Sunday, August 2, 2026
Homeಸೂರ್ಯಗಗನI ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ I ವಕೀಲರ ಸಂಘದ ಪ್ರತಿಭಟನೆಗೆ ಕರವೇ...

I ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ I ವಕೀಲರ ಸಂಘದ ಪ್ರತಿಭಟನೆಗೆ ಕರವೇ ಸ್ವಾಭಿಮಾನಿ ಬಣ ಬೆಂಬಲ I ಮುಖ್ಯಮಂತ್ರಿಗಳಿಗೆ ಮನವಿ I

I ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹ I ವಕೀಲರ ಸಂಘದ ಪ್ರತಿಭಟನೆಗೆ ಕರವೇ ಸ್ವಾಭಿಮಾನಿ ಬಣ ಬೆಂಬಲ I ಮುಖ್ಯಮಂತ್ರಿಗಳಿಗೆ ಮನವಿ I

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಮಧ್ಯ ಕರ್ನಾಟಕದ ಭಾಗವಾಗಿದ್ದು, ಇಲ್ಲಿನ ನಾಗರೀಕ ನ್ಯಾಯಕ್ಕಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ಶಿವಮೊಗ್ಗ ವಕೀಲರ ಸಂಘದಿಂದ ನಡೆಸುತ್ತಿರುವ ಅನಿರ್ಧಿಷ್ಠವಾಧಿ ಧರಣಿ ಜನತೆಯ ಹಿತದೃಷ್ಠಿಯಿಂದ ನ್ಯಾಯ ಸಮ್ಮತವಾಗಿರುವ ಹೋರಾಟಕ್ಕೆ ಕರವೇ ಸ್ವಾಭಿಮಾನಿ ಬಣ ಬೆಂಬಲಿಸಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಮನವಿ ಮಾಡುತ್ತಿದೆ ಎಂದು ಜಿಲ್ಲಾಧ್ಯಕ್ಷ ಕರವೇ ಕಿರಣ್  ತಿಳಿಸಿದರು

ಅವರು ನ್ಯಾಯಾಲಯದ ಆವರಣದಲ್ಲಿ ಕೈಗೊಂಡಿರುವ ವಕೀಲರ ಸಂಘದ ಮುಷ್ಕರದಲ್ಲಿ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ಬೈಕ್ ಜಾಥದಲ್ಲಿ ಧಾವಿಸಿ ಬಂದು ಪಾಲ್ಗೊಂಡು  ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು,

ಶಿವಮೊಗ್ಗ ಸೇರಿದಂತೆ ವಿಭಾಗೀಯ ಮಟ್ಟದಲ್ಲಿ ಹಾಗೂ ಮಧ್ಯ ಕರ್ನಾಟಕದ ಭಾಗವಾಗಿರುವ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗಳ ನಾಗರೀಕರು ಮಂಗಳೂರಿಗೆ ಪಯಣಿಸಿ ಕಾನೂನು ಕೇಸುಗಳನ್ನು ಇತ್ಯರ್ಥ ಪಡಿಸಿ ಕೊಳ್ಳುವುದಕ್ಕೆ ಸುಗಮವಾಗಲು ಸಾಧ್ಯವಾಗುವುದಿಲ್ಲ, ಬದಲಿಗೆ ಯಾವುದೇ ಅಂಕಿ ಅಂಶಗಳ ಕೇಸುಗಳು, ಪ್ರತಿಕೂಲ ವಾತಾವರಣ, ಪ್ರವಾಸದ ಅನುಕೂಲತೆಗಳು, ಆರ್ಥಿಕ ಸ್ಥಿತಿಗತಿಗಳು, ಪ್ರಾಕೃತಿಕ ವಿಕೋಪಗಳು, ಶಿವಮೊಗ್ಗ ಜಿಲ್ಲಾ ವಿಭಾಗವಾದ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲಾ ಜನತೆಗೆ ತಂದೊಡ್ಡುವ ಬಹುದೊಡ್ಡ ಸಮಸ್ಯೆಗಳನ್ನು ಪರಿಗಣಿಸಿದೆ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಅನುಮತಿ ಕೋರಿ ಮುಖ್ಯಮಂತ್ರಿಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದು ಅವೈಜ್ಞಾನಿಕವಾಗಿದೆ ಎಂದು ಕರವೇ ಸ್ವಾಭಿಮಾನಿ ಬಣ ಮುಖ್ಯಮಂತ್ರಿಗಳ ಗಮನಕ್ಕೆ ಈ ಮೂಲಕ ತರುತ್ತಿದ್ದೇವೆ ಎಂದು ವಿವರಿಸಿದರು

ಮಂಗಳೂರು ಪೀಠದ ಸ್ಥಾಪನೆಗೆ ರಾಜ್ಯ ಸರ್ಕಾರದ ಇಚ್ಚಾಶಕ್ತಿ ಇದ್ದರೆ ಇದರಲ್ಲಿ ಜೋಡಿಸಲಾಗಿರುವ ಶಿವಮೊಗ್ಗ ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳನ್ನು ಕೈ ಬಿಡಬೇಕು, ಹಾಗೂ ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮುಂದಾಗಬೇಕೆಂದು ತಿಳಿಸಿರುವುದು, ಮಧ್ಯ ಕರ್ನಾಟಕದ ಜನತೆಗೊಂದು ಸಾಮಾಜಿಕ ನ್ಯಾಯವಾಗಿದೆ ಹೀಗಾಗಿಯೇ ಇದರ ಅನಾನುಕೂಲತೆಗಳನ್ನು ಮನನ ಮಾಡಿಕೊಂಡಿರುವ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಧರಣಿಗೆ ಬೆಂಬಲಿಸಿದೆ ಇದರ ಗಂಭೀರತೆ ರಾಜ್ಯ ಸರ್ಕಾರ ಗೊತ್ತು ಮಾಡಿಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ಈ ಪತ್ರ ನಡೆಯ ವಿರುದ್ದ ಭಾರಿ ಪ್ರತಿಭಟನೆಗೆ ಕರವೇ ಸ್ವಾಭಿಮಾನಿ ಬಣ ಮುಂದಾಗುತ್ತದೆ ಎಂದು ಈ ಮೂಲಕ ಎಚ್ಚರಿಸಿದೆ,

ಪ್ರತಿಭಟನಾ ಮನವಿಯಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆರ್ ರಾಘವೇಂದ್ರ ಸ್ವಾಮಿ, ವಕೀಲರಾದ ಕೆ.ಪಿ ಶ್ರೀಪಾಲ್, ಗೀತಾ ಮಾನೆ, ಸೇರಿದಂತೆ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್, ಮಹಿಳಾ ಅಧ್ಯಕ್ಷರಾದ ಕವಿತಾ, ಹಾಗೂ ಅರವಿಂದ್, ‌ಆರತಿ, ವಿಜಯ್ ಕುಮಾರ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I