September 24, 2026

I ಸ್ವಸಹಾಯ ಸಂಘಗಳ I ಸಾಲ ಮೇಳ I ಉದ್ಘಾಟಿಸಿದ ರವಿಚಂದ್ರನ್ I

0
WhatsApp Image 2025-07-11 at 1.44.21 PM

I ಸ್ವಸಹಾಯ ಸಂಘಗಳ I ಸಾಲ ಮೇಳ I ಉದ್ಘಾಟಿಸಿದ ರವಿಚಂದ್ರನ್ I

ಭದ್ರಾವತಿ : ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸ್ವಸಹಾಯ ಸಂಘಗಳ ಸಾಲ ಮೇಳವನ್ನು ಯೂನಿಯನ್ ಬ್ಯಾಂಕ್, ತಾಲೂಕು ಪಂಚಾಯತ್ ಭದ್ರಾವತಿ ಹಾಗೂ NRLM ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.ಸಾಲ ಮೇಳವನ್ನು ಯೂನಿಯನ್ ಬ್ಯಾಂಕ್ ಶಿವಮೊಗ್ಗ ಕ್ಷೇತ್ರೀಯ ಉಪಮುಖ್ಯಸ್ಥರಾದ  ರವಿಚಂದ್ರನ್ ರವರು ಉದ್ಘಾಟಿಸಿದರು,

ಸ್ವಸಹಾಯ ಸಂಘಗಳ ಸದಸ್ಯರಿಗೆ ಸಂಘಗಳ ಪಂಚ ಸೂತ್ರ, ಬ್ಯಾಂಕ್ ಗಳಿಂದ ಸಾಲ ಸೌಲಭ್ಯ, ಜೀವ ವಿಮೆ, ಆರ್ಥಿಕ ಸ್ವಾವಲಂಬನೆ ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.
ಮೇಳದಲ್ಲಿ 130ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು.15 ವಿವಿಧ ಸಂಘಗಳ ಸದಸ್ಯರಿಗೆ ಸಾಲ ಮಂಜೂರಾತಿ ಪತ್ರ ನೀಡಲಾಯಿತು.

ಸಾಲ ಮೇಳದ ಮುಖ್ಯ ಅತಿಥಿಗಳಾಗಿ ಭದ್ರಾವತಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ ಎಂ ಗಂಗಣ್ಣ ಅವರು ವಹಿಸಿದ್ದರು ಮೇಳದ ಅಧ್ಯಕ್ಷತೆಯನ್ನು ಯೂನಿಯನ್ ಬ್ಯಾಂಕ್ ಭದ್ರಾವತಿ BH ರಸ್ತೆ ಶಾಖೆಯು ಮುಖ್ಯ ವ್ಯವಸ್ಥಾಪಕರಾದ ಶ್ರೀ ವಿಜಯ್ ಭಾಸ್ಕರ್ ರವರು ವಹಿಸಿದ್ದರು. ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಉಪಸ್ಥಿರಿದ್ದರು

Spread the love

Leave a Reply

Your email address will not be published. Required fields are marked *

error: Content is protected !!