Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರಂತರ ವೈಫಲ್ಯಕ್ಕೆ I ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಾಗ್ದಾಳಿ I

 I ಆಡಳಿತದಲ್ಲಿ ಸಂಪೂರ್ಣ ಶೂನ್ಯ I ತಮ್ಮ ಕುಟುಂಬದಿಂದ ‘ರಿಜಿಸ್ಟರ್’ ಆದ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ ಜಮೀನು ಹಗರಣ ಹಾಗೂ ಆರ್‌ಎಸ್‌ಎಸ್ ನಿಂದನೆಯಲ್ಲೇ ಧನ್ಯ I ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರಂತರ ವೈಫಲ್ಯಕ್ಕೆ I ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ…

 I ಆಡಳಿತದಲ್ಲಿ ಸಂಪೂರ್ಣ ಶೂನ್ಯ I ತಮ್ಮ ಕುಟುಂಬದಿಂದ ‘ರಿಜಿಸ್ಟರ್’ ಆದ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ ಜಮೀನು ಹಗರಣ ಹಾಗೂ ಆರ್‌ಎಸ್‌ಎಸ್ ನಿಂದನೆಯಲ್ಲೇ ಧನ್ಯ I ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರಂತರ ವೈಫಲ್ಯಕ್ಕೆ I ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಾಗ್ದಾಳಿ I

ಶಿವಮೊಗ್ಗ: ರಾಜಕೀಯದಲ್ಲಿ ‘ಕೆಲಸ ಮಾಡದ ಎತ್ತಿಗೆ ಗಂಟೆ ಜಾಗಟೆ ಹೆಚ್ಚಂತೆ’ ಎಂಬ ಗಾದೆಮಾತಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಕಾಮಾಲೆ ಕಣ್ಣಿಗೆ ಕಂಡಿದ್ದೆಲ್ಲಾ ಹಳದಿ ಎನ್ನುವಂತಹ ನಿಮ್ಮ ಈ ಮನಃಸ್ಥಿತಿ ಹಾಗೂ ಸದಾ ರಾಷ್ಟ್ರಪ್ರೇಮಿ ಸಂಘಟನೆಯನ್ನು ಕಂಡು ಹಪಹಪಿಸುವ ಭ್ರಾಂತಿಯಿಂದ ನಿಮಗೆ ಮುಕ್ತಿ ಸಿಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹೊಸ ಜವಾಬ್ದಾರಿ ಸಿಕ್ಕಾಗಲಾದರೂ ನಿಮ್ಮ ಮನಃಸ್ಥಿತಿ ಬದಲಾಗಬಹುದು ಎಂಬ ನಾಡಿನ ಜನರ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ. ಸ್ವಂತ ಇಲಾಖೆಯ ನಿರ್ವಹಣೆಯ ಮಾಡದೆ, ಸದಾ ರಾಷ್ಟ್ರಪ್ರೇಮಿ ಸಂಘಟನೆಯನ್ನು ನಿಂದಿಸುವುದನ್ನೇ ನೀವು ಸಾಧನೆ ಎಂದುಕೊಂಡಿರುವುದು ಅಸಹ್ಯಕರ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ  ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, “ಕಳೆದ ಮೂರು ವರ್ಷಗಳ ಕಾಲ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ನಿಮ್ಮ ಕೊಡುಗೆ ಕೇವಲ ಶೂನ್ಯ. ಈ ಮೂರು ವರ್ಷದ ಅವಧಿಯಲ್ಲಿ ಇಡೀ ಕರ್ನಾಟಕದಲ್ಲಿ ನೀವು ಎಷ್ಟು ಕಿಲೋಮೀಟರ್ ಗ್ರಾಮೀಣ ರಸ್ತೆಯನ್ನು ನಿರ್ಮಿಸಿದ್ದೀರಿ ಎಂಬ ಪ್ರಶ್ನೆಗೆ ನಿಮ್ಮ ಬಳಿ ಇಂದಿಗೂ ಉತ್ತರವಿಲ್ಲ. ಕಾಂಗ್ರೆಸ್ ಸರ್ಕಾರವು ತನ್ನ ವೋಟ್ ಬ್ಯಾಂಕ್ ರಾಜಕಾರಣದ ಗ್ಯಾರಂಟಿ ಯೋಜನೆಗಳಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಾಗಿದ್ದ ಹಕ್ಕುಬದ್ಧ SCSP-TSP ಕೋಟ್ಯಂತರ ರೂಪಾಯಿ ಹಣವನ್ನು ನಡುಬೀದಿಯಲ್ಲಿ ದುರ್ಬಳಕೆ ಮಾಡಿಕೊಂಡಾಗ, ದಲಿತರ ಪರ ಎಂದು ಬಡಬಡಿಯುವ ನೀವು ಒಂದೇ ಒಂದು ಉಸಿರೆತ್ತದೆ, ನಿಮ್ಮ ಸ್ವಂತ ಜಿಲ್ಲೆಯಾದ ಕಲಬುರ್ಗಿ ಆರ್ಥಿಕವಾಗಿ ಹಿಂದುಳಿದಾಗ, ಶಿಕ್ಷಣ ಇಲಾಖೆಯ ಕಳಪೆ ಪರೀಕ್ಷಾ ಫಲಿತಾಂಶಗಳಿಂದ ಯುವಕರ ಭವಿಷ್ಯ ಕತ್ತಲಾದಾಗ ಮಾತನಾಡದ ನೀವು, ಕೇವಲ ಆರ್‌ಎಸ್‌ಎಸ್ ವಿರುದ್ಧ ನಾಲಗೆ ಹರಿಬಿಡುವುದರಲ್ಲಿ ಮಾತ್ರ ‘ಮಾತನಾಡುವವನೇ ಮಹಾಶೂರ’ ಎಂಬಂತೆ ಬೀಗುತ್ತಿರುವುದು ನಿಮ್ಮ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸುತ್ತಲೂ ಇರುವ ಭ್ರಷ್ಟಾಚಾರದ ಜ್ವಲಂತ ಸಾಕ್ಷಿಗಳು ಇಡೀ ರಾಜ್ಯಕ್ಕೆ ಕಾಣಿಸುತ್ತಿವೆ. ಕಿಯೋನಿಕ್ಸ್ (KEONICS) ಸಂಸ್ಥೆಯಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿಗಳ ಲೂಟಿ ಮತ್ತು ಪರ್ಸಂಟೇಜ್ ಕಮಿಷನ್ ದಂಧೆಯ ಕರಾಳ ಹಗರಣಕ್ಕೆ ಸಂಬಂಧಿಸಿದಂತೆ ನಿಮ್ಮ ಮೇಲಿರುವ ಗಂಭೀರ ಆರೋಪಗಳಿಗೆ ನೀವು ಇಂದಿಗೂ ಉತ್ತರಿಸಿಲ್ಲ. ಇಲಾಖೆಯ ಪ್ರಭಾವ ಬಳಸಿ ಸ್ವಂತ ಕುಟುಂಬದ ಸದಸ್ಯರಿಂದ ‘ರಿಜಿಸ್ಟರ್ಡ್’ ಆದ ‘ಸಿದ್ಧಾರ್ಥ ವಿಹಾರ ಟ್ರಸ್ಟ್’ಗೆ ಕಾನೂನುಬಾಹಿರವಾಗಿ ಅತ್ಯಂತ ಬೆಲೆಬಾಳುವ ಕೆಐಎಡಿಬಿ (KIADB) ಜಮೀನನ್ನು ಹಂಚಿಕೆ ಮಾಡಿಕೊಂಡ ಅಧಿಕಾರ ದುರ್ಬಳಕೆಯ ಅಕ್ರಮ ನಿಮ್ಮ ಸ್ವಾರ್ಥ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅಷ್ಟೇ ಅಲ್ಲದೆ, ರಾಜ್ಯದ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಕರ ಭವಿಷ್ಯವನ್ನು ಹರಾಜಿಗಿಟ್ಟ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (PSI) ನೇಮಕಾತಿ ಹಗರಣದ ಅಕ್ರಮಗಳು ನಿಮ್ಮದೇ ಕಲಬುರ್ಗಿ ಜಿಲ್ಲೆಯ ನೆಲದಲ್ಲಿ ವ್ಯವಸ್ಥಿತವಾಗಿ ನಡೆದಿದ್ದರೂ, ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇಡೀ ಭ್ರಷ್ಟ ಜಾಲಕ್ಕೆ ರಾಜಕೀಯ ರಕ್ಷಣೆ ನೀಡುತ್ತಿರುವುದು ನಿಮ್ಮ ಆಡಳಿತದ ನೈಜ ಮುಖವನ್ನು ಜಗತ್ತಿಗೆ ತೋರಿಸಿದೆ,” ಎಂದು ಶಾಸಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗೃಹ ಸಚಿವರಾಗಿ ಅವರ ಸದ್ಯದ ವೈಫಲ್ಯಗಳನ್ನು ಬಯಲಿಗೆಳೆದ ಶಾಸಕರು, “ನಾಗರಿಕರ ಸುರಕ್ಷತೆ ಕಾಯಬೇಕಾದ ಗೃಹ ಇಲಾಖೆಯ ಜವಾಬ್ದಾರಿ ಈಗ ನಿಮ್ಮ ಮುಂದಿದೆ. ಆದರೆ ಪ್ರಸ್ತುತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಭ್ರಷ್ಟಾಚಾರದ ಮಡುವಿನಲ್ಲಿ ಮುಳುಗಿಹೋಗಿರುವ ಪೊಲೀಸ್ ಇಲಾಖೆಯನ್ನು ತಹಬದಿಗೆ ತರುವ ಕನಿಷ್ಠ ತಾಕತ್ತು ನಿಮಗಿಲ್ಲದಂತಾಗಿದೆ. ಅಕ್ಕಪಕ್ಕದ ಅನ್ಯ ರಾಜ್ಯಗಳಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಮಾನ ಹರಾಜಾಗುತ್ತಿದ್ದರೂ ಇಡೀ ಖಾಕಿ ವ್ಯವಸ್ಥೆ ತನ್ನ ಕರ್ತವ್ಯ ಮರೆತು ಮೌನವಾಗಿದೆ. ಇಷ್ಟೆಲ್ಲಾ ಸವಾಲುಗಳು ಕಣ್ಣಮುಂದಿದ್ದರೂ, ಜವಾಬ್ದಾರಿಯುತ ಸ್ಥಾನದಲ್ಲಿ ಕುಳಿತು ಆರ್‌ಎಸ್‌ಎಸ್ ಬಗ್ಗೆ ನಿರಂತರವಾಗಿ ವ್ಯರ್ಥ ಪ್ರಲಾಪ ಮಾಡಿಕೊಳ್ಳುತ್ತಿರುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ನಿಲ್ಲಿಸಿ,” ಎಂದು ಎಚ್ಚರಿಸಿದ್ದಾರೆ.

“ನಿಮ್ಮ ಸಚಿವಾಲಯದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ದೇಶಭಕ್ತ ಸಂಘಟನೆಯನ್ನು ಗುರಾಣಿ ಮಾಡಿಕೊಳ್ಳುವ ರಾಜಕಾರಣ ಇನ್ನು ನಡೆಯುವುದಿಲ್ಲ. ನಿಮ್ಮ ಅಪ್ರಬುದ್ಧ ಹೇಳಿಕೆಗಳಿಂದ ರಾಜ್ಯದ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರೇ, ಸುಳ್ಳು ಆಪಾದನೆಗಳನ್ನು ಬಿಟ್ಟು ಗೃಹ ಇಲಾಖೆಯ ಗಂಭೀರ ಕರ್ತವ್ಯದ ಕಡೆಗೆ ಗಮನ ಹರಿಸಿ, ಇಲ್ಲದಿದ್ದರೆ ನಿಮ್ಮ ಈ ಬೇಜವಾಬ್ದಾರಿಯುತ ಆಡಳಿತಕ್ಕೆ ನಾಡಿನ ಜನತೆಯೇ ಬೀದಿಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ,” ಎಂದು  ಎಸ್.ಎನ್. ಚನ್ನಬಸಪ್ಪ ಅವರು ತಮ್ಮ ಪ್ರಕಟಣೆಯಲ್ಲಿ ಸವಾಲು ಹಾಕಿದ್ದಾರೆ.

 

Gara Srinivas

Gara Srinivas

Leave a comment

error: Content is protected !!