I ಪುಟ್ವೇರ್ ಅಂಗಡಿ ಮಾಲೀಕ ಅಬ್ದುಲ್ ಖಾದರ್ ಮೇಲೆ ಅನ್ಸರ್ ನಿಂದ ಹಲ್ಲೆ I ಪ್ರಕರಣ ದಾಖಲು I ಬಂಧಿಸಲು ಮುಂದಾದ ಪೊಲೀಸರು I
ಶಿವಮೊಗ್ಗ : ನಗರದ ಕಸ್ತೂರಿ ಬಾ ರಸ್ತೆಯ ಪುಟ್ವೇರ್ ಷಾಪಿಂಗ್ ರಸ್ತೆಯಲ್ಲಿ ಇಂತಹದೊಂದು ಅವಘಡ ಜರುಗುತ್ತಲೇ ಇದೆ, ಹೊರ ವ್ಯಾಪಾರಿಗಳು ನೆಮ್ಮದಿಯಲ್ಲಿ ವ್ಯಾಪಾರ ವಹಿವಾಟು ಮಾಡುವಂತಿಲ್ಲ, ಆಗಾಗ್ಗೆ ಅನ್ಸರ್ ಎಂಬಾತ ಕಿರಿಕ್ ಇಟ್ಟುಕೊಂಡಿರುತ್ತಾನೆ, ಮೊನ್ನೆಯು ಕೂಡ ಇಂತಹುದೇ ಘಟನೆ ನಡೆದಿದೆ
ಅಸಲಿಗೆ ಕಳೆದ ಇಪ್ಪತ್ತು ವರುಷಗಳಿಂದ ಪುಟ್ವೇರ್ ವಹಿವಾಟು ನಡೆಸಿಕೊಂಡು ಬರುತ್ತಿರುವ ಅಬ್ದುಲ್ ಖಾದರ್ ನಿಜಕ್ಕೂ ಸಜ್ಜನಿಕೆಯ ಮನುಷ್ಯ, ತಾನಾಯಿತು, ತನ್ನ ಪಾಡಾಯಿತು ಎನ್ನುವ ಗೋಜಿಗೆ ಬಿದ್ದವರು, ಎದುರಿನ ಲೋಕಲ್ ವ್ಯಾಪಾರಿ ಅನ್ಸರ್ ಎಂಬಾತನಿಗೆ ಅಬ್ದುಲ್ ಖಾದರ್ ನಡೆಸುತ್ತಿರುವ ಪುಟ್ವೇರ್ ಅಂಗಡಿಯನ್ಮು ಖಾಲಿ ಮಾಡಿಸಿ ತಾನು ನಡೆಸುವ ಹುನ್ನಾರ ಜಾರಿಯಲ್ಲಿಟ್ಟಿದ್ದಾನೆ,
ಈ ಕಾರಣಕ್ಕಾಗಿಯೇ ಮೊನ್ನೆ ಕಿರಿಕ್ ಮಾಡುವ ದುರುದ್ದೇಶದಿ ಅನ್ಸರ್ ತನ್ನ ದ್ವಿಚಕ್ರ ವಾಹನವನ್ನು ಎದುರಿನ ಅಬ್ದುಲ್ಖಾದರ್ ಅಂಗಡಿಯ ಮುಂದಡಿ ನಿಲ್ಲಿಸಿ ಗಲಾಟೆ ಇಟ್ಟಿದ್ದಾನೆ, ಅಲ್ಲದೆ ಪ್ರಶ್ನಿಸಿದ್ದೇ ತಪ್ಪು ಎನ್ನುವಂತೆ ತನ್ನ ಬಳಿಯಿದ್ದ ಹೆಲ್ಮೆಟ್ ನಿಂದ ಹಲ್ಲೆ ನಡೆಸಿ ದಾಳಿ ಮಾಡಿದ್ದಾನೆ ಇದರಿಂದ ಅಬ್ದುಲ್ ಖಾದರ್ ತಲೆಗೆ ತೀವ್ರ ಪೆಟ್ಟಾಗಿ ಸ್ಥಳೀಯ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಈ ಪ್ರಕರಣದ ತೀವ್ರತೆ ಅರಿತ ದೊಡ್ಡಪೇಟೆ ಪೊಲೀಸರು ಅನ್ಸರ್ ಮೇಲೆ ಎಪ್ ಐ ಆರ್ ದಾಖಲಿಸಿ ಬಂಧಿಸಲು ಮುಂದಾಗಿರುವ ಘಟನೆ ಜರುಗಿದೆ

