I ರಂಗದಸರಾ-2026ರ ಪ್ರಯುಕ್ತ I ಕುಟುಂಬ ರಂಗ ಕಾರ್ಯಕ್ರಮ I
ಶಿವಮೊಗ್ಗ, : ಶಿವಮೊಗ್ಗ ಮಹಾನಗರ ಪಾಲಿಕೆಯು ದಸರಾ ಪ್ರಯುಕ್ತ ರಂಗ ದಸರಾ-2026ರ ಅಡಿಯಲ್ಲಿ ‘ಕುಟುಂಬ ರಂಗ’ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಅಥವಾ ಅಕ್ಕಪಕ್ಕದ ಮನೆಯವರು 5 ರಿಂದ 12 ಜನ ಸೇರಿ ಯಾವುದೇ ಪ್ರಕಾರದ ಅರ್ಧ ಗಂಟೆ ಅವಧಿಯ ಕಿರುನಾಟಕವನ್ನು ತಮ್ಮ ಮನೆಯಲ್ಲೇ ಅಥವಾ ಹತ್ತಿರದ ಅನುಕೂಲಕರ ಸ್ಥಳದಲ್ಲಿ ಅಭಿನಯಿಸಬೇಕು. ವಿವಾದಾದತ್ಮಕ ವಿಚಾರ ಅಥವಾ ಸಮಾಜದ ಶಾಂತಿಗೆ ಭಂಗ ತರುವ ವಿಚಾರಗಳನ್ನು ಒಳಗೊಂಡ ನಾಟಕ ಆಗಿರಬಾರದು. ಇದರಲ್ಲಿ ಮೆಚ್ಚುಗೆ ಪಡೆದ ನಾಲ್ಕು ತಂಡವನ್ನು ಆಯ್ಕೆ ಮಾಡಿ ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ಅ.19 ರಂದು ಬೆಳಗ್ಗೆ 10.30ಕ್ಕೆ ಪ್ರದರ್ಶನ ಮಾಡಲು ಅವಕಾಶ ಕಲ್ಪಿಸಲಾಗುವುದು.
ನಾಟಕ ಪ್ರದರ್ಶಿಸಲು ನೋಂದಣಿ ಮಾಡಿದ ಮೊದಲ 20 ಸಾರ್ವಜನಿಕ ಕುಟುಂಬಗಳಿಗೆ ರಂಗ ದಸರಾ ಸಮಿತಿಯಿಂದ ರೂ.1000/-ಗಳ ಪ್ರೋತ್ಸಾಹ ಧನ ನೀಡಲಾಗುವುದು.
ಆಸಕ್ತರು ತಮ್ಮ ಹೆಸರು ಅಥವಾ ತಂಡದ ಹೆಸರನ್ನು ಅ. 08 ರೊಳಗಾಗಿ ಸದಸ್ಯ ಕಾರ್ಯದರ್ಶಿಗಳು, ರಂಗ ದಸರಾ ಸಮಿತಿ, ಮಹಾನಗರ ಪಾಲಿಕೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಾವಣೆಗಾಗಿ ದೂ.ಸಂ.: 8105918314/ 7676516154/ 9448414752/9449925746 ಗಳನ್ನು ಸಂಪರ್ಕಿಸುವಂತೆ ಶಿವಮೊಗ್ಗ ದಸರಾ ಮಹೋತ್ಸವ-ರಂಗ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.