Saturday, August 1, 2026
HomeಅಂಕಣI ಕಾಂಗ್ರೆಸ್ಸಿನ ಮಾಜೀ ಸಚಿವ I ವಿನಯ್ ಕುಲಕರ್ಣಿ I ಅಪರಾಧಿ I

I ಕಾಂಗ್ರೆಸ್ಸಿನ ಮಾಜೀ ಸಚಿವ I ವಿನಯ್ ಕುಲಕರ್ಣಿ I ಅಪರಾಧಿ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಕಾಂಗ್ರೆಸ್ಸಿನ ಮಾಜೀ ಸಚಿವ I ವಿನಯ್ ಕುಲಕರ್ಣಿ I ಅಪರಾಧಿ I

ಹತ್ಯೆ ಸಂಚನ್ನು ಕೂಡ ಲೆಕ್ಕಿಸದೆ ಹೋರಾಟಕ್ಕಿಳಿದಿದ್ದರು ಬಸವರಾಜ್ ಕೊರವರ್ :

ನಿರಂತರ ಹೋರಾಟಗಳಿಂದ, ತನ್ನ ಮೇಲಿನ ಹತ್ಯೆ ಸಂಚನ್ನು ಕೂಡ ಲೆಕ್ಕಿಸದೆ ಬರ್ಬರ ಹತ್ಯೆಯಾಗಿದ್ದ ಯೋಗೀಶ್ ಗೌಡನ ಸಾವಿನ ತನಿಖೆಗಾಗಿ ಕಟಿಬದ್ದತೆಯಲ್ಲಿ ಟೊಂಕ ಕಟ್ಟಿ ನಿಂದಿದ್ದ ಬಸವರಾಜ್ ಕೊರವರ್ ಇಂದು ಹೋರಾಟಕ್ಕೆ ಸಂದ ಫಲ ಧಾರವಾಡದ ವಿಶೇಷ ನ್ಯಾಯಾಲಯದ ತೀರ್ಪು ಸಂಗತಿಯಿಂದ ನಿರುಮ್ಮಳವಾಗಿದ್ದಾರೆ, ಹೌದು ಇದೊಂದು ಮಾದರಿ ಹಾಗೂ ಎದೆಗಾರಿಕೆಯ ಹೋರಾಟವಾಗಿದ್ದು ಹೋರಾಟದ ತೀಕ್ಷ್ಣತೆಯನ್ನು ಇಡೀ ನಾಡಿಗೆ ಎತ್ತಿ ಹಿಡಿದಿರುವ ಇಂತಿವರು ಯೋಗೇಶ್ ಗೌಡರ ಆತ್ಮಕ್ಕಿಂದು ಶಾಂತಿ ಸಿಕ್ಕಿದೆ ಎಂದು ಹೇಳಿದ್ದಾರೆ, ಸಿಬಿಐ ತನಿಖೆಗೆ ಒತ್ತಾಯಿಸಿ ಹೋರಾಟವನ್ನು ಮುನ್ನಡೆಸಿದ್ದ ಬಸವರಾಜ್ ಕೊರವರ್ ಸತತ ಒಂಬತ್ತು ವರುಷಗಳ ಕಾಲ ಈ ಪ್ರಕರಣದ ನ್ಯಾಯಕ್ಕಾಗಿ ದನಿಯಾಗಿದ್ದರು,

ಬಡವರ ಮಗ ಸಮಾಜಮುಖಿ ಬಸವರಾಜ್ ಕೊರವರ್ ಕೊಲೆಗೆ ಸಂಚು :

ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಕೊಲೆಗೆ ಸಂಚು ನಡೆದಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ಹೊರ ಬಿದ್ದಿತ್ತು, ಈ ನಿಖರ ಮಾಹಿತಿಯಂತೆ ಧಾರವಾಡ ಜಿಲ್ಲೆಯಲ್ಲಿ ಪೊಲೀಸರು ತೀವ್ರ ಕಟ್ಟೇಚ್ಚರ ವಹಿಸಿದ್ದರು, ಜಿಪಂ ಸದಸ್ಯ ಯೋಗಿಶ್ ಸುಫಾರಿ ಕೊಲೆ ಹತ್ಯೆ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳನ್ನ ಹೊರಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಸವರಾಜ ಕೊರವರ್ ಅವರು, ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದನ್ನ ಬಹುತೇಕರು ಗುರುತಿಸಿದ್ದಾರೆ. ಬಡವರ ಮಗನೆಂದೆ ಖ್ಯಾತಿ ಪಡೆದಿರುವ ಬಸವರಾಜ ಕೊರವರ್ ಅವರನ್ನ ಕೊಲೆ ಮಾಡಲು ಸಂಚು ರೂಪಿಸಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಬಂದ ಹಿನ್ನಲೆಯಲ್ಲಿ ಈ ಕುರಿತು ಬಸವರಾಜ ಕೊರವರ್ ಅವರಿಂದಲೂ ವಿಚಾರಣೆ ಮೂಲಕ ಸುಳಿವುಗಳನ್ನು ಕಲೆ ಹಾಕಲಾಗಿತ್ತು,

ಬಸವರಾಜ ಕೊರವರ್ ಅವರ ಕೊಲೆಯ ಸಂಚಿನ ನಿಖರತೆಯನ್ನ ಪೊಲೀಸರು ಪತ್ತೆ ಮಾಡಲು ಮುಂದಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಿದ್ದರು, ಒಟ್ಟಿನಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ರಾಜ್ಯದಲ್ಲಿ ಮರಿಚಿಕೆ ಆದಂತಿದೆ, ಈ ಕೂಡಲೇ ಗೃಹ ಇಲಾಖೆ ತ್ವರಿತಗತಿಯಲ್ಲಿ ಪತ್ತೆ ಹಚ್ಚಬೇಕು, ಹಾಗೂ ಸಮಾಜಮುಖಿ ಹೋರಾಟಗಾರ ಬಸವರಾಜ್ ಕೊರವರ್ ಅವರಿಗೆ ಅವರ ಕುಟುಂಬ ವರ್ಗದವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸೂರ್ಯಗಗನ ಈ ಮೂಲಕ ಒತ್ತಾಯಿಸಿತ್ತು

ಧಾರವಾಡದ ರಕ್ತಸಿಕ್ತ ರಾಜಕೀಯದ ತಿರುವಿಗಾಗಿ ನೆಲಕ್ಕುರುಳಿ ಬಿದ್ದಿದ್ದು ಬರೊಬ್ಬರಿ ೯೬ ಹೆಣಗಳು, :

ರಾಜಕೀಯ ವೈಷಮ್ಯವೇ ಬರ್ಬರ ಸುಫಾರಿ ಹತ್ಯೆಗಳಿಗೆ ಮುಂದಡಿಯಿಕ್ಕಿದ್ದ ಅವಳಿ ನಗರಿಗಳ ಧಾರವಾಡ ಒಮ್ಮೆಲೆ ರಕ್ತಸಿಕ್ತ ರಾಜಕೀಯಕ್ಕೆ ತಿರುವು ಪಡೆದುಕೊಂಡಿತು, ಇದಕ್ಕಾಗಿ ನೆಲಕ್ಕುರುಳಿ ಬಿದ್ದಿದ್ದು ಬರೊಬ್ಬರಿ ೯೬ ಹೆಣಗಳು, ಇದರಲ್ಲಿ ಬಹುತೇಕ ಕೊಲೆಗಳು ಸುಫಾರಿ ಹತ್ಯೆಗಳತ್ತ ಬೊಟ್ಟುಮಾಡಿ ತೋರುತ್ತದೆ. ಇದೀಗಲೂ ಈ ಸರಣಿ ಕೊಲೆಗಳ ಸೂತಕದ ಛಾಯೇ ಧಾರವಾಡದ ನಗರದಲ್ಲಿ ಸುತ್ತಿಕೊಂಡಿದೆ, ಅಲ್ಲದೆ ಆತಂಕಗಳನ್ನು ತಂದೊಡ್ಡಿದೆ..! ಇಂತಹ ಸರಣಿ ಹತ್ಯೆಗಳ ಹಿಂದಿರುವ ಅಸಲಿ ಕಾರಣಗಳು ಬಹುತೇಕ ಸಮಾದಿಯೂ ಆಗಿದೆ, ಎನ್ನುವುದಕ್ಕೆ ಕರ್ತವ್ಯ ಪ್ರಜ್ಞೆ ಮರೆತು ಪೊಲೀಸರು ಪವರ್ ಪೊಲೀಟಿಕಲ್ ಹಿಡಿತದ ಹಪಾಹಪಿತನಗಳು ಕಾಣಸಿಗುವ ಭಯಾನಕ ಬಿಭತ್ಸಕರ ಘಟನೆಗಳು, ಇಂತಿವ ಘಟನೆಗಳಲ್ಲಿ ಧಾರವಾಡದ ಪೊಲೀಸರಿಗೆ ಹಾಗೂ ಪವರ್ ಪೊಲೀಟಿಕಲ್ ಕರ್ಮಟಗಳಿಗೆ ನಿದ್ದೆಗೆಡಿಸುತ್ತಿರುವುದು. ಜಿಲ್ಲಾಪಂಚಾಯತ್ ಸದಸ್ಯ ಮಾಜೀ ರೌಡಿಶೀಟರ್ ಯೋಗಿಶ್ ಹತ್ಯೆ ಪ್ರಕರಣ.

ಹೌದು ಹತ್ಯೆ ನಡೆದು ಹತ್ತಿರತ್ತಿರ ವರುಷಗಳೇ ದಾಟುತ್ತಿದ್ದರೂ ಯೋಗಿಶ್ ಗೌಡನ ಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಿ ಎನ್ನುವ ದನಿಗಳು ವಹಿಸಿಕೊಡುವವರೆಗೂ ಮೊಳಗಿತ್ತು, ಇದರ ಹಿಂದೆಯೇ ಇಂತಹ ದನಿಗಳನ್ನು ಅಡಗಿಸುವ ಕೆಲಸಗಳು ಕೂಡ ಹೆಗ್ಗಿಲ್ಲದೆ ಸಾಗಿತ್ತು, ಈ ನಡುವೆ ಇದ್ದಕ್ಕಿದ್ದಂತೆ ಯೊಗೀಶ್ ಗೌಡನ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರಿಕೊಂಡು ತನ್ನ ಹೇಳಿಕೆಯನ್ನು ತಿರುಚಿಕೊಂಡಿದ್ದಳು ಮಾಜೀ ಸಚಿವ ವಿನಯ್ ಕುಲಕರ್ಣಿ ವಿರುದ್ದವಾಗಿ ನಿಂತವಳು ಒಮ್ಮೆಲೇ ಪರವಾಗಿ ಬಡ-ಬಡಾಯಿಸಿತ್ತಿದ್ದಳು,. ಪ್ರಕರಣದ ತನಿಖೆ ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದಿದ್ದಳು..!

ತನ್ನ ಪತಿ ಯೋಗಿಶ್ ಗೌಡನೇ ರೌಡಿಶೀಟರ್ ಆಗಿದ್ದು ಜಮೀನು ತಗಾದೆಯ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರ ಬಹುದೇ ವಿನಃ ಈಗಾಗಲೇ ಬಂಧಿತ ಆರೋಪಿಗಳು ತನ್ನ ಪತಿಯ ಹಂತಕರಲ್ಲ..! ಎಂದು ಬ್ಯಾಟಿಂಗ್ ಬೀಸಿದ ಅಸಲಿಯತ್ತನ ಬಾನಗಡಿಗಳ ಸುತ್ತವಿರುವ ವಿಸ್ತೃತ ಕಥಾನಕಗಳ ಕಟು ಸತ್ಯಗಳ ಸಂಚಿಕೆಗಳ ಮುನ್ನದಿ ಮೊದಲ ಹೆಜ್ಜೆ ಇದಾಗಿದೆ, ಈ ಹಿಂದೆಯೂ ಇತ್ಯಾದಿ ಈ ಕೊಲೆಯ ಹಿಂದಿರುವ ಶಕ್ತಿಗಳ ಹಿಂದಿನ ಕರಾಳತೆಗಳನ್ನು ತೆರೆದಿಟ್ಟಿತ್ತು, ಈ ಟಿಪ್ಪಣಿಯೊಂದಿಗೆ ಮತ್ತೊಂದಿಷ್ಟು ವಿಸ್ತೃತತೆ ತೆರೆದಿಡುವ ಕೆಲಸ ಇತ್ಯಾದಿ ಪತ್ರಿಕೆ ಮಾಡಿತ್ತು.

ಅಸಲಿಗೆ ವಿನಯ್ ಕುಲಕರ್ಣಿ ಪವರ್ ರಾಜಕೀಯದ ಅವಧಿಯಲ್ಲಿ ಧಾರವಾಡದಲ್ಲಿ ನಡೆದಿದ್ದು ೯೬ ಕೊಲೆಗಳು ಎನ್ನುತ್ತವೆ ಘಟನೆಗಳು :

ಹೌದು ಧಾರವಾಡದ ಜನತೆ ಹೌಹಾರಿ ಹೋಗಿದ್ದಾರೆ. ಮೇಲಿಂದ ಮೇಲೆ ಸರಣಿ ಹತ್ಯೆಗಳು ನಡೆದಿವೆ ಅಸಲಿ ಕಾರಣಗಳ ನಡುವೆಯೇ ಪ್ರಕರಣಗಳು ಸಮಾದಿಯಾಗಿವೆ. ಒಮ್ಮೆಲೇ ಬಿಹಾರವನ್ನು ಮೀರಿಸಿದ ಈ ಸರಣಿ ಹತ್ಯೆಗಳತ್ತ ಯಾವುದೇ ಪೊಲೀಸ್ ಅಧಿಕಾರಿಗಳು ತಲೆಗೆಡಿಸಿ ಕೊಳ್ಳದೇ ಮಾಮೂಲಿ ಪ್ರಕರಣಗಳನ್ನು ದಾಖಲಿಸಿ ?ಸುಫಾರಿ? ಹತ್ಯೆಯ ಜಾಡನ್ನು ಮುಚ್ಚಿಹಾಕಿದ್ದಾರೆ, ಎನ್ನುವ ಬೆತ್ತಲ ಸತ್ಯಗಳು ಯೋಗಿಶ್ ಗೌಡನ ಸುಫಾರಿ ಹತ್ಯೆಯ ದನಿಯೊಂದಿಗೆ ವಿಧಾನಸೌದದ ಮೊಗಸಾಲೆಗಳಲ್ಲಿ ಆಕ್ರಂದಿಸುತ್ತಿವೆ. ೨೦೧೬ ರಿಂದ ೨೦೧೮ ರ ಹೊತ್ತಿಗೆ ನಡೆದು ಹೊದ ಬರೊಬ್ಬರಿ ೯೬ ಕೊಲೆಗಳ ನಿಗೂಡತೆಯ ತನಿಖೆಗೆ ಪೊಲೀಸರು ಮುಂದಾದರೇ ಇಡೀ ರಾಜ್ಯವೇ ತಲ್ಲಣಗೊಳ್ಳುವ ರಾಜಕೀಯ ವೈಷಮ್ಯದ ಅಸಲಿ ಪುರಾವೆಗಳು ಬಟ್ಟ ಬಯಲಾಗುತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಮಹಾ ನಿರ್ದೇಶಕರು ತನಿಖಿಸಲು ಆದೇಶಿಸಲಿ ಎನ್ನುವುದು ಇಂದಿಗೂ ಪತ್ರಿಕೆಯ ಹಾಗೂ ಈ ಲೇಖನದ ಒತ್ತಾಯವೂ ಆಗಿದೆ,

ಹೀಗೆ ಧಾರವಾಡದ ಇಕ್ಕೆಲಗಳಲ್ಲಿ ರಕ್ತಸಿಕ್ತಗೊಂಡ ೯೬ ಕೊಲೆಗಳು ವಿನಯ್ ಕುಲಕರ್ಣಿ ಪವರ್ ಪಾಲಿಟಿಕ್ಸ್‌ನಲ್ಲಿ ಮೊಕ್ಕಾಂ ಹೂಡಿದ್ದಾಗಲೇ…? ಎಂದರೆ ಈ ಹತ್ಯೆಗಳು ನಡೆದಿದ್ದು ಪೊಲೀಸರು ದಾಖಲಿಸಿ ಕೊಂಡಂತೆ ಸುಳ್ಳು ಕಾರಣಗಳಲ್ಲಿ ಬದಲಿಗೆ ಅಸಲಿ ವರಾತಗಳೇ ಬೇರೆಯೇ ಇವೆ ಎನ್ನುತ್ತವೆ ಮೂಲಗಳು..! ಈ ೯೬ ಹತ್ಯೆಗಳಲ್ಲಿ ಬಹುತೇಕ ರಾಜಕೀಯ ವೈಷಮ್ಯಕ್ಕೆ ನಡೆದಿದೆ ಎನ್ನಲಾದ ಪುರಾವೆಗಳನ್ನು ಅಂದಿನ ಚಾಲ್ತಿಯಲ್ಲಿದ್ದ ಎಸ್ಪಿ ಅದ್ಯಾಕೆ ಕಲೆ ಹಾಕಲು ಮುಂದಾಗಲಿಲ್ಲ…? ಪೊಲೀಸರ ಇಂತೆಲ್ಲಾ ತನಿಖೆಗಳಿಗೆ ಅಂದಿನ ಸಚಿವ ವಿನಯ್ ಕುಲಕರ್ಣಿಯ ಅಡ್ಡಗಾಲು ಇತ್ತೆ…? ಒತ್ತಡಗಳ ಅತಿರೇಖಕ್ಕೆ ಬಳಲಿ ಬೆಂಡಾಗಿದ್ದಾರೇ ಧಾರವಾಡದ ಪೊಲೀಸರು..!? ಎನ್ನುವತ್ತ ಚಿತ್ತವರಿಸಬೇಕಾದ ಜರೂರತ್ತಿದೆ, ಸುಫಾರಿ ಹತ್ಯೆಯಂತಹ ಅನಾಹುತಕಾರಿ ಸದ್ದುಗಳ ಹೆಜ್ಜೆಗಳಿದ್ದರು ಅದನ್ನು ಸಮಾದಿ ಮಾಡಿದ್ಯಾಕೆ…? ಎನ್ನುವ ತನಿಖೆ ಇದೀಗಲೂ ನಡೆಸಬೇಕಾದ ದಾಖಲೆಗಳು ಲಗತ್ತಿದೆ,

ಜಿಲ್ಲಾ ಪಂಚಾಯತ್ ಸದಸ್ಯ ಯೊಗೀಶ್ ಗೌಡನ ಹತ್ಯೆಯ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ :

ಧಾರವಾಡದಲ್ಲಿ ನಡೆದ ೯೬ ಸುಫಾರಿ ಹತ್ಯೆಗಳ ಮರು ತನಿಖೆಗೆ ಪೊಲೀಸರು ಮುಂದಾಗುವರೇ.? ಎನ್ನುವ ಪ್ರಶ್ನಾವಳಿಗಳ ನಡುವೆ ಜಿಲ್ಲಾ ಪಂಚಾಯತ್ ಸದಸ್ಯ ಯೊಗೀಶ್ ಗೌಡನ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿ ಎಂದು ಸಹೋದರ ಗುರುನಾಥಗೌಡ ತಾಯಿ ತುಂಗಮ್ಮ ನ್ಯಾಯಲಯದ ಮೊರೆ ಹೋಗಿದ್ದರು,
ಸರ್ಕಾರವನ್ನು ಕೂಡ ಅವಲತ್ತುಕೊಂಡಿದ್ದರು, ಆದರೆ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆಯನ್ನ ಅಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಪ್ರಕರಣದ ಸಾಕ್ಷ್ಯಗಳು ಸಿಬಿಐ ತನಿಖೆಗೆ ಅರ್ಹತೆ ಪಡೆದಿದ್ದರು ವಿನಯ್ ಕುಲಕರ್ಣಿಯ ಮೇಲಿನ ಆಪಾದನೆಗಳಿಂದ ಎಲ್ಲೋ ಸರ್ಕಾರವೇ ದೃಡಪಡಿಸಿಕೊಂಡಿತ್ತೋ? ಎನೋ…? ಈ ಕೊಲೆಯ ಹಿಂದೆ ವಿನಯ್ ಕುಲಕರ್ಣಿ ಇದ್ದಾನೆ ಎನ್ನುವ ಅನುಮಾನದ ನಿಖರತೆಯಲ್ಲಿ ಸಿಬಿಐಗೆ ಒಪ್ಪಿಸಲು ಸುತರಾಂ ಒಪ್ಪದೇ ವಿನಯ್ ಕುಲಕರ್ಣಿಯ ಪರವೇ ಪ್ಲಾಗ್ ಹಾರಿಸಿದ್ದ ಅಸಲಿ ಕಾರಣದಿಂದಾಗಿ ನ್ಯಾಯಲಯದ ಮೊರೆ ಹೊಗಿದ್ದರು ಎನ್ನುವ ಸಂಗತಿಗಳು ಇದೀಗಲೂ ಅಣುಕಿಸುತ್ತಿವೆ.

ಉದಯ್ ಜಿಮ್ ಬಳಿ ಹಂತಕರ ದಾಳಿಗೆ ಬಿಸಿನೆತ್ತರು ಬಸಿದು ಮರ್ಡರ್ ಆಗಿ ಹೋಗಿದ್ದವನೇ ಯೋಗೀಶ್ ಗೌಡ :

ಅಂದು ೧೫ ಜೂನ್ ೨೦೧೬ ಬೆಳ್ಳಂ ಬೆಳಿಗ್ಗೆಯ ಸರಿ ಹೊತ್ತು ಧಾರವಾಡದ ನಗರಿ ಸಪ್ತಾಪುರ ಹೀಗೊಂದು ಸೂತಕದ ಛಾಯೇಗೆ ರಣ-ರಣ ಕಾಯುತಿತ್ತು ಇಂತಹದೊಂದು ಸಣ್ಣ ಸುಳಿವಿಲ್ಲದೇ ಮಾಜಿ ರೌಡಿ ಶೀಟರ್ ಜಿಲ್ಲಾ ಪಂಚಾಯತ್ ಸದಸ್ಯ ಯೊಗೀಶ್ ಗೌಡ ಎಂದಿನಂತೆ ನಿತ್ಯಕರ್ಮಗಳ ಮುಗಿಸಿ ಮನೆಯಿಂದ ತನ್ನ ಇನೋವ ಕಾರಿನಲ್ಲಿ ಸಪ್ತಾಪುರ ಬಡಾವಣೆಯಲ್ಲಿರುವ ?ಉದಯ್ ಜಿಮ್? ನತ್ತ ಧಾವಿಸಿ ಬರುತ್ತಾನೆ. ಅಲ್ಲಿ ಯೊಗೀಶ್ ಗೌಡನ ಬರುವಿಕೆಗಾಗಿ ಕಾಯುತ್ತಿದ್ದ ಹಂತಕರು ಮಂಕಿ ಕ್ಯಾಪ್ ಧರಿಸಿ ಲಾಂಗ್- ಮಚ್ಚುಗಳನ್ನಿಡಿದು ಯೊಗೀಶ್ ಗೌಡನ ಮೇಲೆರಗುತ್ತಾರೆ ಅಚಾನಕ್ ಆಗಿ ದಾಳಿ ಮಾಡಿದ ಹಂತಕರ ಲಾಂಗು – ಮಚ್ಚಿನ ಏಟಿಗೆ ರಕ್ತಕಾರಿ ಯೋಗಿಶ್ ಗೌಡ ನೆಲಕ್ಕುರುಳಿ ಬೀಳುತ್ತಾನೆ ಇವನ ಕತೆ ಮುಗಿಯಿತು ಎಂದು ಖಾತ್ರಿ ಪಡಿಸಿಕೊಂಡ ಹಂತಕರು ಅಲ್ಲಿಂದ ಪೇರಿ ಕೀಳುತ್ತಾರೆ.

ಹತ್ಯೆಗೈದು ಪರಾರಿಯಾಗುವ ಮುಸುಕುಧಾರಿಗಳ ದೃಶ್ಯ ಪಕ್ಕದಲ್ಲೆ ಇರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯಾವಾಗ ಈ ಬರ್ಬರ ಹತ್ಯೆಯ ಸುದ್ದಿ ಇಡೀ ಧಾರವಾಡದ ತುಂಬೆಲ್ಲಾ ತುಂಬಿಕೊಳ್ಳುತ್ತದೋ ಅದಾಗಲೇ ಈ ಕೊಲೆಯ ಹಿಂದೆ ಹಾಲಿ ಸಚಿವರಾಗಿದ್ದ ವಿನಯ್ ಕುಲಕರ್ಣಿ ಹೆಸರು ಅತೀವ ಚರ್ಚೆಗೆ ಗ್ರಾಸವಾಗುತ್ತದೆ. ಈ ಚರ್ಚೆ ಕೇವಲ ಧಾರವಾಡಕ್ಕಷ್ಠೆ ಸೀಮಿತ ಗೊಳ್ಳದೇ ಇಡೀ ರಾಜ್ಯದೆಲ್ಲೆಲ್ಲಾ ಹರಿದಾಡುತ್ತದೆ. ವಿಧಾನ ಸೌದದ ಪವರ್ ಮೇಜುಗಳು ಕೂಡ ಸದ್ದು ಮಾಡುತ್ತದೆ. ರಾಜಕೀಯದ ವಲಯದಲ್ಲಿ ಈ ಕೊಲೆ ಸಂಚಲನವೇ ಹುಟ್ಡು ಹಾಕುತ್ತದೆ ಈ ಕೊಲೆ ಸಹಜವಾದ ಕೊಲೆಯಲ್ಲ ಇದೊಂದು ?ಸುಫಾರಿ ಕೊಲೆ? ಎಂದು ಹೇಳಿಕೆಗಳು ಬರಪೂರವಾಗಿ ತೇಲಿ ಬರುತ್ತದೆ.

ವಿಪಕ್ಷಗಳು ಈ ಪ್ರಕರಣವನ್ನು ಹಿಡಿದು ಹಗ್ಗ-ಜಗ್ಗಟ ನಡೆಸುತ್ತದೆ. ಅಸಲಿಗೆ ವಿನಯ್ ಕುಲಕರ್ಣಿ ಪವರ್ ಪ್ಲೇಸ್‌ನಲ್ಲಿ ವಕ್ಕರಿಸಿಕೊಂಡ ಅವದಿಯೊಳಗಿನ ೯೬ ಮರ್ಡರ್‌ಗಳಲ್ಲಿ ಯೊಗೀಶ್ ಗೌಡನ ಹತ್ಯೆ ಬಹಳವಾಗಿ ಆರಂಭದಲ್ಲೇ ಕಾಡುವುದಕ್ಕೆ ಶುರುವಿಕ್ಕುತ್ತದೆ. ಸಪ್ತಾಪುರದ ಉದಯ್ ಜಿಮ್ ಷಟರ್‍ಸ್ ಮುಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಯೊಗೀಶ್ ಗೌಡನ ಮೃತದೇಹದ ಹತ್ತಿರ ಬಿದ್ದು ಹೊರಳಾಡಿದ್ದ ಪತ್ನಿ ಮಲ್ಲಮ್ಮ ಈ ಕೊಲೆಯನ್ನು ಸಚಿವ ವಿನಯ್ ಕುಲಕರ್ಣಿಯೇ ಮಾಡಿಸಿದ್ದಾನೆ ಎಂದು ಬೊಬ್ಬರಿಯುತ್ತಾಳೆ, ಸಾಲದಕ್ಕೆ ವಿನಯ್ ಕುಲಕರ್ಣಿಯನ್ನೆ ಆರೋಪಿಸಿ ದೂರು ನೀಡುತ್ತಾಳೆ.

ಮಲ್ಲಮ್ಮ ಇದ್ದಕ್ಕಿದ್ದಂತೆ ಈ ಕೇಸಿನಿಂದ ಕಾಣೆಯಾಗುತ್ತಾಳೆ :

ಇದಾದ ಕೆಲವೇ ದಿನಗಳಲ್ಲಿ ಮಲ್ಲಮ್ಮ ತೆರೆಯ ಮರೆಗೆ ಸರಿಯುತ್ತಾಳೆ. ಆಕೆ ಮತ್ತೆ ಯಾವಾಗ ಕಾಣಿಸಿಕೊಳ್ಳುತ್ತಾಳೋ..? ಅದಾಗ ಸಚಿವ ವಿನಯ್ ಕುಲಕರ್ಣಿ ಪರವಾಗಿ ಸಾಪ್ಟ್‌ಕಾರ್ನರ್ ತೋರುತ್ತಾಳೆ. ಈ ಕೊಲೆಯಲ್ಲಿ ಸಚಿವರ ಪಾತ್ರವಿಲ್ಲ ಎಂದು ಉಲ್ಟಾ ಹೊಡೆಯುತ್ತಾಳೆ ಎನ್ನುವ ರಾಜಕೀಯ ಲೆಕ್ಕಾಚಾರಗಳು ವಿನಯ್ ಕುಲಕರ್ಣಿಗೆ ತಾತ್ವಿಕವಾಗಿ ಬೆಂಬಲ ಸಿಕ್ಕರೂ… ಯೊಗೀಶ್ ಗೌಡನ ಸಹೊದರ ಗುರುನಾಥ ಗೌಡ ತಾಯಿ ತುಂಗಮ್ಮ ಹಾಗೂ ಜನಪರ ಹೋರಾಟಗಾರರಾದ ಬಸವರಾಜ್ ಕೊರವರ್‌ರವರುಗಳ ನೇರ ದನಿಗಳು ಬುಡ ಮೇಲಾಗುತ್ತದೆ. ಯೊಗೀಶ್ ಗೌಡನ ಹತ್ಯೆಯ ಪ್ರಕರಣದ ಜಾಡು ಹಿಡಿದು ಕೇಸು ದಾಖಲಿಸಿದ ಪೊಲೀಸರು ಸಪ್ತಾಪುರದಲ್ಲಿ ಹೆಣವಾಗಿ ಹೋದ ಯೊಗೀಶ್ ಗೌಡನ ಹತ್ಯೆ ಪ್ರಕರಣವನ್ನು ಕೃಗೆತ್ತಿಕೊಂಡು ಪ್ರಾಥಮಿಕ ಹಂತದ ಮಾಹಿತಿ, ದೂರು, ಸಿಸಿ ಕ್ಯಾಮೆರಾಗಳ ಫುಟೇಜಸ್ ಆಧಾರದಂತೆ ಬಸವರಾಜ್ ಮುತ್ತಗಿ, ವಿಕ್ರಮ್ ಬಳ್ಳಾರಿ, ವಿನಾಯಕ ಕಡಗಿ, ಕೀರ್ತಿ ಕುಮರ್ ಕುರಹಟ್ಟಿ, ಸಂದೀಪ್ ಸವದತ್ತಿ, ಎಂಬುವ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರಾದರು. ಪೊಲೀಸರು ಆರೋಪಿಗಳನ್ನು ವಿಚಾರಿಸುವಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.
ಈ ಕೊಲೆಯ ಹಿಂದೆ ಸಚಿವ ವಿನಯ್ ಕುಲಕರ್ಣಿಯ ಪಾತ್ರವಿದೆ ಎಂದು ಯೊಗೀಶ್ ಗೌಡನ ಕುಟುಂಬದವರು ಅವಲತ್ತುಕೊಂಡಿದ್ದರು ಇದೊಂದು ಜಮೀನು ವಿವಾದದ ಹಿನ್ನೆಲೆಯಲ್ಲಿ ನಡೆದ ಕೊಲೆ ಎಂದು ಕೇಸು ದಾಖಲಿಸಿದ ಪೊಲೀಸರೇ ದೃಡಪಡಿಸಿಕೊಂಡು ವಿನಯ್ ಕುಲಕರ್ಣಿಗೆ ಸಾಹೆಬ್ರೇ ಎಂದು ಬೆಂಗಾವಲಿಗೆ ಬಿದ್ದಿದ್ದರು, ಅಸಲಿಗೆ ಪೊಲೀಸರೇ ಹೇಳಿದ ಕತೆಯಲ್ಲಿ ನಾಗೇಶ್ ಎಂಬುವವರಿಗೆ ಸೇರಿದ ೪೦ ಎಕರೆ ಜಮೀನಿನಲ್ಲಿ ೯ ಎಕರೆ ಜಮೀನನ್ನು ಖರೀದಿಸುತ್ತಾರೆ, ಆ ಬೆಳ್ಳಿಗಟ್ಟಿ ಗ್ರಾಮದಲ್ಲಿದ್ದ ಈ ಜಮೀನಿಗೆ ಹೊಂದಿಕೊಂಡಂತೆ ೧೫ ಎಕರೆ ಜಮೀನನ್ನು ಇದೇ ಯೋಗಿಶ್ ಗೌಡ ಒತ್ತುವರಿ ಮಾಡಿಕೊಳ್ಳುತ್ತಾನೆ.

ಬೆಳ್ಳಿಗಟ್ಟಿ ಗ್ರಾಮದ ಜಮೀನಿಗೂ ಕಾಂಗ್ರೆಸ್ ಮುಖಂಡ ಬಸವರಾಜ್ ಮುತ್ತಗಿಗೂ ಇದ್ದ ಸಂಬಂಧವೇನು.? :

ಈ ಸಂಗತಿಯಲ್ಲಿ ಕಾಂಗ್ರೆಸ್ ಮುಖಂಡ ಬಸವರಾಜ್ ಮುತ್ತಗಿ ಎಂಟ್ರಿಯಾಗಿ ಯೊಗೀಶ್ ಗೌಡನೊಂದಿಗೆ ವಾಗ್ವಾದ ಶುರುವಾಗುತ್ತದೆ ಅದೊಂದು ವೈಷಮ್ಯದ ವಿವಾದಕ್ಕು ಪಲ್ಲಟಗೊಳ್ಳುತ್ತದೆ. ಇದೇ ದ್ವೇಷ ಯೊಗೀಶ್ ಗೌಡನ ಹತ್ಯೆಗೆ ಕಾರಣವಾಗುತ್ತದೆ. ಎನ್ನುವ ಕಥಾನಕಗಳಲ್ಲಿ ಬಸವರಾಜ್ ಮುತ್ತಗಿ, ಅಂದಿನ ಸಚಿವ ವಿನಯ್ ಕುಲಕರ್ಣಿಯ ಆಪ್ತವಲಯದಲ್ಲಿ ಗುರುತಿಸಿಕೊಂಡವನು, ಬರೀಯ ಜಮೀನು ವಿವಾದವಷ್ಟೆ ಇಂತಹದೊಂದು ಬರ್ಬರ ಹತ್ಯೆಗೆ ಕಾರಣವಾಗುವುದೇ.? ಎನ್ನುವುದು ಪೊಲೀಸರು ತನಿಖೆಯ ವೇಳೆ ಪ್ರಶ್ನಿಸಿಕೊಂಡಿಲ್ಲ ಮೇಲಾಗಿ ಈ ಬೆಳ್ಳಿಗಟ್ಟಿ ಗ್ರಾಮದ ಜಮೀನಿಗೂ ಕಾಂಗ್ರೆಸ್ ಮುಖಂಡ ಬಸವರಾಜ್ ಮುತ್ತಗಿಗೂ ಇದ್ದ ಸಂಬಂಧವೇನು.? ಈ ಜಮೀನಿನ ಒಟ್ಟು ಆಸ್ತಿಯಲ್ಲಿ ಇದೇ ಮುತ್ತಗಿ ವಾರಸುದಾರನೇ.? ಹೀಗೆ ಒಂದರ ಹಿಂದೊಂದರಂತೆ ಕಂಬಿಗಳ ಹಿಂದೆ ಕೂತಿದ್ದ ಹಂತಕರನ್ನು ವಿಚಾರಣೆ ನಡೆಸದೆ ಹೋದ ಪೊಲೀಸರು ಈ ಕೊಲೆ ಹಿಂದೆ ಸಚಿವ ವಿನಯ್ ಕುಲಕರ್ಣಿ ಇದ್ದಾನೆ ಎನ್ನುವ ಯೊಗೀಶ್ ಗೌಡನ ಕುಟುಂಬದವರ ಕೂಗನ್ನು ಕೇಳಿಸಿಕೊಳ್ಳದೇ ಹೋಗಿದ್ಯಾತಕ್ಕೆ…?
ಇಂತಹ ಅನುಮಾನಗಳ ನಡುವೆ ಪೊಲೀಸರು ಆರೋಪಿಗಳನ್ನು ಮೊದಲು ಜೈಲಿಗಟ್ಟಿ ಕೈ ತೊಳೆದುಕೊಂಡರಾದರು, ಹತ್ಯೆ ಪ್ರಕರಣದ ಕಾವನ್ನು ತಣಿಸಲಾಗದೇ ವಿಫಲಗೊಂಡು ಹೈರಾಣಾಗಿ ಹೋಗಿದ್ದಾರೆ, ಪತಿ ಹತ್ಯೆಯಿಂದ ಜರ್ಜರಿತವಾಗಬೇಕಿದ್ದ ಪತ್ನಿ ಮಲ್ಲಮ್ಮ ತಿರುಗುಬಿದ್ದಿದ್ಯಾಕೆ….?

ಕೊನೆಗೂ ಸಿಬಿಐ ಜಿಪಂ ಸದಸ್ಯ ಯೋಗೀಶ್ ಗೌಡನ ಕೊಲೆ ಕಡತವಿಟ್ಟುಕೊಂಡು ಎಂಟ್ರಿ ಮಾಡಿತ್ತು : ಎಲ್ಲಿಯವರೆಗೂ ಕಾಂಗ್ರೆಸ್ ಆಡಳಿತದಲ್ಲಿತ್ತೋ ಅಲ್ಲಿಯವರೆಗೂ ಸಿಬಿಐಗೆ ಈ ಪ್ರಕರಣ ವಹಿಸಿರಲಿಲ್ಲ, ಬದಲಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಜಿಪಂ ಸದಸ್ಯ ಯೋಗೀಶ್ ಗೌಡನ ಕೊಲೆ ಪ್ರಕರಣಕ್ಕೆ ಕೈಗೆತ್ತಿಕೊಂಡು ಸಿಬಿಐಗೆ ವಹಿಸಿತ್ತು, ಈ ತರುವಾಯ ಈ ಕೊಲೆ ಆಸ್ತಿ ವಿವಾದಿತದಿಂದಾಗಿಲ್ಲ ಇದೊಂದು ಪೂರ್ವ ಯೋಜಿತ ಕೊಲೆಯಾಗಿದ್ದು ಈ ಕೊಲೆಯ ಹಿಂದೆ ರಾಜಕೀಯ ಪ್ರೇರಿತ ಸಂಚಿದೆ ಎಂದು ಅಂದು ವಿನಯ್ ಕುಲಕರ್ಣಿಯನ್ನು ಬಂಧಿಸಿತ್ತು ಭಾರತೀಯ ಕಾನೂನು ಉಳ್ಳವರಿಗೆ ಮಾತ್ರ ಇದೆ ಎನ್ನುವ ಮಾತು ಹುಸಿಗೊಳಿಸಿ, ಪ್ರಭಾವಿ ರಾಜಕಾರಣಿಯಾಗಿದ್ದ ವಿನಯ್ ಕುಲಕರ್ಣಿಯನ್ನು ವಾದ, ಪ್ರತಿವಾದ ಹಾಗೂ ಸಾಕ್ಷ್ಯಗಳು ಸೇರಿದಂತೆ ಸಿಬಿಐ ತನಿಖಾ ವರದಿ ಅನುಸಾರ ಅಪರಾಧಿ ಎಂದು ಘೋಷಿಸಿದೆ ಹಾಗೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ೧೮ ಜನರನ್ನು ಕೂಡ ದೋಷಿಗಳೆಂದು ತಿಳಿಸಿದ್ದು ಇನ್ನೇನು ಧಾರವಾಡದ ವಿಶೇಷ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ತಿಳಿಸಲಿದೆ. ಉಪ್ಪು ತಿಂದವ ನೀರು ಕುಡಿಯಲೇ ಬೇಕು ಎನ್ನುವ ಗಾದೆಯಂತೆ ಕೇವಲ ರಾಜಕೀಯದ ಹಪಾಹಪಿತನಕೆ ಒಳಗಾಗಿ ಮರ್ಡರ್ ನಂತಹ ಅನಾಹುತಕಾರಿಗಳ ವ್ಯೂಹ ರಚಿಸಿ ಕ್ರೌರ್‍ಯ ಮೆರೆದ ಪರಿಣಾಮಕ್ಕೆ ಕಾನೂನು ಶಿಕ್ಷಿಸಿದೆ, ಇದು ಇನ್ನೋವರಿಗೂ ಮಾದರಿ ಆಗಲಿದ್ದು ಇಂತಹ ಅನಾಹುತಗಳನ್ನು ಸಂಘಟಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕಾದ ಪ್ರಕರಣ ಇದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I