September 23, 2026

I ಗಾಂಧಿಭವನದಲ್ಲಿ I ನಡೆದ ಘಟನೆ ಷಡ್ಯಂತ್ರ I ಜಿ.ಪಲ್ಲವಿಯವರ ಮೇಲಿನ ಹಲ್ಲೆ I ಖಂಡನೀಯ I

0
G pallavi

ಬರೆಯುತ್ತಾರೆ ಗಾರಾ.ಶ್ರೀನಿವಾಸ್

I ಗಾಂಧಿಭವನದಲ್ಲಿ I ನಡೆದ ಘಟನೆ ಷಡ್ಯಂತ್ರ I ಜಿ.ಪಲ್ಲವಿಯವರ ಮೇಲಿನ ಹಲ್ಲೆ I ಖಂಡನೀಯ I

ಮನುಷ್ಯ ಜಾತಿ ತಾನೊಂದೇ ವಲಂ ಎನ್ನುವ ಮನುಷ್ಯ ಪ್ರೀತಿಗಳಿಗೆ, ಜೀವಪರ ನಿಲುವುಗಳಿಗೆ, ನಾಗರೀಕತೆಯ ಆಧುನಿಕತೆಯ ಈ ಹೊತ್ತಿನಲ್ಲೂ ಒಂದೊತ್ತಿನ ಹಸಿವಿಗಾಗಿ, ಸೂರುಗಳಿಗಾಗಿ, ಮೂಲಭೂತ ಸೌಲಭ್ಯಗಳಿಗಾಗಿ, ಸಾಮಾಜಿಕ ನ್ಯಾಯಕ್ಕಾಗಿ ಅನ್ಯರ ಜಗಲಿಗಳಲ್ಲಿ ಜೀತರ ದಂಡಿನಂತೆ ಕೈ-ಕಟ್ಟಿ, ತಲೆಬಾಗಿ ನಿಂದ ಮನುಷ್ಯ ಬದುಕುಗಳನ್ನು ಬಹುಷ್ಯಃ ಮಾಜೀ ಸಚಿವ ಹೆಚ್.ಆಂಜನೇಯ ನಂತಹ ರಾಜಕಾರಣಿಗಳಿಗೆ ಅರ್ಥವಾಗದು ಎನ್ನುವಂತಿದೆ ಮೊನ್ನೆಯ ಘಟನೆ,

ಇದೊಂದು ಸಾಮಾಜಿಕ ಅನ್ಯಾಯವೇ ಹೊರತು ಮತ್ತೊಂದಿಲ್ಲವಾಗಿದೆ, ಹೆಚ್.ಆಂಜನೇಯ ಅವರೇ ಸ್ವತಃ ಶೋಷಿತ ವರ್ಗಗಳಿಂದ ಬಂದವರು ನಿಜಕ್ಕೂ ಇದನ್ನು ಮರೆತು, ಇನ್ನೂ ಅಲೆಮಾರಿಗಳು- ಅರೆ ಅಲೆಮಾರಿಗಳು ಎನ್ನುವ ಕ್ಲಿಷ್ಟಕರ ಸಮುದಾಯಗಳ ದಯನೀಯತೆಯನ್ನು ಮತ್ತಷ್ಟು ಬಿಗುಗೊಳಿಸಿದ ಪೂರ್ವಯೋಜಿತ ಹುನ್ನಾರಕ್ಕೆ ಮುನ್ನುಡಿ ಬರೆದಿದ್ದು ಇದೊಂದು ಚರಿತ್ರಾರ್ಹವಾಗಿದೆ. ಈ ಟಿಪ್ಪಣಿಯೊಂದಿಗೆ ಘಟಿತ ಘಟನೆ, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿಯವರ ಗಮನಾರ್ಹ ಪಥದ ಹೆಜ್ಜೆಗಳು, ಸ್ಪಂದನೆಗಳು, ಬದಲಾವಣೆಗಳು, ಒಟ್ಟು ಪರಿಶಿಷ್ಟ ಜಾತಿಯ ೫೧, ಪರಿಶಿಷ್ಟ ಪಂಗಡದ ೨೩ ಮತ್ತು ೨೫ ಅರಣ್ಯವಾಸಿಗಳು ಸೇರಿದಂತೆ ಒಟ್ಟು ೯೯ ಅಲೆಮಾರಿ ಸಮುದಾಯಗಳಿಗೆ ಆಸರೆಯಾಗಿ, ದನಿಯಾಗಿ ರಾಜ್ಯ ಸರ್ಕಾರಕ್ಕೆ ಗಮನ ಸೆಳೆದ ಓರ್ವ ಮಹಿಳಾ ನಾಯಕತ್ವವನ್ನು ಅಡಗಿಸಲು ಹಾಗೂ ಅದೇ ಸಮುದಾಯದ ಕೊರಮ. ಕೊರಚ ಜಾತಿ- ಪಂಗಡಗಳನ್ನು ಬಿಟ್ಟು ಸೂಕ್ಷ್ಮ-ಅತೀ ಸೂಕ್ಷ್ಮ ಅಲೆಮಾರಿಗಳು ೪೯ ಮಾತ್ರ ಇದೆ, ಎನ್ನುವ ಸ್ವ-ಘೋಷಿತ ಷಡ್ಯಂತ್ರ ರೂಪಿಸಿ ಅದಕ್ಕೊಂದು ನೊಂದಣಿಯಾಗದ ಅಡಾಕ್ ಸಮಿತಿ ರಚಿಸಲು ತಿಳಿಸಿ ಜರೂರಿಯಾಗಿ ಕರ್ನಾಟಕ ಪರಿಶಿಷ್ಟ ಜಾತಿ ಅಲೆಮಾರಿ ವೇದಿಕೆಯ ಸಭೆಯನ್ನು ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ ಕೀರ್ತಿ ಸನ್ಮಾನ್ಯ ಹೆಚ್.ಆಂಜನೇಯ ಅವರಿಗೆ ಸಲ್ಲಬೇಕಿದೆ,

ಈ ಘಟನೆಯು ಪೂರ್ವಯೋಜಿತ ಷಡ್ಯಂತ್ರ : ಇಂತಹದೊಂದು ವಿವಾದಿತ ಖಾಸಗಿ ಕಾರ್ಯಕ್ರಮದ ಮೂಲಕ ಅಲೆಮಾರಿ ಪಟ್ಟಿಯಿಂದ ಕೊರಮ, ಕೊರಚ ಸಮುದಾಯಗಳನ್ನು ತುಳಿದು, ವಿವಿಧ ಬೇಡಿಕೆಗಳಿಗೆ ಅರ್ಹವಲ್ಲದ ಜನರಿವರು, ಒಂದೆಡೆ ಒಳ ಮೀಸಲಾತಿಯು ಕೊಡದಿರಿ, ಇನ್ನೊಂದೆಡೆ ೫೧ ಸಮುದಾಯಗಳ ಅಲೆಮಾರಿ ಪಟ್ಟಿಯಲ್ಲಿ ಇವೆರೆಡು ಬದುಕುಗಳಿಗೆ ಗೋರಿ ಕಟ್ಟಿಬಿಡಿ ಎನ್ನುವ ಪರೋಕ್ಷ ಹಾಗೂ ಪ್ರತ್ಯೇಕ್ಷ ಸಾಕ್ಷೀಭೂತ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ರವಾನಿಸಿದ ಮಾಜೀ ಸಚಿವ ಹೆಚ್.ಆಂಜನೇಯನವರು ೪೯ ಅಲೆಮಾರಿಗಳ ಪಂಗಡಗಳನ್ನು ಕೊರಮ, ಕೊರಚ ಸಮುದಾಯಗಳ ಮೇಲೆ ಎತ್ತಿಕಟ್ಟಿ ಪ್ರಚೋದಿಸಿದ್ದು ಯಾವ ಸಾಮಾಜಿಕ ನ್ಯಾಯ ಎಂಬುದನ್ನು ಇದೀಗ ಕೇಸು ದಾಖಲಿಸಿಕೊಂಡು ತನಿಖಿಸುತ್ತಿರುವ ಹೈಗ್ರೌಂಡ್ ಪೊಲೀಸರು ಗೊತ್ತು ಮಾಡಿಕೊಳ್ಳಬೇಕಾಗಿರುವ ಹೊತ್ತು ಇದಾಗಿದೆ.

ಗಾಂಧಿ ಭವನ ಎನ್ನುವುದು ಮಹಾತ್ಮ ಗಾಂಧಿಜಿಯವರನ್ನು ನೆನಪಿಸುತ್ತದೆ, ಯಾವ ಗಾಂಧಿಜಿ ಅಹಿಂಸಾ ವಾದದಡಿ ಬ್ರಿಟಿಷರು ನೀಡಿದ ಹಿಂಸೆಗಳ ಸಹಿಸಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯರ ಮೇಲಿನ ಶೋಷಣೆಯ ವಿರುದ್ದ ದನಿಯಾಗುತ್ತಲಿ ಸ್ವಾತಂತ್ರ್ಯ ತಂದುಕೊಟ್ಟರೋ ಅಂತಹ ಮಹಾತ್ಮರ ಹೆಸರಿನ ಭವನದಲ್ಲಿ ಅದೇ ಬ್ರಿಟಿಷ್ ನೀತಿಯನ್ನು ಅಕ್ಷರಶಃ ಜಾರಿಗೊಳಿಸಿ, ಓರ್ವ ಪ್ರಬುದ್ದಮಾನದೆತ್ತರದಿ ಏರಿದ ಓರ್ವ ಜಿ.ಪಲ್ಲವಿ ಅಂತಹ ಅಲೆಮಾರಿ ಮಹಿಳಾ ನಾಯಕತ್ವವನ್ನು ಸಹಿಸಲು ಸಾಧ್ಯವಾಗದೆ ಪೂರ್ವಯೋಜಿತವಾಗಿ ನಡೆಸಿದ ಹಲ್ಲೆಯಂತಹ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದೆ, ಎನ್ನುವುದು ಇದೀಗ ರಾಜ್ಯದಲ್ಲಿರುವ ಬಹುತೇಕ ಸಮುದಾಯಗಳ ಪ್ರಶ್ನೆಯಾಗಿದೆ, ಇದಕ್ಕೆ ನಿಜಕ್ಕೂ ಮಾಜೀ ಸಚಿವ ಹೆಚ್ ಆಂಜನೇಯನವರ ಬಳಿ ಉತ್ತರವೂ ಇಲ್ಲ ಇದು ವಾಸ್ತವವಾಗಿದೆ.

ಸರ್ಕಾರವೇ ಗುರುತಿಸಿದ ೫೧ರ ಅಲೆಮಾರಿ ಪಟ್ಟಿಯಲ್ಲಿ ಸ್ವ ಘೋಷಿತ ಅಲೆಮಾರಿ ಅನುಕಂಪ ಸೃಷ್ಟಿಸಲೊರಟಿದ್ದ ಹೆಚ್.ಆಂಜನೇಯರವರಿಗೆ ಅಂತಹ ಅಗತ್ಯತೆ ಏನಿತ್ತು..? ಜಿ. ಪಲ್ಲವಿಯವರ ರಾಜಕೀಯ ಬೆಳವಣಿಗೆ ಅಸಹಿಸಿಕೊಳ್ಳುವ ವಯೋ ವೃದ್ದತೆಯ ಮನಸು ನಿಮಗ್ಯಾಕಿತ್ತು..?! ಗಾಂಧಿ ಭವನದಲ್ಲಿ ಕರೆಯದೇ ಬಂದರೆಂದರೆ ನೀವ್ಯಾಕೆ ಕೊರಮ, ಕೊರಚ ಸಮುದಾಯಗಳನ್ನು ಅಳಿಸಿ ಹಾಕಿದ್ದು..?! ಈ ಅನ್ಯಾಯವನ್ನು ಸಹಿಸದ ಮನಸುಗಳು, ಪ್ರಶ್ನೆಯನ್ನು ಮಾಡಿದ್ದು ತಪ್ಪಾಯಿತೇ..? ಅದಕ್ಕಾಗಿ ಪೂರ್ವ ಸಿದ್ದತೆಯಂತೆ ಜಿ.ಪಲ್ಲವಿ ಯವರ ಮೇಲೆ ಹಲ್ಲೆ ನಡೆಸಿದ್ದು ತಡೆಯಲು ಹೋದ ಮಹಿಳೆಯವರ ಮೇಲೆ ಏಕಾಎಕಿ ಹಲ್ಲೆ ನಡೆಸಿ ಅಲ್ಲೊಂದು ಸಮುದಾಯಗಳ ಮೇಲಿನ ಅಪಮಾನವನ್ನು ವೈಭವಿಕರಿಸಿದ್ದು ನಾಗರೀಕ ಸಮಾಜ ಒಪ್ಪುವಂತಹದ್ದಲ್ಲವಾಗಿದೆ,

ಸ್ವಾತಂತ್ರ್ಯ ನಂತರದ ಈ ದಿನಮಾನಗಳ ತನಕ ಕೊರಮ. ಕೊರಚ ಸಮಾಜವನ್ನು ಜೀತಪದ್ದತಿಯಂತೆ ದುಡಿಸಿಕೊಂಡಿದ್ದೀರಿ, ಸಾಮಾಜಿಕ ಅನ್ಯಾಯಗಳು ನಿರಂತರವಾಗಿ ನಡೆಯುತ್ತಲೇ ಇದೆ, ಎಂದಾದರು ಆರ್ಥಿಕ ಸಮಾನತೆ ಕೇಳಿಲ್ಲ, ಸಾಮಾಜಿಕ ಸಮಾನತೆ ಕೇಳಿಲ್ಲ, ರಾಜಕೀಯ ಸಮಾನತೆಗಳನ್ನು ಕೇಳಿಲ್ಲ, ಕೇವಲ ಮತದಾರಿಕೆಯ ಹೊಣೆಗಾರಿಕೆ ಹೊತ್ತು ಸ್ವಾಭಿಮಾನಿ ಬದಕು ಕಟ್ಟಿ ಸಮಾಜದ ಮುಖ್ಯವಾಹಿನಿಯನ್ನು ಕಾಪಿಟ್ಟುಕೊಂಡಿದ್ದು ಯಾವ ಸರ್ಕಾರಗಳು ನೀಡಿದ ಬಿಕ್ಷೆ ಅಲ್ಲ, ಇಂದು ಮನದಟ್ಟು ಮಾಡಿಕೊಳ್ಳಬೇಕಾಗಿದೆ ಎನ್ನುವುದು ಸಮುದಾಯದ ತಜ್ಞರ ಅಭಿಪ್ರಾಯ, ಅಭಿವ್ಯಕ್ತಿಯಾಗಿದೆ. ಇಂತಹ ವಿಷಮ ಪರಿಸ್ಥಿತಿಗಳಲ್ಲಿ ಓದಿ, ಅಕ್ಷರಸ್ಥರಾಗಿ ಬೆರಳಣಿಕೆಯಷ್ಟು ನೂರರಲ್ಲಿ ಒಬ್ಬರಂತೆ ರಾಜಕೀಯ ಸ್ಥಾನ-ಮಾನ ಗಳಿಸಿಕೊಂಡರೆ ಅದನ್ನು ಸಹಿಸಿಕೊಳ್ಳದ ಅಸಹಿಷ್ಟುತೆಗಳಿಂದಾಗಿ ಇಂದು ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ. ಪಲ್ಲವಿಯವರ ಮೇಲೆ ಹಾಗೂ ಅದೇ ಸಮುದಾಯದ ಮಹಿಳೆಯರ ಮೇಲಿನ ಹಲ್ಲೆ, ಕೊರಮ-ಕೊರಚ ಜಾತಿಗಳನ್ನು ಸಂಪೂರ್ಣವಾಗಿ ತುಳಿಯಲೊರಟ ಸಾಮಾಜಿಕ ಅನ್ಯಾಯದ ಘಟನೆಯಾಗಿದೆ,

ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ಈ ಘಟನೆ ಗೊತ್ತಿದಿಯಾ..? : ಗಾಂಧಿ ಭವನದಲ್ಲಿ ಕೊರಮ, ಕೊರಚ ಸಮುದಾಯಗಳ ಮಹಿಳೆಯರ ಮೇಲಿನ ಹಲ್ಲೆ ಹಾಗೂ ಸಮುದಾಯಗಳನ್ನು ಪ್ರಚೋದಿಸುವ ಹುನ್ನಾರ, ಹಾಗೂ ಓರ್ವ ಪ್ರಬುದ್ದಮಾನದ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿಯವರ ಸಮಾಜದ ಮುಖ್ಯವಾಹಿನಿಯ ನಾಯಕತ್ವ ಸಹಿಸದ ಅಸಹಿಷ್ಣುತೆ, ಸಮಾಜದಲ್ಲಿ ಈ ಸಮುದಾಯಗಳ ಮೇಲಿನ ಬಹಿರಂಗ ತುಳಿತ, ಶೋಷಣೆಗಳನ್ನು ಯಥವತ್ತಾಗಿ ಬಿಂಬಿಸಿದ ಘಟನೆ ಇದಾಗಿದೆ, ಇದೊಂದು ಪೂರ್ವಯೋಜಿತ ಷಡ್ಯಂತ್ರ, ಹುನ್ನಾರವಾಗಿದ್ದು ಈ ಘಟನೆಯಲ್ಲಿ ಹಲ್ಲೆಗೆ ಯತ್ನಿಸಿದ ರಂಗೇನಹಳ್ಳಿಯ ಲೋಹಿತಾಕ್ಷ, ದಾವಣಗೆರೆಯ ವೀರೇಶ್, ಬಳ್ಳಾರಿಯ ಶಿವು, ಬೆಂಗಳೂರಿನ ಬಸವರಾಜ್, ಸುಭಾಷ್ ಚೌಹಾಣ್, ಶಂಕರ್ ಕುಮಾರ್, ಶಿವಮೊಗ್ಗದ ಜಾವಡೆ ಲೋಕೇಶ್ ರವರುಗಳನ್ನು ವಿಚಾರಣೆಗೊಳಪಡಿಸಿ ಇದಕ್ಕೆ ಪ್ರಚೋದಿಸಿದವರು ಯಾರು..? ಎನ್ನುವುದನ್ನು ತನಿಖಿಸಿ ಅವರ ಮೇಲು ಕೇಸು ದಾಖಲಿಸುವಂತೆ ಇಡೀ ರಾಜ್ಯದಲ್ಲಿ ಪ್ರತಿಭಟನೆಗಳು ವ್ಯಕ್ತವಾಗಿದೆ, ಮನವಿಗಳು ನೀಡಿ ಆಕ್ರೋಶಗಳ ದರ್ಶಿಸಿಕೊಂಡಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಿ,ಕೆ ಶಿವಕುಮಾರ್, ಗೃಹಮಂತ್ರಿ ಜಿ.ಪರಮೇಶ್ವರ್ ಅವರುಗಳು ಚಿತ್ತವರಿಸಿ ಇಂತಹದೊಂದು ಸಾಮಾಜಿಕ ನ್ಯಾಯ ಒದಗಿಸುವತ್ತ ಮುಂದಾಗಬೇಕಾದ ಜರೂರತ್ತಿದೆ ಎನ್ನುವುದು ಈ ವರದಿಯ-ಲೇಖನದ ಅಂಬೋಣವಾಗಿದೆ.

Leave a Reply

Your email address will not be published. Required fields are marked *

error: Content is protected !!