September 24, 2026

I ಸಚಿವ ಸತೀಶ್ ಜಾರಕಿಹೊಳಿ I ಬುಡಕಟ್ಟು ಸಮುದಾಯಕ್ಕೆ ಉತ್ತರ ನೀಡಲಿ I ಗಿರೀಶ್ ಭದ್ರಾಪುರ I

0
girish bhadrapura

I ಸಚಿವ ಸತೀಶ್ ಜಾರಕಿಹೊಳಿ I ಬುಡಕಟ್ಟು ಸಮುದಾಯಕ್ಕೆ ಉತ್ತರ ನೀಡಲಿ I ಗಿರೀಶ್ ಭದ್ರಾಪುರ I

ಶಿವಮೊಗ್ಗ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ಕೆ ಶಿವಮೊಗ್ಗಕ್ಕೆ ಬಂದು, ಸಾಗರದಲ್ಲಿ ವಾಸ್ತವ್ಯ ಹೂಡಿ ಕಾರ್ಯಕ್ರಮದಲ್ಲಿ ಭಾಗವಹಿಸದೇ ಹಿಂದಿರುಗಿರುವುದು ದುಖ:ಕರ ಸಂಗತಿ ಎಂದು ದಿಶಾ ಸಮಿತಿ ಸದಸ್ಯ ಗಿರೀಶ್ ಭದ್ರಾಪುರ ಹೇಳಿದ್ದಾರೆ.

ದೇಶದ ಎರಡನೇ ಅತಿ ಉದ್ದದ ಸೇತುವೆಯನ್ನು ಶರಾವತಿ ನದಿಯ ಹಿನ್ನೀರಿಗೆ ಕೇಬಲ್ ಆಧಾರಿತವಾಗಿ ೨.೨೫ ಕಿ.ಮೀ ನಿರ್ಮಿಸಲಾಗಿದೆ. ಇದು ಅಂಬಾರಗೋಡ್ಲು- ಕಳಸವಳ್ಳಿ ಮೂಲಕ ಸಿಗಂದೂರು, ಕೊಲ್ಲೂರಿಗೆ ಸಂಪರ್ಕ ಕಲ್ಪಿಸುತ್ತದೆ.  ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹಾಗೂ ಕೇಂದ್ರ ಆಹಾರ ನಾಗರೀಕ ಸರಬರಾಜು ಸಚಿವಾಲಯದ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಜೊತೆಗೂಡಿ ರಾಷ್ಟ್ರಕ್ಕೆ ಸೇತುವೆಯನ್ನು ಸಮರ್ಪಿಸಿದ್ದಾರೆ.

ಸಾಗರ ತಾಲ್ಲೂಕು, ಹೊಸನಗರ ತಾಲ್ಲೂಕು ಸೇರಿದಂತೆ ಶರಾವತಿ ಹಿನ್ನೀರಿನ ದ್ವೀಪದಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯದ ಸಾವಿರಾರು ಜನಗಳ ಆರು ದಶಕಗಳ ಕನಸು ನನಸಾಗಿದ ಕ್ಷಣದಲ್ಲಿ ತಾವು ಜನಕ್ಕೆ ಭೇಟಿ ಮಾಡದೇ, ಅವರ ಯಾತನೆಯನ್ನು ಆಲಿಸದೇ ಉಳ್ಳವರ ಮನೆಯಲ್ಲಿ ಆತಿಥ್ಯವನ್ನು ಸ್ವೀಕರಿಸಿ ಹೋಗಿದ್ದೀರಾ, ಇದು ನ್ಯಾಯವೇ? ಎಂದು ಪ್ರಶ್ನಿಸಿದ್ದಾರೆ.

ಯುಡಿಯೂರಪ್ಪರವರು ಮುಖ್ಯಮಂತ್ರಿಗಳಾಗಿದ್ದಾಗ ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಘೋಷಿಸಿ ಗೌರವಿಸಿದರು. ಅಂದಿನ ಬಿಜೆಪಿ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಎಸ್‌ಟಿ ಸಮುದಾಯದವರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸವಲತ್ತುಗಳು ಸಿಗಲೆಂದು ಶೇ.೩ ರಷ್ಟು ಇದ್ದ ಮೀಸಲಾತಿಯನ್ನು ಶೇ.೭ಕ್ಕೆ ಏರಿಸಿದರು. ಪ್ರಸ್ತುತ ೨೦೨೩ ಚುನಾವಣೆಯಲ್ಲಿ ತಮ್ಮ ಪಕ್ಷವು ಆಭೂತ ಪೂರ್ವ ಪೂರಕವಾಗಿ ಜಯಭೇರಿ ಗಳಿಸಿ ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗಪಡಿಸಿ ನಮ್ಮ ಲಕ್ಷಾಂತರ ಬುಡಕಟ್ಟು ಜನಾಂಗಕ್ಕೆ ಅನ್ಯಾಯ ಎಸೆಗಿದ್ದೀರಿ. ಇದು ನ್ಯಾಯವೇ? ಎಂದು ಪ್ರಶ್ನಿಸಿದರು.

ಸಚಿವ ಸತೀಶ್ ಜಾರಕಿಹೊಳಿರವರು ದಶಕಗಳಿಂದ ಎಸ್‌ಟಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿ ಬಂದಿರುವ ನೀವು ಬುಡಕಟ್ಟು ಸಮುದಾಯಗಳ ಜೀವನಾಡಿಯಾಗಿರುವ ಸಂಪರ್ಕ ಸೇತುವೆಯ ಉದ್ಘಾಟನೆಯಲ್ಲಿ ಭಾಗವಹಿಸದೇ ಹಿಂದಿರುಗಿದ್ದೀರಾ. ಇದಕ್ಕೆ ತಾವು ಬುಡಕಟ್ಟು ಸಮುದಾಯದವರಿಗೆ ಮತ್ತು ರಾಜ್ಯದ ಜನತೆಗೆ ಉತ್ತರವನ್ನು ಕೊಡಲೇಬೇಕು ಎಂದು ಆಗ್ರಹಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!