I ಗಾರಾ ಫೌಂಡೇಶನ್ ಸಂಸ್ಥೆಯಿಂದ I ಶಾಶ್ವತ ಕನ್ನಡ ಧ್ವಜ ಸ್ತಂಭದ ಧ್ವಜಾರೋಹಣ I
ಶಿವಮೊಗ್ಗ : ಕೃಷಿನಗರದಲ್ಲಿಂದು ಗಾರಾ ಫೌಂಡೇಶನ್ ಸಂಸ್ಥೆಯಿಂದ ಪ್ರತಿಷ್ಠಾಪಿಸಲಾಗಿರುವ ಕನ್ನಡ ಧ್ವಜ ಸ್ತಂಭದ ಧ್ವಜಾರೋಹಣವನ್ನು ನಿಶಾಂತ್ ಎಸ್ ಗಾರಾ ಹಾಗೂ ಶ್ರೀಯಾನ್ ಅವರುಗಳು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಗಾರಾ.ಶ್ರೀನಿವಾಸ್ ಅವರು ಇದೊಂದು ಸರಳ ಸಮಾರಂಭವಾಗಿದ್ದು ಈ ರೀತಿ ಪ್ರತಿ ಮನೆಯಲ್ಲಿಯು ಕನ್ನಡ ಧ್ಜಜಾರೋಹಣವನ್ನು ಮಾಡುವುದರ ಮುಖಾಂತರ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯಬೇಕಾಗಿದೆ ಈ ನಿಟ್ಟಿನಲ್ಲಿ ನೆಲದ ಕನ್ನಡಿಗರು ಚಿತ್ತವರಿಸಬೇಕು ಎಂದು ತಿಳಿಸಿದರು,
ಗಾರಾ ಫೌಂಡೇಶನ್ ಸಂಸ್ಥೆಯ ವತಿಯಿಂದ ೨೦೧೫ರಲ್ಲಿ ಶಾಶ್ವತ ಕನ್ನಡ ಧ್ವಜಸ್ತಂಭದ ಸ್ಥಾಪನೆ ಮಾಡಲಾಯಿತು ಪ್ರತಿ ವರುಷ ಕನ್ನಡ ಧ್ವಜಾರೋಹಣವನ್ನು ಮಾಡಿ ನೆರೆ-ಹೊರೆಯವರೊಂದಿಗೆ ಗಾರಾ ಕುಟುಂಬ ವರ್ಗ ಸೇರಿ ಸರಳವಾಗಿ ಕನ್ನಡದ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ಅವರು ತಿಳಿಸಿದರು.