Saturday, August 1, 2026
Homeಸೂರ್ಯಗಗನI ಭದ್ರಾತೀರದಲ್ಲಿ ಹಾಡುಹಗಲೇ ರೌಡಿಶೀಟರ್ ವಿಶ್ವ ಯಾನೆ ಮುದ್ದೆ ಮೇಲೆ ಅಟ್ಯಾಕ್ I ಮಾರಣಾಂತಿಕ ಹಲ್ಲೆ...

I ಭದ್ರಾತೀರದಲ್ಲಿ ಹಾಡುಹಗಲೇ ರೌಡಿಶೀಟರ್ ವಿಶ್ವ ಯಾನೆ ಮುದ್ದೆ ಮೇಲೆ ಅಟ್ಯಾಕ್ I ಮಾರಣಾಂತಿಕ ಹಲ್ಲೆ I

I ಭದ್ರಾತೀರದಲ್ಲಿ ಹಾಡುಹಗಲೇ ರೌಡಿಶೀಟರ್ ವಿಶ್ವ ಯಾನೆ ಮುದ್ದೆ ಮೇಲೆ ಅಟ್ಯಾಕ್ I ಮಾರಣಾಂತಿಕ ಹಲ್ಲೆ I

ಭದ್ರಾವತಿ : ಭದ್ರಾತೀರದಲ್ಲಿ ನಿಲ್ಲದ ದುಂಡಾವರ್ತನೆಗಳು, ಅಕ್ರಮ ಚಟುವಟಿಕೆಗಳು, ಇಂದು ಕೂಡ ಬೆಳಿಗ್ಗೆ ಎದ್ದು ಜಳಕಾದಿಗಳ ಮುಗಿಸಿ ನಾಗತಿಬೆಳಗಲಿನ ನಂಜುಂಡೇಶ್ವರನ ದರ್ಶನ ಮಾಡಿ ಬರುತ್ತಿದ್ದ ಮುದ್ದೆ, ಯಾಕೋ ದೇವಳಕ್ಕೆ ಹೋಗದೆ ಸೀಗೆಬಾಗಿಯ ಟೀ ಸೆಂಟರ್ ನಲ್ಲಿ ನಿಂತು ಚಹಾ ಕುಡಿದು ಮೊಬೈಲ್ ನಲ್ಲಿ ಮಾತಾಡುತ್ತಿದ್ದವನಿಗೆ ಜವರಾಯನ ನೆರಳು ಸುಳಿದು ಸರಿಯುತ್ತದೆ, ಮಾರಣಾಂತಿಕ ಹಲ್ಲೆ ನಡೆಯುತ್ತದೆ ಎನ್ನುವ ಸಣ್ಣದೊಂದು ಸುಳಿವು ಕೂಡ ಇರದೆ ಬುಲೆಟ್ ನಲ್ಲಿ ಸದ್ದು ಮಾಡಿ ಬಂದವ ಇಂದು ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ,

ಇತ್ತಕಡೆ ತನ್ನ ಶಿಷ್ಯೋತ್ತಮ ಬಲಗೈ ಬಂಟ ವಿಶ್ವ ಯಾನೇ ಮುದ್ದೆ ಮೇಲೆ ಅಟ್ಯಾಕ್ ಆಗಿ ಹ್ಯಾಂಡ್ ಲ್ಯಾಪ್ಸ್ ಆಗುತ್ತದೆ ಎನ್ನುವ ತುಸು ಚಿಂತೆಯಲ್ಲಿದೇ ಕೂತಿದ್ದ ಬಸವೇಶನಿಗೆ ಅಚಾನಕ್ ರೊಚ್ಚಿಗೇಳಿಸುವಂತೆ ಮಾಡಿದೆ, ಮುದ್ದೆ ಕಾಂಗ್ರೆಸ್ ಲೀಡರ್ ಎಂದಿದ್ದಾನೆ, ಅಲ್ಲದೆ ಆತನ ಏಳಿಗೆ ಸಹಿಸದೆ ಜೆಡಿಎಸ್ ಕಡೆಯವರು ಈ ಹಲ್ಲೆಗೆ ಕಾರಣರು ಎಂದು ಆಕ್ರೋಶವ್ಯಕ್ತಪಡಿಸಿದ್ದಾನೆ,

ಭದ್ರಾತೀರದ ಈ ಅಕ್ರಮ ಚಟುವಟಿಕೆಗಳು ಇಂದು ಕ್ತೈಂ ಚಟುವಟಿಕೆಗಳನ್ನು ಮರುಕಳಿಸುತ್ತಿದೆ, ಈ ಹೊತ್ತಿನ ಘಟನೆಗೆ ಸಿಐಡಿ ತನಿಖೆ ನಡೆಸಲು ತಿಳಿಸುತ್ತೇನೆ ಎಂದೇಳುವ ಬಸವೇಶ ನಿಜಕ್ಕೂ ಶಾಸಕನಾ..? ಅಥವಾ ಸರ್ಕಾರನಾ…? ಎನ್ನುವುದು ಪ್ರಶ್ನಾರ್ಥಕವಾದರು, ಇಲ್ಲಿ ದಶಕಗಳಿಂದ ನಡೆಯುತ್ತಿರುವ ರಿಪಬ್ಲಿಕ್ ಮೂಮ್ಹೆಂಟ್ ಗಳ ತನಿಖೆಗೆ ಹಾಗೂ ಕಡಿವಾಣಕ್ಕೆ ಭಾರತದ ರಕ್ಷಣಾ ತಂಡವೇ ಬರಬೇಕಾಗಿದೆ ಒಂದೆರೆಡು ಎನ್ಕೌಂಟರ್, ವೈಟ್ ಕಾಲರ್ ಗೋಡೆಗಳನ್ನು ಕೆಡವಿ ಜೈಲಿಗಟ್ಟಬೇಕಾದ ಜರೂರತ್ತಿದೆ,

ಇನ್ನೂ ಸುಳಿವಿಲ್ಲದೆ ಚಹಾ ಕುಡಿಯುತ್ತಿದ್ದ ಮುದ್ದೆ ರಕ್ತದ ಮಡುವಿನಲ್ಲಿ ಬಿದ್ದಿದ್ದವನನ್ನು ಆಟೋದಲ್ಲಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆರೋಗ್ಯ​ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ‌ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ, ಹಾಗೂ ಹಲ್ಲೆ ಮಾಡಿದವರ ಬಂಧನಕ್ಕೆ ಜಾಲ ಬೀಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I I ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯನಾಯ್ಕ್ I ಬರ ಪರಿಸ್ಥಿತಿ ಪರಿಶೀಲನೆ I  I ತಮಿಳುನಾಡಿಗೆ ಕಾವೇರಿ ನದಿ ನೀರು‌ I ಹರಿಸುವ ಆದೇಶ ಅವೈಜ್ಞಾನಿಕ ಹಾಗೂ ರೈತ ವಿರೋದಿಯಾಗಿದೆ I ಕರವೇ ಕಿರಣ್ I I ಪಶುವೈದ್ಯಾಧಿಕಾರಿಗಳ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ಹಾಗೂ ಆಂತರಿಕ ತನಿಖಾ ಉಪಸಮಿತಿ ರಚನೆ I I ಮತದಾರರ ಪಟ್ಟಿಯ ಶುದ್ದಿ ಕಾರ್ಯದಲ್ಲಿ ಸರ್ವರೂ ಪಾಲ್ಗೊಳ್ಳಬೇಕು I ಮತದಾರರ ನೋಂದಣಾಧಿಕಾರಿ ರಂಗಸ್ವಾಮಿ I