I ಯುವಕರ ಕ್ರಿಕೇಟ್ ಪಂದ್ಯಾವಳಿಗೆ I ಚಾಲನೆ ನೀಡಿದ ಕಟ್ಟೆ ಪ್ರವೀಣ್ I
ಶಿವಮೊಗ್ಗ : ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆಯಲ್ಲಿ 2ನೇ ವರ್ಷದ 18 ವರ್ಷದ ಒಳಗಿನ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆಯನ್ನು ಯುವ ಮುಂದಾಳು ಕಟ್ಟೆ ಪ್ರವೀಣ್ ಅವರು ನೆರವೇರಿಸಿದರು,
ಕ್ರೀಡಾಕೂಟ ಉದ್ಘಾಟಿಸಿ ಮಾತಾನಾಡಿದ ಕಟ್ಟೆ ಪ್ರವೀಣ್ ರವರು ಕ್ರೀಡೆ ಯುವಕರ ಮಾನಸೀಕತೆ ಹಾಗೂ ದೈಹಿಕ ಸಮತೋಲನಕ್ಕೆ ಕಾರಣವಾಗುತ್ತದೆ, ಅಲ್ಲದೆ ನಿತ್ಯ ಜೀವನದ ಆಸಕ್ತಿ ಹೆಚ್ವುತ್ತದೆ, ಇದು ವ್ಯಾಸಾಂಗದ ಅವಧಿಯ ಮಕ್ಕಳಿಗೆ ಅನುಕೂಲಕರವಾಗಿದ್ದು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಶಿಸಿದರು, ಈ ಸಂದರ್ಭದಲ್ಲಿ ಸ್ಪೂರ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಕಾಂತ್ ಸೇರಿದಂತೆ ಆಯೋಜಕರು ಉಪಸ್ಥಿತರಿದ್ದರು

