Thursday, 12 November 2026 — Suryagagana
04:48 AM
ಸಾಹಿತ್ಯ I ಅವಳ ದನಿ..I ಸೂರ್ಯಗಗನ I ಪಡಿತರ ಅಕ್ಕಿ ಕಾಳಸಂತೆಯ ಪಾಲಾಗುತ್ತಿದೆ I ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹ ಗಂಧದಮನೆ I ಸೂರ್ಯಗಗನ I ಮೇರಿ ಇಮ್ಯಾಕ್ಯುಲೇಟ್ ಸಂಸ್ಥೆಯಲ್ಲಿ I ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ I ಸೂರ್ಯಗಗನ I ಗಾರಾ ಫೌಂಡೇಶನ್ ಸಂಸ್ಥೆಯಿಂದ I ಶಾಶ್ವತ ಕನ್ನಡ ಧ್ವಜ ಸ್ತಂಭದ ಧ್ವಜಾರೋಹಣ I ಸೂರ್ಯಗಗನ I ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ I ಮಲೆನಾಡು ಕನ್ನಡ ಪಡೆ ಆಗ್ರಹ I ಸೂರ್ಯಗಗನ I ತೋಟದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಹರಿಸಿ I ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ I ಸೂರ್ಯಗಗನ I ಎಸ್‌ಬಿಐನಿಂದ ₹30 ಲಕ್ಷ ಅಪಘಾತ ವಿಮಾ ಪರಿಹಾರ ವಿತರಣೆ I ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I ಸಾಹಿತ್ಯ I ಅವಳ ದನಿ..I ಸೂರ್ಯಗಗನ I ಪಡಿತರ ಅಕ್ಕಿ ಕಾಳಸಂತೆಯ ಪಾಲಾಗುತ್ತಿದೆ I ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹ ಗಂಧದಮನೆ I ಸೂರ್ಯಗಗನ I ಮೇರಿ ಇಮ್ಯಾಕ್ಯುಲೇಟ್ ಸಂಸ್ಥೆಯಲ್ಲಿ I ವಾರ್ಷಿಕ ಕ್ರೀಡಾಕೂಟಕ್ಕೆ ಸಂಭ್ರಮದ ಚಾಲನೆ I ಸೂರ್ಯಗಗನ I ಗಾರಾ ಫೌಂಡೇಶನ್ ಸಂಸ್ಥೆಯಿಂದ I ಶಾಶ್ವತ ಕನ್ನಡ ಧ್ವಜ ಸ್ತಂಭದ ಧ್ವಜಾರೋಹಣ I ಸೂರ್ಯಗಗನ I ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ I ಮಲೆನಾಡು ಕನ್ನಡ ಪಡೆ ಆಗ್ರಹ I ಸೂರ್ಯಗಗನ I ತೋಟದ ಬೆಳೆಗಳ ರಕ್ಷಣೆಗೆ ತಕ್ಷಣ ನೀರು ಹರಿಸಿ I ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ I ಸೂರ್ಯಗಗನ I ಎಸ್‌ಬಿಐನಿಂದ ₹30 ಲಕ್ಷ ಅಪಘಾತ ವಿಮಾ ಪರಿಹಾರ ವಿತರಣೆ I ಸೂರ್ಯಗಗನ I ಕೊಡಗಿನಲ್ಲಿ ನಡೆದ ರಾಜ್ಯ ಮಟ್ಟದ ಕೆಯುಡಬ್ಲ್ಯೂಜೆ ಕ್ರಿಕೆಟ್ ಟೂರ್ನಿಯಲ್ಲಿ I ಕೊಡಗು-ಮಂಡ್ಯ ತಂಡಗಳು ಜಂಟಿ ಚಾಂಪಿಯನ್ I
ಸಾಹಿತ್ಯ

I ಅವಳ ದನಿ..I

I ಅವಳ ದನಿ..I ನಾನಿಲ್ಲದಿದ್ದರೆ ಪದ್ಯಗಳ ಸಾಲುಗಳೆಲ್ಲಿ..? ಖಾಲಿ ಪುಟವಾಗಿಯೇ ಉಳಿದಿರುತಿತ್ತು..! ನಿನ್ನೊಳಗೆ ನಾನೀಳಿದಾಗ ಅವಶೇಷದ ಕೋಟೆಯಾಗಿತ್ತು. ಬತ್ತಿ ಬಾಡಿದ ಹೂ ಬನವಿತ್ತು. ನಗುವ ಸುಳಿವೇ ಇರಲಿಲ್ಲ..! ಕೆಂಡದ ಅಘೋರಿಯಂತಿದ್ದೆ ಸತ್ತಜೀವ-ಕಾಯದ ಮೇಲೆ ಆಸೀನನಾಗುತ್ತಿದ್ದೆ. ಕಣ್ಣು ಮುಚ್ಚಿ ಧ್ಯಾನ ಎಂದಿದ್ದೆ..! ಬರುಡು…

I ಅವಳ ದನಿ..I

ನಾನಿಲ್ಲದಿದ್ದರೆ
ಪದ್ಯಗಳ ಸಾಲುಗಳೆಲ್ಲಿ..?
ಖಾಲಿ ಪುಟವಾಗಿಯೇ ಉಳಿದಿರುತಿತ್ತು..!

ನಿನ್ನೊಳಗೆ ನಾನೀಳಿದಾಗ
ಅವಶೇಷದ ಕೋಟೆಯಾಗಿತ್ತು.
ಬತ್ತಿ ಬಾಡಿದ ಹೂ ಬನವಿತ್ತು.
ನಗುವ ಸುಳಿವೇ ಇರಲಿಲ್ಲ..!

ಕೆಂಡದ ಅಘೋರಿಯಂತಿದ್ದೆ
ಸತ್ತಜೀವ-ಕಾಯದ ಮೇಲೆ ಆಸೀನನಾಗುತ್ತಿದ್ದೆ.
ಕಣ್ಣು ಮುಚ್ಚಿ ಧ್ಯಾನ ಎಂದಿದ್ದೆ..!
ಬರುಡು ಬವಣೆಗಳಲ್ಲಿಯೇ ಕೊಳೆಯುತ್ತಿದ್ದೆ.
ನೆನಪಿಸಿಕೋ..?

ಒಣ ಬರಹದ ಹಾದಿಗೆ ಜೀವ ನೀಡಲು ನಿಂದೆ.
ದಿನಮಾನಗಳೇ ಋತುಮಾನಗಳ ದೂಡಿತು.
ಭಾವಗಳ ಬಿತ್ತಿ ಬರೆಸಿದೆ.
ಪದ್ಯ ಲೋಕದೊಳಗೆ ಬಿಗಿದಪ್ಪಿ ನಡೆಸಿದೆ.
ಮೊಗೆದಷ್ಟು ಭಾವ, ಗುಟುಕಿದಷ್ಟು ದಾಹ.
ಉಸಿರನಸಿರಿನೊಳಗೆ ಬೆರೆತು ಹೋದೆ..!

ಹಸಿ-ಮಕರಂದಗಳ ಸ್ಪರ್ಶಿಸಿ ಚುಂಬಿಸೆಂದೆ.
ಬೆಸುಗೆಗಳ ಬಿಸಿ-ಭಾವಗಳಿಗೆ ಮರು‌ಹುಟ್ಟು ನೀಡಿದೆ.!
ನೆನಪಿದಿಯಾ…?
ಗತ-ದಿನದ ಅವಶೇಷದ ಕೋಟೆ ಎಲ್ಲಿದೆ..?

ಭಾವ-ಬೆಳಕಿನರಮನೆಯಾಗಿ ಕಂಗೊಳಿಸುತ್ತಿದೆ.
ಸದಾ ಪದರಾಶಿಗಳ ನರ್ತಿಸುತ್ತಿದೆ.
ಹೂ-ಬನದ ಮೊಗ್ಗುಗಳರಳಿ ನಗುತಲಿದೆ.

ನಿತ್ಯ-ಮಿಥ್ಯಗಳ ಲೋಕದಲಿ,
ಕಾವ್ಯಗಳ ಕಾವಿಟ್ಟ ಬೆಸುಗೆಗಳ ಮರೆಯದಿರು.
ನಾನೀಗ ನಿನ್ನ ಸಂಕಲನಗಳಿಗೆ ಜನ್ಮವಿತ್ತಿದ್ದೇನೆ..!
ಮತ್ತೇ-ಮತ್ತೇ ಗರ್ಭವತಿಯಾಗುವೆ..
ಬಾ ದಿನವಿರುಳ ಸಾಂಗತ್ಯದಲಿ ವಿಹರಿಸು..!

Gara

Gara

Leave a comment

error: Content is protected !!