I ಕರವೇ ಸ್ವಾಭಿಮಾನಿ ಬಣದಿಂದ I ಮಾರ್ನಾಮಿಬೈಲು ಕಿರುಚಿತ್ರೋತ್ಸವಕ್ಕೆ ಬೆಂಬಲ I ಆಟೋ ಪೋಸ್ಟರ್ ಬಿಡುಗಡೆ I
ಶಿವಮೊಗ್ಗ : ನಗರದ ಅಶೋಕ ವೃತ್ತದಲ್ಲಿ “ಮಾರ್ನಾಮಿಬೈಲು ಕಿರುಚಿತ್ರೋತ್ಸವ” ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಿದ ಕರವೇ ಸ್ವಾಭಿಮಾನಿ ಬಣ,
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಕರವೇ ಕಿರಣ್ ಅವರು ಇದೊಂದು ಸಾಂಸ್ಕೃತಿಕ ಹೆಜ್ಜೆಯಾಗಿದ್ದು, “ಗಾರಾ ಗ್ರೂಪ್” ಸಂಸ್ಥೆಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಅನೇಕ ಕಿರುಚಿತ್ರದ ನಿರ್ಮಾಣಗಳಿಗೆ ವೇದಿಕೆಯಾಗಲಿದ್ದು ಪ್ರೋತ್ಸಾಹದಾಯಕವಾಗಿದೆ ಎಂದು ಅವರು ವಿವರಿಸಿದರು,
ಇದೇ ಆಗಸ್ಟ್ -22ರ ಶನಿವಾರ ಬೆಳಿಗ್ಗೆಯಿಂದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದ್ದು ಕಲಾಸಕ್ತರು, ಕನ್ನಡದ ಮನಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು,
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಆಟೋ ಮುಜ್ಜು, ಸಂತೋಷ್, ಸಾಧಿಕ್, ನೂರುಲ್ಲಾಖಾನ್, ನಾಗರಾಜ್ ಸೇರಿದಂತೆ ನವೀನ್ ತಲಾರಿ, ಪರಮೇಶ್ವರ ಎಲ್.ಕೆ, ಶಿಲ್ಪಾ, ಅನಿಲ್ ಕುಮಾರ್ ಹೆಚ್.ಎಲ್, ಮಾರ್ಕೆಟಿಂಗ್ ಸತೀಶ್, ಚಲನಚಿತ್ರ ನಿರ್ದೇಶಕರಾದ ಯಶೋಧರ್, ಪಂಚಭಾಷಾ ನಟ ಶ್ರೀನಿವಾಸ್ ಶರ್ಮಾ, ಸಿಬ್ಗತ್ ಉಲ್ಲಾ ಎನ್.ಎಂ, ಹಾಗೂ ಗಾರಾ.ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು


