I ಎಂ.ಶ್ರೀಕಾಂತ್ ಅವರ 25 ವರುಷದ ಸಮಾಜಮುಖಿ ಸೇವೆಯ ಸ್ಮರಣಾರ್ಥ I ಒಂದು ಸಾವಿರ ವಿದ್ಯಾರ್ಥಿಗಳಿಗೆ I ಉಚಿತ ನೋಟ್ ಬುಕ್ ವಿತರಣೆ I
ಶಿವಮೊಗ್ಗ : ಮಲೆನಾಡಿನ ಜಗಲಿಗಳಿಗೆ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ನಿರಂತರ ಸುಧೀರ್ಘ 25 ವರುಷಗಳ ಕಾಲಮಾನದ ಸೇವೆಯನ್ನು ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಎಂ.ಶ್ರೀಕಾಂತ್ ಅವರು ತಮ್ಮ ಬದುಕಿನ ಸೋಲಿನಲ್ಲೂ ಜನಪರ ನ್ಯಾಯವನ್ನು ಕಟ್ಟಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ,
ಇಂತಹದೊಂದು ಸೇವಾ ಮನಸ್ಥಿತಿಯು ಈ ಹೊತ್ತಿನ ಒಟ್ಟು ಸಮಾಜಕ್ಕೆ ಮಾದರಿಯಾಗಿದೆ, ಎಂ.ಶ್ರೀಕಾಂತ್ ಅವರ ಅವಿರತ ಈ ಶ್ರಮವೂ ಎಂದಿಗೂ ವ್ಯರ್ಥಗೊಳ್ಳದು, ಜನಮಾನಸದ ಸ್ಮರಣಿಕೆ ಇದ್ದೆ ಇರುತ್ತದೆ, 2002ರ ಸುಮಾರಿಗೆ ಶಿವಮೊಗ್ಗದಲ್ಲಿ ರಾಜಕೀಯ ರಂಗದ ಮುಖೇನ ಜೀವಪರ ನಿಲುವು ತಳೆದ ನಾಯಕತ್ವಕ್ಕೆ ಮುಂದಿನ 2027ಕ್ಕೆ, 25ವರುಷ ಪೂರ್ಣಗೊಳ್ಳುತ್ತದೆ, ಈ ನೆನೆವಿಗಾಗಿ ಗಾರಾ ಫೌಂಡೇಶನ್ ವತಿಯಿಂದ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆಯನ್ನು ಮಾಡಲು ಮುಂದಾಗಿದೆ,
ಈಗಾಗಲೇ ಇದಕ್ಕೆ ಎಲ್ಲಾ ಸಿದ್ದತೆಗಳಾಗಿದ್ದು ನೋಟ್ ಬುಕ್ ಕೂಡ ಬಂದಿರುತ್ತದೆ ಎಂದು ಮ್ಯಾನೇಜ್ಮೆಂಟ್ ಟ್ರಸ್ಟಿ ಗಾರಾ.ಶ್ರೀನಿವಾಸ್ ತಿಳಿಸಿದ್ದಾರೆ, ನಾಗರೀಕ ಸಂಕಟಗಳಿಗೆ ನಿರಂತರವಾಗಿ ದನಿಯಾದ ಎಂ.ಶ್ರೀಕಾಂತ್ ನಾಯಕತ್ವವು ಮಲೆನಾಡಿಗರ ಜನಮಾನಸದಲ್ಲಿ ಬೇರೂರಿದ್ದು, ಅದೊಂದು ಅಳಿಸಲಾಗದ ಸಾಮಾಜಿಕ ಶಾಸನ ಬರೆದಿರುವ ಅವರಿಗೆ ನಾಗರೀಕರ ಪರವಾಗಿ ಅಭಿನಂದನೆಗಳನ್ನು ಗಾರಾ ಫೌಂಡೇಶನ್ ಈ ಮೂಲಕ ತಿಳಿಸುತ್ತದೆ ಎಂದು ಗಾರಾ.ಶ್ರೀನಿವಾಸ್ ಹೇಳಿದ್ದಾರೆ.

