I ಬಸಮ್ಮ ಮಾನಪ್ಪ ಚಲವಾದಿಯನ್ನು I ಮುಕ್ಕಿ ತಿಂದ ವಿಕೃತರ ಎದೆಗಳಿಗೆ I ಪೊಲೀಸರ ಗುಂಡು ಹಾರುವುದೇ..? I
ವಿಜಯಪುರ : ರಾಜ್ಯದಲ್ಲಿ ಏನಾಗಿದೆ, ಆಡಳಿತ ವ್ಯವಸ್ಥೆಗಳು ಸಂಪೂರ್ಣವಾಗಿ ಅರಾಜಕತೆಯತ್ತ ಮುಖಮಾಡಿದಿಯಾ..?! ಕೊಲೆ, ಸುಲಿಗೆಗಳು, ಅತ್ಯಾಚಾರಗಳು, ಗಾಂಜಾ ಹಾವಳಿ, ಡ್ರಗ್ಸ್ ದಂಧೆಗಳು, ಶಿಕ್ಷಣ ವ್ಯವಸ್ಥೆಯನ್ನು ಮುಕ್ಕಿ ತಿನ್ನುವುದಕ್ಕೆ ಹಾಡುಹಗಲೇ ದಾಂಗುಡಿಯಿಕ್ಕಿದೆ, ಖಾಕಿಗಳು ತಮಗೇನು ಸಂಬಂಧವಿಲ್ಲದಂತೆ ಅತೀವ ಮೌನವಹಿಸುವೆ, ಇಂತಹ ಎಲ್ಲಾ ದಾರುಣತೆಗಳ ಮೀರಿದ ಘಟನೆಯೊಂದು ಮುದ್ದೇಬಿಹಾಳದ ತಾಲ್ಲೂಕಿನ ಬನೋಶಿ ಗ್ರಾಮದಲ್ಲಿ ನಡೆದಿದೆ,
ಕಂದಮ್ಮ ಕುಮಾರಿ ಬಸಮ್ಮ ಮಾನಪ್ಪ ಚಲವಾದಿಯನ್ನು ವಿಕೃತರು ಮುಕ್ಕಿ ತಿಂದು ಮುಗಿಸಿ ಹಾಕಿದ್ದಾರೆ, ಆಕೆಯನ್ನು ಬರ್ಬರವಾಗಿ ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣ ರಾಜ್ಯದಲ್ಲಿ ಪೈಶಾಚಿಕ ಕೃತ್ಯವಾಗಿದೆ, ಆಕೆಯನ್ನು ಬಲತ್ಕರಿಸಿ ಹಿಂಸೆಗೊಳಪಡಿಸಿ ವಿಕೃತವಾಗಿ ಮುಗಿಸಿರುವುದು ದೆಹಲಿಯ ನಿರ್ಭಯಾ ಪ್ರಕರಣ, ವಿಜಯಪುರದ ದಾನಮ್ಮ ಪ್ರಕರಣ,ಹೆಣ್ಣುಬಾಕರ ಉದಾಹರಣೆಗೆ ಹುಬ್ಬಳ್ಳಿಯ ನೇಹಾಪ್ರಕರಣ, ಅಂಜಲಿ ಅಂಬಿಗೇರ ಪ್ರಕರಣವನ್ನು ಮೀರಿಸಿದೆ, ಬಿಜೆಪಿಯ ನಿಕಟಪೂರ್ವ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಹೂಗಾರ್ ಅವರು ಆಗ್ರಹಿಸಿದ್ದಾರೆ.
ಆಕೆ ನಾಗರೀಕ ಸಮಾಜದಲ್ಲಿ ಬಾಳಿ ಬದುಕಬೇಕಾಗಿದ್ದ ಚಿಕ್ಕ ಕಂದಮ್ಮ ಕು.ಬಸಮ್ಮ ಮಾನಪ್ಪ ಚಲವಾದಿ ಅವಳ ಮೇಲಾದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ, ಪೈಶಾಚಿಕ ಕೃತ್ಯ ನಾಗರೀಕ ಸಮಾಜ ಒಪ್ಪುವಂತಹದ್ದಲ್ಲವಾಗಿದೆ, ಇದೊಂದು ನಿಜಕ್ಕೂ ಅವಮಾನವೀಯ ಹಾಗೂ ಖಂಡನೀಯವಾದ ಸಂಗತಿಯಾಗಿದೆ, ಇಂತಹ ಕೃತ್ಯ ವಿಜಯಪುರದ ಜಿಲ್ಲೆಯಲ್ಲಿ ನಡೆದಿರುವುದು ಎಲ್ಲರಿಗೂ ನಾಚಿಕೆಗೇಡಿನ ಸಂಗತಿಯಾಗಿದ್ದು ಎಂತಹವರೇ ಆಗಲಿ ಈ ಪ್ರಕರಣದಲ್ಲಿ ಹಾಗೂ ಎಷ್ಟೇ ಪ್ರಭಾವಿಗಳಿದ್ದರೂ ಅವರನ್ನು ಕಠೀಣವಾದ ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ತಾಲೂಕಿನ ಆಡಳಿತ ಮತ್ತು ಪೊಲೀಸ್ ಇಲಾಖೆ ಅಪರಾಧಿಗಳನ್ನು ಹೆಡೆಮುರಿಕಟ್ಟಿ ಬಂಧಿಸಬೇಕು ಎನ್ನುವುದು ಇಲ್ಲಿನ ನಾಗರೀಕರ ಒತ್ತಾಯವೂ ಆಗಿದೆ,
ಇಂದು ಮತ್ತೊಬ್ಬ ಬಸಮ್ಮ ಪಾಪಿಗಳ ಕೈಗೆ ಸಿಲುಕಿ ಕೊನೆಯುಸಿರೆಳೆದಿದ್ದಾಳೆ, ನಾಳೆ ಮತ್ತೊಬ್ಬ ಸಂತ್ರಸ್ಥೆಯಾಗುತ್ತಾಳೆ ಇದು ಬೇಕಾಗಿದಿಯಾ..? ಇಂತಹ ಘಟಿತ ಘಟನಾವಳಿಗಳು ಅಮಾನವೀಯವಾಗಿದ್ದು ಅತ್ಯಾಚಾರ ಪ್ರಕರಣಗಳು ನಡೆದಾಗ ಬಲವಾದ ಕಾನೂನಿನ ಕೊರತೆ ಒಂದೆಡೆಯಾದರೆ, ಬಲವಾದ ಶಿಕ್ಷೆ ಅತ್ಯಾಚಾರ ಅಪರಾಧಿಗಳಾದವರಿಗೆ ನೀಡದಿರುವುದು ಸಹ ಇಂತಹ ಅಮಾನುಷ ಘಟನೆಗಳಾದ ತರುವಾಯ ಖಾಲಿ ಮೊಂಬತ್ತಿ ಹಿಡಿದು ಪ್ರತಿಭಟನೆಗೈದು ಖಾಲಿ ಸಾಂತ್ವಾನಗಳಿಗಷ್ಟೇ ಸೀಮಿತವಾಗಿದೆ,
ಇತ್ತಿಚೆಗೆ ಬಂಗಾಳದಲ್ಲಿ ಜರುಗಿದ ವೈದ್ಯ ಹತ್ಯೆ ”ವೈದೋ ನಾರಾಯಣ ಹರಿ’ ಎನ್ನುವ ಜೀವ ಉಳಿಸುವ ವೈದ್ಯೆಯನ್ನು ಅಮಾನುಷವಾಗಿ ಅತ್ಯಾಚಾರಗೈದು ಬರ್ಬರವಾಗಿ ಹತ್ಯೆಗೈದ ಪ್ರಸಂಗ ನಿಜಕ್ಕೂ ನಾಗರಿಕ ಸಮಾಜತಲೆತಗ್ಗಿಸುವ ಕೆಲಸವಾಗಿದೆ, ಒಂದೇ ಎರಡೇ, ಭಾರತವೂ ಯಾವಾಗಲೂ ಅಹಿಂಸೆ ಪ್ರತಿಪಾದಿತ ರಾಷ್ಟ್ರವಾಗಿದ್ದು ಇಲ್ಲಿ ಇಂತಹ ಹೀನ ಕೃತ್ಯಗಳಿಗೆ ಅರಬ್ ರಾಷ್ಟ್ರಗಳ ಮಾದರಿಯ ಶಿಕ್ಷೇ ಅವಶ್ಯಕವಾಗಿದೆ, ಆದರೂ ಕೆಲವೊಮ್ಮೆ ಶಿಕ್ಷೆಯೊಂದೆ ಇದಕ್ಕೆ ತಕ್ಕ ಪರಿಹಾರವಲ್ಲವೆನಿಸಿದರೂ, ಹೀನ ಕೃತ್ಯಗಳನ್ನು ಅನುಭವಿಸಿದವರ ಮೂಕರೋಧನೆ ಕಂಡಾಗ ನಿಜಕ್ಕೂ ಇಂತಹ ಕಾನೂನಿನ ಅನವಶ್ಯಕತೆ ಇದೆ ಎನಿಸುತ್ತದೆ ಹೈದರಾಬಾದಿನ ಅತ್ಯಾಚಾರ ಪ್ರಕರಣದಲ್ಲಿ ಶಿವರಾಜ್ ಸಜ್ಜನರವರು ತೋರಿದ ದಿಟ್ಟತನ ನಿಜಕ್ಕೂ ಆ ವ್ಯಕ್ತಿಯ ಧೈರ್ಯದಿಂದ ಆ ಸಾವಿಗೆ ನ್ಯಾಯ ದೊರಕಿದಂತಾಯ್ತು ಎನ್ನುವ ನೆಮ್ಮದಿಯ ನಿಟ್ಟುಸಿರಿನ ಭಾವನೆ ನಿಜಕ್ಕೂ ಆ ಸಮಯದಲ್ಲಿ ವ್ಯಕ್ತವಾಗಿತ್ತು,
ಒಂದಷ್ಟು ಮನಸುಗಳ ನಾಲ್ಕು ಸಾಂತ್ವನ ಮಾತುಗಳಿಂದ ಹೆತ್ತ ಕರುಳಲ್ಲಿ ನಾವು ನ್ಯಾಯ ದೊರಕಿಸಿ ಕೊಡಲು ಸಾಧ್ಯವಿಲ್ಲ, ಇಂತಹ ವಿಕೃತತನ ಮೆರೆದ ಅಪರಾಧಿ ಕೊಲೆಗಡುಕರನ್ನು ಗಲ್ಲಿಗೇರಿಸುವಂತಹ ಕಾನೂನು ಕ್ರಮ ಕೈಗೊಂಡಾಗ ಮಾತ್ರ ಇಂತಹ ಅಮಾನವೀಯ ಪ್ರಕರಣಗಳಿಗೆ ಇತಿ ಹಾಡಬಹುದೇನೋ.. ಇದೀಗ ಬಸಮ್ಮ ಬಲು ನೋವಿನಿಂದಲೇ ಕಣ್ಮುಚ್ಚಿದ್ದಾಳೆ ಆಕೆಯ ಸಾವಿಗೆ ನ್ಯಾಯ ಸಿಗಲಿ ಎನ್ನುವುದು ನಾಗರೀಕರ ಅಭಿಪ್ರಾಯವಾಗಿದೆ.