Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I
ಅಂಕಣ

I ವಿದ್ಯಾ ವಾಚಸ್ಪತಿ I ಡಾ. ಶೈಲಜಾ. ಹೊಸಳ್ಳೇರ I ಶಿಕ್ಷಣ ಕ್ಷೇತ್ರಕ್ಕೊಂದು ಹಿರಿಮೆ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ವಿದ್ಯಾ ವಾಚಸ್ಪತಿ I ಡಾ. ಶೈಲಜಾ. ಹೊಸಳ್ಳೇರ I ಶಿಕ್ಷಣ ಕ್ಷೇತ್ರಕ್ಕೊಂದು ಹಿರಿಮೆ I ಪ್ರತಿಭೆ ಹಾಗೂ ಪ್ರೌಡಿಮೆಗಳು, ಪ್ರಭುತ್ವದ ಜೀವಾಳವಲ್ಲ ಅದೊಂದು ವಾಸ್ತವದ ತಳಹದಿಗಳ ಲೇಪನ, ಇಂತಹದೊಂದು ಅರಿವು ಇದ್ದರೆ ಮಾತ್ರ ಬಹುತ್ವ ಭಾವ, ಹಾದಿಗೊಂದು…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ವಿದ್ಯಾ ವಾಚಸ್ಪತಿ I ಡಾ. ಶೈಲಜಾ. ಹೊಸಳ್ಳೇರ I ಶಿಕ್ಷಣ ಕ್ಷೇತ್ರಕ್ಕೊಂದು ಹಿರಿಮೆ I

ಪ್ರತಿಭೆ ಹಾಗೂ ಪ್ರೌಡಿಮೆಗಳು, ಪ್ರಭುತ್ವದ ಜೀವಾಳವಲ್ಲ ಅದೊಂದು ವಾಸ್ತವದ ತಳಹದಿಗಳ ಲೇಪನ, ಇಂತಹದೊಂದು ಅರಿವು ಇದ್ದರೆ ಮಾತ್ರ ಬಹುತ್ವ ಭಾವ, ಹಾದಿಗೊಂದು ನಿಜಾರ್ಥವಿರುತ್ತದೆ, ಈ ಅಕ್ಷರದ ಸಾಲಿಗೆ ಸರಿಹೊಂದುವಂತೆ ಒಂದು ಹೆಜ್ಜೆ ನೂರು ಹಾದಿಗಳಲ್ಲಿ ಚಿಂತನೆಗೆ ಮುನ್ನುಡಿ ಬರೆದು ಆ ಜಗಲಿಯ ಬದುಕಿಗೆ ಕೃತಿಯಾದವರು ಡಾ. ಶೈಲಜಾ. ಹೊಸಳ್ಳೇರ ಎಂದರೆ ತಪ್ಪಾಗಲಾರದು.

ಎಲ್ಲಿ ಬಹುತ್ವದ ಪ್ರತಿಭೆಗಳಿರುತ್ತದೆಯೋ ಅಂತಹ ವ್ಯಕ್ತಿ ವಿಕಸನಗಳ ಮೇಲೆ ವಿಕೃತ ಮಾನಸೀಕತೆಯ ಅರೆಬೆಂದವರು ಕುತ್ಸಿತ ಕುಬ್ಜತೆಯೊಳು ಕುತಂತ್ರದಿ ವಾಮಮಾರ್ಗದ ದಾಳಿಗಳು ಮಾಡುವುದು ಸಾಮಾನ್ಯ, ಏಕೆಂದರೆ ಪ್ರಸ್ತುತ ಸಮಾಜವನ್ನು ಪಂಥಿಯ ವಾದಗಳು ಅಕ್ರಮಿಸಿಕೊಂಡಿವೆ, ಅಧಿಕಾರದ ಅಧಮತೆಯ ವಿಷಪ್ರಾಸನಗಳು ತಿನ್ನುವ ಗಂಗಳದಲ್ಲಿ ಪ್ರತಿಬಿಂಬಿಸುತ್ತಲೇ ಇರುತ್ತದೆ, ಅಕ್ಷರದ ವಿರೂಪತೆಗಳು ವಾಕರಿಸಿಕೊಳ್ಳುತ್ತದೆ ಇದು ಅಕ್ಷರದ ಸಾರಸ್ವತಾ ಲೋಕದ ತಾಯಿ ಮಡಿಲು ಎಲ್ಲವನ್ನು ಸ್ವಾದಿಸಿಕೊಳ್ಳುತ್ತಲೇ ಇರುತ್ತದೆ, ಇಂದು ಉಪ್ಪು ತಿಂದವರು ತುಸು ಹೊತ್ತಿನಲ್ಲಿಯೇ ನೀರು ಕುಡಿಯಲೇ ಬೇಕು, ಪಾಪದ ಎದೆ ಚರಿಗೆ ಎಂದಾದರೊಮ್ಮೆ ಏರಿಳಿತಗಳ ಡಿಸೈನ್‌ಗಳಲ್ಲಿ ಕೊನೆ ತುದಿಯಾಗುತ್ತದೆ , ಇದಕ್ಕೆ ನೂರು ಉದಾಹರಣೆಗಳನ್ನು ಇಲ್ಲಿ ಲಗತ್ತಿಸಬಹುದು, ಇಂತಹ ಜರೂರತ್ತು ಇಲ್ಲಿ ಅಸಮಂಜಸ ಎನ್ನುವ ಕಾರಣಕ್ಕೆ ಹಾಗೂ ವಿಷಯ ವಿಷಯಾಂತರ ಆಗದಿರಲಿ ಅಂಬುವ ಇರಾದೆಯಲ್ಲಿ ಕನ್ನಡ ನಾಡಿನ ಹಿರಿಮೆ ಬಹುತ್ವ ಜ್ಞಾನದ ಗಣಿ, ವಿದ್ಯಾವಾಚಸ್ಪತಿ ಡಾ. ಶೈಲಜಾ. ಹೊಸಳ್ಳೇರ ಕುರಿತಾಗಿ ಅನೇಕ ಹಂತಗಳಲ್ಲಿ ಉವಾಚಿಸಿ ವಿಸ್ತೃತಗೊಳಿಸುವ ಮೊದಲ ಹೆಜ್ಜೆ ಇದಾಗಿದೆ.

ಇತ್ತೀಚಿಗೆ ಶಿವಮೊಗ್ಗ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಸಮರ್ಥ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದವರು ಏರ್ಪಡಿಸಿದ್ದ ವಿದ್ಯಾ ವಾಚಸ್ಪತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಶೈಲಜಾ. ಹೊಸಳ್ಳೇರ , ಪ್ರಾಂಶುಪಾಲರು ಸರ್ ಎಂ ವಿಶ್ವೇಶ್ವರಯ್ಯ ಕಲಾ, ವಾಣಿಜ್ಯ ಕಾಲೇಜು ಭದ್ರಾವತಿ ಇವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿ ಬರಪೂರತೆಯಲ್ಲಿ ಗೌರವಿಸಲಾಯಿತು, ಇದು ಅಜ್ಞಾನಿಗಳಿಗೆ ನೀಡುವ ಪ್ರಶಸ್ತಿಯಲ್ಲ, ಈ ಲೇಖನದ ಮೊದಲ ಸಾಲಿನಂತೆ ಯಾರಿಗೆ ಬಹುತ್ವದ ಮೆರಗಿನ ಬದುಕು ಆವರಿಸಿಕೊಂಡಿರುತ್ತದೆಯೋ.. ಯಾರು ಯಾವುದೇ ವಿಷಯ ನೀಡಿದರೂ ವಾಸ್ತವದ ಅಲಗಿನ ತಳಹದಿಯಲ್ಲಿ ಗಂಟೆಗಟ್ಟಲೇ ಭಾಷಣವನ್ನು ಮಾಡುವ ಜ್ಞಾನ ಭಂಡಾರ ಹೊಂದಿ ಉತ್ತಮ ವಾಗ್ಮಿಗಳಾಗಿ ಇರುತ್ತಾರೋ.. ಬರಹದ ಹವ್ಯಾಸ, ಪುಸ್ತಕಗಳ ನಿರ್ಮಾಣ, ಶಿಕ್ಷಣದ ಮುಂದಾಳು ಆಗಿರುತ್ತಾರೋ ಅಂತಹವರಿಗೆ ನೀಡುವ ಪ್ರಶಸ್ತಿಯನ್ನು ಡಾ. ಶೈಲಜಾ. ಹೊಸಳ್ಳೇರ ಅವರಿಗೆ ನೀಡಿ ಗೌರವಿಸಿದ್ದು ಇಡೀ ನಾಡಿಗೆ ಹಾಗೂ ನೆಲದ ಮಲೆನಾಡಿಗೆ ಹಿರಿಮೆ ಅಲ್ಲವೇ..?!

ಇಂತಹವರ ಕುರಿತಾಗಿ ಕಮರ್ಷಿಯಲ್ ಹಾದಿಯಲ್ಲಿ ನೋಡುವ, ಅಧಿಕಾರದ ಹಪಾಹಪಿತನದಿ ಬಿದ್ದು ದಿಟ್ಟಿಸುವ ಮಾನಗೇಡಿಗಳಿಗೆ ಏನು ಗೊತ್ತಿದೆ.. ಉದಾಹರಣೆಗೆ ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎನ್ನುವ ನಾಣ್ಣುಡಿಯಂತೆ ಅರೆಬೆಂದವರ ಪ್ರಸ್ತುತ ಪರಿಸ್ಥಿತಿ ಆಗಿದೆ, ಇವರು ೩೫ವರ್ಷಗಳಿಂದ ಕನ್ನಡ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಬೋಧಿಸಿ ಸಲ್ಲಿಸಿದ ಸಾರ್ಥಕ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡುವುದಕ್ಕೂ ಶಿಕ್ಷಣದ ಪುರಾವೆಗಳಿರುತ್ತದೆ ಅಲ್ಲವೇ..?

ಅಸಲಿಗೆ ಇಂತಿವ ಮಲೆನಾಡಿನ ಮಹಿಳಾ ವಾಗ್ಮಿ ಡಾ. ಶೈಲಜಾ ಹೊಸೆಳ್ಳೇರ ಅವರು ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಕೆಲಸ ನಿರ್ವಹಿಸುತ್ತಿದ್ದು ಕು. ವಿ.ವಿ. ಕನ್ನಡ ಅಧ್ಯಯನ ಮಂಡಳಿ ಸದಸ್ಯರಾಗಿ, ಕನ್ನಡ ಪರೀಕ್ಷಾ ಮಂಡಳಿ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದು, ಬೋಧನೆ ಜೊತೆಗೆ ಹಲವಾರು ಪುಸ್ತಕಗಳನ್ನು ಪ್ರಕಟಿಸಿರುವುದು ಇವರ ಸಾಧನೆಯ ಬಹುತ್ವದ ಮೈಲಿಗಲ್ಲು ಆಗಿದೆ. ಇನ್ನೂ ಮುಂದುವರೆದಂತೆ ಪುಸ್ತಕ ನಿರ್ಮಾಣದ ಸಾರಸ್ವತಾ ಬಾಗಿಲೊಳು ಪಠ್ಯ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ಸಂಶೋಧನ ಲೇಖನಗಳು ಪ್ರಕಟವಾಗಿವೆ.

ಇದರಲ್ಲಿ ಲೈಂಗಿಕತೆ ಮತ್ತು ಧರ್ಮ ಎನ್ನುವ ಮುನ್ನೂರು ಪುಟಗಳಿಗೂ ಹೆಚ್ಚು ಹೊಂದಿರುವ ಗ್ರಂಥವೊಂದು ಇವರದೇ ವಿರಚಿತದೊಳು ಸಾರಸ್ವತಾ ಲೋಕಕ್ಕೆ ಲೋಕಾರ್ಪಣೆಗೊಳ್ಳುವ ಅವಸರದಲ್ಲಿದೆ,

ಒಟ್ಟಿನಲ್ಲಿ ಆದಿ ಕಾಲದ ಬಸವಣ್ಣನವರಿಗೆ ಬಿಡದ ಕಲಿ ದಿನಮಾನದ ಸಮಾಜದಲ್ಲಿ ಯಾವುದು ಮುಖ್ಯವಲ್ಲ ಯಾವುದು ಅಮುಖ್ಯವೂ ಅಲ್ಲವೆಂದು ಭಾವಿಸಿ, ಅಕ್ಷರ ಸಂತರಾಗಿರುವ ಡಾ.ಶೈಲಜಾ ಹೊಸೆಳ್ಳೇರ ಅವರಿಗೆ ಕನ್ನಡ ಸಂಘಟನೆಗಳು ಸ್ಮರಿಸದೆ ಇರಲಾರದು ಎನ್ನುವ ಅಂಬೋಣದೊಂದಿಗೆ ಮತ್ತೊಂದು ಕಂತಿನೊಂದಿಗೆ ಲೇಖನ ವಿಸ್ತೃತಗೊಳ್ಳಲಿದೆ.

Gara Srinivas

Gara Srinivas

Leave a comment

error: Content is protected !!