I ಶಿವಮೊಗ್ಗದ I ನಟೋರಿಯಸ್ ಕಾಡಾ ಕಾರ್ತಿಕನ ಸಹಚರ I ಇಸ್ಪೀಟ್ ನರಸಿಂಹನ ಬೀಕರ ಕೊಲೆ I
ಶಿವಮೊಗ್ಗ : ಹೋರಾಟಗಳ ನಗರಿ ಈ ಹೊತ್ತಿಗೆ ಹತ್ಯೆಗಳ ನೆಲೆಯಾಗಿದೆ, ಜುಗಾರಿ ಅಡ್ಡೆಗಳಾಗಿದೆ, ಅಕ್ರಮ ಚಟುವಟಿಕೆಗಳ ಕೇಂದ್ರ ಬಿಂದುವಾಗಿದೆ, ಇದಕ್ಕೆ ಪೊಲೀಸರು ಹೊಣೆನಾ..? ಅಥವಾ ರಾಜಕಾರಣಿಗಳು ಕಾರಣನಾ..? ಎನ್ನುವ ತುಲನೆ ಆಗಬೇಕಾದ ಜರೂರಿಯಿದೆ, ಶಿವಮೊಗ್ಗ ಜಿಲ್ಲೆ ಏಳು ತಾಲ್ಲೂಕುಗಳನ್ನು ಸುತ್ತುವರೆದುಕೊಂಡಿರುವ ವ್ಯಾಪಕವಾಗಿ ವಿಸ್ತಾರವಾಗಿದೆ, ಯಾವುದೇ ತಾಲ್ಲೂಕುಗಳಲ್ಲಿ ಪ್ರಕರಣ ಘಟಿಸಿದರು ಅದು ಶಿವಮೊಗ್ಗದ ಹೆಸರು ತೇಲಿ ಬರುತ್ತದೆ, ಹೀಗಾಗಿ ಇತ್ತೀಚೆಗಷ್ಟೆ ಇದೇ ಊರಿನ ಕಂಚಿಬಾಗಿಲಿನ ಚೌಡಮ್ಮ ದೇವಳದಲ್ಲಿ ಲಾಂಗ್ ಪೂಜೆ ಮಾಡಿಸಿ, ಮುಹೂರ್ತ ಫಿಕ್ಸ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿಕೊಂಡಿದ್ದ ವೀಡಿಯೋದಲ್ಲಿ ಭಾರಿಯೇ ಹವಾ ತೋರಿಸಿದ್ದ ವಿಶ್ವನಾಥ್ ಯಾನೆ ಮುದ್ದೆ, ಭದ್ರಾವತಿಯ ಸೀಗೆಬಾಗಿ ಚಹಾ ಅಂಗಡಿಯಲ್ಲಿ ಪ್ರತಿ ಮುಹೂರ್ತ ಫಿಕ್ಸ್ ಮಾಡಿದ್ದ ಇಸ್ಪೀಟ್ ಪ್ರಶಾಂತ್ ಯಾನೆ ಗಾಂಧಿ ಹಾಗೂ ಆತನ ಗುಂಪು ಬಿಸಿರಕ್ತ ಬಸಿದು ನೆಲಕ್ಕುರಳಿಸಿತ್ತು, ಅದಾಗಲು ಈ ಘಟನೆ ಕುರಿತಾಗಿ ಹೊರ ಊರಿನಲ್ಲಿ ಭದ್ರಾವತಿಯ ಬದಲಿಗೆ ಶಿವಮೊಗ್ಗದ ಹೆಸರು ಮೊಹರಾಗಿ ಬಂತು, ಇಂತಹ ನಟೋರಿಯಸ್ ವಿಶ್ವ ಯಾನೆ ಮುದ್ದೆಯನ್ನು ಕಾಂಗ್ರೆಸ್ ಲೀಡರ್ ಎಂದು ಬೊಬ್ಬಿಟ್ಟಿದ್ದ ವೈಟ್ ಕಾಲರ್ ಬಸವೇಶ ತನ್ನ ಮೂಲಕ ಅಕ್ರಮ ಚಟುವಟಿಕೆಯ ಪೋಷಣೆಯ ನೆರಳನ್ನು ಕಾಪಿಟ್ಟುಕೊಳ್ಳಲು ಹಲ್ಲೆಗೊಳಗಾದ ಮುದ್ದೆಯಂತಹವರನ್ನು ಬಳಸಿಕೊಳ್ಳುತ್ತಿದ್ದ ಎನ್ನುವುದು ಕೂಡ ಆತನೇ ಸಾಬೀತುಪಡಿಸಿಕೊಂಡಿದ್ದಾನೆ,
ಅಸಲಿಗೆ ನಿನ್ನೆ ನಡೆದ ಶಿವಮೊಗ್ಗದ ಬೀಕರ ಮರ್ಡರ್ ಹಾಗೂ ಭದ್ರಾವತಿಯ ವಿಶ್ವ ಯಾನೆ ಮುದ್ದೆಯ ಮೇಲೆ ಬಿದ್ದ ಮಚ್ಚಿನೇಟುಗಳು ಒಂದೇ ತರಹನಾಗಿದೆ, ಇದೇ ವೈಟ್ ಕಾಲರ್ ಬಸವೇಶನ ನೆರಳಲ್ಲಿದ್ದವನು ಇಸ್ಪೀಟ್ ಅಡ್ಡೆಯಲ್ಲಿ ಕೊಲೆಯಾಗಿ ಹೋಗಿದ್ದವನು ರೌಡಿ ಲೀಸ್ಟ್ನಲ್ಲಿದ್ದ ಇಸ್ಪೀಟ್ ನರಸಿಂಹ, ಶಿವಮೊಗ್ಗದ ಬಂಕ್ ಬಾಲು ಸಹಚರನಾಗಿದ್ದ, ಕ್ರೈಂಗಳ ದುಖಾನ್ ಮಾಡಿಕೊಂಡು ಎದುರು ಗ್ಯಾಂಗ್ಗಳ ವಿರುದ್ದ ಎತ್ತಿಕಟ್ಟುವ ಚಾಳಿಯಲ್ಲಿದ್ದ ಇಸ್ಪೀಟ್ ನರಸಿಂಹ, ಸೀಗೆಹಟ್ಟಿಯ ಅಂಬು ಯಾನೆ ಅನಿಲ್ನನ್ನು ಮುಗಿಸಲು ಸ್ಕೆಚ್ ಕೂಡ ಹಾಕಿದ್ದ, ಅಲ್ಲದೆ ಹಂದಿ ಅಣ್ಣಿ ಮರ್ಡರ್ ಕೇಸಿನಲ್ಲಿರುವ ಕಾಡಾ ಕಾರ್ತಿಕನೊಂದಿಗೆ ಚರ್ಚೆಯು ಆಗಿತ್ತು, ಕಾಡಾ ಕೂಡ ಇದೇ ಭದ್ರಾವತಿಯ ವೈಟ್ ಕಾಲರ್ ಬಸವೇಶನಿಗೆ ಆಪ್ತನಾಗಿ ಗುರುತಿಸಿಕೊಂಡಿದ್ದಾನೆ, ಈ ಭೂಗತ ರಿಂಗ್ ಮೀಟಿಂಗ್ಗಳು ನಡೆಯುತ್ತಿರುವ ಪಕ್ಕಾ ಮಾಹಿತಿಯ ಹಿನ್ನಲೆಯಲ್ಲಿ ಜೊತೆಯಲ್ಲಿದ್ದವನು, ಗುಂಪು ಬಿಟ್ಟು ಬೇರೆ ಗುಂಪು ಸೇರಿಕೊಂಡು ತನಗೆ ಸ್ಕೆಚ್ ಹಾಕಿಕೊಂಡು ಇಸ್ಪೀಟ್ ದಂಧೆಯಲ್ಲಿ ಕಾಸು ಮಾಡಿಕೊಂಡು ಓಡಾಡಿಕೊಂಡಿದ್ದನೆ, ಕಳೆದ ಒಂದು ವರುಷದಿಂದ ಶಿವಮೊಗ್ಗ ಬಿಟ್ಟು ಹೊರ ಊರಿನಲ್ಲಿದ್ದರು, ತನ್ನ ವಿರುದ್ದ ಹಗೆಗಳಿಂದ ಮುಹೂರ್ತ ಇಡುತ್ತಿದ್ದಾನೆ ಎನ್ನುವುದೇ ನಿನ್ನೆಯ ಬೀಕರ ಹತ್ಯೆಗೆ ಕಾರಣವಾಗಿದೆ ಎನ್ನುವುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ,
ಎಂದಿನಂತೆ ಬೋಳು ಕುರುಚಲು ತಲೆಹೊತ್ತುಕೊಂಡು ಪಾರಿವಾಳ ಮಲ್ಲೇಶ್ ಕೊಲೆಯ ಪಾತಕಿಯಾದ ‘ಪಾತಾಳಿ’ ಹಾಗೂ ಆತನ ಗುಂಪು ನಡೆಸುತ್ತಿದ್ದ ಗಾಂಧಿಬಜಾರ್ ಹಾಗೂ ಲಷ್ಕರ್ ಮೊಹಲ್ಲಾ ನಡುವೆ ಇರುವ ಕರಿಯಮ್ಮ ದೇವಿ ರಸ್ತೆಯ ಮೂಲೆ ಮನೆಯೊಂದರಲ್ಲಿ ಅನಧಿಕೃತ ಜುಗಾರಿ ಇಸ್ಪೀಟ್ ಅಡ್ಡೆಗೆ, ನೈಂಟಿಗಳ ಎಣ್ಣೆ ಹೊಡೆದು ಇಸ್ಪೀಟ್ ನರಸಿಂಹ, ಎಲೆ ಹಾಕಲು ಬಂದಿದ್ದಾನೆ ಇನ್ನೇನು ಸೀಗೆಹಟ್ಟಿಯ ಅನಿಲ್ ಯಾನೆ ಅಂಬು ಎದುರಾಗುತ್ತಾನೆ, ಎನ್ನುವ ತುಸು ಸುಳಿಯಿಲ್ಲದೆ, ಕೂತಿದ್ದವನಿಗೆ ಜವರಾಯನಾಗಿ ಅಂಬು ಎದುರಾಗಿದ್ದಾನೆ, ಜೊತೆಯಲ್ಲಿದ್ದವರ ಕೈಯಲ್ಲಿದ್ದ ಲಾಂಗ್ಗಳ ಬೀಸೋ ಒಡೆತಕ್ಕೆ ಜೂಜು ಜುಗಾರಿಯಲ್ಲಿ ಕೂತಿದ್ದವರು ಪೇರಿ ಕೀಳುತ್ತಾರೆ, ಕಾಲು ಹಿಡಿದು ತಪ್ಪಾಯ್ತು, ಎಂದು ಜೀವವಿಡಿದು ಬೇಡಿಕೊಳ್ಳುತ್ತಿದ್ದ ಎಂದು ಜುಗಾರಿಯಲ್ಲಿ ಕೂತಿದ್ದವರು ಸಾರ್ವಜನಿಕವಾಗಿ ವದರಿದ್ದಾರೆ, ಇನ್ನೂ ಟೈಮ್ ಫಿಕ್ಸ್ ಮಾಡಿಕೊಂಡಿಯೇ ಬಂದವರು ಎರಡು ಕೈಗಳನ್ನು ಲ್ಯಾಪ್ಸ್ ಮಾಡಿದ್ದಾರೆ, ತಲೆಗೆ ಬಿದ್ದ ಮಚ್ಚಿನೇಟುಗಳು ಛಿದ್ರಗೊಳಿಸಿ, ನೆತ್ತರು ಚಿಮ್ಮಿಸಿದೆ, ಹೀಗೆ ಸಿಕ್ಕ, ಸಿಕ್ಕ ಕಡೆಯಲ್ಲಾ ಲಾಂಗ್ಗಳಿಂದ ಹಲ್ಲೆ ಮಾಡಿರುವ ಗುಂಪು, ಇಸ್ಪೀಟ್ ನರಸಿಂಹನ ಕೊನೆ ಅಧ್ಯಾಯ ಬರೆದಿದ್ದಾರೆ,
ಅತೀವ ಹಲ್ಲೆಗೊಳಗಾಗಿ ನೆತ್ತರು ಬಸಿದುಕೊಂಡು ರಕ್ತದ ಮಡುವಿನಲ್ಲಿ ಬಿದ್ದ ರೀತಿಗೆ, ಇಡೀ ಭೂಗತ ಲೋಕವೇ ತಲ್ಲಣಿಸಿದೆ, ಅಸಲಿಗೆ ಕಳೆದ ತಿಂಗಳುಗಳಿಂದಲೇ ಈತನ ಮೇಲಿನ ಹಲ್ಲೆಯ ಮುನ್ಸೂಚನೆ ಇತ್ತು, ಪೊಲೀಸರು ಕೂಡ ತಿಳಿಸಿದ್ದರು, ಆದರೂ ಆತನೇ ಹೆಣೆದುಕೊಂಡ ಸ್ಕೆಚ್ನಲ್ಲಿಯೇ ಇಂದು ಹತನಾಗಿದ್ದಾನೆ, ಇನ್ನೂ ಕಳೆದೆರೆಡು ವರ್ಷಗಳಿಂದ ಇಲ್ಲಿ ಅನಧಿಕೃತವಾಗಿ ಇಸ್ಪೀಟ್ ಅಡ್ಡೆ ಬಹಿರಂಗವಾಗಿಯೇ ನಡೆಯುತ್ತಿದ್ದರು ತುಸು ದೂರದಲ್ಲಿರುವ ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರಿಗೆ ತಿಳಿದಿರಲಿಲ್ಲ ಎನ್ನುವುದು ಹಾಸ್ಯಸ್ಪದವಾಗಿದೆ,
ಏನೇ ಇರಲಿ ಎಸ್ಪಿ ನಿಖಿಲ್ರವರು ಅಧಿಕೃತ ಇಸ್ಪೀಟ್ ಅಡ್ಡೆಗಳಿಗೆ ಅನುಮತಿ ನೀಡದೇ ಕಡಿವಾಣ ಹಾಕಿದ್ದರು, ಇಸ್ಪೀಟ್ ಅಡ್ಡೆಗಳು ಶಿವಮೊಗ್ಗ, ಭದ್ರಾವತಿ, ಹೊಳೆಹೊನ್ನೂರು, ಶಿರಾಳಕೊಪ್ಪ, ತೀರ್ಥಹಳ್ಳಿಯಲ್ಲಿ ಸಾರ್ವಜನಿಕ ಸಂಪರ್ಕವಿರದ ಗೋಡೋನ್ಗಳಲ್ಲಿ, ಮನೆಗಳಲ್ಲಿ, ಫಾರಂ ಹೌಸ್ಗಳಲ್ಲಿ ಹಾಗೂ ಶಿವಮೊಗ್ಗದ ಪ್ರತಿಷ್ಠಿತ ಲಾಡ್ಜ್ಗಳಲ್ಲಿ, ಹೈಸ್ಟ್ರೈಕ್ ಇಸ್ಪೀಟ್ ದಂಧೆ ನಡೆಯುತ್ತಲೇ ಇದೆ, ಹೀಗೆ ಬಾಡಿಗೆ ಪಡೆದು ದಂಧೆ ಇಟ್ಟುಕೊಳ್ಳುವ ಜುಗಾರಿಗಳ ಮೇಲೆ ಕೇಸು ಅಷ್ಟೆ ಅಲ್ಲ, ಬಾಡಿಗೆ ನೀಡಿದ ಮಾಲೀಕರು ಮೇಲು ಪ್ರಕರಣ ದಾಖಲಿಸಬೇಕು ಹಾಗೂ ಒಂದಿಷ್ಟು ನಿಖರ ಮಾಹಿತಿಗಳಂತೆಯೇ ಶಿವಮೊಗ್ಗ ಜಿಲ್ಲೆಯನ್ನು ಜುಗಾರಿ ಜಿಲ್ಲೆಯನ್ನಾಗಿ ಪರಿವರ್ತಿಸಿರುವ ಭದ್ರಾವತಿಯ ವೈಟ್ ಕಾಲರ್, ನಟೋರಿಯಸ್ ರೌಡಿ ಎಲಿಮೆಂಟ್ಗಳು, ಜುಗಾರಿಗಳು, ಪುಡಿ ಕಿಡಿಗೇಡಿಗಳು, ಹಾಗೂ ರೌಡಿ ಲೀಸ್ಟ್ನಲ್ಲಿರುವ ಬಹುತೇಕ ಯಾನೆಗಳನ್ನು ಕರೆಯಿಸಿ ರಿಂಗ್ ಮೀಟಿಂಗ್ ಮಾಡಿಕೊಂಡು ಇಸ್ಪೀಟ್ ದಂಧೆಯನ್ನು ಪೋಷಿಸುತ್ತಿರುವುದು ಅನಾಹುತದ ಹೆಜ್ಜೆಗಳಾಗಿದೆ, ಈ ಎಲ್ಲಾ ಅಕ್ರಮ ಚಟುವಟಿಕೆಗಳಿಂದ ದಿನವಹಿ ೨೫ಲಕ್ಷ ರೂಪಾಯಿ ಆಮ್ದಾನಿ ಇದೇ ವೈಟ್ ಕಾಲರ್ ತಿಜೋರಿಗೆ ಸೇರಿಕೊಳ್ಳುತ್ತಿರುವುದು ಕೂಡ ಜುಗಾರಿ ಫೀಲ್ಡ್ನ ಕಡತದಲ್ಲಿದೆ,
ಇನ್ನೂ ನಿನ್ನೆ ಗಾಂಧಿಬಜಾರ್ ಹಾಗೂ ಲಷ್ಕರ್ ಮೊಹಲ್ಲಾ ನಡುವೆ ಇರುವ ಕರಿಯಮ್ಮ ದೇವಿ ರಸ್ತೆಯ ಮೂಲೆ ಮನೆಯೊಂದರಲ್ಲಿ ಬರ್ಬರವಾಗಿ ಅನಾಹುತಕಾರಿ ನಟೋರಿಯಸ್ ಇಸ್ಪೀಟ್ ನರಸಿಂಹ, ನನ್ನು ಹತ್ಯೆ ಮಾಡಿದ್ದ ಅಂಬು ಅಲಿಯಾಸ್ ಅನಿಲ್, ಮಧು, ಕತ್ತೆ ಕಾರ್ತಿಕ್, ರವಿ ಹಾಗೂ ಶಬರೀಶ್ ಎಂಬುವ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಕೋಟೆ ಠಾಣಾ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




