Monday, August 3, 2026
Homeಸೂರ್ಯಗಗನI ಬದುಕಿನ ಉನ್ನತಿಗೆ I ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ I ಕೊಳಲೆ ರುದ್ರಪ್ಪಗೌಡ I

I ಬದುಕಿನ ಉನ್ನತಿಗೆ I ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ I ಕೊಳಲೆ ರುದ್ರಪ್ಪಗೌಡ I

I ಬದುಕಿನ ಉನ್ನತಿಗೆ I ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ I ಕೊಳಲೆ ರುದ್ರಪ್ಪಗೌಡ I
ಶಿವಮೊಗ್ಗ: ಬದುಕಿನ ಉನ್ನತಿಗಾಗಿ ವಿಭಿನ್ನ ವಿಷಯಗಳ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ ಎಂದು ಡಿವಿಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಕೊಳಲೆ ರುದ್ರಪ್ಪಗೌಡ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಾಹಿತ್ಯ ಗ್ರಾಮದಲ್ಲಿ ಸ್ವಾತಂತ್ರೋತ್ಸವದ ಸವಿ ನೆನಪಿನಲ್ಲಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸಂವಿಧಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವಿಚಾರವಾಗಿ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಶ್ರೇಷ್ಟತೆಯನ್ನು ಎಷ್ಟು ಕೊಂಡಾಡಿದರು ಸಾಲದು. ಬುಕರ್ ಪ್ರಶಸ್ತಿಯ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಪ್ರಕಾರಗಳು ಮತ್ತಷ್ಟು ಪ್ರಜ್ವಲಿಸಿದೆ‌. ಹಿರಿಯರಿಗೆ ಗೌರವ ನೀಡಿ. ಸೌಜನ್ಯತೆ ಎಂಬುದು ಬದುಕಿನ ಪ್ರತಿ ಹಂತದಲ್ಲಿ ಪ್ರಜ್ವಲಿಸಲಿ. ಆಧುನಿಕತೆಯ ಅಂಧತ್ವ ನಿಮ್ಮನ್ನು ಕಾಡದಿರುವಂತೆ ನೋಡಿಕೊಳ್ಳಿ. ಸಂವಿಧಾನದ ಆಶಯಗಳಿಗೆ ಹೆಚ್ಚು ಶಕ್ತಿ ತುಂಬುವ ಕಾರ್ಯ ಯುವ ಸಮೂಹದಿಂದ ನಡೆಯಲಿ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ವಿಶ್ವದಲ್ಲಿಯೇ ಶ್ರೇಷ್ಟವಾದ ಸಂವಿಧಾನ ಭಾರತಕ್ಕಿದೆ. ಆಧುನಿಕ ಸೌಲಭ್ಯಗಳು ಇಲ್ಲದ ಕಾಲದಲ್ಲಿಯು ಸಂವಿಧಾನ ರಚನಾ ಸಮಿತಿಯು ಸಾರ್ವಜನಿಕ ಚರ್ಚೆಗೆ ಮುಕ್ತವಾಗಿ ಅವಕಾಶ ನೀಡಿ, ಸುಮಾರು 769 ಜನ ತಮ್ಮ ಅಭಿಪ್ರಾಯ ತಿಳಿಸಿದ್ದರು ಎಂಬುದೇ ಅದ್ಭುತ ಸಂಗತಿ. ಸ್ವತಂತ್ರ ಚಳುವಳಿಗಳನ್ನು ನಾವು ಓದಿದ್ದೇವೆ, ಅದರೇ ಸ್ವತಃ ನೋಡಿದವರ ಅಭಿಲಾಷೆ ಅನುಭವದ ಮಾತುಗಳನ್ನು ಕೇಳಿದಾಗ ರೋಮಾಂಚನವಾಗುತ್ತದೆ.
ನಮಗೆ ಸಿಕ್ಕ ಶ್ರೇಷ್ಟವಾದ ಸಂವಿಧಾನವನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ. ಶೈಕ್ಷಣಿಕ ಸುಸಂಸ್ಕೃತರು ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ನೀಡುತ್ತಿರುವ ಕೊಡುಗೆ ಏನು ಎಂಬುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದ ಬಗ್ಗೆ ಯುವ ಸಮೂಹ ಹೆಚ್ಚು ಅರಿಯ ಬೇಕಿದೆ. ತಪ್ಪುಗಳನ್ನು ನೋಡಿಯು ಪ್ರತಿಭಟಸದೆ ಸುಮ್ಮನಾಗುವುದು ನಮಗೆ ಮಾಡಿಕೊಂಡ ಆತ್ಮವಂಚನೆ.
ಪದವಿಯ ಹಂತದವರೆಗೆ ಕನ್ನಡ ಭಾಷೆಯನ್ನು ಕಲಿತ ಪದವೀಧರರು, ತಮ್ಮ ದೈನಂದಿನ ಬಳಕೆಯಲ್ಲಿ ಇಂಗ್ಲೀಷ್ ಭಾಷೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಒಂದು ಬಗೆಯ ಆತ್ಮವಂಚನೆಯೆ ಸರಿ. ನಮ್ಮ ಹೃದಯದ ಭಾಷೆ ಕನ್ನಡಕ್ಕೆ ಆದ್ಯತೆ ನೀಡಿ. ಇತರೆ ಭಾಷೆಗಳನ್ನು ಮುಕ್ತವಾಗಿ ಕಲಿಯಿರಿ. ಸಾಮಾಜಿಕ ವ್ಯವಸ್ಥೆಗೆ ಆಧಾರ ಸ್ತಂಭವಾಗಿರಬೇಕಿದ್ದ ಯುವ ಸಮೂಹಕ್ಕೆ ಕಾನೂನಿನ ಅರಿವು ಬೇಕಿದೆ. ಸಮಾಜದ ಸದೃಡತೆಗೆ ಸಂವಿಧಾನ ನೀಡಿದ ಶಕ್ತಿ, ಜವಾಬ್ದಾರಿ, ಮಾನವೀಯ ಮೌಲ್ಯಗಳ ಬಗ್ಗೆ ಅರಿಯಿರಿ ಎಂದು ಕರೆ ನೀಡಿದರು.
ರಸಪ್ರಶ್ನೆ ಕಾರ್ಯಕ್ರಮದಿಂದ ಪ್ರೌಢಶಾಲಾ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಇಲಾಖೆ ನೀಡಿದ ಆದೇಶವೊಂದು ಇಂತಹ ಪರಿಸ್ಥಿತಿಗೆ ಕಾರಣವಾಗಿದೆ‌. ಸೃಜನಶೀಲತೆ ಬಿತ್ತುವ ಪ್ರೌಢಶಾಲಾ ಮತ್ತು ಪದವಿಪೂರ್ವ ಹಂತದಲ್ಲಿ, ಸ್ಪಂದನೀಯ ಕಾರ್ಯವನ್ನು ಚಿವುಟುವ ಕಾರ್ಯ ನಡೆಯುತ್ತಿರುವುದು ಬೇಸರದ ಸಂಗತಿ. ಓದಿಗೆ ಬಡತನ ಬಂದಿದೆ. ಅಂಕಗಳ ಬೇಟೆಯೊಂದೆ ನಮ್ಮ ಗುರಿಯಾಗಬಾರದು. ಅಧ್ಯಯನಗಳಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ.ಎಚ್.ಟಿ.ಕೃಷ್ಣಮೂರ್ತಿ, ಜಿಲ್ಲಾ ಕಸಾಪ ಕೋಶಾಧ್ಯಕ್ಷರಾದ ಎಂ.ನವೀನಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಕೋಶಾಧ್ಯಕ್ಷ ಮಧುಸೂದನ್ ಐತಾಳ್, ಸರ್.ಎಂ‌.ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಶೋಯಬ್ ಅಹಮದ್, ತೀರ್ಥಹಳ್ಳಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಟಿ.ಕೆ.ರಮೇಶ್ ಶೆಟ್ಟಿ, ಭದ್ರಾವತಿ ತಿಮ್ಮಪ್ಪ, ಶಿಕಾರಿಪುರ ಹೆಚ್.ಎಸ್.ರಘು, ಕೆ.ಎಸ್.ಹುಚ್ಚರಾಯಪ್ಪ, ಕೋಡ್ಲು ಯಜ್ಞಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ 23 ತಂಡಗಳು ಭಾಗವಹಿಸಿದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!
Latest news
I ತೀರ್ಥಹಳ್ಳಿಯಲ್ಲಿ ಮಳೆಯ ಅಬ್ಬರ I ಗುಡ್ಡ ಕುಸಿದು ಮೂವರ ಧಾರುಣ ದುರ್ಮರಣ I I ಗಾರಾ ಎನ್ನುವ ಜೀವಭಾವ I I ಕರೋನಾ ಲಾಕ್‌ಡೌನ್ ಅವಧಿಯ ಭೂ ಒತ್ತುವರಿ ಹಾಗೂ ಅಕ್ರಮ ಮ್ಯೂಟೇಷನ್ I ಕುರಿತು ಉನ್ನತ ಮಟ್ಟದ ತನಿಖೆಗೆ ಹ್ಯೂಮನ್ ರೈಟ್ಸ್... I ಗೋಪಾಳದ ಆದಿ ರಂಗನಾಥ ಸ್ವಾಮಿ ದೇವಳದ I ಜಾಗದ ಮೇಲೆ ಲ್ಯಾಂಡ್ ಪೋರ್ಜರಿಸ್ಟ್ ಗಳ ದಾಳಿ I ಅಧಿಕಾರಿಗಳ ಅತೀವ ಮೌನ I I ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ I ಎ.ಎಚ್.ಸುನೀಲ್ ಅವರಿಂದ ಅರ್ಜಿ ಸಲ್ಲಿಕೆ I I ರೋಟರಿ ಕ್ಲಬ್ ಗಳು ಇತರೇ ಸಂಘಗಳಿಗೆ ಮಾದರಿ I ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರ... I ಸುಮೇರು ರಿಯಾಲಿಟಿ ಪ್ರೈ.ಲಿ ನಿಂದ ರಾಜಕಾಲುವೆ ಒತ್ತುವರಿ‌ I ಕೋರ್ಟ್ ಸಮನ್ಸ್ I ಎಚ್ಚೆತ್ತುಕೊಂಡ ಸರ್ಕಾರ.! I ಎಸ್ ಐ ... I ಶಿವಮೊಗ್ಗದ ಭೂಗಳ್ಳರ ವಿರುದ್ದ ಸಲ್ಲಿಸಲಾಗಿದ್ದ I ಸಂಘಟನೆಗಳ ದೂರುಗಳು ಏನಾಯ್ತು..? I ಶಾಲಾ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಲು I ರೋಟರಿ ಸಂಸ್ಥೆ ಸಹಕಾರಿ I ಶೇಷಗಿರಿ ಡಿ.ಕೆ. I I ಆ.05 ರಂದು ಮಾನ್ಸೂನ್ ಮಾರಾಟ ಮೇಳ ಆಯೋಜನೆ I