I ಪ್ರವರ ಪ್ರಶಸ್ತಿಗೆ ಭಾಜನರಾದ ಆರ್. ಎಸ್. ಹಾಲಸ್ವಾಮಿ I ಕೆಯುಡಬ್ಲ್ಯೂಜೆ ಶಿವಮೊಗ್ಗ ಘಟಕದಿಂದ ಅಭಿನಂದನೆ I
ಶಿವಮೊಗ್ಗ : ಪ್ರವರ ಪ್ರಶಸ್ತಿ ಪುರಸ್ಕೃತರಾದ, ಪ್ರತಿಭಾವಂತ ರಂಗ ಕರ್ಮಿ, ರಂಗ ನಿರ್ದೇಶಕ, ಹಿರಿಯ ಪತ್ರಕರ್ತ ಆರ್. ಎಸ್. ಹಾಲಸ್ವಾಮಿ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಅಭಿನಂದಿಸಿದೆ
ಪತ್ರಕರ್ತ ಆರ್. ಎಸ್. ಹಾಲಸ್ವಾಮಿ ಅವರ ಸುದೀರ್ಘ ರಂಗ ಸೇವೆಯನ್ನು ಗುರುತಿಸಿ, ಬೆಂಗಳೂರಿನ ಪ್ರವರ ಥೀಯೇಟರ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕೊಡಮಾಡಿರುವುದು ಪ್ರತಿಭೆಗೆ ಸಂದ ಅರ್ಹ ಗೌರವವಾಗಿದೆ ಎಂದು ಕೆಯುಡಬ್ಲ್ಯೂಜೆ ಶಿವಮೊಗ್ಗ ಘಟಕ ಹೇಳಿದೆ,
ಪ್ರಶಸ್ತಿ ಪುರಸ್ಕೃತ ಆರ್. ಎಸ್. ಹಾಲಸ್ವಾಮಿ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿಗಳು ಎಂಬುದು ಹೆಮ್ಮೆಯ ಸಂಗತಿಯಾಗಿದ್ದು, ಅವರ ಸಾಧನೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳು, ಗೌರವ, ಸನ್ಮಾನಗಳು ಲಭಿಸಲಿ ಎಂದು ಹಾರೈಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ವೈದ್ಯನಾಥ್ ಹೆಚ್. ಯು, ಹಾಗೂ ರಾಜ್ಯ ಸಮಿತಿ ನಿರ್ದೇಶಕರಾದ ಕೆ. ವಿ. ಶಿವಕುಮಾರ್, ಎನ್. ರವಿಕುಮಾರ್, ಸೇರಿದಂತೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ತಿಳಿಸಿದ್ದಾರೆ.