Saturday, 31 October 2026 — Suryagagana
01:01 AM
ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I ಸೂರ್ಯಗಗನ I ಸೇವಾಪತ್ರದ ಹೆಸರಿನಲ್ಲಿ ಕೋಟ್ಯಾಂತರ ರೂ ಲೂಟಿಗೆ ನಿಂತ ಖಾಸಗಿ ಮ್ಯಾನ್‌ಪವರ್ ಏಜೆನ್ಸಿಗಳು I ತನಿಖೆಗೆ ಮುಂದಾಗುವಂತೆ ಪಾಲಿಕೆ ಆಯುಕ್ತರಿಗೆ ಒತ್ತಾಯಿಸಿದ ತೇಜೇಶ್ ರಾಮಚಂದ್ರ I ಸೂರ್ಯಗಗನ      I ಪ್ರತಿ ಮುಗ್ಧ ಮಗುವಿನ ಬಾಲ್ಯವೂ ಅಮೂಲ್ಯ I ನ್ಯಾಯಾಧೀಶ ಮಂಜುನಾಥ ಜಿ.ಎ. I ಸೂರ್ಯಗಗನ I ಜವಳಿ ಉದ್ಯಮದ ಬೆಳವಣಿಗೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿ  I ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಆರ್. ಗಣೇಶ್ I ಸೂರ್ಯಗಗನ  I ಸಂಘಟನೆಯ ಬಲಿಷ್ಟತೆ ಮೂಲಕ I ಪತ್ರಿಕಾ ವಿತರಕರ ಅಭಿವೃದ್ಧಿಗೆ ಸಲಹೆ I ಸೂರ್ಯಗಗನ I ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ I ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ I ಎನ್.ಮಾಲತೇಶ್ ಮರು ಆಯ್ಕೆ I ಸೂರ್ಯಗಗನ I ರಾಮಾಯಣ ಮಹಾಕಾವ್ಯ I ಮಾನವೀಯತೆಯ ಮಹತ್ವ ಸಾರುವ ಸಂದೇಶ I ಎಸ್ ಮಧು ಬಂಗಾರಪ್ಪ I ಸೂರ್ಯಗಗನ I ದಸರಾ ಅಂಬಾರಿ ಮೆರವಣಿಗೆ ಅವಘಡ I ನಿಯಮಾನುಸಾರವೇ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು I ಸಚಿವ ಮಧು ಬಂಗಾರಪ್ಪ ಸ್ಪಷ್ಟನೆ I ಸೂರ್ಯಗಗನ I ಮಾಂಜಾ ದಾರದಿಂದ ಅಮಾಯಕರ ಜೀವಹಾನಿ ಸಹಿಸಲಾಗದು I ಕಠಿಣ ಕಾನೂನು ಕ್ರಮಕ್ಕೆ ಸರ್ಕಾರ ಬದ್ಧ I ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ I
ಅಂಕಣ

I ಮಾತಿನ ಮಾಣಿಕ್ಯ I ವ್ಯಕ್ತಿತ್ವದ ಚಾಣಕ್ಯ I ಕಿಚ್ಚ ಸುದೀಪ I

ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ಮಾತಿನ ಮಾಣಿಕ್ಯ I ವ್ಯಕ್ತಿತ್ವದ ಚಾಣಕ್ಯ I ಕಿಚ್ಚ ಸುದೀಪ I ಅವರೊಬ್ಬ ಕಲಾವಿದ, ಕಳೆಗಾಣದ ಚಿತ್ತಾರ ಚಿತ್ರಿಸಿದ, ಸ್ಥಿತಿ ಮತಿಗಳ ಅರಿತು ನಿಂದ, ಅಗಾಧತೆ ಪ್ರಭುತ್ವವ ಮೆರೆದ, ನೇರ-ನಿಷ್ಟುರತೆಗಳ ಬುತ್ತಿ ಸವಿದ, ವಿಪರೀತಗಳ ಸ್ವಾದಿಸಿ ಹಾರೈಸಿದ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಮಾತಿನ ಮಾಣಿಕ್ಯ I ವ್ಯಕ್ತಿತ್ವದ ಚಾಣಕ್ಯ I ಕಿಚ್ಚ ಸುದೀಪ I

ಅವರೊಬ್ಬ ಕಲಾವಿದ,
ಕಳೆಗಾಣದ ಚಿತ್ತಾರ ಚಿತ್ರಿಸಿದ,
ಸ್ಥಿತಿ ಮತಿಗಳ ಅರಿತು ನಿಂದ,
ಅಗಾಧತೆ ಪ್ರಭುತ್ವವ ಮೆರೆದ,
ನೇರ-ನಿಷ್ಟುರತೆಗಳ ಬುತ್ತಿ ಸವಿದ,
ವಿಪರೀತಗಳ ಸ್ವಾದಿಸಿ ಹಾರೈಸಿದ
ಈ ಕರುನಾಡ ಸುದೀಪ… ಎನ್ನುವ ಸಾಲು ಅಕ್ಷರಶಃ ಕಿಚ್ಚ ಸುದೀಪ ಅವರಿಗೆ ಸಲ್ಲುತ್ತದೆ, ಅಕ್ಷರಗಳು ಎಂದಿಗೂ ಉತ್ಪ್ರೇಕ್ಷೆಗಾಗಿ ಇಲ್ಲಿ ಉಲ್ಲೇಖಿಸುವ ಜರೂರಿಗಳಿಲ್ಲ, ವ್ಯಕ್ತಿತ್ವ ವಿಕಸನಗಳು ತರಬೇತಿಯಿಂದಾಗಬೇಕು, ಅಥವಾ ಅನ್ಯರ ಬದುಕುಗಳ ಅನುಭವಿತ ಅನುಭಾವಗಳ ಪರಕಾಯ ಪ್ರವೇಶ ಮಾಡಿ ಅನುಭವಿಸಬೇಕು, ಇಂತಹ ಎರಡು ಸಾಂದರ್ಭಿಕತೆಗಳಿಗಿಂತಲೂ ಸುದೀರ್ಘ ಅರಿವುಗಳ ಜ್ಞಾನ, ತಾಳ್ಮೆ, ಅದರ ವಿಸ್ತಾರತೆಗಳಿಂದ ಪ್ರಬುದ್ದತೆಗಳ ಲೇಪನಗಳು, ಕಿಚ್ಚ ಸುದೀಪ ಅವರ ಸುಧೀರ್ಘ ಮೂರು ದಶಕಗಳ ಸಿನಿಮಾ ಪಯಣವೇ ಕಟ್ಟಿ ಕೊಟ್ಟಿದೆ, ಇಂತಹದೊಂದು ಟಿಪ್ಪಣಿಯೊಂದಿಗೆ “ಬಿಗ್ ಬಾಸ್” ಎಂಬುವ ರಿಯಾಲಿಟಿ ಶೋ ಕುರಿತಾಗಿ ಇಲ್ಲಿ ಒಂದಷ್ಟು ಉಲ್ಲೇಖಿಸಿ ಲಗತ್ತಿಸುತ್ತಿದ್ದೇನೆ,

ಮೊದ ಮೊದಲು ಈ ರಿಯಾಲಿಟಿ ಶೋ ಅಂಬುದೊಂದು ಟೆಲಿವಿಷನ್ ರೇಟಿಂಗ್ ಪಾಯಿಂಟ್‌ಗಾಗಿ ಹೆಣೆಯಲಾದ ಸ್ಕ್ರಿಪ್ಟ್ ಎಂಬಂತೆ ಅನಿಸಿದ್ದುಂಟು, ಆದರೆ ಆಟ ಎಂಬುದು ಖಾಲಿ ಆಟವಲ್ಲ ಅದೊಂದು ಪ್ರತಿ ಮನುಷ್ಯನೊಳಗಿನ ಅತಿರೇಖತೆಗಳು, ಸುಪ್ತತೆಗಳು, ಭಾವುಕತೆಗಳು ಅದೆಷ್ಟರ ಮಟ್ಟಿಗೆ ನಿಜ ಜೀವನದಲ್ಲಿ ಪಾಲಿಸಲಾಗುತ್ತದೆ ಎನ್ನುವುದಕ್ಕೆ ಕನ್ನಡದ “ಬಿಗ್ ಬಾಸ್” ರಿಯಾಲಿಟಿ ಶೋ ಮುಖೇನ ಜೀವೋನ್ಮುಖಿ ತುಂಬಿ ನಿಂದವರು ಕಿಚ್ಚ ಸುದೀಪ ಎಂದರೆ ತಪ್ಪಾಗಲಾರದು,

ಇವರಲ್ಲದೆ ಅನ್ಯರಾರೇ ಯಾರೇ ನಿರೂಪಣೆಗೈದಿದ್ದರೂ ಸುದೀಪರವರಷ್ಟು ಹಿಡಿತ ಸಾಧಿಸಲಾರದೇ ಹಿನ್ನಡೆ ಅನುಭವಿಸುತ್ತಿದ್ದರು ಎಂಬುದು ನಿಜದ ಸಂಗತಿಯಾಗಿದೆ, ಹೌದು ಸೀಸನ್ ಒಂದರಿಂದ ಪ್ರಸ್ತುತ ಹದಿಮೂರರವರೆಗಿನ ಸರಿ ಸುಮಾರು ವೈಲ್ಡ್ ಕಾರ್ಡ್ ಎಂಟ್ರೀಸ್‌ಗಳು, ಗೆಸ್ಟ್‌ಗಳು ಸೇರಿ 240ಕ್ಕೂ ಹೆಚ್ಚು ಇದರಲ್ಲಿ ಒಂದಷ್ಟು ಸ್ಪರ್ಧಿಗಳು ತಮ್ಮಲ್ಲಿರುವ ಹುಚ್ಚಾಟಗಳು, ಅಪ್ರಬುದ್ಧತೆಗಳು, ಅಹಾಂಕಾರಗಳು, ಮತಿಗೇಡಿನ ವರ್ತನೆಗಳಿಂದ ಬಿಗ್ ಬಾಸ್ ರಿಯಾಲಿಟಿ ಶೋ ಸಾಕಷ್ಟು ವಿವಾದತೆಗಳಿಗೆ ಎಡೆಮಾಡಿ ಕೊಟ್ಟಿತು, ಸಾಲದಕ್ಕೆ ಪೊಲೀಸ್ ಕೇಸುಗಳು ದಾಖಲಾದವು, ಬಿಗ್ ಬಾಸ್ ಮನೆ ಮುಂದಡಿ ಪ್ರತಿಭಟನೆಗಳು ನಡೆದವು, ಎಲ್ಲಿ ನೋಡಿದರು ಕ್ಯಾಮೆರಾಗಳ ಕಣ್ಣುಗಳು, ಗೋಡೆಗಳ ನಡುವೆಯೇ ನಿತ್ಯ ಜೀವನದ ರಾಗ, ಸ್ಪರ್ಧಿಗಳು ಶುರುವಿನಲ್ಲಿ ನಟನೆಗಳು ಮಾಡುತ್ತಲೇ ನಿಜದ ವ್ಯಕ್ತಿತ್ವವನ್ನು ಅನಾವರಣಗೊಳಿಸುವ ಯಾತನೆಗಳು ಇಲ್ಲಿ ಸಾಮಾನ್ಯ, ಹೀಗಾಗಿ “ಬಿಗ್ ಬಾಸ್” ಮನೆಯಲ್ಲಿ ಸಾಕಷ್ಟು ಸಮಯ, ದಿನಮಾನ ನಟನೆಗಳನ್ನು ಬಿತ್ತುವುದಕ್ಕೆ ಸಾಧ್ಯವೇ ಇಲ್ಲ, ಎಂಬುದು ಈ ಹದಿಮೂರು ಸೀಸನ್ ಸಾಕ್ಷೀಕರಿಸಿದೆ,

ಇಂತಹ ವಿಷಮ ಪರಿಸ್ಥಿತಿಗಳನ್ನು, ವಿವಾದತೆಗಳನ್ನು, ಸರಿಪಡಿಸಿ ಗೊತ್ತು ಗುರಿಯಿಲ್ಲದಂತೆ ಸಾಗುವ ಸ್ಪರ್ಧಿಗಳನ್ನು ತಮ್ಮ ಮಾತಿನ ಚಾಟಿಗಳಿಂದ ಅರಿವಾಗುವಂತೆ ಬೀಸಿ ಹತೋಟಿಗೆ ತರುವ ಕಿಚ್ಚ ಸುದೀಪ ಅವರು “ಬಿಗ್ ಬಾಸ್ ರಿಯಾಲಿಟಿ ಶೋ” ಗೊಂದು ನ್ಯಾಯವನ್ನು ಕೊಟ್ಟಿದ್ದಾರೆ, ಸ್ಪರ್ಧಿಗಳಿಗೂ ಸಮಾನತೆಯ ನ್ಯಾಯದ ಎದೆಚರಿಗೆಯಿಂದಲೇ ನೋಡಿಕೊಳ್ಳುತ್ತಿದ್ದಾರೆ, ವಾರದ ಕತೆ ಕಿಚ್ಚನ ಜೊತೆ ಕಿಚ್ಚನ ಚಪ್ಪಾಳೆ, ಕಿಚ್ಚರವರೇ ತಯಾರಿಸಿದ ಅಡುಗೆಯ ಔತಣಕೂಟ, ಸ್ಪರ್ಧಿಗಳೆಲ್ಲರೂ ತಮ್ಮ ಮನೆಯವರೇ ಎಂದು ಭಾವಿಸಿ ಅವರೆಲ್ಲರಿಗೂ ಹಿರಿಯಣ್ಣನಂತೆ ತಿದ್ದಿ ತೀಡಿ, ಪ್ರೀತಿಯ ಅಪ್ಪುಗೆಯಿಂದ ಹಾರೈಸುವ ಕಿಚ್ಚ ಸುದೀಪ ಅವರ ತಾಳ್ಮೆ, ಜಾಣ್ಮೆ ನಿಜಕ್ಕೂ ಒಪ್ಪವಂತಹದ್ದಾಗಿದೆ, ಇದುವೇ ಅಸಾಮಾನ್ಯ ವ್ಯಕ್ತಿತ್ವದ ವಿಕಸನಧಾರೆ ಎನ್ನುವುದು, ಈ ಸಾಲಿಗೆ ಕರುನಾಡಿನ ಕಿಚ್ಚ ಸುದೀಪ ಹೃದಯಸ್ಪರ್ಶಿ ಅರ್ಹರು,

ಈ ಮೆಚ್ಚುಗೆಯ ಬರಪೂರತೆಯನ್ನು ಕರುನಾಡಿನ ಜನತೆ, ಅಲ್ಲದೆ ಭಾರತೀಯ ವೀಕ್ಷಕ ಸಮೂಹ ಕಿಚ್ಚ ಸುದೀಪರವರನ್ನು ಹಾಡಿ ಹೊಗಳಿದೆಯಲ್ಲದೆ ಪ್ರಶಂಸಿದೆ, ಓರ್ವ ಸ್ಟಾರ್ ನಟ ಹಾಗೂ ದಕ್ಷಿಣ ಭಾರತದ ಖ್ಯಾತನಾಮರಾದ ಇಂತಿವರಿಗೆ ನಿಜಕ್ಕೂ “ಬಿಗ್ ಬಾಸ್” ಎಂಬುವ ರಿಯಾಲಿಟಿ ಶೋ ಅಗತ್ಯವೇ ಇರಲಿಲ್ಲ, ಒಂದಷ್ಟು ಸೀಸನ್‌ಗಳ ಹಿಂದೆಯೇ ಹೊರನಡೆವ ತೀರ್ಮಾನಗಳನ್ನು ಮಾಡಿದ್ದರು, ಇದಕ್ಕೆ ಜನಮಾನಸ ಒಪ್ಪದೆ ಕಿಚ್ಚ ಸುದೀಪ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಮನವಿ ಮಾಡಿಕೊಂಡಿದ್ದರು, ಇದಲ್ಲದೆ ಈ ಶೋ ನಿಂದ ಸಾಕಷ್ಟು ಸ್ಪರ್ಧಿಗಳು ಸೆಲಿಬ್ರಿಟಿಗಳಾಗಿ ಹೊರಹೊಮ್ಮುತ್ತಿದ್ದಾರೆ, ಅವರಿಗೂ ರಂಗಭೂಮಿಕೆಯಲ್ಲಿ ಅವಕಾಶಗಳು ಒದಗಿ ಬರುತ್ತಿದೆ, ಎಂದರೆ ಇದಕ್ಕೆ ಸ್ಟಾರ್ ನಟ ಕಿಚ್ಚ ಸುದೀಪ ಅವರ ನೆರಳು ಕಾರಣ, ಎಂತಹುದೇ ಸಂದರ್ಭದಲ್ಲೂ ಸ್ಪರ್ಧಿಗಳಿಗೂ ಬೆಂಬಲಿಸಿದ್ದಾರೆ, ಅದು ಬಿಗ್ ಬಾಸ್ ಮನೆಯಲ್ಲಿರಬಹುದು, ಹೊರಗೆ ಬಂದ ಮೇಲೂ ಇರಬಹುದು, ಟಿಆರ್‌ಪಿ ಅಂತೂ ಕೆಳಗೆ ಬಿದ್ದ ಉದಾಹರಣೆಗಳೇ ಇಲ್ಲವಾಗಿದೆ, ಇವೆಲ್ಲವನ್ನು ಒಮ್ಮೆಲೆ ಸಾಧಿಸಿಕೊಂಡು, ಸರಿದೂಗಿಸಿಕೊಂಡು, ಸಾಂದರ್ಭಿಕತೆಗಳನ್ನು ಆಸ್ವಾದಿಸಿಕೊಂಡು ತಳಸ್ಪರ್ಶಿಯಾಗಿ ಹೋಗುವುದು ಸಾಮಾನ್ಯದ ಮಾತಲ್ಲ, ಇದಕ್ಕೆ ವಿಶೇಷ ಜ್ಞಾನ ಬೇಕಾಗಿದೆ, ಅಲ್ಲದೆ ತಾನೋರ್ವ ಅಸಾಮಾನ್ಯರಾಗಿದ್ದರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಹ್ಯೂಮರ್‍ಸ್, ಕಠೀಣತೆ, ನಗುವಿನ ಮಾಂತ್ರಿಕತೆ, ಮಾತಿನ ಹಿಡಿತಗಳು, ತಮ್ಮ ಅಗಾಧತೆಯ ವ್ಯಕ್ತಿತ್ವ ವಿಕಸನಗಳಿಂದ “ಬಿಗ್ ಬಾಸ್” ಎಂಬುವ ದೊಡ್ಮನೆ ಅನೇಕ ಜೀವನಗಳಿಗೆ ಆಸರೆಯಾಗಿದೆ,

ಇಲ್ಲಿ ಸ್ಪರ್ಧಿಗಳಿಗಷ್ಟೆ ಜೀವನವಲ್ಲ, ತಂತ್ರಜ್ಞರು, ಸಹಾಯಕರು, ಕ್ಯಾಮೆರಮೆನ್‌ಗಳು ಸೇರಿದಂತೆ ಒಟ್ಟಾರೆ ತಾಂತ್ರಿಕ ವರ್ಗಗಳು ಸೇರಿದರೆ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಅನ್ನದ ಹಾದಿಯಾಗಿದೆ, ನೋಡಿ ಓರ್ವ ಕಿಚ್ಚನ ಹಾದಿ ತಳೆದ ನಿಲುವುಗಳಿಂದ ಜೀವೋನ್ಮುಖಿಯಾಗಿ ಹಸನಗೊಳ್ಳುವ ಇಂತಹ ರಿಯಾಲಿಟಿ ಶೋ ಗಳು ಅನೇಕತೆಗಳನ್ನು ಜೀವಿಸುವ ಸೇತುವೆಯಾಗಿದೆ ಈ ಸೇತುವೆಯೇ ಕರುನಾಡಿನ ಕಿಚ್ಚ ಸುದೀಪ ಎಂದೇ ಬಣ್ಣಿಸಿ ಅವರಿಗೆ ಅಕ್ಷರ ನಮನಗಳನ್ನು ಈ ಮೂಲಕ ತಿಳಿಸಲಿಚ್ಚಿಸುವುದೇ ಅಂಬೋಣವಾಗಿದೆ.

Gara

Gara

Leave a comment

error: Content is protected !!