I ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಫೌಂಡೇಶನ್ I ಎನ್ನುವ ಸಮಾನಂತರ ಶೀರ್ಷಿಕೆಯಲ್ಲಿ I ಮತ್ತೊಂದು ಸಂಸ್ಥೆ ನೊಂದಣಿ ಮಾಡದಿರಲು I ಮನವಿ I
ಶಿವಮೊಗ್ಗ : ನಗರದಲ್ಲಿ ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಫೌಂಡೇಶನ್ ಎನ್ನುವ ಸಂಸ್ಥೆಯನ್ನು ನೊಂದಣಿ ಮಾಡಿಸಿದ್ದು, ಈ ಸಂಸ್ಥೆಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಪ್ರವಾಸಗಳ ಮುಖ್ಯ ಉದ್ದೇಶದಲ್ಲಿ ರಚಿತವಾದ ಸಂಸ್ಥೆಯಾಗಿದ್ದು ಕಳೆದ ಒಂದು ತಿಂಗಳಿನಿಂದ ಈ ಕುರಿತಾಗಿ ಚರ್ಚಿಸಿ ಸಭಾ ನಡಾವಳಿಯ ತೀರ್ಮಾನದಂತೆ ಶಿವಮೊಗ್ಗದ ಉಪನೋಂದಣಾಧಿಕಾರಿಗಳಲ್ಲಿ ನೊಂದಾಯಿಸಿರುವ ಸಂಸ್ಥೆಯಾಗಿರುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಪರಮೇಶ್ವರ ಎಲ್.ಕೆ ತಿಳಿಸಿದ್ದಾರೆ,
ಸಮಾಜ ಸೇವೆಯ ಹೆಸರಿನಲ್ಲಿಯು ವರ್ಗಬೇದ, ಆರ್ಥಿಕ ಬೇದ, ರಾಜಕೀಯ ಉದ್ದೇಶಗಳಿಂದ ದುರುಪಯೋಗಪಡಿಸಿ ಕೊಳ್ಳುತ್ತಿರುವ ಒಟ್ಟು ದುರುದ್ದೇಶದ ವಿರುದ್ದ ಪ್ರತ್ಯೇಕವಾಗಿ ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಫೌಂಡೇಶನ್ ಸಂಸ್ಥೆಯನ್ನು ಭಾರತೀಯ ಟ್ರಸ್ಟ್ ಕಾಯ್ದೆ ೧೮೮೨ರ ಅಡಿಯಲ್ಲಿ ನೊಂದಾಯಿಸಿ, ಲಾಭ ರಹಿತ ಸಂಸ್ಥೆಯಾಗಿಸಬೇಕು ಹಾಗೂ ಸಂಪೂರ್ಣವಾಗಿ ವಿವಿಧ ಕ್ರೀಡೆಗಳತ್ತ ಪ್ರಸ್ತುತ ಯುವ ಸಮಾಜವನ್ನು ಸೆಳೆಯಬೇಕು, ಉತ್ತೇಜಿಸಬೇಕು, ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಸ್ತಾರಗೊಳಿಸಿ ಬಹುತ್ವ ವೇದಿಕೆಗಳನ್ನು ರೂಪಿಸಬೇಕು, ಅಧ್ಯಯನಶೀಲ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎನ್ನುವ ಸದುದ್ದೇಶದ ಮಾತ್ರದಿ ಮೊದಲ ಹಂತದಲ್ಲಿ ಮೂರು ಜನ ಟ್ರಸ್ಟಿಗಳ ಮೂಲಕ ನೊಂದಾಯಿಸಿರುವ ಈ ಸಂಸ್ಥೆಯು ಮುಂದಿನ ವಾರದಲ್ಲಿ ಮತ್ತಷ್ಟು ಟ್ರಸ್ಟಿಗಳನ್ನು ಸೇರ್ಪಡೆಗೊಳಿಸಿಕೊಂಡು ಸಂಸ್ಥೆಯ ಮೂಲೋದ್ದೇಶದ ಬಲವರ್ಧನೆಗೆ ಮುಂದಾಗಲಾಗುತ್ತದೆ ಎಂದು ಹೇಳಿದ್ದಾರೆ,
ಇನ್ನೂ ಅತಿ ಮುಖ್ಯವಾಗಿ ಸದರಿ ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಫೌಂಡೇಶನ್ ನೊಂದಾಯಿತ ಸಂಸ್ಥೆಯ ಸಮನಾರ್ಥಕ ಶೀರ್ಷಿಕೆಯಲ್ಲಿ ಉಪನಿಬಂಧಕರ ಕಛೇರಿ, ಉಪನೋಂದಣಾ ಧಿಕಾರಿಗಳ ಕಛೇರಿ, ಮುಖ್ಯ ಅಧಿಕಾರಿಗಳು, ಕಾರ್ಮಿಕ ಇಲಾಖೆಗಳಲ್ಲಿ ಮತ್ತೊಂದು ಸಂಸ್ಥೆಯನ್ನು ನೊಂದಾಯಿಸದಿರಲು ಈ ಮೂಲಕ ಕೋರುತ್ತೇವೆ, ಒಂದು ವೇಳೆ ಇಂತಹದೊಂದು ಪ್ರಯತ್ನ ನಡೆದು ಸಮನಾರ್ಥಕ ಹೆಸರಿನಲ್ಲಿ ನೊಂದಾಯಿಸಲು ಮುಂದಾದರೆ ಅಂತಹವರ ವಿರುದ್ದ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ದೂರು, ದಾವೆ, ಅಥವಾ ಲೋಕಾಯುಕ್ತರಲ್ಲಿ ದಾಖಲಿಸಲು ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಫೌಂಡೇಶನ್ ಮುಂದಾಗುತ್ತದೆ ಎಂದು ಈ ಮೂಲಕ ತಿಳಿಯ ಪಡಿಸುತ್ತದೆ, ಎಂದು ಅವರು ವಿವರಿಸಿದ್ದಾರೆ ಮನವಿಯಲ್ಲಿ ಟ್ರಸ್ಟಿಗಳಾದ ಗಾರಾ. ಶ್ರೀನಿವಾಸ್, ನವೀನ್ ಕುಮಾರ್ ಎನ್.ವಿ ಅವರು ಉಪಸ್ಥಿತರಿದ್ದರು.