Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಜು.3 ರಂದು ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಸ್ವರ್ಣ ಕವಚ I ರಜತಾ ದ್ವಾರ ಸಮರ್ಪಣಾ ಸಮಾರಂಭ I

I ಜು.3 ರಂದು ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಸ್ವರ್ಣ ಕವಚ I ರಜತಾ ದ್ವಾರ ಸಮರ್ಪಣಾ ಸಮಾರಂಭ I ಶಿವಮೊಗ್ಗ : ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಸ್ವರ್ಣ ಮುಖ ಕವಚ ಹಾಗೂ ರಜತಾದ್ವಾರ ಸಮರ್ಪಣಾ…

I ಜು.3 ರಂದು ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಸ್ವರ್ಣ ಕವಚ I ರಜತಾ ದ್ವಾರ ಸಮರ್ಪಣಾ ಸಮಾರಂಭ I

ಶಿವಮೊಗ್ಗ : ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಸ್ವರ್ಣ ಮುಖ ಕವಚ ಹಾಗೂ ರಜತಾದ್ವಾರ ಸಮರ್ಪಣಾ ಸಮಾರಂಭ ಜು.3 ರಂದು ಬೆಳಿಗ್ಗೆ 12 ಗಂಟೆಗೆ ದೇವಸ್ಥಾನದ ಆವರಣದಲ್ಲಿ ನೆರವೇರಲಿದೆ.


ಹೊರನಾಡು ಅನ್ನಪೂರ್ಣ ದೇವಸ್ಥಾನದ ಧರ್ಮದರ್ಶಿ ಡಾ.ಜಿ ಭೀಮೇಶ್ವರ ಜೋಷಿ ರವರ ದಿವ್ಯಾ ಸಾನಿಧ್ಯದಲ್ಲಿ ಹಾಗೂ ಅವರ ಅಮೃತ ಹಸ್ತದಿಂದ ದೇವಿಗೆ ಸಮರ್ಪಣಾ ಕಾರ್‍ಯಕ್ರಮ ನಡೆಯಲಿದೆ.
ಕಾರ್‍ಯಕ್ರಮದ ಪೂರ್ವಭಾವಿಯಾಗಿ ಜೂ.30 ರಿಂದ ಜು.2 ರವರೆಗೆ ವಿವಿಧ ಧಾರ್ಮಿಕ ಕಾರ್‍ಯಕ್ರಮಗಳು , ಗಣಪತಿ ಪೂಜೆ , ಪೂಣ್ಯಾಹ ವಾಚನ ಸೇರಿದಂತೆ ವಿವಿಧ ಕಾರ್‍ಯಕ್ರಮಗಳು ನೆರವೇರಲಿದೆ.
ಜು.3 ರಂದು ಬೆಳಿಗ್ಗೆ  8.30ಕ್ಕೆ ಗಣಪತಿ ಪೂಜೆಯೊಂದಿಗೆ ಸಮರ್ಪಣಾ ಕಾರ್‍ಯಕ್ರಮ ಆರಂಭವಾಗಲಿದ್ದು ಸಾಮೂಹಿಕ ಲಲಿತ ಹೋಮವನ್ನ ದೇವಸ್ಥಾನದ ಪ್ರದಾನ ಆರ್ಚಕ ಸಂತೋಷ್ ಭಾರದ್ವಾಜ್ ನಡೆಸಿಕೊಡಲಿದ್ದಾರೆ.

ಬೆಳಿಗ್ಗೆ 11.30 ಕ್ಕೆ ಪೂರ್ಣಾಹುತಿ ಹಾಗೂ ಅಮ್ಮನವರಿಗೆ ಬಂಗಾರದ ಮುಖ ಕವಚ ಸಮರ್ಪಣೆ ,ಗರ್ಭಗುಡಿಯ ರಜತದ್ವಾರ ಸಮರ್ಪಣೆ ನಡೆಯಲಿದ್ದು ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ , ಸಭಾ ಕಾರ್‍ಯಕ್ರ ಮ ನೆರವೇರಲಿದೆ. ಸಭಾ ಕಾರ್‍ಯಕ್ರಮದಲ್ಲಿ  ಡಾ.ಭೀಮೇಶ್ವರ ಜೋಷಿ ಆರ್ಶೀವಚನ ನೀಡಲಿದ್ದು , ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್ . ಕೆ . ಮರಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

        ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಶಾಸಕ ಎಸ್ . ಎನ್ . ಚನ್ನಬಸಪ್ಪ ,ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ,ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ , ಸಮಾಜ ಸೇವಕ ಎಂ.ಶ್ರೀಕಾಂತ್ , ಇವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಪ್ರಧಾನ ಕಾರ್‍ಯದರ್ಶಿ ಎನ್ . ಮಂಜುನಾಥ್ ತಿಳಿಸಿದ್ದಾರೆ. ಈ ಕಾರ್‍ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದ್ದಾರೆ.

Gara Srinivas

Gara Srinivas

Leave a comment

error: Content is protected !!