Sunday, August 2, 2026
Homeಸಾಹಿತ್ಯI ಸಾಕ್ಷಿ ಹೇಳಿದ ಮಸಣದ ಹೆಣ I

I ಸಾಕ್ಷಿ ಹೇಳಿದ ಮಸಣದ ಹೆಣ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಸಾಕ್ಷಿ ಹೇಳಿದ ಮಸಣದ ಹೆಣ I

ಸಹಾನುಭೂತಿ ಇಲ್ಲದ ನಿಯಮ..
ಮನುಷ್ಯತ್ವವೇ ದರ್ಶಿಸದ ಕ್ರೌರ್ಯ,
ಮಸಣದ ಹೆಣ ಕ್ರಮಿಸಿ, ಸಾಕ್ಷೀ ಹೇಳಿತು,
ಖಾತೆಯ ಹಣ ಎನ್ನದೆಂದು ತಿಳಿಸಿತು,

ಆದಿವಾಸಿ ಜೀತು ಮುಂಡಾನ ಅನಕ್ಷರಸ್ಥತೆ..!
ಸಾಕ್ಷರತೆಯ ಮೂಲಭೂತ ಜ್ಞಾನ ಕೆಣಕಿತ್ತು,
ಬ್ಯಾಂಕಿಂಗ್ ಮಾನಸೀಕತೆ ದರ್ಪಿಸಿ ದರ್ಪಣವಿಟ್ಟಿತ್ತು,
ದಿಕ್ಕು ತೋಚದಾತ, ಗೋರಿ ಬಗೆದು ಹೊತ್ತು ತಂದಿದ್ದ..!

ಮೂಳೆಮಾಂಸಗಳ ಜಾರಿದ್ದ ಹೊದಿಕೆಯದು,
ದಾರಿ ಉದ್ದಕ್ಕೂ ಅಮಾನವೀಯತೆ ಸಾರಿತ್ತು,
ಜಗದ ಜಗಲಿನಲಿ, ಕಿಯೋಂಜಾರ್ ಊರು ಹರಿದಾಡಿತು,
ಒಡಿಶಾದ ಎದೆಯಂಗಳದಿ ಬಿಸಿಗಂಬನಿ ತುಂಬಿತ್ತು,

ನಿರ್ಲಕ್ಷ್ಯ, ನಿರ್ಲಜ್ಜಗೇಡಿನ ಮಾತುಗಳು,
ಹೃದಯ ವಿದ್ರಾವಕ ಘಟನೆ ಘಟಿಸಿದ ಕ್ಷಣಗಳು,
ಮಾನವೀಯತೆಯೊಮ್ಮೆ ಮೈ ನಡುಗಿಸಿತು,
ಕೊನೆಗೂ ಸಾಕ್ಷಿಗೆ ತಲೆಬಾಗಿದ ಅಧಿಕಾರಿಗಳು,
ಭಯದ ಬೆವರಿನ ನೀರಿನೊಳು ತೊಯ್ದಿದ್ದರು..!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I