September 25, 2026

I ರಾಜಣ್ಣ ರಾಜೀನಾಮೆ I ವಾಲ್ಮೀಕಿ ಸಮುದಾಯ ಖಂಡನೆ I ಅಧ್ಯಕ್ಷ ಆರ್.ಹರೀಶ್ I

0
Screenshot_20250813-212238~2

I ರಾಜಣ್ಣ ರಾಜೀನಾಮೆ I ವಾಲ್ಮೀಕಿ ಸಮುದಾಯ ಖಂಡನೆ I ಅಧ್ಯಕ್ಷ ಆರ್.ಹರೀಶ್ I

ಶಿವಮೊಗ್ಗ: ವಾಲ್ಮೀಕಿ ಸಮುದಾಯದ ಹಿರಿಯ ಸಚಿವ ಕೆ.ಎಸ್, ರಾಜಣ್ಣನವರ ರಾಜೀನಾಮೆ ಪಡೆದಿರುವುದು ಸರಿಯಾದ ಕ್ರಮವಲ್ಲ ಎಂದು ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಜಿಲ್ಲಾ ಘಟಕ ಅಧ್ಯಕ್ಷ ಆರ್.ಹರೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಗುಡ್ಡಪ್ಪ ಖಂಡಿಸಿದ್ದಾರೆ.

ಈ ಹಿಂದಿನ ಸರ್ಕಾರದಲ್ಲೂ ಜಲಸಂಪನ್ಮೂಲ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಜಾರಕಿಹೊಳಿ, ಶಾಸಕರು ಮತ್ತು ಸಚಿವರು ಮತ್ತು ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನೇ ಬಳಸಿಕೊಂಡು ವಾಲ್ಮೀಕಿ ಸಮುದಾಯದವರಾದ ಶ್ರೀರಾಮುಲು ರವರನ್ನು ಸೋಲಿಸಿರುವುದು ಮತ್ತು ಇದೇ ಸರ್ಕಾರದ ಸಚಿವರಾದ ಬಿ. ನಾಗೇಂದ್ರ, ಯುವ ಸಬಲೀಕರಣ, ಕ್ರೀಡಾ ಮತ್ತು ಬುಡಕಟ್ಟು ಕಲ್ಯಾಣದ ಸಚಿವರಾಗಿದ್ದು, ಇವರನ್ನು ತೆಲಂಗಾಣದಲ್ಲಿ ನಡೆದ ಚುನಾವಣೆಗೆ ಇವರ ವ್ಯಾಪ್ತಿಗೆ ಬರುವ ಇಲಾಖೆಯ ಹಣವನ್ನು ಅಕ್ರಮವಾಗಿ ತೆಲಂಗಾಣದ ರಾಜ್ಯದ ಚುನಾವಣೆಗೆ ಬಳಸಿಕೊಂಡಿರುವುದು ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ ಅಧ್ಯಕ್ಷರಾದ ಬಸವನಗೌಡ ದದ್ಗಲ್ ರವರ ವ್ಯಾಪ್ತಿಗೆ ಬರುವ ಮಂಡಳಿಯ ಹಣವನ್ನು ಕೂಡ ಆಕ್ರಮವಾಗಿ ಬಳಸಿಕೊಂಡು ಇವರನ್ನು ಕೂಡ ಅಧ್ಯಕ್ಷ ಸ್ಥಾನದಿಂದ ತಲೆದಂಡ ಮಾಡಲಾಯಿತು.

ಹೀಗೆ ಇನ್ನೂ ಅನೇಕ ವಾಲ್ಮೀಕಿ ಸಮುದಾಯದ ಪರ ಧ್ವನಿ ಎತ್ತುವ ನಾಯಕರುಗಳಾದ ನರಸಿಂಹ ನಾಯಕ ರಾಜುಗೌಡರು, ಮಾಜಿ ಸಚಿವರು, ಸುರಪುರ, ಮಾಜಿ ಶಾಸಕರು, ಸಚಿವರಾದ ಶಿವನಗೌಡ ನಾಯಕ ಹಾಗೂ ಮಾಜಿ ಶಾಸಕರು ಸುರೇಶ್ ಬಾಬು-ಕಂಪ್ಲಿ ಕ್ಷೇತ್ರ ಹಾಗೂ ಸಮಾಜದ ಯುವ ಮುಖಂಡರಾದ ಹೊದಿಗೆರೆ ರಮೇಶ್-ಚನ್ನಗಿರಿ ಕ್ಷೇತ್ರ, ಬಂಗಾರ ಹನುಮಂತು-ಸಂಡೂರು ವಿಧಾನಸಭಾ ಕ್ಷೇತ್ರ, ಇನ್ನು ಅನೇಕ ವಾಲ್ಮೀಕಿ ಸಮಾಜದ ನಾಯಕರುಗಳನ್ನು ವ್ಯವಸ್ಥಿತವಾಗಿ, ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಯುತ್ತಿದ್ದು, ಅನೇಕ ಕಾಣದ ಕೈಗಳು ನಿರಂತರವಾಗಿ ಷಡ್ಯಂತ್ರ ಮಾಡುತ್ತಿವೆ.  ಇದೇ ರೀತಿ ಮುಂದುವರಿದಲ್ಲಿ ವಾಲ್ಮೀಕಿ ನಾಯಕ ಸಮಾಜವು ರಾಜ್ಯದಲ್ಲಿ ಉಗ್ರ ಹೋರಾಟದ ಮುಖಾಂತರ ತಕ್ಕ ಸಮಯದಲ್ಲಿ ತಕ್ಕ ಉತ್ತರವನ್ನು ನೀಡುತ್ತದೆ ಎಂಬ ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!