Friday, 18 September 2026 Suryagagana — Edition

Suryagagana

My WordPress Blog

ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I ಸೂರ್ಯಗಗನ I ಕಾರ್ಮಿಕರ ವಸತಿ ನಿಲಯಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಲು I ರಾಜ್ಯ ಅಸಂಘಟಿತ ಕಾರ್ಮಿಕ ಸಂಘ ಒತ್ತಾಯ I ಸೂರ್ಯಗಗನ I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಸೂರ್ಯಗಗನ I ಅತ್ಯಲ್ಪ ಅವಧಿಯಲ್ಲಿ ರೈಲ್ವೇ ಕ್ಷೇತ್ರದಲ್ಲಿ ಕ್ಷಿಪ್ರಕ್ರಾಂತಿ I ಸಂಸದ ಬಿ.ವೈ.ರಾಘವೇಂದ್ರ I ಸೂರ್ಯಗಗನ I ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳ ಭೇಟಿ – ಪಕ್ಷಾತೀತ ಕಾರ್ಯಕ್ರಮ I ಆರಗ ಜ್ಞಾನೇಂದ್ರ I ಅಂಕಣ I ಶಿವಮೊಗ್ಗದಲ್ಲಿ I ಲ್ಯಾಂಡ್ ಆಟೋ ಕ್ಯಾಡ್ ಡ್ರಾಯಿಂಗ್ I ದೋಖಾ ಸ್ಕೀಮ್‌ಗಳೂ I ಸೂರ್ಯಗಗನ I ಶರಾವತಿ ನಗರ ಶ್ರೀರಾಮ ಗೆಳೆಯರ ಬಳಗದಿಂದ I ಗಣೇಶೋತ್ಸವ ರಕ್ತದಾನ ಶಿಬಿರ I ಸೂರ್ಯಗಗನ I ರಾಜ್ಯ ಅಫೆಕ್ಸ್ ಬ್ಯಾಂಕಿನ ನೂತನ ಅಧ್ಯಕ್ಷರಿಗೆ I ಅಭಿನಂದನೆ ಸಲ್ಲಿಸಿದ I ಎಂ.ಶ್ರೀಕಾಂತ್ I ಸೂರ್ಯಗಗನ I ತಿಲಕ್ ನಗರದ ಹೊಟೇಲ್‌ ಹಾಗೂ ಜ್ಯೂಸ್ ಸೆಂಟರ್ ಮೇಲೆ I ದಿಢೀರ್ ಮೈತ್ರಿ ದಾಳಿ I
ಸೂರ್ಯಗಗನ

I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I

I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I ಶಿವಮೊಗ್ಗ, : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೇಬಲ್ (ಕೆಎಸ್ಆರ್ ಪಿ, ಕೆಎಸ್ ಐ ಎಸ್…

I ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆ I ಯಶಸ್ವಿಯಾಗಿ ನಡೆಸಲು I ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ I

ಶಿವಮೊಗ್ಗ, : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೇಬಲ್ (ಕೆಎಸ್ಆರ್ ಪಿ, ಕೆಎಸ್ ಐ ಎಸ್ ಎಫ್, ಭಾರತೀಯ ಮೀಸಲು ಪಡೆ) ಉಳಿಕೆ ಮೂಲ ವೃಂದ ಹಾಗೂ ಸ್ಥಳೀಯ ವೃಂದದ ಹುದ್ದೆಗಳ ನೇರ ನೇಮಕಾತಿ ಸಂಬಂಧ ಸೆಪ್ಟೆಂಬರ್ 20 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಯಶಸ್ವಿಯಾಗಿ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಜಿಲ್ಲಾಡಳಿತ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರೀಕ್ಷೆಯ ವಿವರಗಳು:
ದಿನಾಂಕ: 20.09.2026 ರ ಭಾನುವಾರ
ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ಹಾಗೂ ಮಧ್ಯಾಹ್ನ 3:00 ರಿಂದ 04:30 ರವರೆಗೆ ಶಿವಮೊಗ್ಗ ನಗರದ 29 ಕೇಂದ್ರಗಳು ಮತ್ತು ಭದ್ರಾವತಿ ತಾಲೂಕಿನ 5 ಕೇಂದ್ರಗಳು ಸೇರಿ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು ಆರ್ ಪಿ ಸಿ 11712 ಹಾಗೂ ಕೆ ಕೆ 4118 ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಎದುರಿಸಲಿದ್ದಾರೆ.

ಕಟ್ಟುನಿಟ್ಟಿನ ನಿಯಮಾವಳಿಗಳು:
ಪರೀಕ್ಷಾ ಕೇಂದ್ರಗಳ ಒಳಗೆ ವಾಚ್, ಸ್ಮಾರ್ಟ್ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಊಟ-ಉಪಹಾರ ತರುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ.

ಸರ್ಕಾರ ಹಾಗೂ ಇಲಾಖೆ ಸೂಚಿಸಿರುವ ವಸ್ತ್ರಸಂಹಿತೆ ನಿಯಮಾವಳಿಗಳಂತೆ ಅಭ್ಯರ್ಥಿಗಳನ್ನು ಪರಿಶೀಲಿಸಿದ ನಂತರವೇ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಲು ಅನುಮತಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಪರೀಕ್ಷೆಯ ಹಿನ್ನೆಲೆಯಲ್ಲಿ ಬಿ.ಎನ್.ಎಸ್ ಸೆಕ್ಷನ್ 163 ಜಾರಿಗೊಳಿಸಿ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದರು.

ಪ್ರಶ್ನೆ ಪತ್ರಿಕೆ ಸಾಗಾಟ: ಪ್ರಶ್ನೆ ಪತ್ರಿಕೆಗಳ ಸಾಗಾಟಕ್ಕಾಗಿ ತ್ರಿ-ಸದಸ್ಯ ಸಮಿತಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಒಟ್ಟು 11 ಪ್ರಶ್ನೆ ಪತ್ರಿಕೆ ವಿತರಕ ಮಾರ್ಗಗಳನ್ನು (ಶಿವಮೊಗ್ಗ -09, ಭದ್ರಾವತಿ -02) ರಚಿಸಲಾಗಿದೆ.

ಮುಖ ಗುರುತಿಸುವಿಕೆ (ಫೇಸಹಿನ್ನೆಲೆಯಲ್ಲಿ
: ಅಭ್ಯರ್ಥಿಗಳ ಹಾಲ್ ಟಿಕೆಟ್ ಸ್ಕ್ಯಾನ್ ಮಾಡಿ, ಫೇಸ್ ರೆಕಗ್ನಿಷನ್ ಮೂಲಕ ಪರಿಶೀಲಿಸಿದ ನಂತರವೇ ಪರೀಕ್ಷಾ ಕೊಠಡಿಯೊಳಗೆ ಪ್ರವೇಶ ನೀಡಲಾಗುತ್ತದೆ.

ಪಾರದರ್ಶಕತೆ: ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ, ಡ್ರೆಸ್ ಕೋಡ್ ಆಫೀಸರ್ ನಿಯೋಜನೆ ಹಾಗೂ ಪ್ರತಿ 05 ಕೇಂದ್ರಗಳಿಗೆ ಒಂದರಂತೆ ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ಜಿಲ್ಲಾಡಳಿತದಿಂದ ನೇಮಿಸಲಾಗಿದೆ.

ವಿದ್ಯುತ್ ಪೂರೈಕೆ: ಪರೀಕ್ಷಾ ಸಮಯದಲ್ಲಿ ಯಾವುದೇ ವಿದ್ಯುತ್ ವ್ಯತ್ಯಯವಾಗದಂತೆ ಮೆಸ್ಕಾಂ ಇಲಾಖೆಗೆ ಪತ್ರ ಬರೆಯಲಾಗಿದ್ದು, ಮೆಸ್ಕಾಂ ಈ ಬಗ್ಗೆ ಕ್ರಮ ವಹಿಸಬೇಕು ಎಂದರು.

ಪರೀಕ್ಷೆ ಮುಗಿದ ನಂತರ ಓ.ಎಮ್.ಆರ್ ಬಂಡಲ್‌ಗಳನ್ನು ಜಿಲ್ಲಾ ಖಜಾನೆಯಲ್ಲಿ ಠೇವಣಿಕರಿಸಿ, ಕಂಟೇನರ್ ಮೂಲಕ ಬಿಗಿಯಾದ ಎಸ್ಕಾರ್ಟ್ ಭದ್ರತೆಯಲ್ಲಿ ಬೆಂಗಳೂರಿಗೆ ಕಳುಹಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ ಅವರು ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಪರೀಕ್ಷೆಗೆ ಸಂಬಂಧಿತ ಎಲ್ಲ ಮಾರ್ಗಸೂಚಿಗಳನ್ನು ತಿಳಿದುಕೊಂಡು ಯಶಸ್ವಿಯಾಗಿ ಮತ್ತು ಸುಗಮವಾಗಿ ಪರೀಕ್ಷೆಗಳನ್ನು ನಡೆಸಿಕೊಡಬೇಕೆಂದು‌ ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಾರಿಯಪ್ಪ ಅವರು ಭದ್ರತೆ ಹಾಗೂ ತಪಾಸಣೆ ಕುರಿತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಪರೀಕ್ಷೆಗೆ ನಿಯೋಜಿಸಲಾದ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Gara Srinivas

Gara Srinivas

Leave a comment

error: Content is protected !!