Saturday, 19 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ಹಸಿರು, ಸ್ವಚ್ಚ ಮತ್ತು ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ I ಸ್ಬೂಡಾ ಅಧ್ಯಕ್ಷ ಹೆಚ್.ಎಸ್.‌ಸುಂದರೇಶ್ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I
ಸೂರ್ಯಗಗನ

I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I

I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I ಶಿವಮೊಗ್ಗ : ನಗರದ ಗೋಪಾಳದ ಆದಿ ರಂಗಮಾಥ ಸ್ವಾಮಿ ದೇವಳಕ್ಕೆ ಸೇರಿದ ಸರ್ವೇ ನಂಬರ್ 49/1B…

I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I

ಶಿವಮೊಗ್ಗ : ನಗರದ ಗೋಪಾಳದ ಆದಿ ರಂಗಮಾಥ ಸ್ವಾಮಿ ದೇವಳಕ್ಕೆ ಸೇರಿದ ಸರ್ವೇ ನಂಬರ್ 49/1B ರಲ್ಲಿನ 5 ಎಕರೆ 13 ಗುಂಟೆ ಖರಾಬು ಭೂ ಪ್ರದೇಶದ ಮೇಲೆ ನಕಲಿ ದಾಖಲೆಗಳ ಸೃಷ್ಟಿಸಿಕೊಂಡು ಲ್ಯಾಂಡ್ ಲಿಟಿಗೇಶನ್ ಪೋರ್ಜರಿಸ್ಟ್ ಜಾಲ ದಾಂಗುಡಿ ಇಕ್ಕಿರುವುದು, ಇಲ್ಲಿನ ಸ್ಥಳೀಯ ವಾಸಿಗಳ ಕೆಂಗಣ್ಣಿಗೆ ಗುರಿಯಾಗಿದೆ,

ಇದೊಂದು ವ್ಯವಸ್ಥಿತ ಜಾಲವಾಗಿದ್ದು ಗೋಪಾಳದ ಸುತ್ತ-ಮುತ್ತಲಿನಲಿ ಸುಮಾರು ನೂರು ಕೋಟಿ ಮೌಲ್ಯದ ಜಾಗವನ್ನು ಅಕ್ರಮವಾಗಿ ಬೇಲಿ ಸುತ್ತಿ ಕಬ್ಜಾ ಮಾಡಿಕೊಂಡಿರುವುದು, ಭೂ ಕಂದಾಯ ನಿಯಮಗಳನ್ನು ಹಾಗೂ ಜಿಲ್ಲಾಡಳಿತವನ್ನು ಅಣಕಿಸುವಂತೆ ಮಾಡಿದೆ, ಸುಳ್ಳು ನಕ್ಷೆಗಳು, ವರದಿಗಳು, ಇನ್ನೂ ಕೆಲವು ದಾಖಲೆಗಳನ್ನು “ಕೊರಲ್ ಡ್ರಾ” “ಪೋಟೋ ಶಾಪ್ ” ಎನ್ನುವ ಕಂಪ್ಯೂಟರ್ ಸಾಪ್ಟ್ ವೇರ್ ನಲ್ಲಿ ವಾರಸುದಾರಿಕೆ ಬದಲಾವಣೆ ಮಾಡಿಕೊಂಡು ಇದನ್ನೇ ಶಾಮೀಲಾಗಿರುವ ಅಧಿಕಾರಿಗಳ ಮೂಲಕ ದಾಖಲು ಮಾಡುವ ಪೋರ್ಜರಿಸ್ಟ್ ಗಳು ದಾಂಗುಡಿ ಹೆಚ್ಚಿದೆ,

ಅತೀ ಸೂಕ್ಷ್ಮ ಸಂಗತಿಯಾಗಿರುವ ಈ ಪ್ರಕರಣದಲ್ಲಿ ಲ್ಯಾಂಡ್ ಲಿಟಿಗೇಟರ್ ಹಾಗೂ ರೌಡಿ ಎಲಿಮೆಂಟರಿಗಳ ನಡುವೆ ಸ್ಥಳೀಯ ಯುವಕರ ಮಾರಾಮಾರಿ ಆಗುವ ಎಲ್ಲಾ ಲಕ್ಷಣಗಳಿದೆ, ಹೀಗಾಗಿ ಈ ವ್ಯಾಪ್ತಿಯ ಸರಹದ್ದಿನ ತುಂಗಾನಗರ ಪೊಲೀಸ್ ಠಾಣೆಯ ಟಪ್ ಕಾಪ್ ಪೊಲೀಸ್ ಅಧಿಕಾರಿ ಗುರುರಾಜ್ ಕರ್ಕಿ ಅವರು ಹಾಗೂ ಪೊಲೀಸ್ ತಂಡ ಪೆಟ್ರೋಲಿಂಗ್ ಮಾಡಿ ಈಗಾಗಲೇ ಎಂಟ್ರಿ ಕೊಟ್ಟಿರುವ ನಕಲಿ ವಾರಸುದಾರರಾದ ಪೋರ್ಜರಿಸ್ಟ್ ಗಳನ್ನು ಹಾಗೂ ಬೇಲಿ ಸುತ್ತುವ ಗುತ್ತಿಗೆ ಗ್ಯಾಂಗುಗಳನ್ನು ಎಡಮುರಿ ಕಟ್ಟಿದರೆ ಮುಂದಾಗುವ ಅನಾಹುತ ತಪ್ಪಿಸಬಹುದಾಗಿದೆ, ಹಾಗೂ ಆದಿ ರಂಗನಾಥ ಸ್ವಾಮಿ ದೇವಳದ ಜಾಗ ಸುರಕ್ಷಿತಗೊಳಿಸಿದಂತಾಗುತ್ತದೆ ಎನ್ನುವುದು ಗೋಪಾಳದ ಜನತೆಯ ಅಭಿಪ್ರಾಯವಾಗಿದೆ,

ಈಗಾಗಲೇ ಪೋರ್ಜರಿ ದಾಖಲೆಗಳ ಮೂಲಕ ಹಂಗಾಮ ಮಡಗಿರುವ ಎರಡು ಅನಾಹುತಕಾರಿ ಜಾಲದ ಮೇಲೆ ಕಾನೂನು ರಿತ್ಯಾ ಕ್ರಮ ಕೈಗೊಂಡು, ದೇವಳದ ಜಾಗ ದೇವಳಕ್ಕೆ ಉಳಿಸುವ ಜರೂರಿ ಕ್ರಮಗಳ ಹೊಣೆಗಾರಿಕೆ ಜಿಲ್ಲಾಡಳಿತ ಮೇಲಿದೆ, ಇದಾಗದಿದ್ದರೆ ದೇವಳದ ಭಕ್ತರು, ಇಲ್ಲಿನ ಸ್ಥಳಿಯರು ಸೇರಿ ಪೋರ್ಜರಿಸ್ಟ್ ಗುಂಪಿನ ಮೇಲೆ ಮುಗಿ ಬೀಳುವುದು ಹಾಗೂ ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ, ಈಗಾಗಲೇ ಹಿಂದೂ ಪರ ಸಂಘಟನೆಗಳು ಮೊದಲ ಬೈಠಕ್ ನಡೆಸಿದೆ ಎನ್ನುವುದು ತಿಳಿದು ಬಂದಿದೆ,

ನಗರದಲ್ಲಿ ಬೇಲಿ ಸುತ್ತುವ ಗುತ್ತಿಗೆ ಇಟ್ಟುಕೊಂಡಿರುವ ಬುಲೆಟ್ ಯತೀಶ ಮತ್ತೀತರರು ಈ ದೇವಳದ ಮೂಲ ಖರಾಬು ಜಾಗ ಸುಮಾರು ಈ ಹೊತ್ತಿನ ಐವತ್ತು ಕೋಟಿ ಮೌಲ್ಯದ 5ಎಕರೆ 13 ಗುಂಟೆ ಜಾಗದ ಭೂ ಪ್ರದೇಶದ ಕಬ್ಜಾಕ್ಕೆ ಬೇಲಿ ಸುತ್ತಲು, ಸ್ಥಳೀಯರನ್ನು ಕೂಡ ಬೆದರಿಸುವ ಹಂತಕ್ಕೆ ಹೋಗಿರುವ ಘಟನೆ ಜರುಗುತ್ತಿದೆ, ಇನ್ನಾದರೂ ಜಿಲ್ಲಾಧಿಕಾರಿಗಳು, ಜಿಲ್ಲಾರಕ್ಷಣಾಧಿಕಾರಿಗಳು ಗಮನಹರಿಸಲಿ ಹಾಗೂ ಪೋರ್ಜರಿಸ್ಟ್ ಗಳ ಮೇಲೆ ಕಾನೂನು ರಿತ್ಯಾ ಕ್ರಮ ಜರುಗಿಸಲಿ ಎನ್ನುವುದಾಗಿದೆ.

Gara Srinivas

Gara Srinivas

Leave a comment

error: Content is protected !!