I ಸೆ.15ಕ್ಕೆ I ಈದ್ ಮಿಲಾದ್ ಮೆರವಣಿಗೆ I
I ಸೆ.15ಕ್ಕೆ I ಈದ್ ಮಿಲಾದ್ ಮೆರವಣಿಗೆ I
ಶಿವಮೊಗ್ಗ:‘ಮರ್ಕಜ್ಜಿ ಸುನ್ನಿ ಜಿಮೈತುಲ್ ಉಲ್ಮಿ ಕಮಿಟಿಯಿಂದ ಸೆ.15 ರಂದು ಈದ್ ಮಿಲಾದ್ ಹಬ್ಬದ ಆಚರಣೆಯ ಪ್ರಯುಕ್ತ ಮೆರವಣಿಗೆ ನಡೆಯಲಿದೆ.
ಮಧ್ಯಾಹ್ನ ಸುಮಾರು 2.30 ಘಂಟೆಯಿಂದ ಆರಂಭವಾಗಲಿದ್ದು, ಈ ಮೆರವಣಿಗೆಯು ನಗರದ ಗಾಂಧಿ ಬಜಾರ್ ಸುನ್ನಿ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡು ನಾಗಪ್ಪಕೇರಿ, ಲಷ್ಕರ್ ಮೊಹಲ್ಲಾ, ಬಾರ್ಲೈನ್ ರಸ್ತೆ, ಪೆನ್ನನ್ ಮೊಹಲ್ಲಾ, ಬಿ.ಹೆಚ್.ರಸ್ತೆ, ಮೀನಾಕ್ಷಿ ಭವನದ ಪಕ್ಕದ ರಸ್ತೆ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಬಾಲರಾಜ್ ಅರಸ್ ರಸ್ತೆ, ಮಹಾವೀರ ವೃತ್ತ, ಗೋಪಿ ಸರ್ಕಲ್, ಅಮೀರ್ ಅಹ್ಮದ್ ಸರ್ಕಲ್, ಬಿ.ಹೆಚ್.ರಸ್ತೆ, ಬಸ್ ಸ್ಟ್ಯಾಂಡ್, ಎನ್.ಟಿ.ರಸ್ತೆಯಿಂದ ಹಾದು ಎನ್.ಟಿ.ರಸ್ತೆಯ 4ನೇ ತಿರುವು ಮಾರ್ಗವಾಗಿ ಆಜಾದ್ ನಗರ, ನೂರಾನಿ ಮಸೀದಿ, ಕೆ.ಆರ್.ಪುರಂ ರಸ್ತೆಯಿಂದ ಹಾದು ಆಮೀರ್ ಅಹ್ಮದ್ ಸರ್ಕಲ್, ಅಷೂರ್ ಖಾನಾಕ್ಕೆ ಬಂದು ಮೆರವಣಿಗೆ ಮುಕ್ತಾಯ ಆಗುತ್ತದೆ.
ಅದೇ ದಿನ ರಾತ್ರಿ 8 ಗಂಟೆಯಿಂದ 9 ಗಂಟೆವರೆಗೆ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ನಗರದ ಅಮೀರ್ ಅಹ್ಮದ್ ಸರ್ಕಲ್ ಅಷೂರ್ ಖಾನಾ ಮುಂಭಾಗದಲ್ಲಿ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಪ್ರವಚನ ಕಾರ್ಯಕ್ರಮವು ಧರ್ಮಗುರುಗಳಿಂದ ನಡೆಯಲಿದೆ ಎಂದು ಕಾರ್ಯದರ್ಶಿ ಎಜಾಜ್ ಪಾಷಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.