September 25, 2026

I ವಿಭಿನ್ನ ನೋಟದ ಬರಹಗಾರ I ಟೆಲೆಕ್ಸ್ ರವಿಕುಮಾರ್ ವಿರಚಿಸಿದ I ಸುದ್ದಿಮಾಧ್ಯಮ ಕ್ಷೇತ್ರದಲ್ಲಿ ಅಂಬೇಡ್ಕರ್ ದೃಷ್ಟಿಕೋನ ಕೃತಿ I

0
WhatsApp Image 2026-09-23 at 19.41.38

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ವಿಭಿನ್ನ ನೋಟದ ಬರಹಗಾರ I ಟೆಲೆಕ್ಸ್ ರವಿಕುಮಾರ್ ವಿರಚಿಸಿದ I ‘ಸುದ್ದಿಮಾಧ್ಯಮ ಕ್ಷೇತ್ರದಲ್ಲಿ ಅಂಬೇಡ್ಕರ್ ದೃಷ್ಟಿಕೋನ’ ಕೃತಿ I

‘ಇಂದು ಎನ್ನುವ ಹುಸಿ ನಂಬಿಕೆಗಳು’ ನಾಳೆ ಎನ್ನುವ ಹಸಿ ಬರವಸೆಗಳಲಿ ನೊಂದವರ ಬೆವರು ಬಸಿದು, ಜಳಕ ಮಾಡಿಕೊಳ್ಳುವ ಬಾಹ್ಯ ಸಮಾಜದ ಅಂಗಳದಲ್ಲಿ ಆಂತರಿಕ ಸದ್ದುಗಳು ಮೌನವಾಗಿದೆ, ಇನ್ನೇನು ಈ ಜಗಲಿಗಳಲಿ ದೀವಿಗೆಯ ಸಾಂವಿಧಾನಿಕ ಬೆಳಗು ಬೆಳಗದಿದ್ದರೆ ಏನಾಗುತಿತ್ತು..? ಈ ಹೊತ್ತಿಗೂ ಒಂದಷ್ಟು ಸಮುದಾಯಗಳನ್ನು ಪ್ರಶ್ನಿಸಿಕೊಳ್ಳಬೇಕಾದ ಜರೂರತ್ತಿದೆ,

ಈ ನಿಟ್ಟಿನಲ್ಲಿ ಶಿವಮೊಗ್ಗದ ಹೋರಾಟದ ನಗರಿ ದರ್ಶಿಸಿಕೊಳ್ಳುವ ಪತ್ರಕರ್ತ ಹಾಗೂ ಲೇಖಕ ಎನ್.ರವಿಕುಮಾರ್ ಅವರು ವಿಭಿನ್ನ ಶೈಲಿಯ ಬರಹಗಾರರು, ಕನ್ನಡ ಭಾಷೆ ಒಂದೇ ಅದರ ಶೈಲಿ ಹಲವು ಎನ್ನುವಂತೆ ಅವರು ವಿರಚಿಸಿದ ಕೃತಿಗಳು ಬರೆದು ಬಿತ್ತರಿಸಿದ ಲೇಖನಗಳು ಓದಿಸಿಕೊಂಡು ಆ ವಿಷಯಗಳನ್ನು ಮನನ ಮಾಡಿಕೊಡುತ್ತದೆ, ಅಲ್ಲದೆ ಜಾಗೃತಗೊಳಿಸುತ್ತದೆ, ಇಂತಹದೊಂದು ಪ್ರಬುದ್ದಮಾನದ ಪ್ರೌಡಿಮೆ ಹೊಂದಿರುವ ಎನ್.ರವಿಕುಮಾರ್ ಅವರು ಈ ಮಲೆನಾಡಿನ ಅಕ್ಷರದ ಅಗ್ರಮುಖಿಗಳು ಎಂದು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ಇಲ್ಲಿ ಉವಾಚಿಸಿ ಲಗತ್ತಿಸುತ್ತೇನೆ,

ಬಡತನದ ಬೇಗೆಯನ್ನು ಉಂಡು ಅರಗಿಸಿಕೊಂಡು, ಒಟ್ಟು ಸಮಾಜಕ್ಕೆ ಶಾಸನವಾಗುವ ನಿಟ್ಟಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಾಹಸಿಗರ ಸಾಲಿನಲ್ಲಿ ಪತ್ರಕರ್ತ ಎನ್.ರವಿಕುಮಾರ್ ಅವರು ಕಾಣ ಸಿಗುತ್ತಾರೆ, ನಿಜಕ್ಕೂ ಶ್ಲಾಘನೀಯ ಎನ್ನುವ ಪದಕೆ, ಮೆಚ್ಚುಗೆ ವ್ಯಕ್ತಪಡಿಸಬಹುದಾದ ಪ್ರತಿ ಮನಸುಗಳಿಗೆ ಸಾಕ್ಷೀಯಾಗಿರುವ ಜ್ಞಾನ ಸಂಭಂದಗಳು ಸಾಮಾಜಿಕ ವಲಯದಲ್ಲಿ ಬೆಸೆದುಕೊಂಡು ಬಿಡುವ ಇಂತಿವರ ಕಟಿಬದ್ದ ಚಿಂತನೆಗಳು ಇಲ್ಲಿ ಬೇರೂರಿದೆ,

ಪತ್ರಕರ್ತರ ವಲಯ, ಸಂಘಟಿತ ವೇದಿಕೆಯೊಳು ಇಂದು ಬೇಟಿಯಾಗಿದ್ದೇವು, ಸತತ ಮೂರು ದಶಕಗಳ ಕಾಲಮಾನದಿಂದಲೂ ಜೀವಪರ ನಿಲುವು ತಳೆದಿರುವ ಟೆಲೆಕ್ಸ್ ರವಿಕುಮಾರ್ ಅವರು ನೀಡಿದ ‘ಸುದ್ದಿಮಾಧ್ಯಮ ಕ್ಷೇತ್ರದಲ್ಲಿ ಅಂಬೇಡ್ಕರ್ ದೃಷ್ಟಿಕೋನ’ ಎನ್ನುವ ಕೃತಿ ವಾಸ್ತವತೆಗಳನ್ನು ತೆರೆದಿಟ್ಟಿದೆ, ಸುದ್ದಿ ಮಾಧ್ಯಮದ ಪಾವಿತ್ರ್ಯತೆ ಅದರ ಮೌಲ್ಯಗಳಲಿ ಎದುರಿಸುತ್ತಿರುವ ಮತ-ಪಂಥಗಳ ಸವಾಲುಗಳು ಶೋಷಿತ ಸಮಾಜವನ್ನು ಅದ್ಯಾಗೆ ವಿಮರ್ಶಿಸಲಾಗುತ್ತಿದೆ, ಗುರಿ ಮಾಡುತ್ತಿದೆ ಎನ್ನುವ ವಾಸ್ತವತೆಗಳ ಮಜಲುಗಳು ಇಂದಿಗೂ ಅಣಕಿಸುತ್ತಿದೆ, ಭಾರತೀಯ ಪತ್ರಿಕಾ ವಲಯವು ರಾಷ್ಟ್ರ ಸಂವಿಧಾನ ರಚಿಸಿದ ಡಾ. ಬಿ.ಆರ್ ಅಂಬೇಡ್ಕರ್ ಅವರನ್ನು ಎಂದಿಗೂ ಓರ್ವ ಶ್ರೇಷ್ಠ ಪತ್ರಕರ್ತರೆಂದು ದಾಖಲಿಸಲಿಲ್ಲ, ಅದರ ವಿಸ್ತಾರತೆಗೂ ಅಡ್ಡಲಾಗಿದೆ, ಎಂದರೆ ನಾವಿನ್ನೂ ಬದಲಾದ ಸಮಾಜದಲ್ಲಿ ಖಂಡಿತವಾಗಿಯೂ ಇಲ್ಲವಾಗಿದೆ,

ಈ ನಡುವೆ ಅಂದಿನ ಪರಿಗಳು ಇಂದಿಗೂ ಜೀವಂತವಾಗಿದೆ, ಆದರೆ ಅದರ ಮುಖವಾಡಗಳು ಮಾತ್ರ ಬದಲಾಗಿದೆ ಎಂದು ಉವಾಚಿಸಿ ಪತ್ರಕರ್ತ ಹಾಗೂ ಲೇಖಕರಾದ ಎನ್.ರವಿಕುಮಾರ್ ಅವರು ಬರೆದಿರುವ ಈ ಕೃತಿ ಪ್ರಸ್ತುತ ಪತ್ರಿಕಾ ವಲಯದ ವಿದ್ಯಮಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಎಂದು ಅಂಬೋಣಿಸಿ ಈ ಮೂಲಕ ಅಭಿನಂದಿಸಿ ಧನ್ಯವಾದ ತಿಳಿಸಲಿಚ್ಚಿಸಿ ಈ ಸಾಲಿನಿಂದ ವಿರಮಿಸುತ್ತೇನೆ.

Spread the love

Leave a Reply

Your email address will not be published. Required fields are marked *

error: Content is protected !!