Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಹಳೆಯ ನೆನೆವುಗಳ ಕಟ್ಟಿಕೊಟ್ಟ I ಮಾರ್ನಾಮಿಬೈಲಿನ ಇಕ್ಬಾಲ್ I ಇಂದಿಗೂ ನಡೆಯುತ್ತಲೇ ಇದ್ದಾನೆ…I

I ಹಳೆಯ ನೆನೆವುಗಳ ಕಟ್ಟಿಕೊಟ್ಟ I ಮಾರ್ನಾಮಿಬೈಲಿನ ಇಕ್ಬಾಲ್ I ಇಂದಿಗೂ ನಡೆಯುತ್ತಲೇ ಇದ್ದಾನೆ…I ಮನುಷ್ಯ ಎಷ್ಟೇ ಬುದ್ದಿವಂತನಾಗಿದ್ದರೂ ಮೆದುಳಿನ ಅತೀ ಸೂಕ್ಷ್ಮ ನರಗಳು ಪಥ ಬದಲಿಸಿದರೆ ಆತನಿಗೆ ಆತನೇ ಗುರುತು ಹಿಡಿಯದಂತಾಗುತ್ತಾನೆ, ಹಾಗೇ ಎಷ್ಟೇ ಕೋಟ್ಯಾದಿಪತಿಯಾಗಿದ್ದರೂ ಅದು ವ್ಯರ್ಥವೇ ಆಗಿರುತ್ತದೆ,…

I ಹಳೆಯ ನೆನೆವುಗಳ ಕಟ್ಟಿಕೊಟ್ಟ I ಮಾರ್ನಾಮಿಬೈಲಿನ ಇಕ್ಬಾಲ್ I ಇಂದಿಗೂ ನಡೆಯುತ್ತಲೇ ಇದ್ದಾನೆ…I

ಮನುಷ್ಯ ಎಷ್ಟೇ ಬುದ್ದಿವಂತನಾಗಿದ್ದರೂ ಮೆದುಳಿನ ಅತೀ ಸೂಕ್ಷ್ಮ ನರಗಳು ಪಥ ಬದಲಿಸಿದರೆ ಆತನಿಗೆ ಆತನೇ ಗುರುತು ಹಿಡಿಯದಂತಾಗುತ್ತಾನೆ, ಹಾಗೇ ಎಷ್ಟೇ ಕೋಟ್ಯಾದಿಪತಿಯಾಗಿದ್ದರೂ ಅದು ವ್ಯರ್ಥವೇ ಆಗಿರುತ್ತದೆ, ನಾನು ಮಾರ್ನಾಮಿಬೈಲಿನ ಆಸು-ಪಾಸಿನ ಬಾಲ್ಯದಲ್ಲಿ ನೋಡುತ್ತಿದ್ದ ಇಕ್ಬಾಲ್ ಅಗಾಗ್ಗೆ ಶಿವಮೊಗ್ಗದ ಗಾಂಧಿನಗರದಲ್ಲಿ ಕಾಣ ಸಿಗುತ್ತಾನೆ, ಇಂದು ಕೂಡ ಅದೇ ಅಸ್ವಸ್ಥತೆಯಲ್ಲಿ ಎದುರಾದ, ಇಕ್ಬಾಲ್ ಒಂದು ಪೋಟೋ ಕ್ಲಿಕ್ ಮಾಡ್ತೀನಿ ಎಂದು ಪೋಟೋ ಕ್ಲಿಕ್ ಮಾಡಿದೆ ಇಕ್ಬಾಲ್‌ಗೆ ಏನು ಅನಿಸಿತೋ..? ಗೊತ್ತಿಲ್ಲ ಒಮ್ಮೆಲೆ ಇರುವ ಹಲ್ಲುಬ್ಬಿನಿಂದ ನಕ್ಕು ದೂರ ಸರಿದು ತಿರುಗಿ ನೋಡದೆ ಹೋದ, ಆದರೆ ಇಂದು ಅದೇ ಅಕ್ಕರೆಯಿಂದ ಹೇ, ಹೇ, ಗುರುತು ಹಿಡಿದವನಂತೆ ಕೈಬೀಸಿ ಕರೆದ ನನಗೂ ಆತನ ಮೇಲೆ ಒಂದಷ್ಟು ಪ್ರೀತಿ ಇದೆ, ಬಾಲ್ಯದಲ್ಲಿ ಆತನಿಗೆ ಕೆಣಕಿದಾಗ ಬೆದರಿಸಿಕೊಂಡು ಓಡಾಡಿಸಿದ್ದಾನೆ, ಇದೀಗ ಅದೇ ನೆನೆವುಗಳ ನಡುವೆ ನಮ್ಮ ಇಕ್ಬಾಲ್ ಎನ್ನುವಷ್ಟು ಎದೆಚರಿಗೆ ತುಂಬುವಂತೆ ಮಾಡುತ್ತದೆ, ಹೀಗಾಗಿ ಹತ್ತಿರವಾಗಿ ಮಾತಾಡಿಸಿದೆ, ಕೂತ್ಕೋ ಎಂದ, ಆತನೊಂದಿಗೆ ಹಳೆಯ ನೆನೆಪಿದಿಯಾ ಎಂದು ಕೇಳಿದೆ, ಒಮ್ಮಲೆ ನಕ್ಕು ಮೌನವಾದ ನನಗೂ ಆತನೊಂದಿಗೆ ಪೋಟೋ ಕ್ಲಿಕ್ ಮಾಡಿಸಿಕೊಳ್ಳಬೇಕೆಂದು ಸ್ನೇಹಿತರಾದ ನಟ ಶ್ರೀನಿವಾಸ್ ಶರ್ಮಾರವರಿಂದ ಒಂದು ಪೋಟೋ ಪ್ಲೀಸ್ ಎಂದೆ ಅವರು ಅಷ್ಟೆ ಸಂತೋಷವಾಗಿ ಪೋಟೋ ಕ್ಲಿಕ್ಕಿಸಿದರು.

ನೋಡಿ ಅವನಿಗೆ ಹಿಂದೆ ಕೈ-ಕಟ್ಟಿ ನಡೆವ ಅಭ್ಯಾಸ ಅದೇ ಅಭ್ಯಾಸದ ಕಾವಿಟ್ಟುಕೊಂಡೆ ಇನ್ನೂ ನಡೆಯುತ್ತಿದ್ದಾನೆ, ಹಸಿವಿನ ಅರಿವು ಕೂಡ ಆತನಿಗಿಲ್ಲ, ಹಳೆಯದಾದ ಕೊಳೆತ ಅಂಗಿಗೆ ಎರಡು ಗುಂಡಿ ಹಾಕಿಕೊಂಡು ಉದ್ದನೆ ಪ್ಯಾಂಟು ಸೊಂಟಕ್ಕೆ ಬಿಗಿದುಕೊಂಡು ತನ್ನ ಬದುಕಿನ ಹೆಜ್ಜೆಗಳಿಡುತ್ತಲೇ ದಶಕಗಳೇ ಉರುಳಿಸುತ್ತಿದ್ದಾನೆ, ಇಕ್ಬಾಲ್ ಜಗತ್ತನ್ನು ತನ್ನವರನ್ನು, ಅವನ ಕುಟುಂಬದವರು ಇಕ್ಬಾಲ್‌ನನ್ನ ಮರೆತರೂ ಆತನ ಕಾಲುಗಳು ನಡೆವುದು ಮರೆತೇ ಇಲ್ಲ, ನಡೆಯುತ್ತಲೇ ಇದೆ, ನಿದುರೆಗೆ ಅಲ್ಲಲ್ಲಿ ಸಿಕ್ಕ ಜಗುಲಿಕಟ್ಟೆಗಳೇ ಆಸರೆಯಾಗಿವೆ, ಹಸಿವಿನ ದಾಹವೂ ಇಲ್ಲ, ಅನ್ಯರ ಬಳಿ ಬೇಡುವುದು ಇಲ್ಲ, ಯಾವಾಗ ಕಾಲುಗಳು ನಡೆವುದು ನಿಲ್ಲಿಸುತ್ತದೋ ಅಲ್ಲಿಯೇ ಇಕ್ಕೆಲದಲ್ಲಿ ನಿದ್ರಿಸಿ ಎಚ್ಚರಗೊಂಡಾಗ ಮತ್ತೇ ಸಾಗುವ ಇಕ್ಬಾಲ್ ಇನ್ನಷ್ಟು ತನಗರಿವಿಲ್ಲದ ಮೌನಕ್ಕೆ ಶರಣಾಗಿ ಬಿಟ್ಟಿದ್ದಾನೆ,

ಚಳಿ, ಮಳೆ, ಗಾಳಿ ಇವ್ಯಾವ ಲೆಕ್ಕವು ಇಲ್ಲ, ಕಳೆದ ಕೋರೊನಾ ವ್ಯಾದಿಯ ಪೀಕಲಾಟದಲ್ಲಿ ಇಕ್ಬಾಲ್‌ಗೆ ಸ್ಯಾನಿಟೈಸರ್ ಆಗಲಿ ಮುಖಕ್ಕೆ ಮಾಸ್ಕ್ ಹಾಕುವುದಾಗಲಿ ಗೊತ್ತೇ ಇಲ್ಲ, ಅವನಿಗೆ ಇವೆಲ್ಲವುದರ ಜಾಗೃತಿ-ಮುನ್ನೆಚ್ಚರಿಕೆಗಳೇ ವಹಿಸುವುದು ಗೊತ್ತಿರಲಿಲ್ಲ, ಹಾಗೆಯೇ ಅನಾಯಾಸವಾಗಿ ಕೋವಿಡ್-೧೯ ಮೊದಲನೆ ಅಲೆ ದಾಟಿ ಎರಡನೇ ಅಲೆಯಲ್ಲಿ ನಡೆದು ಬಿಟ್ಟಿದ್ದ ಇಕ್ಬಾಲ್‌ಗೆ ಕೋರೊನಾ ಬೀತಿಯಾಗಲಿ, ಚರ್ಚೆಗಳಾಗಲಿ, ಸಾವು-ನೋವುಗಳ ಪರಿವೆಗಳೇ ಇಲ್ಲದಂತೆ ಹೆಜ್ಜೆಗಳು ಸಾಗುತ್ತಿರುವ ಜೀವದ ಗೊಂಬೆಯಾಗಿ ಬಿಟ್ಟಿದ್ದಾನೆ, ಆಚ್ಚರಿಯ ಸಂಗತಿ ಎಂದರೆ ಇಕ್ಬಾಲ್ ಇಷ್ಟೊಂದು ಮೌನಿಯು ಅಲ್ಲ, ನನಗೆ ಗೊತ್ತಿರುವಂತೆ ಇಕ್ಬಾಲ್‌ಗೆ ಅಣಕಿಸುತ್ತಿದ್ದ ಹುಡುಗರ ಗುಂಪುಗಳು ಬಹಳಷ್ಟು ಇದ್ದವು, ಇಕ್ಬಾಲ್ ಇದ್ದಕ್ಕಿದ್ದಂತೆ ರೊಚ್ಚಿಗೆದ್ದು ಸಿಕ್ಕವರ ಮೇಲೆ ಕಲ್ಲು ತೂರುವುದೋ.. ಅಥವಾ ಛೇಡಿಸಿದವರನ್ನು ಓಡಿಸಿಕೊಂಡು ಹೋಗುವುದೋ ಅಷ್ಟು ವ್ಯಾಘ್ರಿಯಾಗಿದ್ದವನು, ಹುಡುಗರ ಕೀಟಲೆಗಳಿಗೆ ಇಕ್ಬಾಲ್ ಮಾನಸೀಕ ಅಸ್ವಸ್ಥತೆ ಆಟವಾಗಿತ್ತು, ಆತನ ಕುಟುಂಬದವರು ಚಿಕಿತ್ಸೆ ಕೊಡಿಸಿದ್ದರು, ಅವನನ್ನು ಕಾಯುವುದೇ ಕೆಲಸವಾಗಿತ್ತು,

ಹಲವಾರು ಭಾರಿ ಅವನ ಅಸ್ವಸ್ಥತೆಗೆ ಬೆದರಿ ಜನರೇ ಸೇರಿ ಒಡೆದಿರುವ ಘಟನೆಗಳಿವೆ, ಒಂದಿಷ್ಟು ವರುಷಗಳ ತನಕ ಇಕ್ಬಾಲ್ ನ ಅಸ್ವಸ್ಥತೆ ಹುಡುಗರಿಗೆ ಖುಷಿ ಕೊಡುತಿತ್ತು, ಹೀಗಾಗಿ ರೇಗಿಸುತ್ತಲಿ ಕಾಲ ಕಳೆದಿದ್ದ ಜಮಾನಗಳೇ ಉರುಳಿದೆ, ಇದೀಗ ಎದುರಾದ ಇಕ್ಬಾಲ್ ಅದೇ ವೇಷದಲ್ಲಿಯೇ ಇದ್ದ, ಆದರೆ ಪೂರ್ಣ ಮೌನಕ್ಕೆ ಶರಣಾಗಿದ್ದ, ಬಿಳಿಯ ಗಡ್ಡ, ವಯಸ್ಸು ಆಗಿದೆ ಆದರೆ ಆತನ ಪಾದಗಳು ವಯಸ್ಸು ಆಗಿಲ್ಲ ಆಯಸ್ಸು ಆಗಿಲ್ಲ, ಎನ್ನುವುದು ಸಾಬೀತುಪಡಿಸಿತ್ತು, ಬಹುಷ್ಯಃ ಆತನ ಕುಟುಂಬದವರಿಗೆ ಸಾಕಾಗಿ ಹೋಗಿದಿಯೋ..? ಅಥವಾ ಮರೆತು ಬಿಟ್ರೋ ಸದ್ಯಕ್ಕೆ ಗೊತ್ತಿಲ್ಲವಾದರೂ ದಶಕಗಳಿಂದಲೂ ಇದೇ ಶಿವಮೊಗ್ಗದಲ್ಲಿಯೇ ಓಡಾಡಿಕೊಂಡಿದ್ದಾನೆ, ಆತನಿಗೆ ಅಂದಿನ ಲಾಕ್ಡೌನ್ -ಸೀಲ್ಡೌನ್ ಕುರಿತಾದ ಯಾವುದೆ ಗೋಜಿರಲಿಲ್ಲ, ಬಿಡುವಿಲ್ಲದ ನಡೆಯುವಿಕೆ ದರ್ಶಿಸಿದಾಗ ಇಲ್ಲಿಯೇ ನಗರಿಯ ಸುತ್ತ ಕ್ರಮಿಸಿದ್ದಾನೆ. ಕ್ರಮಿಸುತ್ತಲೇ ಇದ್ದಾನೆ. ಇದನ್ನು ಬರೆಯುವಾಗ ನಾನು ಕೂಡ ಇಕ್ಬಾಲ್‌ಗೆ ಬಾಲ್ಯದಲ್ಲಿ ಸಾಕಷ್ಟು ಭಾರಿ ರೇಗಿಸಿದ್ದು ಇದೆ ಎನ್ನುವುದನ್ನು ಇಲ್ಲಿ ಉಲ್ಲೇಖಿಸುವೆ, ಆತನಿಗಂತೂ ಪ್ರಜ್ಞೆಯೇ ಇಲ್ಲ, ನಮಗೆ ಒಳಿತು-ಕೆಟ್ಟದರ ಅರಿವು ಇರಲಿಲ್ಲ, ಒಮ್ಮೆಲೆ ಅದೇ ಇಕ್ಬಾಲ್ ನನ್ನ ನೋಡಿದಾಗ ಮನಸು ಕರಗಿಸಿತು, ಹಳೆಯ ನೆನಪುಗಳು ಇಕ್ಬಾಲ್ ಎಸೆಯುತ್ತಿದ್ದ ಕಲ್ಲಿನಂತೆಯೇ ತೂರಿ ಬಂದವು,

ಮಾತಾಡಿಸುವ ಪ್ರಯತ್ನ, ವಿಫಲವಾಯಿತು, ಹತ್ತಿರ ಯಾರನ್ನು ಬರುವುದಕ್ಕೆ ಬಿಡದೇ ಹಾಗೆಯೇ ಹಲ್ಲಬ್ಬಿನಿಂದ ಹಲ್ಲುಗಳು ತೋರುತ್ತಲಿ ಸಾಗಿ ಹೋದ ಇಕ್ಬಾಲ್ ಗೆ ವಯಸ್ಸಾಗಿದೆ, ಇನ್ನಾದರೂ ಅವರ ಕುಟುಂಬವದರು ಅವನ ನೆರವಿಗೆ ಬರಲಿ, ಕೊನೆಯ ದಿನಗಳಾದರು ಅವನ ಹೆಜ್ಜೆಗಳಿಗೆ ಸಮಾಧಾನ ಸಿಗಲಿ, ಮಾನವೀಯತೆ ಎಲ್ಲದರಕ್ಕಿಂತ ಅಗ್ರಸಾಲಿನ ಮನುಜನ ಆಸ್ತಿ ಎನ್ನುವುದನ್ನು ನಾವು ಮರೆಯಬಾರದು, ನಾವೆಷ್ಟೇ ಪ್ರಜ್ಞಾವಂತ-ಪ್ರಬುದ್ದರೇ ಆಗಿರಲಿ, ನಮ್ಮಗಳ ಸ್ಟೇಟಸ್, ಹಿರಿಮೆ-ಗರಿಮೆಗಳೇನೆ ಇರಲಿ, ನಾವು ಎಷ್ಟೇ ಮಡಿವಂತಿಕೆಯವರಾಗಿರಲಿ, ಸಿರಿವಂತಿಕೆಯ ಗದ್ದಿಗೆಯಲ್ಲಿಯೇ ಕುಳಿತಿರಲಿ, ತಲೆಯೊಳಗೆ ಒಂದು ಸುತ್ತು ಸಡಿಲವಾಯ್ತು ಎಂದರೆ ಎಲ್ಲವೂ ವ್ಯರ್ಥ-ಅನರ್ಥಗಳೇ ಆಗುತ್ತವೆ, ಇಂತಹ ವಾಸ್ತವದೊಂದಿಗೆ ಕೊನೆಯದಾಗಿ ಇಕ್ಬಾಲ್‌ನ ಪರಿವೆಗಳಿಲ್ಲದ ಪ್ರಜ್ಞಾಹೀನ ಹೆಜ್ಜೆಗಳು, ಎಲ್ಲರ ಬದುಕಿಗೊಂದು ಪಾಠವೇ ಅಲ್ಲವೇ. ಆತನನ್ನ ನೋಡಿ ಮನಸು ಕೇಳಲಿಲ್ಲ ಇಲ್ಲಿ ಲಗತ್ತಿಸಿದ್ದೇನೆ.

Gara Srinivas

Gara Srinivas

Leave a comment

error: Content is protected !!