Thursday, 5 November 2026 — Suryagagana
07:26 PM
ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I ಸೂರ್ಯಗಗನ I ಶೋಷಿತ ಸಮುದಾಯದ ಮೇಲಿನ ವಂಚನೆ I ನೇರನೇಮಕಾತಿಯಲ್ಲಿನ ಭ್ರಷ್ಟಾಚಾರ ಖಂಡಿಸಿ I ಕರ್ನಾಟಕ ಮಾದರ ಮಹಾಸಭಾದಿಂದ ಬೇಟಿ, ಮನವಿ ಸಲ್ಲಿಕೆ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I ಸೂರ್ಯಗಗನ I ಶೋಷಿತ ಸಮುದಾಯದ ಮೇಲಿನ ವಂಚನೆ I ನೇರನೇಮಕಾತಿಯಲ್ಲಿನ ಭ್ರಷ್ಟಾಚಾರ ಖಂಡಿಸಿ I ಕರ್ನಾಟಕ ಮಾದರ ಮಹಾಸಭಾದಿಂದ ಬೇಟಿ, ಮನವಿ ಸಲ್ಲಿಕೆ I ಸೂರ್ಯಗಗನ I ಕರವೇ  ಸ್ವಾಭಿಮಾನಿ ಬಣದಿಂದ I 71ನೇ ಕನ್ನಡ ರಾಜ್ಯೋತ್ಸವ ಆಚರಣೆ I ಸೂರ್ಯಗಗನ I ವಿಜೃಂಭಣೆಯ ಕನ್ನಡ ರಾಜ್ಯೋತ್ಸವ I ಭಾಷೆ, ಸಂಸ್ಕೃತಿ ಹಾಗೂ ಸೌಹಾರ್ದತೆಯ ಸಂರಕ್ಷಣೆಗೆ I ಜಿಲ್ಲಾಧಿಕಾರಿಗಳ ಕರೆ I ಸೂರ್ಯಗಗನ I ಭದ್ರಾವತಿಯಲ್ಲಿ ಬೆಳಗಾವಿಯಲ್ಲಿ ನಡೆಯುವ I ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಸಮ್ಮೇಳನ ಲಾಂಛನ ಬಿಡುಗಡೆ I ಸೂರ್ಯಗಗನ I ನ. 6ರಿಂದ ಹಾಪ್ ಕಾಮ್ಸ್‌ನಲ್ಲಿ I ದೇಶಿ, ವಿದೇಶಿ ಹಣ್ಣುಗಳ ಮಾರಾಟ ಮಳಿಗೆ ಉದ್ಘಾಟನೆ I ಆರ್. ವಿಜಯಕುಮಾರ್ I ಸೂರ್ಯಗಗನ I ಹಾಲಿನ ದರ ಏರಿಕೆ ಸ್ವಾಗತಾರ್ಹ I ಗ್ರಾಹಕರ ಹೊರೆ ಸರ್ಕಾರವೇ ಭರಿಸಲಿ I ನರಸಿಂಹ ಗಂಧದಮನೆ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I
ಸೂರ್ಯಗಗನ

I ಖಾಲಿ ಜೇಬು I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಖಾಲಿ ಜೇಬು I ಹೊತ್ತಾರೆ ಬರೆಗಳ ನೋವು, ಕಡು ಕತ್ತಲ ನಿದುರೆಗಳ ಕಾವು, ಕಂಗಳ ಹೊರಳಿಸುತಲಿ ಕೂತೇ, ನಾಳೆಯ ಹೆಜ್ಜೆಗಳು ಕುದಿತಿತ್ತು, ಯಾರ ಮೇಲೂ ಆರೋಪವಿತ್ತಿಲ್ಲ, ಎದೆ ನಂಬಿಕೆಗಳೂ ಹುಸಿಯಾಗಿಲ್ಲ, ಈ ಅರಿವಿನೊಳಗೆ ಬಲದಿ ಗುರುವಿದ್ದಾನೆ, ಕುದಿವ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಖಾಲಿ ಜೇಬು I

ಹೊತ್ತಾರೆ ಬರೆಗಳ ನೋವು,
ಕಡು ಕತ್ತಲ ನಿದುರೆಗಳ ಕಾವು,
ಕಂಗಳ ಹೊರಳಿಸುತಲಿ ಕೂತೇ,
ನಾಳೆಯ ಹೆಜ್ಜೆಗಳು ಕುದಿತಿತ್ತು,

ಯಾರ ಮೇಲೂ ಆರೋಪವಿತ್ತಿಲ್ಲ,
ಎದೆ ನಂಬಿಕೆಗಳೂ ಹುಸಿಯಾಗಿಲ್ಲ,
ಈ ಅರಿವಿನೊಳಗೆ ಬಲದಿ ಗುರುವಿದ್ದಾನೆ,
ಕುದಿವ ಹೆಜ್ಜೆಗಳ ಮುಂದಿಡಿಸುತ್ತಿದ್ದಾನೆ
ನೋವುಗಳ ತಣಿಸುತ್ತಿದ್ದಾನೆ,

ಇನ್ನಷ್ಟು ನಿಂದಿಸುವವರು ನಿಂದಿಸಲಿ
ಅಡ್ಡಿಯಾಗುವವರು ಅಡ್ಡಿಯಾಗಲಿ,
ಕುತ್ಸಿತ ವಿಕೃತಿಗಳು ಪಾನಮತ್ತದಿ ನರ್ತಿಸಲಿ,
ನಾನೆಂದಿಗೂ ಸೊಲ್ಲೆತ್ತುವುದಿಲ್ಲ,
ಮೌನದಿ ಗುರುವಿನ ದೀವಿಗೆ ಹಿಡಿಯುತ್ತೇನೆ,

ಕೋಟೆ ಕಟ್ಟಿ ಆಳಿದವರೇನು, ಅಳಿಯಲಿಲ್ಲವೇ,
ಅಧಿಕಾರದಂದಣದಿ ಮೆರೆದವರು ಬಸವಳಿದಿಲ್ಲವೇ,
ಕ್ಷುದ್ರಾವಸ್ಥೆಯೊಳು ಮುಗಿಬಿದ್ದವರು ಕೊನೆಯಾಗಲಿಲ್ಲವೇ..?!
ಇನ್ನೂ ಇವರು ಯಾವ ಲೆಕ್ಕದಿ ಇದ್ದಾರು..!?

ಹಸನ್ಮುಖಿಯಾಗಿಯೇ ಇದ್ದೇನೆ,
ನೋವುಗಳು ಸಹಿಸುವುದನು ಕಲಿಸಿದ್ದಾನೆ,
ಬೊಬ್ಬೆಗಳ ಹೆಜ್ಜೆಗಳು ಸಾಗುತ್ತಲೇ ಇದೆ,
ಕ್ರಮಿಸುವ ಕಾಲದಿ ಎಲ್ಲವೂ ನಿರುಮ್ಮಳವಾಗಿದೆ,

ನಾನೀಗ ಹೊಸತೊಂದು ದಿಕ್ಕಿನೆಡೆಗೆ,
ನಡೆದಿದ್ದೇನೆ, ನಡೆದಿದ್ದೇನೆ, ತುಸು ಕಾಲದಿ,
ಧ್ವೇಷಿಗಳು, ಅಸೂಯೇ ಚಿತ್ತಗಳು,
ಚಪ್ಪಾಳೆಗಳು ತಟ್ಟಲಿದೆ, ಗುಣಗಾನಿಸಲಿದೆ,

ಹೇ ಗುರುವೇ ಧನ್ಯವಾದಗಳು
ನೀ ಈ ಪಾಮರನೊಳಗೆ ಶಾಶ್ವತವಾಗಿದ್ದಕ್ಕೆ,
ಕ್ಲಿಷ್ಟಕರಗಳಲಿ ನಡೆಸುತ್ತಿರುವುದಕ್ಕೆ,
ಅಲೌಕಿಕತೆಯ ಕಟ್ಟಿ ಕೊಟ್ಟಿದ್ದಕ್ಕೆ
ಮತ್ತೊಮ್ಮೆ, ಮಗದೊಮ್ಮೆ ಧನ್ಯವಾದಗಳು.

Gara

Gara

Leave a comment

error: Content is protected !!