Saturday, August 1, 2026
Homeಸೂರ್ಯಗಗನI ಅಕ್ರಮವಾಗಿ ಐದು ಎಕರೆ ಗ್ರಾಮಠಾಣಾ ಜಾಗ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ಗೆ ಮಂಜೂರು I ವಶಪಡಿಸಿಕೊಳ್ಳಲು...

I ಅಕ್ರಮವಾಗಿ ಐದು ಎಕರೆ ಗ್ರಾಮಠಾಣಾ ಜಾಗ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ಗೆ ಮಂಜೂರು I ವಶಪಡಿಸಿಕೊಳ್ಳಲು I ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ  I ರೈತಪರ ಲೋಕೇಶ್ ಫೈಲ್ವಾನ್ I

ಹಾಳೂರ್ ಅನುಪಿನಕಟ್ಟೆಯ ಐದು ಎಕರೆ

I ಅಕ್ರಮವಾಗಿ ಐದು ಎಕರೆ ಗ್ರಾಮಠಾಣಾ ಜಾಗ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ಗೆ ಮಂಜೂರು I ವಶಪಡಿಸಿಕೊಳ್ಳಲು I ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ  I ರೈತಪರ ಲೋಕೇಶ್ ಫೈಲ್ವಾನ್ I

ಶಿವಮೊಗ್ಗ : ತಾಲ್ಲೂಕಿನ ಪುರದಾಳ್ ಪಂಚಾಯ್ತಿ ಹಾಳೂರ್ ಅನುಪಿನಕಟ್ಟೆ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ೫ (ಎಕರೆ) ಭೂ ಪ್ರದೇಶವನ್ನು ಖಾಸಗಿ ಸಂಸ್ಥೆಯಾಗಿರುವ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ಗೆ ತಾಲ್ಲೂಕು ಪಂಚಾಯ್ತಿ ಸಭೆಯಲ್ಲಿ ಅಕ್ರಮವಾಗಿ ಅನುಮೋದಿಸಿ ಮಂಜೂರಾತಿ ಮಾಡಿರುವುದನ್ನು ರದ್ದುಗೊಳಿಸಿ ಕೋಟ್ಯಾಂತರ ಮೌಲ್ಯದ ಈ ಸರಕಾರಿ ಭೂಮಿಯನ್ನು ವಶಪಡಿಸಿಕೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ರೈತಪರ ಹೋರಾಟಗಾರ ಲೋಕೇಶ್ ಫೈಲ್ವಾನ್ ಆಗ್ರಹಿಸಿದ್ದಾರೆ.

ಅವರು ನೀಡಿದ ಮನವಿಯಲ್ಲಿ ಶಿವಮೊಗ್ಗ ತಾಲ್ಲೂಕಿನ ಪುರದಾಳ್ ಪಂಚಾಯ್ತಿ ಹಾಳೂರ್ ಅನುಪಿನಕಟ್ಟೆ ಗ್ರಾಮದ ಗ್ರಾಮಠಾಣಾ ಭೂ ಪ್ರದೇಶವು ಭೂ ಕಬಳಿಕೆಯ ಭಾಗವಾಗಿದ್ದು ಸದರಿ ೧೮-೧೨-೧೯೯೮ರಲ್ಲಿ ತಾಲ್ಲೂಕು ಪಂಚಾಯ್ತಿ ಸಭೆ ನಡೆಸಿ, ಗ್ರಾಮಠಾಣಾ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅಕ್ರಮವಾಗಿ ೫ (ಎಕರೆ) ಭೂ ಪ್ರದೇಶವನ್ನು ಖಾಸಗಿ ಸಂಸ್ಥೆಯಾಗಿರುವ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ಗೆ ಹಸ್ತಾಂತರ ಯಾನೆ ಮಂಜೂರಾತಿ ಮಾಡಲಾಗಿದೆ ಎಂದು ಅನುಮೋದಿಸಿರುವುದು ವ್ಯವಸ್ಥಿತವಾದ ಭೂ ಕಬಳಿಕೆಯಾಗಿದೆ ಎಂದು ವಿವರಿಸಿದ್ದಾರೆ

ಸದರಿ ಭೂ ಪ್ರದೇಶವನ್ನು ನಿರ್ಗತಿಕ ಹಾಗೂ ಸಾರ್ವಜನಿಕವಾದ ಸಮುದಾಯ ಭವನ, ಸರಕಾರಿ ಇಲಾಖಾ ಉಪಯೋಗಕ್ಕೆ ಬಳಕೆಯಾಗಬೇಕಾಗಿರುವ ಭೂ ಪ್ರದೇಶವೀಗ ಪೋರ್ಜರಿ ದಾಖಲೆಗಳಿಗೆ ಕಾರಣವಾಗಿದ್ದು ಈ ಭೂ ಕಬಳಿಕೆಯಲ್ಲಿ ಅಂದಿನ ತಾಲ್ಲೂಕು ಪಂಚಾಯ್ತಿಯ ಅಧಿಕಾರಿಗಳು ಹಾಗೂ ಪುರದಾಳ್ ಗ್ರಾಪಂ ಅಧಿಕಾರಿಗಳು ನೇರವಾಗಿ ಶಾಮೀಲಾಗಿರುವುದು ಈ ಪ್ರಾಥಮಿಕ ಹಂತದಲ್ಲಿ ಕಂಡು ಬಂದಿರುತ್ತದೆ,
ಅಸಲಿಗೆ ಈ ಸಭೆಯು ಕೂಡ ನಕಲಿ ಎಂಬುದು, ವರದಿಗಳಲ್ಲಿ ನಮೂದಿಸಿ ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಪಂ ಕಡತಗಳಲ್ಲಿ ಎಂಟ್ರಿ ಪಡೆದಿರುವುದು ಎನ್ನುವುದು ತಿಳಿದು ಬಂದಿದ್ದು ಉನ್ನತ ಮಟ್ಟದ ಅಧಿಕಾರಿಗಳಾದ ನೀವು ಈ ಕೂಡಲೇ ಬಡವರಿಗಾಗಿ, ನಿರ್ಗತಿಕರಿಗಾಗಿ ಮೀಸಲು ಆಗಿರುವ ಭೂ ಪ್ರದೇಶವನ್ನು ಖಾಸಗಿ ಸಂಸ್ಥೆಗೆ ಮಂಜೂರಾತಿ ಮಾಡುವ ಯಾವ ಪರಮಾಧಿಕಾರ ಇಲ್ಲದಿದ್ದರೂ ಮಂಜೂರಾತಿ ಎನ್ನುವ ಹೆಸರನಲ್ಲಿ ಭೂ ಕಬಳಿಕೆಯಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಸದರಿ ೧೮-೧೨-೧೯೯೮ರಲ್ಲಿ ತಾಲ್ಲೂಕು ಪಂಚಾಯ್ತಿ ಸಭೆಯ ನಿರ್ಣಯದಂತೆ, ಪುರದಾಳ್ ಗ್ರಾಮ ಪಂಚಾಯ್ತಿಯು ದಿನಾಂಕ ೨೪-೦೯-೧೯೯೮ರಲ್ಲಿನ ಸಭೆಯಲಿ ಕರ್ನಾಟಕ ಪಂಚಾಯ್ತ್ ರಾಜ್ ಅಧಿನಿಯಮ ೧೯೯೩ ಪ್ರಕರಣ ೨೦೯ರಂತೆ ಕಾನೂನು ಬದ್ದವಾಗಿರುತ್ತದೆ ಎಂದು ತಿಳಿಸಿ ೦೪-೧೨-೨೦೦೪ರ ತಾಲ್ಲೂಕು ಪಂಚಾಯತ್ ಅಧಿಕೃತ ಜ್ಞಾಪನದಲ್ಲಿ ಅಂದಿನ ಕಾರ್ಯನಿರ್ವಾಹಣಾ ಧಿಕಾರಿಗಳು ತಾಲ್ಲೂಕ್ ಪಂಚಾಯತ್ ಶಿವಮೊಗ್ಗ ಇವರ ಹಸ್ತಾಕ್ಷರ ಮೊಹರು ಸಾಕ್ಷೀಕರಿಸುತ್ತದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಜ್ಞಾಪನ ಪತ್ರದಲ್ಲಿ ಹೊರಡಿಸಿಲಾಗಿರುವ ಆದೇಶ ಸಂಖ್ಯೆಗಳು, ಸಭೆಯ ದಿನಾಂಕಗಳು ಒಂದಕ್ಕೊಂದು ತಾಳೆ ಇಲ್ಲದಾಗಿರುತ್ತದೆ ಅಸಲಿಗೆ ಉಲ್ಲೇಖದಲ್ಲಿರುವಂತೆ ಪುರದಾಳ್ ಗ್ರಾಪಂ ಸಾಮಾನ್ಯ ಸಭೆ ದಿನಾಂಕ ೦೫-೧೦-೧೯೯೮ ಎಂದು ನಮೂದಾಗಿದ್ದರೆ, ವಿವರದ ವಿಷಯದಲ್ಲಿ ೨೪-೦೯-೧೯೯೮ರಲ್ಲಿನ ಸಭೆ ಎನ್ನಲಾಗಿದೆ, ಇನ್ನೂ ತಾಪಂ ಸಭೆಯ ನಡಾವಳಿಯ ದಿನಾಂಕದ ಮೊದಲೇ ತಾವೇ ನಿರ್ಣಯಿಸಿದ್ದೇವೆ ಎನ್ನುವುದಕ್ಕೆ ಈ ಸಭೆಯ ದಿನಾಂಕ ಸಾಕ್ಷೀಕರಿಸುತ್ತದೆ, ಅಂದರೆ ತಾಲ್ಲೂಕು ಪಂಚಾಯ್ತಿಯ ಸಭೆಗೆ ತಾವೇ ಸೂಚಿಸಿದ್ದೇವೆ ಎನ್ನುವ ಪುರದಾಳ್ ಸಭೆಯ ನಡಾವಳಿ ದಿನಾಂಕಗಳು ಇಲ್ಲಿ ಸಂಪೂರ್ಣವಾಗಿ ಮಿಸ್ ಮ್ಯಾಚ್ ಆಗಿರುತ್ತದೆ ಎನ್ನುವುದನ್ನು ತಾವುಗಳೇ ಪರಿಶೀಲಿಸಬಹುದಾಗಿದೆ ಎಂದು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.

ಈ ಅಂಶಗಳನ್ನು ಗಮನಿಸಿ ಅಧಿಕೃತ ಧೃಡಿಕೃತ ದಾಖಲೆಗಳಿಗಾಗಿ ಆರ್‌ಟಿಐ ಮುಖೇನ ಅರ್ಜಿ ಸಲ್ಲಿಸಿದಾಗ್ಯೂ ತಾಲ್ಲೂಕು ಪಂಚಾಯತ್ ಕಾರ್ಯಾಲಯ ದಿನಾಂಕ ೧೩-೦೮-೨೦೨೫ರಂಂದು
ಸಭೆಗಳ ಯಾವ ದಾಖಲೆಗಳು ಲಭ್ಯವಿಲ್ಲವೆಂದು ತಿಳಿಸಿ ಹಿಂಬರಹ ನೀಡಿರುತ್ತದೆ, ಈ ಎಲ್ಲಾ ಗೋಲ್ಮಾಲ್ ದಾಖಲೆಗಳನ್ನು ತಮಗೆ ಸಲ್ಲಿಸಿ ನಿರ್ಗತಿಕರಿಗಾಗಿ, ವಸತಿರಹಿತರಿಗಾಗಿ, ಸಾರ್ವಜನಿಕ ಸಂಪಕ ಸರ್ಕಾರಿ ಇಲಾಖೆ, ಸಮುದಾಯಗಳಿಗಾಗಿ ಇರುವ ಮೀಸಲು ಭೂಮಿಯನ್ನು ನಕಲಿ ಕಡತಗಳ ಎಂಟ್ರಿಗಳ ಮೂಲಕ ಶಿವಮೊಗ್ಗ ತಾಲ್ಲೂಕಿನ ಪುರದಾಳ್ ಪಂಚಾಯ್ತಿ ಹಾಳೂರ್ ಅನುಪಿನಕಟ್ಟೆ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ೫ (ಎಕರೆ) ಭೂ ಪ್ರದೇಶವನ್ನು ಖಾಸಗಿ ಸಂಸ್ಥೆಯಾಗಿರುವ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ಗೆ ಮಂಜೂರಾತಿ ಮಾಡಲಾಗಿದೆ ಎಂದು ಭಾರಿ ಕೋಟ್ಯಾಂತರ ಮೌಲ್ಯದ ಖಾಸಗಿ ಕಟ್ಟಡ ಕಟ್ಟುವುದಕ್ಕೆ ಇದೇ ಪುರದಾಳ್ ಗ್ರಾಪಂ ಪಿಡಿಓ ಅಧಿಕಾರಿಗಳು ಕಟ್ಟಡ ಪರವಾನಿಗೆ ನೀಡಿರುವುದನ್ನು ತಮ್ಮ ಗಮನಕ್ಕೆ ತರಬಯಸಿ ಈ ಕೂಡಲೇ ಈ ಭೂ ಪ್ರದೇಶವನ್ನು ತೆರವುಗೊಳಿಸಿ ವಶಪಡಿಸಿಕೊಂಡು ಅಧಿಕಾರದ ದುರ್ಬಳಕೆ ಮಾಡಿಕೊಂಡಿರುವ ತಾಪಂ ಹಾಗೂ ಗ್ರಾಪಂ ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಈ ಮೂಲಕ ದೂರು ಸಲ್ಲಿಸಲಾಗಿದೆ.

ಮನವಿಯಲ್ಲಿ ಚಂದ್ರಪ್ಪ, ಪ್ರಪುಲ್ಲ ಚಂದ್ರ, ದಿನೇಶ್ ಕುಳ್ಳ, ರಾಜು, ಮಿಥುನ್, ರವಿಕುಮಾರ್, ಶಿವು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I