I ಜು.3 ರಂದು ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಸ್ವರ್ಣ ಕವಚ I ರಜತಾ ದ್ವಾರ ಸಮರ್ಪಣಾ ಸಮಾರಂಭ I
ಶಿವಮೊಗ್ಗ : ನಗರದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಸ್ವರ್ಣ ಮುಖ ಕವಚ ಹಾಗೂ ರಜತಾದ್ವಾರ ಸಮರ್ಪಣಾ ಸಮಾರಂಭ ಜು.3 ರಂದು ಬೆಳಿಗ್ಗೆ 12 ಗಂಟೆಗೆ ದೇವಸ್ಥಾನದ ಆವರಣದಲ್ಲಿ ನೆರವೇರಲಿದೆ.


ಹೊರನಾಡು ಅನ್ನಪೂರ್ಣ ದೇವಸ್ಥಾನದ ಧರ್ಮದರ್ಶಿ ಡಾ.ಜಿ ಭೀಮೇಶ್ವರ ಜೋಷಿ ರವರ ದಿವ್ಯಾ ಸಾನಿಧ್ಯದಲ್ಲಿ ಹಾಗೂ ಅವರ ಅಮೃತ ಹಸ್ತದಿಂದ ದೇವಿಗೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಪೂರ್ವಭಾವಿಯಾಗಿ ಜೂ.30 ರಿಂದ ಜು.2 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು , ಗಣಪತಿ ಪೂಜೆ , ಪೂಣ್ಯಾಹ ವಾಚನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಲಿದೆ.
ಜು.3 ರಂದು ಬೆಳಿಗ್ಗೆ 8.30ಕ್ಕೆ ಗಣಪತಿ ಪೂಜೆಯೊಂದಿಗೆ ಸಮರ್ಪಣಾ ಕಾರ್ಯಕ್ರಮ ಆರಂಭವಾಗಲಿದ್ದು ಸಾಮೂಹಿಕ ಲಲಿತ ಹೋಮವನ್ನ ದೇವಸ್ಥಾನದ ಪ್ರದಾನ ಆರ್ಚಕ ಸಂತೋಷ್ ಭಾರದ್ವಾಜ್ ನಡೆಸಿಕೊಡಲಿದ್ದಾರೆ.
ಬೆಳಿಗ್ಗೆ 11.30 ಕ್ಕೆ ಪೂರ್ಣಾಹುತಿ ಹಾಗೂ ಅಮ್ಮನವರಿಗೆ ಬಂಗಾರದ ಮುಖ ಕವಚ ಸಮರ್ಪಣೆ ,ಗರ್ಭಗುಡಿಯ ರಜತದ್ವಾರ ಸಮರ್ಪಣೆ ನಡೆಯಲಿದ್ದು ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ , ಸಭಾ ಕಾರ್ಯಕ್ರ ಮ ನೆರವೇರಲಿದೆ. ಸಭಾ ಕಾರ್ಯಕ್ರಮದಲ್ಲಿ ಡಾ.ಭೀಮೇಶ್ವರ ಜೋಷಿ ಆರ್ಶೀವಚನ ನೀಡಲಿದ್ದು , ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್ . ಕೆ . ಮರಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಶಾಸಕ ಎಸ್ . ಎನ್ . ಚನ್ನಬಸಪ್ಪ ,ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ,ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ , ಸಮಾಜ ಸೇವಕ ಎಂ.ಶ್ರೀಕಾಂತ್ , ಇವರುಗಳು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್ . ಮಂಜುನಾಥ್ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದ್ದಾರೆ.
