September 25, 2026

I ವಿಶೇಷ ಚೇತನರ ಸಮುದಾಯಕ್ಕೆ ವಿವಿಧ ಸೌಲಭ್ಯಗಳ ವಿತರಿಸಿದ I ಶಿವಮೊಗ್ಗ ನಗರ ವಿಧಾನಸಭಾ ಶಾಸಕ ಚೆನ್ನಬಸಪ್ಪ I

0
527350643_17957718716964941_7007359862255971225_n
I ವಿಶೇಷ ಚೇತನರ ಸಮುದಾಯಕ್ಕೆ ವಿವಿಧ ಸೌಲಭ್ಯಗಳ ವಿತರಿಸಿದ I ಶಿವಮೊಗ್ಗ ನಗರ ವಿಧಾನಸಭಾ ಶಾಸಕ ಚೆನ್ನಬಸಪ್ಪ I
 ಶಿವಮೊಗ್ಗ :  ವಿಕಲಚೇತನರ ಕಲ್ಯಾಣ ಇಲಾಖೆಯ ವತಿಯಿಂದ ಇಂದು ಶಾಸಕರ ಕಚೇರಿಯಾದ ಕರ್ತವ್ಯ ಭವನದಲ್ಲಿ ಆಯೋಜಿಸಲಾದ ವಿಶೇಷ ಚೇತನರ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ, ಶ್ರವಣ ಸಾಧನಗಳು, ಟಾಕಿಂಗ್ ಲ್ಯಾಪ್‌ಟಾಪ್‌, ವೈದ್ಯಕೀಯ ವೆಚ್ಚಗಳ ಮರುಪಾವತಿ ಚೆಕ್‌ ಹಾಗೂ ತ್ರಿಚಕ್ರ ವಾಹನವನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಈ ಕಾರ್ಯಕ್ರಮವು ವಿಕಲಚೇತನರು ನಿತ್ಯಜೀವನದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದೊಂದಿಗೆ ನಡೆಯಿತು.
ಕಾರ್ಯಕ್ರಮದ ವೇಳೆ ವಿಕಲಚೇತನರ ಜಿಲ್ಲಾ ಕಲ್ಯಾಣಧಿಕಾರಿಗಳಾದ ಸುವರ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಪ್ರಮುಖರಾದ ಜ್ಞಾನೇಶ್ವರ್, ದೀನ್ ದಯಾಳ್, ನವಲೆ ಮಂಜುನಾಥ್, ಶ್ರೀನಾಗ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Spread the love

Leave a Reply

Your email address will not be published. Required fields are marked *

error: Content is protected !!