ಬರೆಯುತ್ತಾರೆ ಗಾರಾ.ಶ್ರೀನಿವಾಸ್
ಹೆಚ್.ಎಸ್ ಸುಂದರೇಶ್ I ಯುವಕರ ಐಕಾನ್ ಕೂಡ ಹೌದು I ನಿಷ್ಕಲ್ಮಶಿಯು ಹೌದು
ಅಂದು ನಾಗರೀಕ ವಲಯ ಕೊರೋನಾ ಕಾಲದಲ್ಲಿಯೇ ಆಗಲಿ, ಸಾಮಾಜಿಕ ನ್ಯಾಯದ ಸಂಗತಿಯಲ್ಲಿಯೇ ಆಗಲಿ ನಗರ ಜೆಡಿಎಸ್ ಯಾವುದೇ ದನಿಗೂಡಿಸದೇ ನೈತಿಕ ಬೆಂಬಲವಿತ್ತದೇ ಮೌನವಹಿಸಿದ್ದು ಜನತೆಗೆ ಗೊತ್ತೇ ಇದೆ, ಇಂತಹ ಪ್ರಬಲ ಕಾರಣಗಳೊಂದಿಗೆ ವಿದ್ಯಾರ್ಥಿ ದಿಸೆಯಿಂದಲೂ ಸಂಘಟಿತ ಸರಳ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಐದು ವರುಷಗಳಿಂದ ನ್ಯಾಯಸಮ್ಮತಿಗೊಳಿಸಿದ್ದ ಹೆಚ್.ಎಸ್.ಸುಂದರೇಶ್ ಅವರಿಗೆ ಇದೀಗ ಸ್ಬೂಡಾ ನಿಗಮ ಮಂಡಳಿ ಅಧ್ಯಕ್ಷಗಾದಿ ನೀಡಿ ಗೌರವಿಸಿದೆ,
ಇನ್ನೂ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎನ್ನುವ ಎಲ್ಲಾ ರಾಜಕೀಯ ವಾತಾವರಣಗಳು ದರ್ಶಿಸಿಕೊಳ್ಳದೆ ಇದ್ದರೂ ಹೆಚ್.ಎಸ್ ಸುಂದರೇಶ್ರವರು ಬಿಜೆಪಿಯ ಭದ್ರಕೋಟೆಯಾಗಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ರಾಜಕೀಯ ಗೆಲುವಿನ ಲಗ್ಗೆಯಿಟ್ಟು ಮನುಷ್ಯ ಪ್ರೀತಿಯ ವಾತಾವರಣವನ್ನು ನಿರ್ಮಿಸುವುದರಲ್ಲಿ ಯಾವುದೇ ನಿಸ್ಸಂದೇಹವಾಗಿ ಮುಂದುವರೆದಿದ್ದಾರೆ. ಇಂತಹದೊಂದು ಅಸಲಿ ವಾಸ್ತವಗಳಿಂದ ಹೆಚ್.ಎಸ್ ಸುಂದರೇಶ್ರವರಿಗಿರುವ ಸುಧೀರ್ಘ ಪಕ್ಷನಿಷ್ಠೆ, ಸಾಮಾಜಿಕ ಬದ್ದತೆ, ನಿರಂತರ ಹೋರಾಟಗಳ ಫಲವಾಗಿ ಮುಂದೆಯೂ ಉನ್ನತ ಜವಾಬ್ದಾರಿಗಳು ನೀಡುವ ಹಂತದಲ್ಲಿ ಹೈಕಮಾಂಡ್ ಅಂಗಳದಲ್ಲಿದೆ ಎನ್ನುತ್ತಿದೆ ಮೂಲಗಳು, ಇಂತಿವರ ಕುರಿತಾಗಿ ಸೂರ್ಯಗಗನ ಪತ್ರಿಕೆ ಕಲೆಹಾಕಿರುವ ಸಮಗ್ರ ಮಾಹಿತಿ ಇಲ್ಲಿದೆ ಹೆಚ್.ಎಸ್ ಸುಂದರೇಶ್ರವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹಸಿರು ಸಿಂಚನದ ನೆಲೆಯಾದ ತೀರ್ಥಹಳ್ಳಿಯ ಪುಟ್ಟ ಗ್ರಾಮದ ಹೊಸಬೀಡಿನವರು.
ಅವರು ತಮ್ಮ ಬಾಲ್ಯದಿಂದಲೇ ಸಮಾಜಸೇವೆಯಲ್ಲಿ ತಲ್ಲೀನತೆ ಹೊಂದಿದ್ದರು, ಶಿವಮೊಗ್ಗದಲ್ಲಿಯೇ ವ್ಯಾಸಾಂಗ ಪೂರೈಸುವ ಅವರು ತಮಗಿರುವ ಸಾಮಾಜಿಕ ಕಾಳಜಿ ತಳೆದಂತೆ ಮೊದಲಿಗೆ ಕಾಂಗ್ರೆಸ್ ಸದಸ್ಯರಾಗಿ ಸೇರ್ಪಡೆಯಾಗುತ್ತಾರೆ, ನಂತರ ನಾಮನಿರ್ದೇಶಿತ ನಗರಸಭೆ ಸದಸ್ಯರಾಗಿ ಉತ್ತಮ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ೧೯೮೮ ರಲ್ಲೇ ಜಿಲ್ಲಾ ಯುವಕಾಂಗ್ರೆಸ್ಸಿನ ಅಧ್ಯಕ್ಷರಾಗಿ ಸಾವಿರಾರು ಯುವಕರನ್ನು ಕಟ್ಟಿ ಬೆಳಸಿ ಪಕ್ಷದ ಬಲವರ್ಧನೆಗೆ ಶ್ರಮಿಸಿರುವ ಕಿಂಗ್ ಮೇಕರ್ ಎನ್ನುವುದರಲ್ಲಿ ಯಾವುದೇ ಮರು ಮಾತಿಲ್ಲವಾಗಿದೆ. ಇಂತಿವರ ಗರಡಿಯಲ್ಲಿ ಪಳಗಿದವರಲ್ಲಿ ಜಿಲ್ಲಾ ಹಾಗು ರಾಜ್ಯಮಟ್ಟದ ಪಧಾದಿಕಾರಿ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ ಇನ್ನೂ ಅಧಿಕಾರದಂದಣದ ಹಪಾಹಪಿತನದಿಂದ ದೂರವಿದ್ದ ಯುವ ಮುಂದಾಳು ಹೆಚ್.ಎಸ್ ಸುಂದರೇಶ್ರವರಿಗೆ ಮುರ್ನಾಲ್ಕು ಭಾರಿ ಶಿವಮೊಗ್ಗ ವಿಧಾನಸಭೆಗೆ ಸ್ಪರ್ದಿಸಲು ರಹದಾರಿಗಳಿದ್ದರೂ ಸಹ ಅದನ್ನು ನಿರಾಕರಿಸಿ ಭದ್ರ ಕಾಡ ಅಧ್ಯಕ್ಷರಾಗಿ ರೈತಪರ ಸಂಕಷ್ಟಗಳಿಗೆ ಸದಾ ದನಿಯಾಗಿ ನಿಂದಿದ್ದು ವಿಶೇಷವಾಗಿದೆ.
ಕಾಂಗ್ರೆಸ್ಸಿನ ರಾಷ್ಟ್ರೀಯ ಹಾಗು ರಾಜ್ಯ ಮುಖಂಡರು ಪಕ್ಷವನ್ನು ಬಲಪಡಿಸಲು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷರಾಗುವಂತೆ ಸೂಚಿಸುತ್ತಾರೆ ಅದರಂತೆ ಪಕ್ಷದ ಸಂಕಷ್ಟದ ಕಾಲದಲ್ಲಿ ಕಾಂಗ್ರೆಸ್ ಮುನ್ನಡೆಸುವ ಹಾಗು ಕಟ್ಟಿ ಬೆಳೆಸುವ ಚುಕ್ಕಾಣಿ ಹಿಡಿಯುತ್ತಾರೆ. ಯಾರು ಊಹಿಸಲಾಗದ ಮಾದರಿಯಲ್ಲ್ಲಿ ಕಾಂಗ್ರೆಸ್ಸಿಗೆ ಇದ್ದಂತಹ ಗತ ವೈಭವವನ್ನು ನೀಡಿ ಮತ್ತೆ ಸಂಘಟಿತ ಪಕ್ಷವಾಗಿ ಝಳಪಿಸುವಂತೆ ಮಾಡುತ್ತಲಿ ವಿರೋಧಿಗಳು ಹಾಗು ವಿಪಕ್ಷೀಯ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿದ್ದು ಇದೇ ಹೆಚ್.ಎಸ್.ಸುಂದರೇಶ್ ಎನ್ನುವುದು ಮೇಲ್ನೋಟಕ್ಕೆ ಗೊತ್ತು ಮಾಡಿಕೊಳ್ಳಬಹುದು. ಕೋಮುಗಲಭೆಯನ್ನೇ ಅಭಿವೃದ್ಧಿ ಎನ್ನುವ ವಿಷಕಾರಿ ನಾಯಕರ ಮನಸ್ಥಿತಿಗೆ ಬೆಸ್ತು ಬಿದ್ದಿರುವ ಶಿವಮೊಗ್ಗದ ಜನತೆಯ ನೆಮ್ಮದಿ ಕುಸಿದು ಹೋಗಿರುವ ದಿನಮಾನದ ಗಲಭೆಗಳು ಎದುರಾದರೂ ಎದೆಗುಂದದೆ ಸಾವಿರಾರು ಕಾರ್ಯಕರ್ತರನ್ನು ಬೆನ್ನಿಗೆ ಕಟ್ಟಿಕೊಂಡು ಜನಪರ ದನಿಯಾಗಿದ್ದು, ಪ್ರತಿಭಟನೆಗಳು ಸಗಟುಗಳು ಮಲೆನಾಡಿನಲ್ಲಿದೆ.
ಪಕ್ಷದ ಆಂತರಿಕ ವಿಷಯದಿಂದ ಹಿಡಿದು, ಒಳ ಅಸಮಧಾನಗಳನ್ನು ಬಗೆಹರಿಸಿ ಎಲ್ಲರನ್ನು ಒಂದೇ ದಿಕ್ಕಿನಲ್ಲಿ ಕೊಂಡೊಯ್ಯುವಲ್ಲಿ ಸುಂದರೇಶ್ ಯಾವಾಗಲು ಮುಂದು… ಇನ್ನೂ ನೆರೆ ಬಂದಂತಹ ಸಮಯದಲ್ಲಿ ಅಧಿಕಾರಯುಕ್ತ ಪ್ರಜಾಪ್ರತಿನಿದಿಗಳು ಬೇರೆಲ್ಲೋ ಕೂತು ಕೇವಲ ಮಾಧ್ಯಮದ ಪ್ರಚಾರಕ್ಕಷ್ಟೇ ಸೀಮಿತವಾದಾಗ, ಸಹಾಯ ಹಸ್ತವೆಂಬ ಹೆಸರಿನಡಿಯಲ್ಲಿ ನಾಯಕರನ್ನೆಲ್ಲ ಒಗ್ಗೂಡಿಸಿ ಸಾವಿರಾರು ಜನರಿಗೆ ಮೂರು ತಿಂಗಳಿಗಾಗುವಷ್ಟು ದಿನಸಿ ಹಾಗು ದಿನನಿತ್ಯದ ಸಾಮಗ್ರಿಗಳನ್ನು ಒದಗಿಸಿದ್ದಲ್ಲದೆ ಜನರ ಸಂಕಷ್ಟಗಳಿಗೆ ನೆರವಾಗುವಂತೆ ಚುನಾಯಿತ ಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದಾಗ ಶಿವಮೊಗ್ಗದ ಜನತೆ ಶ್ಲಾಘಿಸಿರುವುದು ಮೆಚ್ಚುವಂತಹದ್ದಾಗಿದೆ.
ನೆರೆಯಿಂದ ಹಾನಿಗೊಳಗಾದವರ ಮನೆಗಳಿಗೆ ಸ್ವತಃ ಭೇಟಿಕೊಟ್ಟು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಜೀವಂತ ಉದಾಹರಣಗಳಿವೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿಯವರ ಹುಟ್ಟುಹಬ್ಬದ ನಿಮಿತ್ತ ಸಾವಿರಾರು ಜನರಿಗೆ ವೈದ್ಯಕೀಯ ಸೌಲಭ್ಯ ಒದಗಿಸಿ ಶಿವಮೊಗ್ಗದ ಆಧಿಚುಂಚನಗಿರಿಯಲ್ಲಿ ಉಚಿತ ಮೆಡಿಕಲ್ ಕ್ಯಾಂಪ್ ವ್ಯವಸ್ಥೆ ಮಾಡಿದ್ದಷ್ಟೇ ಅಲ್ಲದೆ ೨೩ ಜನರಿಗೆ ಉಚಿತ ಕಣ್ಣಿನ ಚಿಕಿತ್ಸೆ ಒದಗಿಸಿದ ಅನನ್ಯ ಸೇವೆ ಇವರದ್ದಾಗಿದೆ ಪ್ರತಿ ವರುಷದ ಸೆ.೧೭ರಂದು ಶಿವಮೊಗ್ಗದಲ್ಲಿ ಇವರ ಹುಟ್ಟು ಹಬ್ಬದ ಆಂಗವಾಗಿ ಬೆಂಬಲಿಗರು ಸಲ್ಲಿಸುತ್ತಿರುವ ಸೇವೆ ಇತಿಹಾಸದಲ್ಲಿ ಯಾವ ರಾಜಕಾರಣಿಗಳದ್ದು ಕೂಡ ಇಂದಿಗೂ ದರ್ಶಿಸಲಾಗಲಿಲ್ಲ, ಅಂತಹದೊಂದು ಜನಸೇವೆ, ಅವರಿಗೆ ಬರಪೂರವಾಗಿ ಸಲ್ಲಿಸಿದ ಶುಭಾಶಯಗಳು ಶಿವಮೊಗ್ಗದ ನಗರದಲ್ಲಿ ಅತೀವ ಚರ್ಚೆಯನ್ನು ಮರುಕಳಿಸುತ್ತಲೇ ಇದೆ,
ಒಟ್ಟಿನಲ್ಲಿ ಹೆಚ್.ಎಸ್ ಸುಂದರೇಶ್ ಯುವಕರ ಐಕಾನ್ ಎನ್ನುವುದರಲ್ಲಿ ಯಾವುದೇ ನಿಸ್ಸಂಶಯವಾಗಿ ಹೇಳಬಹುದು.

