I ಮಾರ್ನಾಮಿಬೈಲಿನ ಬಡ ಕುಟುಂಬದ ಮನ ಕಲುಕುವ ಘಟನೆ I ನಾವು ಸಹಾಯ ಮಾಡಿದ್ದೇವೆ I ನೀವು ಸಾಧ್ಯವಾದರೆ ಮಾಡಿ I
ಶಿವಮೊಗ್ಗ : ಮಾರ್ನಾಮಿಬೈಲಿನ ಬಡ ಕುಟುಂಬದ ಮನ ಕಲುಕುವ ಘಟನೆ ನಡೆದಿದೆ, ಈ ಘಟನೆಯಲ್ಲಿ ಸಂತ್ರಸ್ತರಾದ ತಾಯಿ ಮತ್ತು ಮಗನಿಗೆ ನಾವು ಸಹಾಯ ಮಾಡಿದ್ದೇವೆ, ನೀವು ಸಾಧ್ಯವಾದರೆ ಮಾಡಿ ಎನ್ನುವ ದನಿ ನಮ್ಮದಾಗಿದೆ,
ಇದೊಂದು ಸುದ್ದಿಯಷ್ಟೆ ಅಲ್ಲ, ಮಾನವೀಯ ಹೆಜ್ಜೆಗಳಾಗಿದೆ ಇತ್ತೀಚಿಗೆ ನಗರದ ಎನ್ ಟಿ ರಸ್ತೆಯಲ್ಲಿ ಟಿವಿಎಸ್ ಸ್ಕೂಟಿನಲ್ಲಿ ತಾಯಿಗೆ ಕೂರಿಸಿಕೊಂಡು ಸಾಗುವಾಗ, ಹಿಂದಿನಿಂದ ಬಂದ ಅಪರಿಚಿತ ವಾಹನವೊಂದು ಬೀಕರವಾಗಿ ಡಿಕ್ಕಿ ಹೊಡೆದಿದೆ, ಈ ಅಪಘಾತ ಎಸಗಿ ಹಿಟ್ ರನ್ ಆಗಿರುವ ವ್ಯಕ್ತಿ ಇನ್ನೂ ಪತ್ತೆ ಆಗಿಲ್ಲ, ಈ ಅಪಘಾತದಿಂದ ಉರುಳಿ ಬಿದ್ದ ತಾಯಿ ಮತ್ತು ಮಗ ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರಿಗೆ ಚಿಕಿತ್ಸೆಗಾಗಿ ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ,
ಬೆನ್ನು ಮೂಳೆ ಮುರಿದುಕೊಂಡಿರುವ ವೃದ್ದೆ ಹಾಸಿಗೆ ಹಿಡಿದಿದ್ದಾರೆ, ಮಗನ ಪರಿಸ್ಥಿತಿಯೂ ಇದೇ ಆಗಿದೆ, ಇವರಿಬ್ಬರನ್ನು ನೋಡಿಕೊಳ್ಳುತ್ತಿರುವ ಇನ್ನೊರ್ವ ಅಂಗವಿಕಲ ಮಗನ ಪಾಡು, ಆತನ ಕಂಬನಿ ಮುಗಿಲು ಮುಟ್ಟಿದೆ, ಔಷಧೋಪಚಾರ, ಹಾಗೂ ಮನೆಯ ನಿರ್ವಹಣೆಯಲ್ಲಿದ್ದವರೇ ಊಟಕ್ಕೂ ತೊಂದರೆಯಾಗಿ ಪರದಾಡುತ್ತಿರುವ ಈ ಬಡ ಕುಟುಂಬಕ್ಕೆ ನಾಗರೀಕ ಮನಸುಗಳೇ ಸಹಾಯ ಮಾಡಬೇಕಾದ ಅತೀ ಜರೂರಿಯಿದೆ,
ಹಿಟ್ ಅಂಡ್ ರನ್ ಆಗಿರುವ ಅಪಘಾತ ಪ್ರಕರಣದ ವಿರುದ್ದ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಪೊಲೀಸರು ಪತ್ತೆ ಹಚ್ವುವ ಕೆಲಸ ಮಾಡುತ್ತಿದ್ದಾರೆ,
ಇಂತಹ ದಯನೀಯ ಪರಿಸ್ಥಿತಿಗೆ ಸ್ನೇಹಿತರ ಬಳಗದಿಂದ ಒಂದಷ್ಟು ಸಹಾಯ ಮಾಡಿ ಧೈರ್ಯ ತುಂಬಿ ಬಂದಿದ್ದೇವೆ, ಸಹಾಯ ಮಾಡುವ ಮನಸುಗಳು ಈ ವಿಳಾಸಕ್ಕೆ ನೇರವಾಗಿ ಬೇಟಿ ಮಾಡಿ,
ಶಾರದಮ್ಮ, ಮಾರ್ನಾಮಿಬೈಲು, ( JC Nagara ) 1ನೇ ಎಡ ತಿರುವು, ಮಸಿದಿ ಎದುರು ಭಾಗ, ಶಿವಮೊಗ್ಗ,

