I ಕಾರು ಡಿಕ್ಕಿ ; ಶಿವಮೊಗ್ಗ ಮೂಲದ I ಪಾದಾಚಾರಿಯ ಕಾಲು ಮುರಿತ I
ಉಡುಪಿ :- ನಿಟ್ಟೂರಿನ ಆಭರಣ ಶೋರೂಂ ಬಳಿ ಪಾದಾಚಾರಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಎಡ ಕಾಲು ಸಂಪೂರ್ಣ ಮುರಿತಕ್ಕೊಳಗಾಗಿದೆ.
ಕೂಡಲೇ ವಿಶುಶೆಟ್ಟಿ ಅಂಬಲಪಾಡಿಯವರು ಆ್ಯಂಬುಲೆನ್ಸ್ ಗಾಗಿ ಕಾಯದೆ ಸಾರ್ವಜನಿಕರ ಸಹಾಯದಿಂದ ತನ್ನ ವಾಹನದಲ್ಲಿ ರೋಗಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ರೋಗಿ ಶಿವಮೊಗ್ಗ ಮೂಲದ ಮೌನೇಶ ನಾಯ್ಕ್ (46 ವರ್ಷ )ಎನ್ನುವವರಾಗಿದ್ದಾರೆ. ಸಂಚಾರಿ ಠಾಣೆಗೆ ಮಾಹಿತಿ ನೀಡಲಾಗಿದೆ.

