Sunday, August 2, 2026
Homeಸೂರ್ಯಗಗನI ಕರವೇ ಸ್ವಾಭಿಮಾನಿ ಬಣದಿಂದ ನಿರಂತರ ಕನ್ನಡ ಸೇವೆ I ನೂತನ ಧ್ವಜಸ್ಥಂಭ ಉದ್ಘಾಟನೆ I...

I ಕರವೇ ಸ್ವಾಭಿಮಾನಿ ಬಣದಿಂದ ನಿರಂತರ ಕನ್ನಡ ಸೇವೆ I ನೂತನ ಧ್ವಜಸ್ಥಂಭ ಉದ್ಘಾಟನೆ I ಅನ್ನದಾಸೋಹ I

I ಕರವೇ ಸ್ವಾಭಿಮಾನಿ ಬಣದಿಂದ ನಿರಂತರ ಕನ್ನಡ ಸೇವೆ I
ನೂತನ ಧ್ವಜಸ್ಥಂಭ ಉದ್ಘಾಟನೆ I ಅನ್ನದಾಸೋಹ I

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಬಳಿ ಇರುವ ಆಟೋ ನಿಲ್ದಾಣದ ಬಳಿ ಶಿವಮೊಗ್ಗದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ವತಿಯಿಂದ ಶಾಶ್ವತ ಕನ್ನಡ ಧ್ವಜ ಸ್ತಂಭ ನಿರ್ಮಿಸಿ ಅದರ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿ ಸಾರ್ವಜನಿಕರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಶಿವಮೊಗ್ಗದ ವಿವಿಧ ಇಲಾಖೆಯ ಅಧಿಕಾರಿಗಳು, ವೇದಿಕೆ ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು. ಶಿವಮೊಗ್ಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ರವರು ಮಾತನಾಡಿ ಕನ್ನಡ ಭಾಷೆ ನೆಲ ಜಲದ ಬಗ್ಗೆ ಕನ್ನಡ ಪರ ಸಂಘಟನೆಗಳು ನಿರಂತರವಾಗಿ ಹೋರಾಡುತ್ತ ಕನ್ನಡವನ್ನು ಕಟ್ಟುವ ಹಾಗೂ ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿವೆ. ಈ ನಿಟ್ಟಿನಲ್ಲಿ ಕರವೇ ಸ್ವಾಭಿಮಾನಿ ಬಣದ ನಿರಂತರ ಸೇವೆ ಶ್ಲಾಘನೀಯ ಎಂದು ಹೇಳಿ ಶುಭ ಹಾರೈಸಿದರು.
ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಮಲ್ಲೇಶಪ್ಪ ಪಿ.ಎಂ. ರವರು ಮಾತನಾಡಿ, ತಮ್ಮ ಕಛೇರಿಗೆ ದಿನಂಪ್ರತಿ ಬರುವಂತಹ ಬಹಳಷ್ಟು ಅರ್ಜಿಗಳು ಆಂಗ್ಲಭಾಷೆಯಲ್ಲಿದ್ದರು, ತಾವು ಕನ್ನಡದಲ್ಲೇ ಉತ್ತರಿಸುತ್ತೇನೆ ಆ ಮೂಲಕ ಕನ್ನಡದ ಅರಿವನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇನೆ.


ದೊಡ್ಡಪೇಟೆ ಮಂಜುನಾಥ್ ರವರು ಮಾತನಾಡಿ, ಕನ್ನಡ ಸಂಘಟನೆಗಳ ಏಳಿಗೆಗಾಗಿ ನಿರಂತರ ಪರಿಶ್ರಮದ ಫಲವಾಗಿ ಕನ್ನಡವು ರಾಷ್ಟಾçದ್ಯಂತ ಗಮನ ಸೆಳೆಯುತ್ತಿದೆ. ಇಂದಿನ ಧ್ವಜಾರೋಹಣ ಅರ್ಥಪೂರ್ಣವಾಗಿದ್ದು, ಪ್ರತಿಯೊಂದು ರಸ್ತೆಗಳಲ್ಲಿ ಕನ್ನಡ ಧ್ವಜಸ್ಥಂಬ ಸ್ಥಾಪನೆ ಇಂದಿನ ಅವಶ್ಯಕತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಹೆಚ್.ಎಸ್.ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಪತ್ರಕರ್ತರು ಮತ್ತು ಸಾಹಿತಿಗಳಾದ ಗಾ.ರಾ.ಶ್ರೀನಿವಾಸ್, ರಘುರಾಜ್ ಮಲ್ನಾಡ್, ಕಾನೂನು ಸಲಹೆಗಾರರಾದ ಅನಿಲ್ ಕುಮಾರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶಂಕರ ಚೀಲೂರು, ರೋಟರಿ ವಲಯ ಸೇನಾನಿ ಕಿರಣ್ ಕುಮಾರ್ ಜಿ., ರೋಟರಿ ಕ್ಲಬ್ ಶಿವಮೊಗ್ಗ ಸೆಂಟರ್‌ನ ಅಧ್ಯಕ್ಷರಾದ ಬಸವರಾಜ್, ಮಾಧ್ಯಮ ಸಲಹೆಗಾರ ಡಿ.ಪಿ. ಅರವಿಂದ್, ವಿಜಯಕುಮಾರ ಎಸ್. ಮಳಲಿ ಮಕ್ಕಿ, ಸಮಾಜ ಸೇವಕರಾದ ಚಿತ್ರೇಶ್ ಹಾಗೂ ಲತಾ ವೀರಣ್ಣ, ಮಹಿಳಾ ಅಧ್ಯಕ್ಷರಾದ ಕವಿತಾ ಸಿ. ಜಿಲ್ಲಾ ಉಪಾಧ್ಯಕ್ಷರಾದ ಮುಜಿಬುಲ್ಲಾ, ವಿಜಯಕುಮಾರ್, ಜಯಕೃಷ್ಣ, ಜಿಲ್ಲಾ ಸಂಚಾಲಕರಾದ ಶಿವಕುಮಾರ ಅಸ್ತಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ಉಮೇಶ್ ಗದ್ದೆಮನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ್ ಕೆ.ಬಿ., ಜಿಲ್ಲಾ ಕಾರ್ಯದರ್ಶಿ ಸಾದಿಕ್ ಎ., ಜಿಲ್ಲಾ ಖಜಾಂಚಿ ಗಣೇಶ್, ಜಿಲ್ಲಾ ಸಹಕಾರ್ಯದರ್ಶಿ ನೂರುಲ್ಲಾ ಖಾನ್, ಭದ್ರಾವತಿ ತಾಲ್ಲೂಕು ಅಧ್ಯಕ್ಷ ಪ್ರಭುಗೌಡ, ಸಾಗರ ತಾಲ್ಲೂಕು ಅಧ್ಯಕ್ಷ ಜನಾರ್ಧನ್ ಪೂಜಾರಿ ಬಿ., ಶಿಕಾರಿಪುರದ ಗೌರವಾಧ್ಯಕ್ಷ ಶಿವಯ್ಯ ಎನ್ ಶಾಸ್ತ್ರೀ,. ಅನ್ಸರ್ ಅಹ್ಹಮದ್, ಮಹಿಳಾ ಘಟಕದ ಪದಾಧಿಕಾರಿಗಳಾದ ಪದ್ಮ ಎಸ್. ಆರತಿ ತಿವಾರಿ,  ಜ್ಯೋತಿ,  ಪದ್ಮಮ್ಮ ಬಿ.ಎಸ್.,  ಅನುಪಮ ರೋಜಲಿನ್,  ಸರಿತಾ,  ಗೀತಾ,  ಶೋಭಾ,  ಸುಮಾ,  ಲಕ್ಮೀ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ನೂರಾರು ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I