ನೆನೆವುಗಳೂ I

ಅನಾದಿ ಕಾಲದಿಂದಲೂ..ಪ್ರತಿಧ್ವನಿಸುತ್ತಿರುವ ದೇವಳವಿದು, ಭಕ್ತರ ಇಷ್ಠಾರ್ಥಗಳ ನೆರವೇರಿಸುವ ಹಲವು ಪವಾಡ ಸದೃಶ್ಯಗಳ ತಾಣ, ಸಂಕಟಹರಿಣಿ, ಮಾತೃಕೆ. ಮೂಲ ಶಂಕರಗುಡ್ಡದ ಆದಿ ದೇವತೆ, ಇಲ್ಲಿ ನೆಲೆಸಿಹಳಿದ್ದಾಳೆ ಎನ್ನುವ ಪುರಾಣ ಕಥೆ ಎಂತಹವರಿಗೂ ಭಕ್ತಿಯ ಏಕಾಗ್ರತೆ ಹೆಚ್ಚಿಸಬಲ್ಲದು, ಪ್ರತಿ ನವರಾತ್ರಿ ದಿನಮಾನದಲ್ಲಿ ಪೂರ್ಣ ದರುಶನಧಾತೆಯಾಗಿರುವ ಈ ದೇವತೆಗೆ ಅದಾಗ ಅಲಂಕಾರಗೊಳಿಸಲಾಗುತ್ತದೆ, ಒಂಬತ್ತು ದಿನಗಳಿಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ, ಕೊನೆ ದಿನ ಎರಡು ಮೊನಚು ಕತ್ತಿಯ ಮೇಲೆ ನಿಂದು ಕಾರ್ಣಿಕ ಹೇಳುವ ಗ್ರಾಮಿಣ ಸೋಗಡಿನ ಪರಂಪರೆ ಇಂದಿಗೂ ಸಾಗಿದೆ.

ಆಕೆ ತನ್ನ ಭಕ್ತರ ನೆರವಿಗೆ, ಆಪತ್ ಕಾಲದಲ್ಲಿ ಹುರೇ ಚೌಡಿ”ಯನ್ನು ಕಳಿಸುತ್ತಾಳೆ ಎನ್ನುವ ಪ್ರತಿತಿ ಇದೆ, ಇದರಂತೆ ಅಲ್ಲೇ ಪಕ್ಕದಲ್ಲಿರುವ ಹುರೇ ಚೌಡಿ’ ಗೂ ಪೂಜೆ ಸಲ್ಲಿಸುವ ಭಕ್ತರು ಹೇಳಿಕೊಂಡ ಹರಕೆಗಳು ಯಾವ ಅನುಮಾನವೇ ಇಲ್ಲದೇ ಪೂರ್ಣಗೊಳ್ಳುತ್ತದೆ ಎನ್ನುವ ಸಾವಿರಾರು ಭಕ್ತರು. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಇಲ್ಲಿ ಜಮಾವಣೆಯಾಗುತ್ತಾರೆ, ಅಲ್ಲದೇ ತಮ್ಮ ಭಕ್ತಿಯಿಂದ ಬೇಡಿಕೊಂಡು ಮರಳುತ್ತಾರೆ, ಹೀಗೆ ದಯಾಸ್ವರೂಪಳು, ದಯಾದೃಷ್ಟಿಯುಳ್ಳವಳು, ದುಃಖವನ್ನು ನಾಶ ಮಾಡುವವಳು, ಸಮಸ್ತ ಆಪತ್ತುಗಳಿಂದಲೂ ಸಂರಕ್ಷಿಸುವವಳು ಎಂದು ಅಪಾರ ಭಕ್ತ ಸಮೂಹ ಹೇಳುತ್ತದೆ .ಇಂತಹ ವಿಶೇಷ ಭಕ್ತಿಯ ತಾಣ ಶಿವಮೊಗ್ಗದಿಂದ ೯ಕಿ,ಮೀ ಕ್ರಮಿಸಿದರೇ ಸಿಗುವ ಗಾಜನೂರಿನ ತುಂಗಾತಟದಲ್ಲಿರುವುವಳೇ “ದೊಣ್ಣೆ ಕೆಂಚಮ್ಮ” ಈಕೆಯ ಆದೇಶದ ಪರಿಪಾಲಕಳೇ ಹುರೇ ಚೌಡಿ” ದೇವಳ, ಇಲ್ಲಿ ಯಾವುದೇ ಆಡಂಬರವಿಲ್ಲದ ಸರಳ ಪೂಜೆಗಳು ನಿತ್ಯವೂ ಸಾಂಗವಾಗುತ್ತಿದೆ, ಇದು ಹಳೆ ಗಾಜನೂರಿನ ಆದಿ ದೇವತೆಯಾಗಿದ್ದಾಳೆ.

ಮೂಲ ಹಳೆ ಗಾಜನೂರಿನವರಾದ ನಮ್ಮ ಕುಟುಂಬ ನಗರ ಪ್ರದೇಶಕ್ಕೆ ವಲಸೆ ಬಂದು ತಳವೂರಿದ್ದಕ್ಕೆ ಕಾರಣಗಳಿವೆ, ಹೀಗಿದ್ದರೂ ನಮ್ಮ ಕುಟುಂಬದ ನಂಬಿಕೆಯಾಗಿದ್ದಾಳೆ ಈ ಆದಿ ದೇವತೆ,
ಹಳೆ ಗಾಜನೂರು, ಹೊಸ ಗಾಜನೂರು ಎಂದು ಬಹುತೇಕರಿಗೆ ಆಚ್ಚರಿಯಾಗಬಹುದು ಹೌದು ಹಳೆ ಗಾಜನೂರು ಹೊಸ ಗಾಜನೂರಿನ ಅಗ್ಸೆ ಬಾಗಿಲಿನತ್ತ ತೆರಳುವ ಮುನ್ನವೇ ತೀರ್ಥಹಳ್ಳಿ ರಸ್ತೆಯ ಚಾನೆಲ್ ಸಿಗುವ ಕೊಂಚ ದೂರದ ಪಶುವೈಧ್ಯಕೀಯ ಆಸ್ಪತ್ರೆಯ ಕಡೆಯಿಂದ ಹಾದು ಹೋಗುವ ರಸ್ತೆ ಹಳೆ ಗಾಜನೂರಿನ ದರ್ಶನ ಮಾಡಿಸುತ್ತದೆ, ಅದು ತುಂಗಾ ತಟದಲ್ಲಿದೆ ಅತೀವ ಮಳೆಗಾಳಿಗೆ ಸಿಲುಕಿ ನೆರೆ-ಹಾವಳಿಗೆ ಸಿಲುಕುತ್ತಿದ್ದ ಗ್ರಾಮವದು, ಇದರಿಂದ ಸಾಕಷ್ಟು ಜಾನವಾರು-ಜನಜೀವನಗಳು ಸಂಕಷ್ಟಕ್ಕೆ ಗುರಿಯಾಗುತಿತ್ತು, ಈ ಕಾರಣಕ್ಕಾಗಿ ಗ್ರಾಮದವರ ಸಂಕಷ್ಟಕ್ಕೆ ಅಂದಿನ ಜಿಲ್ಲಾಡಳಿತ ಸ್ಪಂದಿಸಿ ಇಡೀ ಗ್ರಾಮವನ್ನು ಸ್ಥಳಾಂತರಿಸಲಾಯಿತು, ಇದೀಗಲು ಹಳೆ ಗಾಜನೂರಿನ ಅವಶೇಷಗಳು, ಕಾಣ ಸಿಗುತ್ತವೆ, ಆ ಅವಶೇಷಗಳ ಮೇಲೆ ಮರಗಿಡಗಳ ರಾಶಿ ಬೆಳೆದು ನಿಂತಿದೆ, ಇಂತಹ ಪಾಳು ಬಿದ್ದ ಹಳೆ ಗಾಜನೂರಿನ ಗ್ರಾಮದ ಜನತೆ ಹೊಸ ಗಾಜನೂರಿನಲ್ಲಿ ಜೀವನ ಆರಂಭಿಸಿದರೆ ಇನ್ನೊಂದಿಷ್ಟು ಜನ ನಗರ ಪ್ರದೇಶವನ್ನು ಹರಸಿ ವಲಸೆ ಬಂದಿದ್ದರು, ಹೀಗೆ ಬಂದವರು ನಮ್ಮಂತೆಯೇ ಹಲವರಿದ್ದಾರೆ, ಆದರೆ ಇಂದಿಗೂ ಅದೇ ದೇವಳವೇ ನಂಬಿಕೆಗಳ ತವರು ಮನೆಯಾಗಿದೆ.

ಹೀಗೊಂದಿಷ್ಟು ದಿನಗಳ ನಂತರ ಶನಿವಾರ ಇಂದು ಹಳೆ ಗಾಜನೂರಿನತ್ತ ಗೆಳೆಯರಾದ ಕಿರಣ್ ಕರವೇಯವರನ್ನು ಕರೆದುಕೊಂಡು ಪಯಣ ಬೆಳೆಸಿದ್ದೆ, ಅವರಿಗೂ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎನ್ನುವ ಸುಳಿವು ಇರಲಿಲ್ಲ, ಗಾಜನೂರಿಗೆ ಹೋಗಿ ಬರೋಣ ಎಂದಷ್ಟೆ ಹೇಳಿದ್ದೆ, ಅಲ್ಲಿ ಹೋದ ಮೊದಲು ಕೆಂಚಮ್ಮ. ಹುರೇ ಚೌಡಿಯ ದರ್ಶನ ಪಡೆದು ಹಳೆಗಾಜನೂರಿನ ಅವಶೇಷದತ್ತ ಸಾಗಿದ್ವಿ, ಕಿರಣ್ ಕೂಡ ಈ ಸಂಗತಿ ಕೇಳಿ ಅಚ್ಚರಿಗೊಂಡರು ನಮ್ಮಗೊತ್ತಿದ್ದು ಗಾಜನೂರು ಮಾತ್ರ ಇಲ್ಲೊಂದು ಹಳೆ ಗಾಜನೂರಿತ್ತು ಎನ್ನುವುದು ಕೇಳಿ ಅಲ್ಲೆಲ್ಲಾ ಓಡಾಡಿದರು, ಅವಶೇಷಗಳು ಪೊದೆಗಳನ್ನು ಹೊದ್ದು ಮಲಗಿದೆ, ಸದ್ಯಕ್ಕೆ ಮತ್ತಷ್ಟು ಹೋಗುವುದು ಬೇಡ, ಎಂದು ಮಸಣದ ದೂರದಲ್ಲಿ ಹನುಮಂತನನ್ನು ತೋರಿಸಿದೆ ಇವನು ಹಳೆಗಾಜನೂರಿನ ಅವಶೇಷವಾಗಿ ಊತು ಹೋಗಿದ್ದ ಇದೀಗ ಕೃಷಿ ಕೈಂಕರ್ಯಕ್ಕೆ ಬಂದವರು ಹೊರ ತೆಗೆದು ಅಲ್ಲೇ ಇದ್ದ ದೊಡ್ಡದೊಂದು ಅರಳಿ ಮರದ ಕೆಳಗೆ ನಿಲ್ಲಿಸಿದ್ದರು,

ಆ ಹನುಮಂತನಿಗೆ ಅಲ್ಲೇನು ಪೂಜೆ ನಡೆಯುತ್ತಿರಲಿಲ್ಲ, ಅವನ ಪಾಡಿಗೆ ಮಳೆ-ಗಾಳಿ-ಬಿಸಿಲಲ್ಲಿ ಒಂದೇ ಸಮನೆ ನಿಂತು ಹಾದು ಹೋಕರರಿಗೆ ಕೆಣಕುತಿದ್ದ, ಈ ಕಾರಣಕ್ಕಾಗಿ ಇನ್ನೊಂದಿಷ್ಟು ಮನಸುಗಳು ಸಾಕಷ್ಟು ವರುಷಗಳಿಂದ ಬಣಗುಡುತ್ತಿದ್ದಾನೆ ಈ “ಹನುಮಂತ” ಎಂದು ಈತನಿಗೆ ಪಕ್ಕದಲ್ಲೆ ಇದ್ದ ಮತ್ತೊಂದು ಅವಶೇಷದ ಮೇಲ್ಚಾವಣಿ ಇಲ್ಲದ ಗುಡಿಗೆ ಸ್ಥಳಾಂತರಿಸಿ ಮೇಲ್ಚಾವಣಿ ಹಾಕಿ ಸೂರು ಮಾಡಿದ್ದಾರೆ,
ಮಸಣದ ಪಕ್ಕದಲ್ಲಿ ವೀರಬಾಹುವಿನ ಕೆಲಸವೀಗ ಈ “ಹನುಮಂತ”ನ ಪಾಲಿಗಿದೆ, ಸರಿಸುಮಾರು ಆರು ಅಡಿ ಎತ್ತರವಿರುವ ದೃಡಕಾಯ ಶರೀರ ಹೊತ್ತಿರುವ ಇತನಿಗೆ ಇದೀಗ ಆಗಾಗ್ಗೆ ಪೂಜೆಯು ನಡೆಯುವುದಕ್ಕೆ ಶುರುವಾಗಿದೆ.

ಆಧ್ಯಾತ್ಮಕ್ಕೆ ಹೇಳಿ ಮಾಡಿದ ವಾತವರಣವೂ ಇಲ್ಲಿದೆ, ಪಕ್ಕದಲ್ಲೆ ತುಂಗಾನದಿ ನಕ್ಕು ನಲಿಯುವುದನ್ನು ನೋಡಬಹುದು. ಮತ್ತೊಮ್ಮೆ “ಹಳೆ ಗಾಜನೂರಿನ: ಪೋದೆಗಳ ಸ್ವಚ್ಚತೆಗೊಳಿಸುವ ಮಹತ್ಕಾರ್ಯಕ್ಕೆ ಸ್ಥಳೀಯ ಆಡಳಿತ ವ್ಯವಸ್ಥೆಗೆ ತಿಳಿಸಿ, ಅವರೊಂದಿಗೆ ಹಾಗೂ ಸಂಘ ಸಂಸ್ಥೆಗಳ ನೆರವಿನೊಂದಿಗೆ ಹಳೆ ಗಾಜನೂರಿನ ಪಳಯುಳಿಕೆಗಳಿಗೆ ಕಾಯಕಲ್ಪ ನೀಡುವತ್ತ ಶ್ರಮಿಸುವ ಯತ್ನ ಮಾಡುತ್ತೇನೆ. ಏನೇ ಆಗಲಿ ಪಾಳು ಬಿದ್ದ ಊರಿನ ಇತಿಹಾಸ ಮತ್ತಷ್ಟು ತಿಳಿಯಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I