ಆಶ್ರಯ ಮನೆ ಸಹಾಯಧನಕ್ಕೆ ಅರ್ಜಿ : ಯಮುನಾ ರಂಗೇಗೌಡ
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ವಂತ ನಿವೇಶನ ಹೊಂದಿರುವ ವಸತಿ ರಹಿತ ಕುಟುಂಬಗಳಿಗೆ ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಸಹಾಯ ಧನ ನೀಡಲಿ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಮತ್ತು ಪಂಗಡಕ್ಕೆ ರಾಜ್ಯ ಸರ್ಕಾರದಿಂದ ೨ ಲಕ್ಷ ಹಾಗೂ ಕೇಂದ್ರ ಸರಕಾರದಿಂದ ೧.೫ ಲಕ್ಷ ಸಹಾಯದನ ನೀಡಲಾಗುವುದು. ಸಾಮಾನ್ಯ ವರ್ಗದವರಿಗೆ ಕ್ರಮವಾಗಿ ರಾಜ್ಯ ಸರ್ಕಾರ ೧.೨ ಲಕ್ಷ ಹಾಗೂ ಕೇಂದ್ರದಿಂದ ೧.೫ ಲಕ್ಷ ಸಹಾಯಧನ ನೀಡಲಾಗುವುದು ಆಸಕ್ತರು ಜು.೧೫ ರೊಳಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ ಮಹಾನಗರ ಪಾಲಿಕೆ ಆಶ್ರಯ ಸಮಿತಿ ಕಚೇರಿ ಸಂಪರ್ಕಿಸಬಹುದು ಎಂದು ಸಮಿತಿಯ ನಾಮನಿರ್ದೇಶಿತ ಸದಸ್ಯೆ ಯಮುನಾ ರಂಗೇಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

