Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಶಿವಮೊಗ್ಗದಲ್ಲಿ ರೌಡಿ ಆಸಾಮಿಗಳ ಮನೆಗಳ ಮೇಲೆ ಪೊಲೀಸರ ದಾಳಿ I ಪರಿಶೀಲನೆ I
ಅಂಕಣ

I ಆತ್ಮಹತ್ಯೆಯಂತಹ I ಅನುಮಾನಿತ ಸುಳಿಯೊಳು…?!  I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಆತ್ಮಹತ್ಯೆಯಂತಹ I ಅನುಮಾನಿತ ಸುಳಿಯೊಳು…?!  I ಮನುಷ್ಯ ಬದುಕು ವಿಭಿನ್ನತೆಯಿಂದ ಕೂಡಿರುತ್ತದೆ, ಯಾವ ಬದುಕು ಹೇಗಿರಬೇಕು ಅಂದುಕೊಳ್ಳುತ್ತಾನೋ..? ಅದು ಹಾಗೆಯೇ ರೂಪುಗೊಳ್ಳುತ್ತದೆ ನಾನು ಕೂಡ ಸಂಘಟಿತವಾಗಿ ಸೇವೆ ಸಲ್ಲಿಸಬೇಕು ಎಂದುಕೊಂಡಿದ್ದೇ.. ಅಂದುಕೊಂಡಂತೆ ಅದೇ ಹಾದಿಯಲ್ಲಿಯೇ ಸಾಗಿ ಬಿಟ್ಟಿದ್ದೆ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಆತ್ಮಹತ್ಯೆಯಂತಹ I ಅನುಮಾನಿತ ಸುಳಿಯೊಳು…?!  I

ಮನುಷ್ಯ ಬದುಕು ವಿಭಿನ್ನತೆಯಿಂದ ಕೂಡಿರುತ್ತದೆ, ಯಾವ ಬದುಕು ಹೇಗಿರಬೇಕು ಅಂದುಕೊಳ್ಳುತ್ತಾನೋ..? ಅದು ಹಾಗೆಯೇ ರೂಪುಗೊಳ್ಳುತ್ತದೆ ನಾನು ಕೂಡ ಸಂಘಟಿತವಾಗಿ ಸೇವೆ ಸಲ್ಲಿಸಬೇಕು ಎಂದುಕೊಂಡಿದ್ದೇ.. ಅಂದುಕೊಂಡಂತೆ ಅದೇ ಹಾದಿಯಲ್ಲಿಯೇ ಸಾಗಿ ಬಿಟ್ಟಿದ್ದೆ ತಿರುಗಿ ನೋಡುವ ಹೊತ್ತಿಗೆ ಹದಿ-ಹರೆಯದ ಹೊಸ್ತಿಲು ದಾಟಿದ್ದೆ, ಎಲ್ಲರಂತೆ ಬದುಕು ತನ್ನದಾಗಿರಲಿಲ್ಲ, ಶ್ರಮಜೀವಿಯ ತಂದೆಗೆ ಕೀರ್ತಿವಂತನಾಗಿ ಬದುಕಬೇಕು, ಶ್ರೇಷ್ಟತೆಯ ಜಗಲಿಯಲ್ಲಿ ವಿರಾಜಿಸಬೇಕು ಎಂದುಕೊಂಡಾಗಲೆಲ್ಲಾ.. ಸೋಲು ನಗುತಿತ್ತು, ಅದು ಸದಾ ಹೆಗಲ ಮ್ಯಾಲೆ ಕೂತು ಕುಹಕಿಸುತಿತ್ತು, ಆದರೂ ಎಲ್ಲೋ ಒಂದೆಡೆ ಕಟಿಬದ್ದತೆಯಿಂದ ನಿಂತು ಬಿಡುತ್ತೇನೆ ಎನ್ನುವ ಆತ್ಮವಿಶ್ವಾಸ ಇಂದಿಗೂ ಕೊಲೆಯಾಗಲೇ ಇಲ್ಲ. ಪ್ರತಿ ಸೋಲು ಹೊಸತೊಂದು ಅಧ್ಯಯನಕ್ಕೆಡೆ ಮಾಡಿಕೊಡುತಿತ್ತೇ.. ವಿನಃ ನಿರಾಶದಾಯಕನಾಗಿಸಲೇ ಇಲ್ಲ. ಹೀಗೆ ಯಾಕೆ ತಮ್ಮ ಮುಂದಡಿ ಟಿಪ್ಪಣಿಗಳಿಡುತ್ತಿದ್ದೇನೆ ಎಂದರೆ ದುರ್ಬಲ ಮಾನಸೀಕತೆಯವರು ಆತ್ಮಹತ್ಯೆ ಮಾಡಿಕೊಳ್ಳುವುದು ಇದರಲ್ಲಿ ವಿಶೇಷತೆ ಪಡೆಯುವುದಿಲ್ಲ, ಆದರೆ ಸದೃಡ ಮಾನಸೀಕತೆಯವರು ಆತ್ಮಹತ್ಯೆಯ ಗುರಿಯಲ್ಲಿ ಚಿತ್ತವರಿಸುತ್ತಾರೆ ಎಂದರೆ ಆಚ್ಚರಿ ಪಡುವಂತಹದ್ದಾಗಿದೆ.

ಯಾಕೆಂದರೆ ಇತ್ತೀಚೆಗೆ ಕೋಲಾರದ ಜಿಲ್ಲಾಧಿಕಾರಿ ಡಿಕೆ.ರವಿಯವರ ಪ್ರಕರಣ ಕೂಡ ಇಂತಹದೊಂದು ಪ್ರಶ್ನೆಯನ್ನು ಕಟ್ಟಿಕೊಡುತ್ತದೆ, ಓರ್ವ ವಿದ್ಯಾವಂತ ಯುವಕ ಕಷ್ಟಪಟ್ಟು ವ್ಯಾಸಾಂಗ ನಡೆಸಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಪಿಎಸ್ ಹುದ್ದೆಯನ್ನು ಅಲಂಕರಿಸುವವರೆಗಿನ ಜರ್ನಿ ಬಹಳ ಕ್ಲಿಷ್ಟಕರ ಎನ್ನುವುದು ಗೊತ್ತಿರುವ ಸಂಗತಿ, ಹೀಗೆ ಐಪಿಎಸ್ ಗ್ರೇಡಿನ ಉನ್ನತಾಧಿಕಾರಿ ಸಾರ್ವಜನಿಕವಾಗಿ ಗಮನಸೆಳೆದು ಆತ್ಮವಿಶ್ವಾಸವನ್ನು ತುಂಬತ್ತಲಿ ತಾನೇ ಒಂದೊಮ್ಮೆ ತನ್ನಲ್ಲಿರುವ ಸದೃಡತೆಯನ್ನು ನಶಿಸಿಕೊಂಡು ಸ್ವಯಂ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ ಎಂದರೆ ಇಲ್ಲಿ ಗೊತ್ತಾಗುವುದೇನು..? ಎನ್ನುವ ತರ್ಕಕ್ಕೆ ಇದೊಂದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಹೇಳಲಾಗಿತ್ತು, ಇನ್ನೇನೋ ಸ್ಟೋರಿಗಳಿಗೆ ರೆಕ್ಕೆ-ಪುಕ್ಕಗಳಂಟಿಸಿಕೊಂಡು ಹಾರಾಡುವುದಕ್ಕೆ ಶುರುವಾಯಿತು,

ಇಂತಹ ಸಂಗತಿಗಳಲ್ಲಿ ಕೊನೆಗೆ ತೀರ್ಮಾನಕ್ಕೆ ಬಂದಿದ್ದು ಬಹಳವಾಗಿ ಕೇಳಿದ್ದು ಡಿಕೆ.ರವಿಯವರಿಗೆ ಭಾವುಕತೆಯ ಮಾತು, ಹೌದು ಪ್ರತಿ ಬದುಕಿನ ಹಿಂದೆ ಭಾವನಾತ್ಮಕತೆಯ ಬೀಜ ಇದ್ದೇ ಇರುತ್ತದೆ, ಇದಕ್ಕೆ ತೊಂದರೆಯಾದಾಗ ಮಾತ್ರವೇ ಆತ ಒಂದಿಷ್ಟು ಸಮಯ ಏಕನಾತ್ಮಕತೆಯಲ್ಲಿ ತೊಡಗಿಸಿಕೊಳ್ಳಬೇಕು. ಒಳಿತನ ಮನಸುಗಳೊಂದಿಗೆ ಹೇಳಿಕೊಳ್ಳಬೇಕು, ಹೀಗಾದರೆ ಮಾತ್ರ ಪ್ರತಿ ಭಾವನಾತ್ಮಕತೆಯ ದಕ್ಕೆಯ ಸಮಸ್ಯೆಗೆ ಅವರೇ ಉತ್ತರ ಕೊಂಡುಕೊಳ್ಳುತ್ತಾರೆ ಎನ್ನುವುದು ಔಚಿತ್ಯ ಎನಿಸಿಕೊಳ್ಳುತ್ತದೆ.

ಬಹುಷ್ಯಃ ಇಂತಹ ಏಕನಾತ್ಮಕತೆಯ ಸಮಯ ಡಿಕೆ.ರವಿಯಂತಹ ಮಾತೃ ಮನಸ್ಸಿಗೆ ದೊರಕಲೇ ಇಲ್ಲ ಅನಿಸುತ್ತದೆ, ಹೀಗಾಗಿ ಡಿಕೆ.ರವಿ ಕನಿಷ್ಟ ಅವಧಿಯಲ್ಲಿ ಜನಪರ ವಿಶ್ವಾಸಗಳಿಸಿ ಹಾಗೆಯೇ ಜಗತ್ತಿಗೆ ವಿಧಾಯ ಹೇಳಿಬಿಟ್ಟರು, ಈ ಉದಾಹರಣೆಯೊಂದಿಗೆ ಪ್ರತಿ ಈ ಮಾನಸೀಕತೆಯನ್ನು ತೊಡೆದುಹಾಕಲು ತನ್ನೊಳಗಿನ ಅರಿವಿನ ಗುರು ಅಗತ್ಯತೆಯನ್ನು ಬಿಂಬಿಸಿಕೊಳ್ಳುತ್ತಾನೆ. ಸಾಧಿತ ಹಾದಿಯಲ್ಲಿರುವ ಬಹುತೇಕರು ಇಂತಹದೊಂದು ಭ್ರಮನಿರಸನವಾದಿಗಳಾಗಿ ಒಮ್ಮೊಮ್ಮೆ ದರ್ಶಿಸಿಕೊಳ್ಳುತ್ತಾರೆ. ಅದಾಗ ಈ ಸಮಯದ ಔಚಿತ್ಯತೆ ಎಲ್ಲಾ ಸಮಸ್ಯೆಗಳಿಗೆ ತಾನೇ ಉತ್ತರದಾಯಕವಾಗಿಸುತ್ತದೆ.

ಇನ್ನೂ ಈ ಜಗತ್ತಿನಲ್ಲಿ ವಿಭಿನ್ನ ಮನೋಭಾವನೆಯ ಮಂದಿಗಳು ಸಿಗುತ್ತಾರೆ, ನೇರ ನಿಷ್ಟುರವಾದಿಗಳಾಗಿರದೇ ಬ್ಯಾಲೆನ್ಸ್ (ಹಿಂಬಾಲಕ) ಮನಸ್ಥಿತಿಗೆ ಹೊಗ್ಗಿಕೊಂಡಿರುತ್ತಾರೆ, ರಂಗ ವೇದಿಕೆಯಲ್ಲಿ ಮಾಡಬೇಕಿದ್ದ ನಾಟಕ ಕಲೆಯನ್ನು ನಿಜ ಜೀವನದಲ್ಲಿಯು ತೋರ್ಪಡಿಸಿಕೊಂಡು ನಟಿಸುತ್ತಲೇ ಇರುತ್ತಾರೆ ಇಂತಹವರು ಅನೇಕತೆಯ ಸಾಧಿತ ಸದೃಡರಿಗೆ ಮಾರ್ಗದರ್ಶನ ನೀಡಲೊರಡುತ್ತಾರೆ, ಈ ಮಾರ್ಗದರ್ಶನ ವಿಪರೀತತೆಯನ್ನು ನಕರಾತ್ಮಕತೆಯ ವಿರಾಟ ಚಿತ್ರ ಕಾಣಿಸುವಂತೆ ಮಾಡಿಸುತ್ತದೆ, ಈ ಅರಿವಿನೊಂದಿಗೆ ಕೆಟ್ಟ ಸಮಯವನ್ನು ದಾಟಿ ನಿಂದೊಡೆ ಮತ್ತೇ ನೂರು ಆನೆಬಲದಿ ನಿಂತು ಬಿಡುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ.

ಹೀಗಾಗಿ ಸಾಧಿತ ಸದೃಡರಿಗೆ ಬಹುತೇಕ ಅಡ್ಡಗಾಲುಗಳು ಸಹಜ, ಸೋಲು ಸರ್ವೇ ಸಾಮಾನ್ಯ, ತಾತ್ಸಾರತೆ, ವಿರೋಧಭಾವಗಳು ಎದುರಾಗುತ್ತಲೇ ಇರುತ್ತದೆ ಇಂತಿವುಗಳನ್ನು ತಾಳ್ಮೆ-ಜಾಣ್ಮೆಯಿಂದಲೇ ಗೆಲ್ಲಬೇಕಿದೆ, ಎಲ್ಲರು ಹುಟ್ಟಿನಿಂದ ಶುರುವಾಗುವ ಮಸಣದತ್ತ ಹೆಜ್ಜೆಗಳನ್ನು ಯಾರಿಗೂ ತಡೆಯುವುದಕ್ಕೆ ಸಾಧ್ಯವಿಲ್ಲ, ಈ ಹೆಜ್ಜೆಗಳು ಕ್ಷೀಣಿಸುವುದರೊಳಗೆ ಎಲ್ಲರೊಳಂದಾಗಿ ಬದುಕಬೇಕು ಅದು ಶಾಸನವಾಗಬೇಕು. ಇಂತಹುದರಲ್ಲಿ ಚಿತ್ತವರಿಸಿದರೆ ಬದುಕು ಸಾರ್ಥಕ ಅಲ್ಲವೇ…

Gara Srinivas

Gara Srinivas

Leave a comment

error: Content is protected !!