I ಸದೃಢ ಸಮಾಜ ನಿರ್ಮಿಸಲು ಒಗ್ಗೂಡಿ I ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ I
ಶಿವಮೊಗ್ಗ: ಸವಿತಾ ಸಮಾಜ ಅತ್ಯಂತ ಹಿಂದುಳಿದ ವರ್ಗದ ಸಮಾಜವಾಗಿದ್ದು, ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಪಡೆದು ಉನ್ನತ ವ್ಯಾಸಂಗ ಮಾಡಿ ಅಧಿಕಾರಿ ವರ್ಗ, ಸಾಮಾಜಿಕವಾಗಿ ಅವಕಾಶಗಳನ್ನು ಪಡೆದು ಸಮಾಜವನ್ನು ಸದೃಢಗೊಳಿಸಬೇಕೆಂದು ಎಂದು ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾ ಸವಿತಾ ಸಮಾಜದ ವತಿಯಿಂದ ವಿನೋಬನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಈಚೆಗೆ ಏರ್ಪಡಿಸಿದ್ದ “ಪ್ರತಿಭಾ ಪುರಸ್ಕಾರ” ಹಾಗೂ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮುದಾಯದವರು ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಸವಿತಾ ಸಮಾಜ ಸದೃಢವಾಗುವುದು ಸಾಧ್ಯವೆಂದು ಕರೆ ನೀಡಿದರು.
ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎಂ.ಜಿ. ಬಾಲು ಮಾತನಾಡಿ,’ ಕೆ.ಎಸ್. ಈಶ್ವರಪ್ಪ ನವರು ನಮ್ಮ ಸಮಾಜದ ಮೇಲೆ ಇಟ್ಟಿರುವ ಪ್ರೀತಿ ಅಪಾರವಾದದ್ದು, ಶಿವಮೊಗ್ಗ ತಾಲ್ಲೂಕು ಸವಿತಾ ಸಮಾಜದ ನಿವೇಶನದ ಖಾತೆ ಮಾಡಿಸಲು ಆರ್ಥಿಕವಾಗಿ ಸಾಧ್ಯವಾಗದೇ ಇದ್ದಾಗ ನಗದಾಗಿ ರೂ.೫.೫೦ ಲಕ್ಷ ಗಳನ್ನು ನೀಡಿ ಖಾತೆ ಮಾಡಿಸಲು ಸಹಾಯವನ್ನು ಮಾಡಿದ ಕ್ಷಣವನ್ನು ಮರೆಯುವಂತಿಲ್ಲ ಎಂದರು.
ಶಿವಮೊಗ್ಗ ಜಿಲ್ಲಾ ಸವಿತಾ ಸಮಾಜ ಪ್ರಧಾನ ಕಾರ್ಯದರ್ಶೀ ಎನ್.ಎಸ್. ರಮೇಶ್ ಮಾತನಾಡಿ,’ ಜಿಲ್ಲಾ ಸವಿತಾ ಸಮಾಜ ಬಾಂಧವರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಸವಿತಾ ಸಮಾಜವು ಸದೃಢವಾಗಿದೆ ಎಂದು ನಿರೂಪಿಸಿದ್ದೀರಿ, ಎಲ್ಲರಿಗೂ ಸಂಘದ ಪರವಾಗಿ ಧನ್ಯವಾದಗಳು ಎಂದು ತಿಳಿಸಿದರು.
ಜಿಲ್ಲಾ ಸವಿತಾ ಸಮಾಜದ ಸಮಿತಿಯ ತೀರ್ಥಹಳ್ಳಿ ಸುಬ್ರಮಣಿ, ಹೆಗ್ಗೋಡು ರವಿಪ್ರಕಾಶ್, ಶಿವಪ್ರಸಾದ್, ಧನರಾಜ್ ಹಾಗೂ ಸೌಂದರ್ಯ ಪಾಂಡ್ಯನ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಗಂಗಾವತಿ, ಉಪಾಧ್ಯಕ್ಷರಾದ ಲೀಲಾವತಿ, ಭದ್ರಾವತಿ ಸಹಕಾರ ಸಂಘದ ಅಧ್ಯಕ್ಷರಾದ ಲತಾ ರಮೇಶ್, ಉಪಾಧ್ಯಕ್ಷರಾದ ಜಿ. ವೆಂಕಟೇಶ್, ಎಂ.ರಾಜು, ಹರೀಶ್.. ವರದರಾಜು .ಪಿ, ಕೃಷ್ಣಮೂರ್ತಿ ಭಂಡಾರಿ, ಸಹಕಾರ ಸಂಘದ ನಿರ್ದೇಶಕರಾದ ಗಂಗಣ್ಣ, ಮಂಜುಳಾ ಹಾಗೂ ವಿಶೇಷವಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕಾಂತೇಶ್, ಸಾಗರದ ಪ್ರದೀಪ್ ಭಂಡಾರಿ, ಧನಂಜಯ, ಶಿವಮೊಗ್ಗ ರಾಘವೇಂದ್ರ, ರಾಘವೇಂದ್ರ ಇದ್ದರು.

