- ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ಎಸ್ಪಿ ನಿಖಿಲ್ರವರ I ಜನಸ್ನೇಹಿ ಕರ್ತವ್ಯಕ್ಕೆ I ಮಲೆನಾಡು ಫಿದಾ..! I
ಭಾರತೀಯ ಗಣೇಶೋತ್ಸವಗಳಲಿ ದಕ್ಷಿಣ ಕರ್ನಾಟಕದ “ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ” ಒಂದು ಐತಿಹಾಸಿಕ ಹಿನ್ನಲೆ ಹೊಂದಿದೆ, ವಾಸ್ತವವಾಗಿ ಹಿಂದೂ ಮಹಾಸಭಾ ಗಣಪತಿಯು ಈ ಹಿಂದೆ ಗಲಾಟೆ ಗಣಪನೆಂದೇ ಬಿಂಬಿತವಾಗಿತ್ತು, ವಿಸರ್ಜನಾ ಮೆರವಣಿಗೆ ಎಂಬುದು ಇಡೀ ನಗರಕ್ಕೆ ಆತಂಕದ ವಾತಾವರಣವೇ ಸೃಷ್ಟಿಯಾಗುತಿತ್ತು, ಒಮ್ಮೊಮ್ಮೆ ಲಘು ಲಾಠಿ ಪ್ರಹಾರಗಳು ಜರುಗಿ ಬಿಡುತಿತ್ತು, ಪೊಲೀಸರು ಹಾಗೂ ಮೆರವಣಿಗೆಕಾರರ ನಡುವಣ ಕದನವೂ ಏರ್ಪಡುತಿತ್ತು, ಅಲ್ಲಲ್ಲಿ ಕಿಡಿಗೇಡಿ ಕೃತ್ಯಗಳಿಂದ ಚಪ್ಪಲಿ ತೂರಿ ಬರುತಿತ್ತು, ಇಂತಿವ ಹತ್ತಾರು ಘಟಿತ ಘಟನೆಗಳಿಂದ ಶಿವಮೊಗ್ಗ “ಹಿಂದೂ ಮಹಾಸಭಾ ಗಣಪತಿ” ಉತ್ಸವವೂ ಗಲಾಟೋತ್ಸವ ಎಂದು ಉವಾಚಿಸಿಕೊಳ್ಳುತ್ತಿದ್ದ ಇತಿಹಾಸದ ನೆನೆವು ಹಾಗೂ ಅನುಭವಿತ ಕಾರಣಗಳಿಂದ ಉತ್ಸವದಲ್ಲಿ ಸಾಂಸ್ಕೃತಿಕ ಮೆರಗುಗಳು ಮರಣ ಶಾಸನ ಬರೆದುಕೊಳ್ಳುತಿತ್ತು ಎಂಬುದೇ ಅತ್ಯಂತ ದಯನೀಯತೆಗಳು, ರಾಜಕೀಯ ಒಳಮರ್ಮವು ತಳಕು ಹಾಕಿಕೊಳ್ಳುತ್ತಿದ್ದ ಕಾರಣಗಳು, ತಹಬದಿಗೆ ತರುವ ನಿಟ್ಟಿನಲ್ಲಿ ಪೊಲೀಸರು ಹೆಣಗಾಡುತ್ತಿದ್ದ ವಿಷಮ ಪರಿಸ್ಥಿತಿಗಳು ಮಲೆನಾಡ ಹೆಬ್ಬಾಗಿಲಿನ ನಾಗರೀಕರ ಜಗಲಿಗಳು ತಲ್ಲಣಗೊಂಡು ಸೌಹಾರ್ದ, ಸಾಮರಸ್ಯಗಳಿಗೆ ತುಸು ದಿನಮಾನಗಳು ಎಳ್ಳು-ನೀರು ಬಿಟ್ಟುಕೊಳ್ಳುವ ಪರಿಸ್ಥಿತಿಗಳು, ಪ್ರತಿ ಸಾಲು ಎದುರಾಗುತಿತ್ತು ಎನ್ನುವುದು ವಾಸ್ತವವು ಕೂಡ,
ಅಸಲಿಗೆ “ಗಣೇಶೋತ್ಸವ” ಎಂಬುದು ದೇಶಿಯ ಜನವಾಸಿಗಳನ್ನು ಒಗ್ಗೂಡಿಸಿ ಈ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಯುವ ಸಮುದಾಯವನ್ನು ಧುಮುಕಿಸುವ ಸಂಘಟಿತ ಬಲವರ್ಧನೆಗಾಗಿ ಬಾಲಗಂಗಾಧರ ತಿಲಕರ ಉದ್ದೇಶ ಅಡಗಿತ್ತು, ಈ ಸದುದ್ದೇಶದಲ್ಲಿ ಈ ಎಲ್ಲಾ ಧರ್ಮಿಯ ಸಮುದಾಯಗಳು ಪಾಲ್ಗೊಂಡಿದ್ದವು, ಅದಾಗ ಯಾವ ಧರ್ಮ ಸಂಘರ್ಷಗಳು ಈ ಉತ್ಸವದಲ್ಲಿ ಕಾಣ ಸಿಗುತ್ತಿರಲಿಲ್ಲ, ಬದಲಿಗೆ ಎಲ್ಲರ ಒಂದೇ ಧ್ಯೇಯ ಏನೆಂದರೆ ಸಮಾಜದ ಏಕತೆ, ಸ್ವಾತಂತ್ರ್ಯ ಗಳಿಸುವಿಕೆಯ ಹೋರಾಟಗಳ ತಳಸ್ಪರ್ಶಿ ಲೇಪನಗಳಿತ್ತು, ಆದರೆ ಬದಲಾದ ವಿದ್ಯಮಾನಗಳಲಿ ರಾಜಕೀಯ ಎಂಟ್ರಿಗಳಿಂದ ಅನಾಯಾಸವಾಗಿ ಗಣೇಶೋತ್ಸವ ಒಟ್ಟು ಸಮಾಜಕ್ಕೆ ಸೀಮಿತವಲ್ಲ, ಈ ಹಿಂದಿನ ಸ್ವಾತಂತ್ರ್ಯದ ಹೋರಾಟಕ್ಕಲ್ಲ, ಇದೊಂದು ಹಿಂದುತ್ವದ ಅಜೆಂಡಾಗಳಿಗೆ ಒಳಪಟ್ಟಿದೆ ಎಂದು ಭಾರತೀಯ ಜನತಾ ಪಕ್ಷ ಸ್ವಘೋಷಿತವಾಗಿ ಆಪೋಶನ ತೆಗೆದುಕೊಂಡಿತು, ಬರ ಬರುತ್ತಾ ಇದೊಂದು ಅನ್ಯ ಧರ್ಮದವರ ವಿರುದ್ದವೇ ಎನ್ನುವ ಘಟಾನುವಳಿಗಳು ಏರ್ಪಟ್ಟವು, ಇದಕ್ಕೆ ಶಿವಮೊಗ್ಗ ಹಿಂದೂ ಮಹಾಸಬಾ ಗಣಪತಿ ವಿಸರ್ಜನಾ ಮೆರವಣಿಗೆಗಳು ಅನೇಕತೆಯ ಬುಟ್ಟಿಯನ್ನು ತೆರೆದಿಡುತ್ತದೆ, ಈ ಉತ್ಸವದ ಕಾರಣವೂ ಶಿವಮೊಗ್ಗ ಬಿಜೆಪಿ ಶಾಸಕರ ಆಯ್ಕೆಯನ್ನು ನಿರ್ಧರಿಸುತಿತ್ತು, ಒಂದೊಮ್ಮೆ ಗಲಾಟೆಗಳು ನಿಲ್ಲದ ಕಾರಣಕ್ಕಾಗಿ ಸಮಿತಿಯವರೇ ಬೇಸತ್ತು ಮೂರು ವರ್ಷಗಳ ಕಾಲ ರಾಜಬೀದಿ ವಿಸರ್ಜನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿತ್ತು ಎನ್ನುವುದು ಈ ಹೊತ್ತಿಗೂ ವಾಸ್ತವದ ಫಲಕಗಳಿದೆ,
ಮುಂದುವರೆದಂತೆ ನಿಜಕ್ಕೂ ಇತ್ತೀಚಿನ ವರುಷಗಳಿಂದ ಜನಸಮೂಹದ ಮಾನಸೀಕತೆ ಬದಲುಗೊಂಡಿದೆ, ಇದಕ್ಕೊಂದು ಸಾಂಸ್ಕೃತಿಕ ಪರಂಪರೆಯ ಸ್ಪರ್ಶ ನೀಡಿರುವುದು ಶ್ಲಾಘನೀಯ, ಮಹಿಳೆಯರು, ಯುವತಿಯರು ಇಲ್ಲದಾಗಿದ್ದ ವಿಸರ್ಜನಾ ಮೆರವಣಿಗೆಯಲ್ಲಿ ಇದೀಗ ಯಾವುದೇ ಆತಂಕವಿಲ್ಲದೆ ವಿವಿಧ ಕಲಾ ಮೇಳಗಳ ಸದ್ದುಗಳೊಂದಿಗೆ ಕುಣಿದು ಕುಪ್ಪಳಿಸುತ್ತಿರುವ ಕಾಲಮಾನಗಳಲ್ಲಿ ಮಲೆನಾಡಿನ ಜನತೆಯ ಸಂಭ್ರಮ ಬಂದು ನಿಂತಿರುವುದು ರಾಜಕೀಯದ ಹಿಡಿತಗಳಿಗೆ ಹಿನ್ನಡೆ ತಂದೊಡ್ಡಿರುವುದಕ್ಕೆ ಎಲ್ಲಾ ಪಕ್ಷಾತೀತ ಹಾಗೂ ಜಾತ್ಯಾತೀತ ಮನಸುಗಳ ಸಂಗಮವೇ ಸಾಕ್ಷೀಕರಿಸಿದೆ,
“ವಿಸರ್ಜನಾ ಮೆರವಣಿಗೆ” ಎಂದ ಕೂಡಲೇ ಪೊಲೀಸರಿಗೆ ಸವಾಲೆಸೆಯುತ್ತಿದ್ದ ಸಾಂಧರ್ಬಿಕತೆಗಳು ಇದೀಗ ಕಡಿತವಾಗಿದ್ದರು, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಜಾಣ್ಮೆ ಹಾಗೂ ನಿರ್ವಹಿಸುತ್ತಿದ್ದ ಜನಸ್ನೇಹಿ ಕರ್ತವ್ಯಗಳಿಂದ ಯಾವುದೇ ಅಹಿತಕರ ಘಟನೆಗಳು ದರ್ಶಿಸಿಕೊಳ್ಳದೆ ಸೌಹಾರ್ದತೆಯುತವಾಗಿ ಜನ ನಿರುಮ್ಮಳತೆಗೆ ಕಾರಣವಾಗುತಿತ್ತು ಈ ಮಾತ್ರಕೆ ಮಲೆನಾಡಿಗರು ಧನ್ಯವಾದ ಅರ್ಪಿಸಲೇಬೇಕಾಗಿದೆ.
ಹೌದು ಒಂದು ಹಂತದ ಮಾಹಿತಿಯಂತೆ ಮುಂಬರುವ ೨೦೨೮ರ ಚುನಾವಣೆಯ ನಿಮಿತ್ತಗಳು, ಹಿಂದೂಪರ ನಿಲುವಿನ ಇಬ್ಬಗೆಯ ಗುಂಪುಗಳು, ರಾಜಕೀಯ ಹಿಡಿತಗಳ ಹಿನ್ನಲೆಯಲ್ಲಿ ನಾಗರೀಕ ವಲಯದಲ್ಲಿ ವ್ಯಾಪಕ ಚರ್ಚೆಗಳಿದ್ದವು, ತುಸು ಕೆಣಕಿದರೂ ಶಿವಮೊಗ್ಗವನ್ನು ಪ್ರಕ್ಷುಬ್ಧತೆಗೆ ತಳ್ಳಿ ಬಿಡುವ ಸಾಂದರ್ಭಿಕತೆಗಳಿದ್ದವು, ಇಂತಿವ ಮುನ್ನಲೆಯ ಪುಟಗಳಿಡಿದು, ಎಸ್ಪಿ ನಿಖಿಲ್ರವರು ತೆಗೆದುಕೊಂಡ ಮುಂಜಾಗೃತಾ ಹೆಜ್ಜೆಗಳು, ಇಡೀ ಶಿವಮೊಗ್ಗದ ಶಾಂತತೆಗೆ, ಸಹಭಾಳ್ವೆಗೆ, ಸಾಮರಸ್ಯ ಸೌಹಾರ್ದತೆಯ ನಿರುಮ್ಮಳತೆಯನ್ನು ಕಟ್ಟಿ ಕೊಟ್ಟಿದೆ,
ಹೌದು ಎಂತಹುದೇ ಸಂದರ್ಭದಲ್ಲೂ ಉನ್ನತಾಧಿಕಾರಿಗಳ ಕರ್ತವ್ಯದಿಂದ, ಆಧುನಿಕತೆಯ ತಂತ್ರಜ್ಞಾನ, ಪೊಲೀಸ್ ಸಿಬ್ಬಂದಿಗಳ ಸೋರ್ಸ್ಗಳನ್ನು ಆಯಕಟ್ಟಿನಲ್ಲಿ ನಿಯೋಜಿಸುವುದು, ಡ್ರೋಣ್ ಬಳಕೆಗಳಿಂದ ಕಣ್ಗಾವಲಿನಲ್ಲಿರಿಸುವುದು, ಹಾಗೂ ಅತೀ ಮುಖ್ಯವಾಗಿ ಯುವ ಕಲಾವಿದ ಜೀವನ್ ತಂಡದಿಂದ ಹಿಂದೂ ಅಲಂಕಾರ ಸಮಿತಿಯ ಅಣತಿಯಂತೆ ತಾತ್ಕಾಲಿಕವಾಗಿ ಪ್ರತಿಷ್ಠಾಪಿಸಲಾಗಿದ್ದ ಗಾಂಧಿ ಬಜಾರಿನ ಮುಖ್ಯ ಧ್ವಾರದ “ಪಂಚಮುಖಿ ಹನುಮಂತನ ಕಲಾಕೃತಿಯ ಧ್ವಾರ” ಅಮೀರ್ ಅಹಮದ್ ವೃತ್ತದಲ್ಲಿ ಶಿವಾಜಿ-ಭವಾನಿ ಮಾತೆಯ ದೈತ್ಯ ಕಲಾಕೃತಿ, ಸಾಗರ ರಸ್ತೆಯ “ಸಮುದ್ರ ಮಂಥನ” ಪುರಿ ಜಗನ್ನಾಥ ಸ್ವಾಮಿಯ “ರಥಗಳ ಪ್ರತಿಕೃತಿಗಳ ಮಹಾಧ್ವಾರ” ಇವುಗಳ ಸೂಕ್ತ ರಕ್ಷಣೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಸಂಪೂರ್ಣ ಶಿವಮೊಗ್ಗ ನಗರಿಯ ಕೇಸರಿ ಅಲಂಕಾರಗಳಿಗೆ ಪೊಲೀಸ್ ತಂತ್ರಜ್ಞಾನ ಬಳಸಿ ಪ್ರತಿ ನಿಮಿಷಗಳು ಎಲ್ಲಿಯೂ ಎಡವಟ್ಟು ಆಗದಂತೆ, ಅಹಿತಕರ ಘಟನೆಗಳು ಸುಳಿಯದಂತೆ, ಕಟ್ಟೆಚ್ಚರ ವಹಿಸುವಂತೆ ಒಂದು ಪೂರ್ವಭಾವಿಯಾಗಿ ಮಾಡಲಾಗಿದ್ದ ಎಸ್ಪಿ ನಿಖಿಲ್ರವರ ಹೋಮ್ವರ್ಕ್ನಂತೆಯೇ ಶಿವಮೊಗ್ಗದ ಮೆರವಣಿಗೆಗಳನ್ನು ನೋಡಿಕೊಳ್ಳುವಂತೆ ತಮ್ಮ ಪೊಲೀಸ್ ಪೋರ್ಸ್ಗಳನ್ನು ನಿಯೋಜಿಸಿ ಜನಸಮೂಹದ ಮೆಚ್ಚುಗೆಗೆ ಪಾತ್ರರಾಗಿರುವುದು, ಮಲೆನಾಡಿನಲ್ಲಿ ಪೊಲೀಸ್ ಜನಭರವಸೆಗೆ ಕಾರಣವಾಗಿದೆ.
ಇನ್ನೂ ಎಸ್ಪಿ ನಿಖಿಲ್ ಅವರು ನಿರ್ಮಿಸಿದ ಭದ್ರಕೋಟೆಯೊಳಗೆ ಸಣ್ಣದೊಂದು ಪ್ರಮಾದಗಳು ನುಸುಳದಂತೆ ನೋಡಿಕೊಂಡಿದ್ದ ಸಾವಿರಾರು ಪೊಲೀಸ್ ಸಿಬ್ಬಂದಿಗಳು, ಹೋಂ ಗಾರ್ಡ್ಗಳು, ಉನ್ನತಮಟ್ಟದ ಅಧಿಕಾರಿಗಳ ತಂಡ, ಕೇಂದ್ರ ಮೀಸಲು ಪಡೆ, ವಿಸರ್ಜನಾ ಮೆರವಣಿಗೆಯ ಮುನ್ನ ದಿನಗಳಲಿ ಪ್ರಮುಖ ಸೂಕ್ಷ್ಮ ಏರಿಯಾಗಳಲ್ಲಿ ಸಾಗಿದ ಪೊಲೀಸ್ ಪಥ ಸಂಚಲನಗಳು, ಮೂರು ಸಾವಿರಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು, ಅಲ್ಲಲ್ಲಿ ಬ್ಯಾರಿಕೇಡ್ಗಳು, ಮುಂಜಾಗೃತಾ ಕ್ರಮವಾಗಿ ಶಾಲಾ-ಕಾಲೇಜು ಮಕ್ಕಳಿಗೆ ರಜೆ, ಜಿಲ್ಲಾಡಳಿತದೊಂದಿಗೆ ಚರ್ಚಿಸಿ ತೆಗೆದುಕೊಂಡ ಬಂದೋಬಸ್ತು ಕ್ರಮಗಳು, ಸಾಮಾಜಿಕ ಸಂಘಟನೆಗಳೊಂದಿಗೆ ವಿಶ್ವಾಸಗೊಳಿಸುವಂತೆ ಸೂಚಿಸಿದ ಪೊಲೀಸ್ ತಂಡಗಳು, ಈ ಭಾರಿಯ ಮೆರವಣಿಗೆಯಲ್ಲಿ ಎಲ್ಲಿಯೂ ತಡೆಯೊಡ್ಡದೆ ಮುಕ್ತವಾಗಿಸಿ ನಿರ್ವಹಿಸಿದ ಪೊಲೀಸ್ ಕರ್ತವ್ಯಗಳು ನಿಜಕ್ಕೂ ಶ್ಲಾಘನೀಯ, ಬರಪೂರ ಮೆಚ್ಚುಗೆಗೆ ಅರ್ಹತೆಯನ್ನು ಪಡೆದುಕೊಂಡಿದೆ,
“ಮನೆಯಲ್ಲಿ ಅಪ್ಪ ಸರಿ ಇದ್ದರೆ ಮಕ್ಕಳು ಸರಿ ಇರುತ್ತಾರೆ” ಎನ್ನುವುದಕ್ಕೆ ಎಸ್ಪಿ ನಿಖಿಲ್ರವರ ಪ್ರತಿ ಹಂತದ ಯೋಜಿತ ಹೆಜ್ಜೆಗಳನ್ನು ಸಾಕಾರಗೊಳಿಸುವಲ್ಲಿ ವಿವಿಧ ಪೊಲೀಸ್ ತಂಡಗಳ ಶ್ರಮವೆಂದಿಗೂ ವ್ಯರ್ಥಗೊಳ್ಳಲಿಲ್ಲ, ಸಂಪೂರ್ಣ ಯಶಸ್ವಿಗೊಳಿಸಿರುವುದು ಕರ್ನಾಟಕದ ಪೊಲೀಸ್ ವಲಯಕ್ಕೆ ಶಿವಮೊಗ್ಗ ಪೊಲೀಸರು ಮಾದರಿಯಾಗಿ ಜನವಿಶ್ವಾಸದೊಂದಿಗೆ ಜನಸ್ನೇಹಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.
ನಗರದ ರಾಗಿಗುಡ್ಡ ಸೇರಿದಂತೆ ಶಿವಮೊಗ್ಗದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಸಮುದಾಯದವರು ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದು ಅಲ್ಲದೆ, ಗಣಪತಿಗೆ ಹಾರಗಳನ್ನು ಹಾಕಿ ಏಕತಾ ಮನೋಭಾವವನ್ನು ಮೆರೆದಿರುವುದು ಎಸ್ಪಿ ನಿಖಿಲ್ರವರ ಅಧಿಕಾರದ ಅವಧಿಯಲ್ಲಿ ಎನ್ನುವುದು ಮಲೆನಾಡಿಗರು ಎಂದಿಗೂ ಮರೆಯುವಂತಿಲ್ಲ,
ಇದೇ ರೀತಿ ಪ್ರತಿ ವರುಷವೂ ಅವರವರ ಧಾರ್ಮಿಕ ಮೆರವಣಿಗೆಗಳು ಸೌಹಾರ್ದಯುತವಾಗಿ, ಸಾಮರಸ್ಯ ಸ್ವರೂಪಿಯಾಗಿ ಸಾಗಿದೊಡೆ ಇದು ಕೂಡ ಚರಿತ್ರೆಯ ಪುಟಗಳಾಗುತ್ತದೆ, ವಿವಿಧತೆಯಲ್ಲಿ ಏಕತೆ ಎನ್ನುವ ಭಾರತೀಯ ಪರಂಪರೆ ಧ್ವೇಷಗಳಲ್ಲಿ ತಲ್ಲಣಗೊಂಡು ಬಡಿದಾಡಿಕೊಳ್ಳದೆ ಸಾಂಸ್ಕೃತಿಕವಾಗಿ ಸಂಭ್ರಮಿಸಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಕಾರಣವಾಗಬಲ್ಲದಾಗಿದೆ,
ಒಟ್ಟಿನಲಿ ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿಗಳಾದ ಎಸ್ಪಿ ನಿಖಿಲ್ರವರಂತಹ ಜನಸ್ನೇಹಿ ಕರ್ತವ್ಯ ಮಲೆನಾಡಿನಲ್ಲಿ ಈ ದಿನಮಾನದೊತ್ತಿಗೆ ಹೊಸತೊಂದು “ಕರ್ತವ್ಯ ಶಾಸನ” ಕಾಪಿಟ್ಟುಕೊಳ್ಳುವುದರಲ್ಲಿ ಯಾವುದೇ ಅನುಮಾನಿತವಿಲ್ಲವಾಗಿದೆ ಎಂಬುದೇ ಈ ಬರಹದ ಅಂಬೋಣ.